Wednesday, June 18, 2014

ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ

ಮಿಲನ ಸಿನೆಮಾ ದು ಮದರಂಗಿಯಲ್ಲಿ ಹಾಡು ನೋಡ್ತಿದ್ದೆ ,
ನಾನ್ ಯಾಕ್ ಈ ಥರ ಒಂದು ಹಾಡು ಕಟ್ಟೋ ಪ್ರಯತ್ನ ಮಾಡ್ಬಾರ್ದು ಅನ್ಸಿ ಮೂಡಿದ ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ ರಚನೆಯ ಪ್ರಯತ್ನ

ಬೆರಳಿಗುಂಟು ಉಂಗುರದ ಬಯಕೆ
ಹರಕೆ ಹೊತ್ತ ಮನಸು ಮಾಂಗಲ್ಯಕೆ
ಬಯಸಿ ಬಯಸಿ ಅನುರಾಗಕೆ
ಹೃದಯ ತುದಿಗಾಲಲಿ ನಿಂತಿದೆ ಹೂ ಮಾಲೆ ವಿನಿಮಯಕೆ

ಇಂದ್ರನ ಓಲಗ ಮೀರಿಸೋ ಮದುವೆಯ ಮಂಟಪ
ಗಂಧರ್ವರ ನಾಚಿಸೋ ಮಧುಮಕ್ಕಳ ಸಲ್ಲಾಪ
ಎದೆಯಲಿ ಕಚಗುಳಿ ಬೆರಳಲಿ ರಂಗೋಲಿ
ಗಡಿಬಿಡಿ ಅವಸರ ಸಂತಸ ಸಡಗರ
ವಿಷೇಶವಾಗಿ ಇಳೆಗೆ ಇಳಿದ ಸ್ವರ್ಗವೆ ಎಲ್ಲೆಲ್ಲು ಬರೀ ನಗುವೇ

ನಾಚುವ ಹೊಸ ಪರಿ ಬೆರೆಯಲು ತರಾತುರಿ ಬೆಡಗಿನ ರಸಮಂಜರಿ
ನೋಡಲು ಈಸಿರಿ ಬಂದಿದೆ ಬಳಗವೆ ಸಾಗಿ ಸಗಿ ನೂರು ದಾರಿ

ತಾಳ ಮೇಳ ಮಂಗಳವಾದ್ಯಕೆ ಸಖಿಯರ ಬಿನ್ನಾಣಕೆ
ಅಂದ ಚಂದ ನಾಚಿಕೆ ಗೆಳೆಯರೊಳಗೆ ಹೊಸ ಹವಣಿಕೆ
ಬಂಗಾರದ ಭಾರಕೆ ಬಳುಕಿ ಬಳುಕಿ ಅತಿಯಾದ ಹೊಗಳಿಕೆಗೆ
ಜಾರುವಸೆರಗಿಗೆ ಸರಿಯಾಗದು ನೂರುಬಾರಿ ತೀಡಿದರು ನೆರಿಗೆ

ಮರುಳುಮಾಡೊ ಸನ್ನೆಯನೋಟ ಮನಸುಸೆಳೆವ ಮಾತಿನ ಮಾಟ
ಜಾರಿ ಬೀಳೊ ಹಳ್ಳದ ಕಡೆಗೆ ಹೂವಿನ ಮೆತ್ತೆಯ ಮೇಲೇ ನಡೆದಾಟ

like ಅಯ್ತಾ friends
-ಅನಿಕೇತನ ಹ್ಯಾಪ್ಪಿ BOY

No comments:

Post a Comment