Thursday, February 11, 2010

"जागोरे ಜಾಗತಿಕ- ಜಾಗರಣೆ"

ಆತ್ಮೀಯ ಮಿತ್ರರೇ ,
ಶಿವರಾತ್ರಿಯ ಜಾಗರಣೆಯ ಈ ವಿಶೇಷ ಸಂಧರ್ಭದಲ್ಲಿ ಒಂದು ಅವಲೋಕನ ನಮ್ಮ ಜಾಗತಿಕ ಜಗತಿನ ನಿತ್ಯಜಾಗರಣೆ ನಡೆಯುವ ಕೆಲವು ಪುಣ್ಯ ಕ್ಷೇತ್ರಗಳ ದರ್ಶನ ಈ ಲೇಖನ .
_________________________________________________________________
ಅಂದು ಸ್ವಾಮಿ ವಿವೆಕಾನದ ರು ಹೇಳಿದ್ದರು ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ......!!!!! जागोरे ಅಂತಾ ...
ಆದರೆ ಇಂದು
ಹೊಸ ಹೊಸ ಕನಸುಗಳನು ಹೊತ್ತ ಕಂಗಳಲಿ ನಿದಿರೆಗೆ ಜಾಗ ಇನ್ನೆಲ್ಲಿ ...ಹಗಲು ಹಿರಿದಾಗಿ ರಾತ್ರಿಗಳು ಚಿಕ್ಕದಾಗಿ, ಈ ಜೀವನ ಗಡಿಯಾರದ ಸೆಕೆಂಡಿನ ಮುಳ್ಳಿನ ಮೇಲೆ ಕ್ಷಣ-ಕ್ಷಣ ಬದಲಾಗುತ್ತಾ ಸಾಗಿರುವಾಗ ,ಸ್ಪರ್ಧೆ ಎಂಬ ಪ್ರವಾಹದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಅ-ಸಾಮಾನ್ಯ ಜೀವನ ಶೈಲಿ , ನಮ್ಮನ್ನು ನಾವು ಅರ್ಥೈಸಿಕೊಳ್ಳುವ ಮೊದಲೇ ಜಾಗತಿಕಮಟ್ಟದಲ್ಲಿ ಆರ್ಥಿಕವಾಗಿ ಗುರುತಿಸಿ ಕೊಳ್ಳಬೇಕೆಂಬ ಗುರಿ ಇಟ್ಟುಕೊಂಡು ಮತಿ- ಇಲ್ಲದೆ, ಗತಿ ಇಲ್ಲದವರಂತೆ ಮೊರೆ ಇಡುತ್ತ ಪ್ರತಿ ದಿನ ನಡೆದಿದೆ ಜಾಗತಿಕ ನಾಗರೀಕರ "ಜಾಗತಿಕ- ಜಾಗರಣೆ"

ರಾತ್ರಿಯ ಉಚಿತ ಟಾಕ್ -ಟೈಮ್ ಪ್ಲಾನ್ ಗಳಲ್ಲಿ ಸೆಲ್ ಫೋನ್ ಹಾವಳಿಗಳಲಿ , SMS, MMS, ಘೀಳಿನಲಿ , Inter Net chat-room ಗಳಲ್ಲಿ ತಮ್ಮ ಅಂತರಂಗ ತೆರೆದಿಡುವ , ಸಮಯದ ಪರಿವೆಯೇ ಇಲ್ಲದೆ ಜಗತ್ತನ್ನೇ ಪುಟ್ಟ ಪರದೆಯ ಮೇಲೆ ಮೂಡಿಸುವಲ್ಲಿ ನಮ್ಮವರನ್ನೇ ಮರೆತು ನಮ್ಮವರೊಡನೆ ನಡೆದುಕೊಳ್ಳುವ ಬಗೆ ಹೀಗೇಕೆ ಸಂಯಮ ಮರೆತು ,ಬಾಳಲಾರೆವ ನಮ್ಮವರ ಬೆರೆತು ಸಲ್ಲದ ಚಿಂತೆ ಮರೆತು ,
ಇರುಳಲ್ಲಿ ನಿದಿರೆಗಿಂತ ಜಾಗತಿಕ ಜನರ ಓಲೈಕೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಪೂಜಿಸುತ ಅವರ ಸೇವೆಯಲ್ಲೇ ನಿರತರಾಗಿ ಪ್ರತಿದಿನ ನಡೆದಿದೆ
"ಜಾಗತಿಕ- ಜಾಗರಣೆ"

ಮದಿರಾ ನದಿಯ ತಟದ ತೀರ್ಥ ಕ್ಷೇತ್ರಗಳಲ್ಲಿ
ತೂಗಾಡುವ ಮಂದಬೆಳಕಿನ ದೀಪಗಳಲ್ಲಿ
ಅಬ್ಬರದ ತಾಳ ಮೇಳಗಳ ಸಂಗೀತದ ಅಮಲಿನಲ್ಲಿ ,
ಸುರ-ಪಾನಕದ ಸವಿಯಲ್ಲಿ ಬೆರೆತು
ಇಹಪರಗಳ ಚಿಂತೆ ಮರೆತು
ಸರ್ವ ಸಂಗ ಸತ್ಸಂಗ ದಲಿ
ವಿಶೇಷ ಸೇವೆಗಳ ಸಂಪ್ರೀತ ಸುಪ್ರಸನ್ನರಾಗಿ,
ಕ್ಷುದ್ರ ಮಾನಸ ರೌದ್ರನ ರಮಿಸಲು
ಮಾದಕ ಊದು ಬತ್ತಿಯ ಆ-ರತಿಯ ವೈಭವದ
ಚಮಕ್ -ಗಿಮಿಕ್ ಸಂಕೀರ್ತನೆಯ ನಿಷ್ಠೆ ಇಂದ ನೆರವೇರಿಸಿ
ಹಲವಾರು ಅನಿಷ್ಟ ಗಳಿಗೆ ಪ್ರೇರಣೆ ಯ
ಅನಾವಶ್ಯಕ ಅನುಕರಣೆ ಅನುಚಿತ ಆಚರಣೆ
ನಿತ್ಯವೂನದೆದಿದೆ ಜಾಗತಿಕ-ಜಾಗರಣೆ

ಅಂದು ಶರಣ ಬಸವಣ್ಣ ಹೇಳಿದ್ದು ಕಾಯಕವೇ ಕೈಲಾಸ ಆದರೆ ಇಂದು ಹಲವರ ಕಾಯಕವೇ ಕೈಸಾಲ, ಜಾಗತೀಕರಣ ಜಾರಿ ಇಂದ ಸಣ್ಣ-ಮದ್ಯಮ
ವ್ಯಾಪಾರಸ್ತರು , ಹೂಡಿಕೆ ದಾರರು, ಕಾರ್ಮಿಕರು ,ಸ್ಪರ್ದೆಯಲಿ ಉಳಿಯಲಾರದೇ ಜಾಗ ಕಳೆದುಕೊಂಡಿದ್ದಾರೆ ,ನೆಮ್ಮದಿಯ ಜೀವನ ನಡೆಸಲು ಆಗದೆ ಹಗಲಲ್ಲಿ ಉಪಾಹಾರ ಇಲ್ಲವೇ ಉಪವಾಸ ರಾತ್ರಿಯಲ್ಲಿ ಭಗವಂತಾ ನಾಳೆ ಎಂದರೆ ಹೇಗೆ ಎಂಬ ಕಲ್ಪನೆ ಇಲ್ಲದೆ ಇಂದೇ ನಿನ್ನ ಸಾಕ್ಷಾತ್ಕಾರ ಕರುಣಿಸು ಎಂದು ಸ್ಮರಿಸುತ್ತ ಚಿಂತೆ ಇಂದ ನಿದ್ದೆ ಬಾರದ ಕಣ್ಣುಗಳಲಿ "ಜಾಗತಿಕ -ಜಾಗರಣೆ"

ಸಾಮಾನ್ಯನಿಗೂ ಶೋಕಿಯ ಮದವೇರಿ ಹೊರಟಿಹನು ಅಗ್ಗದ ಕಾರು ಬೈಕು ಗಳನ್ನೇರಿ ಹೊಲ ಗದ್ದೆ ಮಾರಿ ,ತನ್ನ ನೀತಿ ಮೀರಿ , ವಿಜ್ರುಂಬಿಸಿಹುದು ಸ್ವೇಚ್ಚಾಚಾರದ ಮಾರಿ , ಈ ಹುಚ್ಚ್ಚುಮನಸಿನ ಅಲೆಮಾರಿ ಚಿಂತಿಸಬೇಕಿದೆ ಸ್ವಲ್ಪ ಸಹನೆ ತೋರಿ ಏನು ನಮ್ಮ ಜೀವನದ ಗುರೀ...?!!

ಈ ಅನಿವಾರ್ಯತೆಯ ನಡುವೆ ಬದುಕುತ್ತಿರುವ ನಾವು ನಿಜಕ್ಕೂ ಎಚ್ಚರಗೊಳ್ಳಬೇಕಿದೆ जागोरे ....!!!
ಜಾಗತಿಕ ಜಾಗರಣೆ ಆಚರಿಸೋಣ ಬನ್ನಿ ನಮ್ಮ ತನ ನಮ್ಮ ಸಂಸ್ಕೃತಿ ಯ ಮಾದರಿಯಾಗುವಂತೆ, ಇತರರ ಅನುಕರಣೆಯಲ್ಲಿ ಕಳೆದು ಹೋಗದೆ ಉಳಿಸಿಕೊಳ್ಳುವಲ್ಲಿ ,ಅತಿಯಾದ ಮೋಹದ ವ್ಯಾಮೊಹದೆ ತೇಲದೆ,ಇರುವ ಸ್ವಾತಂತ್ರ ಕೈತಪ್ಪಿ ಹೋಗದಂತೆ ಎಚ್ಚರ ವಹಿಸಿ जागोरे ...
ನಮ್ಮ್ವರೊಡನೆ ಕಳೆಯಲು ಸಮಯ ಮೀಸಲಿಡಿ ನಮ್ಮಲ್ಲೇ ನೆಮ್ಮದಿ ಕಂಡುಕೊಳ್ಳಿ ,ಮರೀಚಿಕೆಯ ಬೆನ್ನು ಹತ್ತದೆ ಭ್ರಮೆಯ ಮಂಪರಿನ ತೆರೆ ಸರಿಸಲು जागोरे ...

ನಿನ್ನ ಹೃದಯ ಮಂದಿರದಲ್ಲೇ ಇದ್ದಾನೆ ಭಗವಂತ ಅದ ಮರೆಯದಿರು ಓ ಬುದ್ಧಿವಂತ.
ಸಾಕು ಸಾಕು ಅನುಕರಣೆ , ನಿಲ್ಲಿಸಿ ನಟನೆ
ಒಳಿತಿಗಿರಲಿ ನಮ್ಮ ಪ್ರಪಂಚ ಪರ್ಯಟನೆ
ಸಾಗಲಿ ಎಂದಿನಂತೆ ಹಿಂದಿನಿಂದ ನಡೆದು ಬಂದ ಆಚರಣೆ
ಜಾಗತಿಕ ಮಟ್ಟದಲ್ಲಿ ಭಗವಂತನ ಸ್ಮರಣೆ ಜಾಗತಿಕ ಜಾಗರಣೆ

ಈಶಾನಃ ಸರ್ವ ವಿದ್ಯಾನಂ ಈಶಾನಃ ಸರ್ವ ಭೂತಾನಾಂ ಬ್ರಹ್ಮಾಧಿ ಪತಿ ಬ್ರಾಹ್ಮಣೋಧಿಪತಿ ಬ್ರಹ್ಮ ಶಿವೋ ಮೇ ಅಸ್ತು ಸದಾ ಶಿವೊಂ

* ಶುಭವಾಗಲಿ *
______________________________________________________________

ಆತ್ಮೆಯರೇ ವಿಷಯವನ್ನು ಚೊಕ್ಕವಾಗಿ ಒಂದು ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸುವಲ್ಲಿ ಆದಷ್ಟು ಭಾಷೆಯ ಬಳಕೆಯಲ್ಲಿ ಕಾಳಜಿ ವಹಿಸಿದೇನೆ ಏನಾದರು ತಪ್ಪಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ ಎಚ್ಚರಿಸಿ
ಮುಂದಿನ ಲೇಖನ ಗಳನ್ನು ಉತ್ತಮ ಗೊಳಿಸುವಲ್ಲ್ಲಿ ಸಹಕರಿಸಿ .
-- ಇಂತಿ
ಆತ್ಮೀಯ ಅनिKतನ

Wednesday, February 10, 2010

ಹೀಗೊಂದು ಓಲೆ ಬರೆಯುವೆ ಒಲವ್ ಅಲ್ಲೆ ..


ಪ್ರಿಯ ಮಿತ್ರರೆ ..
ಹೀಗೊಂದು ಓಲೆ ಬರೆಯುವೆ ಒಲವ್ ಅಲ್ಲೆ ...
ಈ ಪ್ರೀತಿಯ ಸಪ್ತಾಹ ಅಂದರೆ ಬರ್ಲಿರುವ ವಾರದಕೊನೆಯ ಪ್ರೆಮಿಗಳ ಹಬ್ಬ ಕ್ಕಾಗಿ, ನಿಮಗಾಗಿ ಪ್ರೀತಿಯ ಪತ್ರ,
ನಿಮ್ಮಪ್ರೀತಿಯನ್ನು ಪ್ರೇಮ ದೇವತೆಯ ಮುಂದೆ ನೈವೇದ್ಯ ಮಾಡದೆ ಅದನ್ನ ನಿವೆದಿಸಿಕ್ಕೊಳ್ಳಿ ನಿಮ್ಮ ಹೊಸ ಬಾಳಿಗೊಂದು ಮುನ್ನುಡಿ ಬರೆಯಿರಿ.
ಕಹಿ ನೆನಪು ತುಂಬಿ ಕಸದಬುಟ್ಟಿಯಾಗಿರುವ ಹೃದಯ ದಲ್ಲಿ ಪ್ರೀತಿಯ ಹೂವರಳಿಸಿ ಹೂ ಬುಟ್ಟಿ ಮಾಡಿ.
ಮೊಗ್ಗು ಹೂವಾಗುವ ,ಗುಂಡಿಗೆ ಹೃದಯ ವಾಗುವ...
ಆ ಸುಂದರ ಘಳಿಗೆ
ಎನೊ ಉಲ್ಲಾಸ ಒಳಗೊಳಗೆ
ಎಂಥಾ ವಿಸ್ಮಯಕಾರಿ ಶಕ್ತಿ ಇದೆ ಪ್ರೀತಿಗೆ
ಹೌದು ಈ ಪದಗಳನ್ನ ಓದಿದ್ರೆನೆ ಸಂಗಾತಿ ಬೇಕೆನಿಸೋ ಎಷ್ಟೊ ಹಾಡುಗಳು ನಿಮ್ಮ ನೆನಪಿಗೆ ಬರಬಹುದು
ಅಗೊಚರ ವಾದ ಈ ಅನುಭವವೆ ಹಾಗೆ ನಮ್ಮನಡುವೆ ಭಾಂದವ್ಯ ಬೆಸೆವ ಈ ಪ್ರೀತಿಯ ಪದ ಮಾಡುವ ಮೋಡಿ ಹಾಗೆನೆ .
ಕಾಯುತಲೆ ನಿಮಿಶ ಎಣಿಸಿ ಯುಗಕಂಡು,ಸಮಯದ ಪರಿವೆಯೆ ಇಲ್ಲದೆ ಕೂಡಿ ಕಳೆದಾ...
ಹೇಳಿದ ಸಮಯಕೆ ಬರದಿದ್ದರು ,ಹೇಳದೆ ಕೇಳದೆ ನೆನಪಿಗೆ ಬರುವ
ಸಂಗಾತಿ ಇರದ ಸಮಯ..
ತಿಳಿಯದೆ ನುಡಿದ ಕೋಪದ ನುಡಿಗಳಿಗೆ ಮರುಕ
ಇದೆಲ್ಲ ಮೀರಿ ಹುಸಿಮುನಿಸಿನ ಮೆರುಗು .
ಕೆಲವರಿಗೆ ಹುಸಿಯಾದ ಪ್ರೀತಿಯ ಕೊರಗು
ಈ ಅದ್ಭ್ಹುಅನುಭವ ಕೆ ಹಾತೊರೆವ ಆತುರದಲಿ ಅವಸರ ಬೇಡ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ.....
ತಪ್ಪು ಯಾರದೆ ಇರಲಿ ತಪ್ಪಿದಲ್ಲಿ ಪಶ್ಚಾತಾಪಕೆ ಕೊನೆ ಇರದು ಬಾಳಿನಲಿ..
ಸರಿ..ಓಕೆ ಓಕೆ ಕುಯ್ಯೊ ಟೈಮಲ್ಲಾ ಇದು ಪ್ರೀತಿಯ ಸ್ವಾತಿ ಹನಿಯೊ ಟೈಮು .
ಕಾರಣಬೆಕಿಲ್ಲ ಅಲೆದಾಡಲು,
ಹಗಲು ರಾತ್ರಿಗಳ ಪರಿವೆ ಇಲ್ಲ
ಆಗೊಲ್ಲಾ ತಿಲಿಯಲು ಏನಾಗಿದೆ ಎಂದು
,ಹೊಸ ಅಮಲು, ಆಸಕ್ತಿ ಇಲ್ಲ ಹಸಿವು ನಿದಿರೆಯಲು
ಕಾರಣ
LOVE IS DE-VINE
____________________________________________
ಮದುವೆಗೆ ಮುನ್ನ: ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿನಮ್ಮ ಬಾಳಿಗೆ
ನಂತರ: ಪ್ರೀತಿಸಿ ಮದುವೆ ಆಗಿದ್ದಕ್ಕೆ ಏನು ಇಲ್ಲ ಆಸ್ತಿ ನಮ್ಮ ಪಾಲಿಗೆ
_____________________________________________
ಸೂರ್ಯಾ ಚಂದ್ರಾ ಆಕಾಶಕೆ ಗಾಳಿ ನೀರು ಈ ಭೂಮಿಗೆ
ನೀ ನೆಂದು ನನ್ನ ಬಾಳಿಗೆ :)
ದುಡ್ಡಿಲ್ಲ ಅಕ್ಕಿ ಬೇಳೆಗೆ ಕಟ್ಟಿಲ್ಲಾ ಮನೆ ಬಾಡಿಗೆ :(
______________________________________________
ಕೆಲವು ಪ್ರೀತಿಯ ಸಾಲುಗಳೊಡನೆ ಮುಂದಿನ ಪತ್ರ್ದಲ್ಲಿ ಸಿಗ್ತೇನೆ

ಧನ್ಯವಾದಗಳು

ಬಾರದ ಮಳೆಗೆ ಕಾದಿರುವ ಇಳೆಗೆ
ಈ ಹನಿಗಳು ತಂಪೆರೆಯಬಲ್ಲವಾದರೆ ಒಂದು ಘಳಿಗೆ
ಧನ್ಯವಾದಗಳು ಜನ್ಮವಿತ್ತ ಕಂಗಳಿಗೆ

ಎದೆಯ ಕಡಲ ಒಳಗೆ ಸಿಲುಕಿ ನೋವ ಅಲೆಗೆ
ಮುಳುಗಲಿರುವ ನಗುವ ದೋಣಿಗೆ ಆಸರೆಯಾದರೆ ಒಂದು ಘಳಿಗೆ
ಧನ್ಯವಾದಗಳು ಮುದ್ದು ಮುಖಾರವಿಂದಗಳಿಗೆ

ಕಾರಿರುಳ ಕತ್ತಲೆಯೊಳಗೆ ಅಲೆದಾಡುವ ನೆನಪುಗಳಿಗೆ
ನೆಲೆ ನೀಡಬಲ್ಲವಾದರೆ ಮುಂಜಾನೆವರೆಗೆ
ಧನ್ಯವಾದಗಳು ಸುಂದರ ಕನಸುಗಳಿಗೆ

ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?

ಹೂವಲ್ಲಿ ಕಾಯಾಗಿ ಕಾಯಲ್ಲಿ ಹಣ್ಣಾಗಿ ಹಣ್ಣಲ್ಲಿ ಬೀಜ ಮೊಳೆಯೋ ಹೊತ್ತೇನೆ ಸಂಕ್ರಾಂತಿ ....ನೆನಪಾಯ್ತುಸಿ ಅಶ್ವಥ್ ಅವರ ಈ ಪ್ರಸಿದ್ದ ಹಾಡು

ಎಷ್ಟು ಚೆಂದ ಸುಂದರ ಕಲ್ಪನೆ ಅಲ್ವಾ ಆದರೆ ಪ್ರಸ್ತುತ ಪರಿಸ್ತಿತಿ ಯಲ್ಲಿ ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?
ಸಂಕ್ರಾಂತಿ ಎಂದಾಗ ನೆನಪಿಗೆ ಬರೋದು ಸುಗ್ಗಿಯ ಹಿಗ್ಗು, ಎಳ್ಳು ಬೆಲ್ಲ ಹಂಚುವ ಹೆಣ್ಹೈಕ್ಲ(ಹೆಣ್ಣುಮಕ್ಕಳ ) ಸಡಗರ ಸಂಭ್ರಮ
ಪರಿಸ್ತಿತಿ ಎಷ್ಟು ಬದಲಾಯ್ಬಿಟ್ಟಿದೆ ನೋಡೀ ,
ಹೊಲ ಗದ್ದೆ ಮಾರ್ಕೊಳ್ತಿರೋ ರೈತರು ಒಂದೆಡೆ ಆದ್ರೆ
ಇನ್ನೊಂದೆಡೆ ನೆರೆ ಹಾವಳಿ ಇಂದ ತತ್ತರಿಸಿರುವ ಜನ ಜೀವನ ,
ವ್ಯವಸಾಯ ಬಿಟ್ಟು ಕಾಂಕ್ರೀಟ್ ಕಾಡಲ್ಲಿ ಕೆಲಸ ಹುಡ್ಕೋಕೆ ವಲಸೆ ಹೋಗೋ ಹಳ್ಳಿ ಹೈದರು
ಇರುವ ಕೆಲಸದಲ್ಲಿ ನೆಮ್ಮದಿ ಇಲ್ಲದೆ ಸರಿಯಾದ ಸಮಯಕ್ಕೆ ಸಂಬಳ ಇಲ್ಲದೆ ಪರದಾಡೋ ನೌಕರರು
hi-fi technology ಬೆನ್ನೇರಿದ ಬೆಲೆ ಎಟುಕದ ಪದಾರ್ಥಗಳು ಸಾಮಾನ್ಯರಿಗೆ ನಿಲುಕದ ನಕ್ಷತ್ರಗಳು.
ಜೀವನ ಕೆಲವರಿಗೆ ಶೋಕಿ ,ಅವಶ್ಯಕತೆ, ಅನಿವಾರ್ಯತೆ ,ಆಸಕ್ತಿಗೋ ನಡೆದು ಹೋಗುತ್ತೆ
ಆದರೆ ನಮ್ಮ ಜೀವನ ಪದ್ದತಿ ತಳಹದಿಯ ಮೇಲೆ ಬೆಳೆದುಬಂದ ಸಂಸ್ಕೃತಿ ಸಂಪ್ರದಾಯ ಗಳು ಕೇವಲ ಆಡಂಬರ ಶೋಕಿಗೆ ಸಿಲುಕಿ ಅರ್ಥಹೀನವಾಗಿವೆ
ಈ ಎಲ್ಲಾ ಅನಿವಾರ್ಯತೆ ನಡುವೆ ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?
ಹೌದು ಅನ್ಸಿದ್ರೆ ತಪ್ಪಿಲ್ಲ , ನಿರಾಶವಾದ ಖಂಡಿತ ಅಲ್ಲ, ನಮ್ಮ ಜೀವನ ಸಾಗುತ್ತಿರುವ ದಾರಿ ಅನಿವಾರ್ಯತೆಯ ಉಸಿರು ಕಟ್ಟುವ ವಾತಾವರಣದಲ್ಲಿ ಕೊಂಚ ಬಿಡುವು ಮಾಡಿಕೊಂಡು
ಚಿಂತಿಸೋಣಾ ಸಂಭ್ರಮಿಸೋ ಮುನ್ನಾ ...


ಒಂದು ಕಿವಿಮಾತು

ನಮ್ಮನ್ನ ಕೆಲಸ ಸಿಗುತ್ತಾ ಅಂತ ಕೇಳೋ ಹಳ್ಳಿಯ ಗೆಳೆಯರಿಗೆ ಕೊಂಚ ಕಿವಿಮಾತಿ ಹೇಳೋಣ
ಪ್ರತಿ ಕೆಲಸಕ್ಕೂ ಅದರದೇ ಆದ ಗೌರವ ಇದೇ ಹಳ್ಳಿ ಜೀವನದಲ್ಲಿ ನೆಮ್ಮದಿ ಖಂಡಿತ ಇದೇ
MNC ಕಂಪನಿಲಿ ಕೆಲಸ ನೆ ಜೀವನದ ಗುರಿ ಅಲ್ಲ
ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳಿಗೆನು ಕೊರತೆ ಇಲ್ಲಾ
ಸ್ಪರ್ದೆ ಗಾಗಿ ಜೀವನ ಬೇಡ ಜೀವನಕ್ಕಾಗಿ ಜೀವನ ಮಾಡೋಣ
ಮಾನವೀಯತೆ ಮೌಲ್ಯ ಮರೆಯೋದು ಬೇಡಾ
ನಮ್ಮ ಜೀವನ ದ ಮೂಲ ಉದ್ದೇಶ ?
ಅನಿವಾರ್ಯತೆ ಬಂದಿಲ್ಲ ಸೃಷ್ಟಿಸಿದ್ದೇವೆ .......!!!

ಮತ್ತೊಂದು

ಅನ್ನದಾತರ ಬಗೆಗಿನ ಮಾತುಗಳು ಬರವಣಿಗೇಲಿ ಭಾಷಣಗಳಲಿ ಸೀಮಿತವಾಗದೆ ಇರಲಿ
ನಮ್ಮ ಸುತ್ತಮುತಲಿನ ರೈತ ಮಿತ್ರರನ್ನ ಗೌರವಿಸೋಣ
ಪರಿಸ್ತಿತಿ ಕೈ ಮೀರಿ ಅನಿವಾರ್ಯತೆ ಅನುಭವಕ್ಕೆ ಬರುವ ಮುನ್ನ ಎಚ್ಚೆತುಕೊಳ್ಳೋಣ
ಮನುಸ್ಯನ ಆಸೆಗಳು ಭಾವನೆಗಳು ಹುಟ್ಟುವುದು ಸಹಜ ಆದರೆ ಅದನ್ನ ಬೆಳೆಸುವ ರೀತಿ ಮುಖ್ಯ
ಇರುಳು ಕಳೆದು ಹಗಲಾಗುವಷ್ಟರಲ್ಲಿ ಈ ಬದಲಾವಣೆ ಸಾಧ್ಯವಿಲ್ಲ ಇದು ಹಾಗೆ ನಡೆದು ಇಲ್ಲಾ ....
ಕೊಂಚ ನಾವು ನಡೆದು ಬಂದ ಹಾದಿಯೆಡೆಗೆ ಸಿಂಹಾವಲೋಕನ ಮಾಡೋಣ ...
ಸಕಾರಾತ್ಮಕ ಬದಲಾವಣೆಯ ಪ್ರಯತ್ನ ಮಾಡೋಣ .

ಕೊಂಚ ಚಿಂತಿಸೋಣ ಸಂಭ್ರಮಿಸೋ ಮೊದಲು

ಕೊನೆಗೆ, ಎಲ್ಲಾ ಮಾಯಾ ನಾಳೆ ನಾವು ಮಾಯ.... ಅದೇ ಸಿ ಅಶ್ವಥ್ ಅವರ ಕೂಗು ...
pls dont be crazy..
"LIFE IS NOT IMPRESS, IT'S TO EXPRESS "

ಮಿತ್ರರೇ ಈ ಎಲ್ಲದರ ನಡುವೆ ಸುಗ್ಗಿಯ ಸಡಗರದ ಹಬ್ಬ ಸಂಭ್ರಮದ ಸಂಕ್ರಾಂತಿ ತಮ್ಮೆಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಒಂದು ಪ್ರಾರ್ಥನೆ
ಸೂರ್ಯ ದೇವನ ಬದಲಾದ ಪಥ ನಮ್ಮೆಲ್ಲರ ಜೀವನದಲ್ಲಿ ಹೊಸ ಹೊಂಗಿರಣ ಬೀರಲಿ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ....

ಬೆಲ್ಲದ ಸವಿಯಂತೆ ಎಳ್ಳಿನ ಬಿಳಿಯಂತೆ ಸವಿಯಾದ ನಿಷ್ಕಲ್ಮಶ ಸ್ನೇಹಾ ಹೀಗೆ ಇರಲಿ ...

" 09 moments unforgettable for ME "


" 09 moments unforgettable for ME " ಹೌದು ಮರೆಯಲಾರದ ಕೆಲವು ... ನಿಮ್ಮೊಡನೆ
ಕಳೆದು ಹೋದರು ಕಾಲ ಉಳಿದಿರುವುದು ನೆನಪು ನೋಡಾ ....


- Attended 1of My SMS friends marriage function 1st meet in 2yrs of friendship, we belongs same town ...!!!!!

-My nie(Dheeksha) naming ceremony In my home...
ಅಪರೂಪದ ಅತಿಥಿಗಳ ಆಗಮನ ತಂದ ಆನಂದ --(ಮೊದಲ್ ಮೊದಲ್ ಕಲಿಸಿದ ಟೀಚರ್ ಬಂದಿದ್ರು )
ನಮ್ಮನೇಲಿ ನಡೆದ ಮೊದಲ ಸಂಭ್ರಮದ ಸಮಾರಂಭ ಬರ್ದೇ ಉಳ್ಕೊಡಿರೋ ಗೆಳೆಯರ ಮೇಲೆ ಇನ್ನು ಕೋಪ ಹಾಗೆ ಇದೇ

-- opportunity to talk in phone to S.P.Baluuuuuuu... yep wished happy birth day to SPB
ಮಾತಲ್ಲಿ ಹೇಳಲಾರೆನು... ಮೊದಲ ಬಾರಿ ದೊಡ್ಡ ವ್ಯಕ್ತಿ ಜೊತೆ ಮಾತಾಡಿ ಹ್ಯಾಪಿ berthday ಹೇಳೋ ಅವಕಾಶ

-- a great opportunity to meet same SPB and Jayanth Kaykini
ಮತ್ತೊಂದು ಅಮೋಘ ಅವಕಾಶ ಇಬ್ಬರನ್ನು ಭೇಟಿ ಆದದ್ದು ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ

-- A visit To Malnaad my Friends marrieage a wonder full experience was out of silicon city

----15 th AUG celebrated in new way with FUNATICS CaRIED FLAG TO DEVARAAYAN DURGA AND HOISTED met A SOLDIER


--My Birth day i got maximum wishes n knew how many well wishers with me
ಮೊದಲ್ ಸಲ ಇಷ್ಟೊಂದು ಶುಭಾಶಯಗಳು ಬಂದದ್ದು 12 am ಇಂದ next day ತನಕ

--My B.E. admission ಹೌದು ಜೀವನದಲಿ ಒಂದು ಹೊಸ ಅವಕಾಶ

--Releaving day of ORIZIN
company ಗೆ ವಿದಾಯ ಹೇಳಿದ ದಿನಾ ಧನ್ಯ ವಾದ ಹೇಳಲು ಮನಸು ತುಂಬಿ ಬಂದಿತ್ತು ಮಾತು ಬಾರದಾಗಿತ್ತು

--1st time I spoke to RJ's ya my fist talk with RJ my voice came in AIR ,,, in FEVER 104 FM..thank bindaas boss and high voltage
ಸಂತೋಷ ಅಹ ಓಹೋ ನಾನು ಎಫ್ ಎಂ ನಲ್ಲಿ ಮಾತಾಡ್ದೆ.... ಮೊದ ಮೊದಲ್ ಸರಿ ಮತದ್ಬೇಕರೆ ಎಷ್ಟು ಖುಷಿ ಆಗಿತ್ತು ಗೊತ್ತ ಅದು ಇಷ್ಟವಾಗಿರೋ ಹಾಡು ರೆಕ್ವೆಸ್ಟ್ ಮಾಡೋ ಖುಸಿ ಬೇರೆ ....

-- VTU Xams

ಜಾಸ್ತಿ ಏನಾರು ಹೇಳಬೇಕಾ ಅರಳು ಮರಳು..... ಜೀವನದಲ್ಲಿ ಇಷ್ಟವಾಗದೆ ಇರದ್ನ ಇಷ್ಟ ಪಡ್ತಿರೋದು ಇದೇ ಮೊದಲು ಅನ್ಸುತ್ತೆ

----ನೆಚ್ಚಿನ ಗಾಯಕ ಭಾವ ಸಂಗೀತ ದ ಸರದಾರ ಭಾವ ಶಿಲ್ಪಿ c ಅಶ್ವಥ್ ಹಾಗು ನೆಚ್ಚಿನ ನಟ ವಿಷ್ಣುವರ್ಧನ್ ಪ್ರಕೃತಿಯಲಿ ಲೀನವಾದ ದಿನ , ಸಹಿಸಲಾರದ ಸಂಕಟ...
ಮಿಡಿಯದಿದ್ದರೆ ಈ ಹೃದಯ ಭಾವನೆಗಳಿಗೆ ಎಸಗಿದಂತೆ ಅನ್ಯಾಯ, ಹೇಳದಿದ್ದರೆ ಅಶ್ರುನಮನ ಕಂಬನಿಗಳು ಅರ್ಥಹೀನ....

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........
ಆಲ್ವಾ ... ನನ್ನ ಮನಸಿನ ಮಾತುಗಳನ್ನ ನಿಮ್ಮಜೊತೆ ಹಂಚಿಕೊಳ್ಳೋಣ ಅಂತ ...
ಈ ಜೀವನ ಎಷ್ಟು ಅನಿಶ್ಚಿತ
೨೪ ತಾಸುಗಳಲ್ಲಿ ಕನ್ನಡದ ಎರಡು ಮಹಾನ್ ಕಲಾಚೇತನಗಳ ಅಗಲಿಕೆ,
ಸಂಗೀತಲೋಕದಲ್ಲಿ ಅದ್ಭುತ ಸಾಧನೆ ಮಾಡಿದ ತಮ್ಮದೇ ಶೈಲಿಯ ಹಾಡುಗಳಿಗೆ ಮನೆ ಮಾತಾದ ಭಾವ ಜೀವಿಗಳ ಹೃದಯಕೆ ಮಿಡಿದ, ಜಾನಪದ ಲೋಕ ಮರೆಯದ, ತಾತ್ವಿಕ ಹಾಡುಗಳಿಗೆ ಜೀವತುಂಬಿದ,ಗಾನ ಗಾರುಡಿಗ ಕಂಚಿನ ಕಂಠದ
ಸಿ .ಅಶ್ವಥ್ ,
ಹಾಗೆ
ಕರುನಾಡು ಕಂಡ ಉತ್ತಮ ಸ್ಸ್ನೇಹ ಜೀವಿ ಸಭ್ಯತೆಗೆ ಹೃದಯ ವೈಶಾಲ್ಯತೆಗೆ ಹೆಸರಾದ, ಯಾವುದೇ ಪಾತ್ರಗಳಿಗೆ ಜೀವ ತುಂಬಬಲ್ಲ, ಸಾಹಸಸಿಂಹ ಎಂದೇ ಪ್ರಸಿದ್ದವಾದ, ಕುಚಿಕು ನಮ್ಮೆಲ್ಲರ ಮೆಚ್ಚಿನ ನಟ ಡಾ .ವಿಷ್ಣುವರ್ಧನ್ ಆತ್ಮೀಯವಾಗಿ ಹೇಳ್ಬೇಕು ಅಂದ್ರೆ ನಮ್ ವಿಷ್ಣು ....ಲೊಡ್ಡೆ,
ಹೆಚ್ಚಿಗೆ ಹೇಳೋ ಅವಶ್ಯಕತೆ ಇಲ್ಲಾ... ಸುಮಾರು ಬುದ್ದಿ ತಿಳಿದು ಬಂದ ವಯಸಿನಿಂದಲೂ ಅವರ ಚಿತ್ರಗಲನ ನೋಡಿ ಬೆಳೆದವರು ನಾವೆಲ್ಲಾ , ನಾನು ಬೆಳದದ್ದು ಹಳ್ಳಿ ವಾತಾವರಣ ಆದ್ದರಿಂದ ಅದರಪ್ರಭಾವ ಸ್ವಲ್ಪ ಮಟ್ಟಿಗೆ ಜಾಸ್ತಿನೆ ಇತ್ತು.

ಮತ್ತೊಬ್ಬರಲ್ಲಿ ಹುಡುಕಲಾರದ ಇನ್ನೊಬ್ಬರಿಗೆ ಹೋಲಿಸಲಾರದ ಈ ಕಲಾಚೇತನಗಳ ಅಗಲಿಕೆ ಇಂದ
ಊಹೆಗೂ ನಿಲುಕದ ಮಾತಿಗೆ ಸಿಗದ ಅನುಭವಗಳು, ಒಂದರಹಿಂದೆ ಒಂದು ಬಂದು ಎರಗಿದ ಸುದ್ದಿಗಳಿಂದ ಜರ್ಜರಿತವಾದ ಮನಸು, ತಮ್ಮದೇ ಆದ ಜೀವನ -ಶೈಲಿಯಿಂದ ನಮ್ಮಜೀವನದಲ್ಲಿ ಹೃದಯದಲಿ ಒಂದು ಛಾಪು ಮೂಡಿಸಿದ್ದ ಈ ಇಬ್ಬರು ಮಹಾನ್ ಕಲಾ ಚೇತನಗಳು, ಅಗಲಿಕೆಯನ್ನು ಏಕ ಕಾಲಕ್ಕೆ ಸಹಿಸಲಾಗದ, ಎಂದೆಂದೂ ಭರಿಸಲಾರದ ದುಃಖ ದ ಸಂಕಟಮಯ ವಾತಾವರಣ.ನಮ್ಮವರೆಂದು ಕೊಂಡವರ ಅಗಲಿಕೆ ತರುವ ನೋವು ಹೇಳಲಾಗುವುದಿಲ್ಲ ಅಲ್ಲವಾ ....

ಇಂಥ ಮಹಾನ್ ಚೇತನ ಗಳು ಬದುಕಿದ ರೀತಿ ಅಧ್ಬುತ ,ನಮಗಿರುವ ಎಲ್ಲಾ ಸಾದ್ಯತೆಗಳು ಅವರಿಗೂ ಇದ್ವು ಸಾಮಾನ್ಯವಾಗಿ ನಾವು ಜೀವನದಲ್ಲಿ ಸಾಧನೆ ಅಂದುಕೊಂಡಿರೋ ವಿಧ್ಯಬ್ಯಾಸ , ಡಿಗ್ರಿ, ಬಯಸಿದರೆ ಒಳ್ಳೆ ಕೆಲಸ , ಆದರೆ ಅವರ ಜೀವನ ದ ಗುರಿ ಅವರು ಸಾಗಿದ ರೀತಿ .....!!!!
ವಿಧ್ಯಬ್ಯಾಸ , ಡಿಗ್ರಿ, ಬಯಸಿದರೆ ಒಳ್ಳೆ ಕೆಲಸ ಅದೆಲ್ಲವೂ ಯಾರಾದರೂ ಸಂಪಾದಿಸ ಬಹುದು, ಆದರೆ ಕಲೆ...?
ಎಲ್ಲರಿಗು ಒಲಿಯುವುದಿಲ್ಲ ಅದರಲ್ಲೂ ಲಕ್ಷಾಂತರ ಜನ (ಸಾಮಾನ್ಯರಿಂದ -- ಬುದ್ಧಿಜೀವಿಗಳ ತನಕ) ಎಲ್ಲರ ಮೆಚ್ಚುಗೆಗೆ ಪಾತ್ರರಾಗೋ ಆ ಸಾಧನೆ ಅಧ್ಬುತ
ಜೀವನದಲ್ಲಿ ಎಷ್ಟೇ ಕಷ್ಟ ಗಳು ಅಡೆತಡೆಗಳು ಬಂದರು ವಿಚಲಿತರಾಗದೆ ಅಚಲರಾಗಿ ನಮ್ಮೆಲ್ಲರನ್ನೂ ರಂಜಿಸಿದ ಮಹಾನ್ ಕಲಾವಿದರು
ನಮ್ಮ ಚಿಂತೆ ನೋವುಗಳನ್ನ ಮರೆಯುವಂತೆ ಮಾಡಿದಷ್ಟೇ ಅಲ್ಲ ಅವರ ಅನುಸರಣೆಗೆ ಪ್ರೇರಣೆ ಆದವರು ,
ಅವರು ನಂಬಿದ ಕಲೆ ಅದರಲ್ಲಿ ಅವರ ದುಡಿಮೆ ಎಂಥವರಿಗೂ ಮಾದರಿ ಆಗುವಂಥದು.
(ಸಾಧನೆ ಅಂದಾಗೆಲ್ಲ ನನಗನಿಸ್ಸೋದು ಓದಿ ಎಂಜಿನಿಯರ್ ಆಗಿ ಒಂದುಕಂಪನಿಲಿ ಕೆಲಸ ಗಿಟ್ತಿಸೋದೆ ಜೀವನದ ಗುರಿ ಆಗಬಾರದು ,ಪ್ರತಿಒಂದಕ್ಕು ಅದರದೇ ಗೌರವ ಇದೇ ಅದನ್ನು ಸಹ ಗೌರವಿಸಬೇಕು, ಪ್ರತಿಯೊಂದಕ್ಕೂ ಅದರದೇ ಆದ ಗುರುತಿನ ಚೀಟಿ ಇದೇ .... ಅದೇನ್ ಮಹಾ ಅಂತ ಮುಖ ತಿರುಗಿಸೋ ಸುತ್ತಮುತ್ತಲಿನ ನಮ್ಮಜನ ಕ್ಕೆ ತಿಳಿಸಿ ಹೇಳ್ಬೇಕು ಅನ್ನಿಸೋ ಅವರಿಗೆ ಅರ್ಥ ಆಗದ ಮಾತುಗಳು)
ನಮಗಿದ್ದ ಎಲ್ಲಾ ಅವಕಾಶಗಳು ಇದ್ರೂ ಕಲೆಯಲ್ಲಿ ತಮ್ಮಜೀವನ
ಕಂಡುಕೊಂಡ ನಮ್ಮನ್ನೆಲ್ಲ ನಾವಿರೋ ತನಕ ರಂಜಿಸೋ ಅವರ ಸಾಧನೆಗಳಿಗೆ ಕೋಟಿ ಧನ್ಯವಾದಗಳೊಂದಿಗೆ ಈ ಸಂದರ್ಭದಲ್ಲಿ ಒಂದು ಭಾವ ಪೂರ್ಣ ಅಶ್ರುನಮನ....

ಮೇಲೆ ಹೇಳಿರುವ ಹಂಸಲೇಖ ಅವರ ತಾತ್ವಿಕ ನುಡಿಯಂತೆ ಯಾರೂ ವಿಧಿಯಮುಂದೆ ನಿಲ್ಲುವರಿಲ್ಲ ಒಂದುದಿನ ಹೋಗುವವರೇ ಎಲ್ಲಾ.. ಹೋಗುವ ಮೊದಲು ಏನಾದರು ಒಳ್ಳೆಯದು ಮಾದಬೇಕೆಮ್ಬುದಷ್ಟೇ ಹಂಬಲ

ಮೌನ ಮೌನ ಭಾವ ಯಾನ

. ಮೌನ ಮೌನ ಭಾವ ಯಾನ
ಇನ್ನೆಲ್ಲಿ ಮಧುರ ಗಾನ ಭಾವ ಶಿಲ್ಪಿಗೆ ನಮನ .....

ಹ್ರುನ್ ಮನಗಳ ತಣಿಸಿದ ಚೇತನ
ಸಾರ್ಥಕ್ ಅ ನಿಮ್ಮ ಜೀವನ
ಯುಗ ಯುಗ ಗಳಲಿ ಹೊಸ ಹೊಸ ಪ್ರತಿಭೆಗಲ್ಲಿ ಸದಾ ಹಸಿರು ನಿಮ್ಮ ಗಾನ

ಎಂದೂ ಅಳಿಯದ ಮೈಸೂರು ಮಲ್ಲಿಗೆಯ ಕಂಪು ಸೂಸಿ
ಭಾವ ದೀಪ್ತಿಯ ಎಲ್ಲೆಲು ಬೆಳಗಿದಂತೆ ಬೆಳಗುವುದು ನಿಮ್ಮ ಕೀರ್ತಿ
ಅಮರಾ ಮಧುರ ನೀವು ಸೂರ್ಯ ಚಂದ್ರ ರಂತೆ
ಎಲ್ಲರಲ್ಲೂ ಬೆರೆತಿರುವ ಸಪ್ತ ಸ್ವರದಂತೆ ....
ಪ್ರಕೃತಿಯಲಿ ಲೀನವಾದ ನಿಮ್ಮ ಗಾನ ......

ಪ್ರೀತಿಯ ಸಾಲುಗಳು ನಿಮಗಾಗಿ

ಪ್ರೀತಿಯ ಸಾಲುಗಳು ನಿಮಗಾಗಿ

ಉದಯಿಸುವ ಕಾಲಕೆ
ಮೂಡಣದ ಹೊನ್ನ ರಶ್ಮಿಯಂತೆ ರಮ್ಯ ಈ ಪ್ರೀತಿ

ಮುಂಬೆಳಕಿನ ಕಿರಣದಿ ಮಿನುಗೋ
ಮುಂಜಾನೆಯ ಮಂಜು ಈ ಪ್ರೀತಿ

ನಯನದಿ ಅರಳಲು
ಚಂದದಿ ನಗುವ ಸುಮದಂತೆ ಈ ಪ್ರೀತಿ

ಬೆಳಕಾಗಲು ಹೃದಯದಲಿ
ದಿವ್ಯತೆಯ ಪ್ರತಿರೂಪ ಈ ಪ್ರೀತಿ

ಕಾದು ಕಾದು ಬಳಲಿದ ಮನಸಿಗೆ
ಸುಡುವ ವಿರಹದ ತಾಪ ಈ ಪ್ರೀತಿ

ಕಂಡಾ ಕ್ಷಣ ಸಂಭ್ರಮದಿ
ಎದೆಯ ಢಂಗೂರ ಸಾರುವ ಸದ್ದು ಈ ಪ್ರೀತಿ
ಕಣ ಕಣವು ಕಂಪಬೀರೋ ಚಂದನ
ಕಂಪಿನ ಕಂಪನ ಈ ಪ್ರೀತಿ

ಮುನಿದಾಗ ಕೆನ್ನೆಗಳಲ್ಲಿ
ಮುಸ್ಸಂಜೆ ರಂಗಂತೆ ಚೆಂದ ಈ ಪ್ರೀತಿ

ಶ್ರುತಿ ಬೆರೆತರೆ ಹಾಡಂತೆ
ಮಧುರ ಅನುರಾಗ ಈ ಪ್ರೀತಿ

ಮಂದ ಮಾರುತದ ಇರುಳಲಿ
ತಂಪಾದ ಹುಣ್ಣಿಮೆ ಈ ಪ್ರೀತಿ

ನಿದಿರೆ ಸುಳಿಯದ ಘಳಿಗೆ
ಹಂಬಲಿಸಿ ಲಾಲಿಗೆ
ತಾಯಿ ಪ್ರೀತಿ ಕಾಣದ ಮಗುವಂತೆ ಈ ಪ್ರೀತಿ
-- ನಿಮ್ಮ ನಿರ್ಮಲವಾದ ಒನ್ ಸೈಡ್ ಲವ್ !!!

ಏನಂತೀರ ರೈಟಾ......
ಕ್ಲ್ಯಾಪಾ.....

ತೇಲಿ ತೇಲಿ ತಂಗಾಳಿಯಲಿ

ಆಹಾ ಹಾ ಹ hmmmm hmmmm
ತೇಲಿ ತೇಲಿ ತಂಗಾಳಿಯಲಿ ಹೋದಹಾಗೆ ಈ ಮನಸಿನಲಿ
ತಿಳಿ ತಿಳಿ ನೀರಿನಲಿ ಹೊಸ ಅಲೆ ಅಲೆಯ ಹಾಗೆ ಈ ಹೃದಯದಲಿ
ಚಿಲಿ ಪಿಲಿ ಕಲರವ ಕಚಗುಳಿ ಇಟ್ಟಂತೆ ಈ ಎದೆಗೂಡಿನಲಿ
ಪಿಳಿ ಪಿಳಿ ಕಣ್ಣಲಿ ಹೊಳೆದಿದೆ ಮಿಂಚೊಂದು
ಬಿಸಿ ಉಸಿರಿನ ಪಿಸು ಮಾತಲಿ ಸುದ್ದಿಯಾಗಿದೆ ಪ್ರೀತಿ ಬಂದಿದೆ ಎಂದು....

ಕದ್ದು ನೋಡಲು ನಾ ನಿನ್ನನ್ನ
ಸೆರೆ ಮಾಡಬಹುದೇ ಬಹುದೇ
ನನ್ನೀ ಹೃದಯಾನ
ಸೆರೆಯಾದೆ ಎಂದು ನೋವಿಲ್ಲ
ನೋಯಯದಿರಲಿ ಹೃದಯ ಜೋಪಾನ

ಮನಸಾರೆ ಒಪ್ಪ್ಪಿದೆ ತಪ್ಪನ್ನ
ಮುನಿಸೇಕೆ ಒಪ್ಪಿಸೆ ಹೃದಯಾನ,

ತುಸು ಕಾಡಬೇಕಿದೆ ನಿನ್ನನ್ನ
ಹುಸಿ ಮುನಿಸಲೇ ನೀ ಚೆನ್ನ
ಅತಿಯಾದರೂ ಮಿತಿಮೀರದು
ಹಿತ ವಾದ ಹುಸಿ ಆಟ ಇದು ಮನ್ನಿಸು ನೀ ಎನ್ನಾ

ತೇಲಿ ತೇಲಿ ತಂಗಾಳಿಯಲಿ....