Wednesday, June 18, 2014

ವಿಧಿಗೊಂದು ಸೂತ್ರ

ಸಂಧರ್ಭಕ್ಕೆ ಹೊಂದುವ ಗೀತೆಗಳ ರಚನೆಯ ಪ್ರಯತ್ನದಲ್ಲಿ ಓದಿ ಬಳಸಬಹುದಾದಲ್ಲಿ ಬಳಸಿಕೊಳ್ಳಿ

ವಿಧಿಸು ವಿಧಿಗೊಂದು ಸೂತ್ರ
ವಿವರಿಸು ಜೀವದ ಪಾತ್ರ
ವಿಪರೀತ ವೈಚಿತ್ರ್ಯ
ವಿಶಾದಾ ಚಾರಿತ್ರ್ಯ
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೂಬಳ್ಳಿಯ ಮುಳ್ಬೇಲಿ ಮೇಲೇಕೆ ಇಟ್ಟೇ
ಹೂವಲ್ಲಿ ಆ ಅಂದವ ಯಾಕೇ ಕೊಟ್ಟೆ ನೀ ..
ಹೂನಗುವೇ ಶಾಪವೇ ಆನಗುವಿಗೇ ಮರುಳಾದೆನೇ
ತಪ್ಪೇ ಆಕರ್ಷಣೇ ಯಾಕೇ ಈ ಶೋಧನೇ ವಿವರಿಸಲಾಗದ ವೇದನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೊಗೋ ದಾರೀಲಿ ಹೂ ಕಂಪ ಜೊಂಪಲ್ಲಿ
ಹೇಗೋ ಮೈಮರೆತ ಕ್ಷಣದಲ್ಲಿ ನೀ ..
ಹೊವಿದೇ ಮುಳ್ಳಲಿ ನರಳದಿರು ನೋವಲಿ
ತಂಗಾಳಿ ಮೈ ಮರೆಸೋ ಮುನ್ನ ಬಿರುಗಾಳಿ ಹೊತ್ತುಹೋಯ್ತೆ ಹೂವನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

- ಅನಿಕೇತನ ಹ್ಯಾಪ್ಪಿ B Y

No comments:

Post a Comment