Wednesday, February 10, 2010

ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?

ಹೂವಲ್ಲಿ ಕಾಯಾಗಿ ಕಾಯಲ್ಲಿ ಹಣ್ಣಾಗಿ ಹಣ್ಣಲ್ಲಿ ಬೀಜ ಮೊಳೆಯೋ ಹೊತ್ತೇನೆ ಸಂಕ್ರಾಂತಿ ....ನೆನಪಾಯ್ತುಸಿ ಅಶ್ವಥ್ ಅವರ ಈ ಪ್ರಸಿದ್ದ ಹಾಡು

ಎಷ್ಟು ಚೆಂದ ಸುಂದರ ಕಲ್ಪನೆ ಅಲ್ವಾ ಆದರೆ ಪ್ರಸ್ತುತ ಪರಿಸ್ತಿತಿ ಯಲ್ಲಿ ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?
ಸಂಕ್ರಾಂತಿ ಎಂದಾಗ ನೆನಪಿಗೆ ಬರೋದು ಸುಗ್ಗಿಯ ಹಿಗ್ಗು, ಎಳ್ಳು ಬೆಲ್ಲ ಹಂಚುವ ಹೆಣ್ಹೈಕ್ಲ(ಹೆಣ್ಣುಮಕ್ಕಳ ) ಸಡಗರ ಸಂಭ್ರಮ
ಪರಿಸ್ತಿತಿ ಎಷ್ಟು ಬದಲಾಯ್ಬಿಟ್ಟಿದೆ ನೋಡೀ ,
ಹೊಲ ಗದ್ದೆ ಮಾರ್ಕೊಳ್ತಿರೋ ರೈತರು ಒಂದೆಡೆ ಆದ್ರೆ
ಇನ್ನೊಂದೆಡೆ ನೆರೆ ಹಾವಳಿ ಇಂದ ತತ್ತರಿಸಿರುವ ಜನ ಜೀವನ ,
ವ್ಯವಸಾಯ ಬಿಟ್ಟು ಕಾಂಕ್ರೀಟ್ ಕಾಡಲ್ಲಿ ಕೆಲಸ ಹುಡ್ಕೋಕೆ ವಲಸೆ ಹೋಗೋ ಹಳ್ಳಿ ಹೈದರು
ಇರುವ ಕೆಲಸದಲ್ಲಿ ನೆಮ್ಮದಿ ಇಲ್ಲದೆ ಸರಿಯಾದ ಸಮಯಕ್ಕೆ ಸಂಬಳ ಇಲ್ಲದೆ ಪರದಾಡೋ ನೌಕರರು
hi-fi technology ಬೆನ್ನೇರಿದ ಬೆಲೆ ಎಟುಕದ ಪದಾರ್ಥಗಳು ಸಾಮಾನ್ಯರಿಗೆ ನಿಲುಕದ ನಕ್ಷತ್ರಗಳು.
ಜೀವನ ಕೆಲವರಿಗೆ ಶೋಕಿ ,ಅವಶ್ಯಕತೆ, ಅನಿವಾರ್ಯತೆ ,ಆಸಕ್ತಿಗೋ ನಡೆದು ಹೋಗುತ್ತೆ
ಆದರೆ ನಮ್ಮ ಜೀವನ ಪದ್ದತಿ ತಳಹದಿಯ ಮೇಲೆ ಬೆಳೆದುಬಂದ ಸಂಸ್ಕೃತಿ ಸಂಪ್ರದಾಯ ಗಳು ಕೇವಲ ಆಡಂಬರ ಶೋಕಿಗೆ ಸಿಲುಕಿ ಅರ್ಥಹೀನವಾಗಿವೆ
ಈ ಎಲ್ಲಾ ಅನಿವಾರ್ಯತೆ ನಡುವೆ ಸಂಕ್ರಾಂತಿ ಯಾವ ಸಂಭ್ರಮಕ್ಕೆ....!!?
ಹೌದು ಅನ್ಸಿದ್ರೆ ತಪ್ಪಿಲ್ಲ , ನಿರಾಶವಾದ ಖಂಡಿತ ಅಲ್ಲ, ನಮ್ಮ ಜೀವನ ಸಾಗುತ್ತಿರುವ ದಾರಿ ಅನಿವಾರ್ಯತೆಯ ಉಸಿರು ಕಟ್ಟುವ ವಾತಾವರಣದಲ್ಲಿ ಕೊಂಚ ಬಿಡುವು ಮಾಡಿಕೊಂಡು
ಚಿಂತಿಸೋಣಾ ಸಂಭ್ರಮಿಸೋ ಮುನ್ನಾ ...


ಒಂದು ಕಿವಿಮಾತು

ನಮ್ಮನ್ನ ಕೆಲಸ ಸಿಗುತ್ತಾ ಅಂತ ಕೇಳೋ ಹಳ್ಳಿಯ ಗೆಳೆಯರಿಗೆ ಕೊಂಚ ಕಿವಿಮಾತಿ ಹೇಳೋಣ
ಪ್ರತಿ ಕೆಲಸಕ್ಕೂ ಅದರದೇ ಆದ ಗೌರವ ಇದೇ ಹಳ್ಳಿ ಜೀವನದಲ್ಲಿ ನೆಮ್ಮದಿ ಖಂಡಿತ ಇದೇ
MNC ಕಂಪನಿಲಿ ಕೆಲಸ ನೆ ಜೀವನದ ಗುರಿ ಅಲ್ಲ
ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳಿಗೆನು ಕೊರತೆ ಇಲ್ಲಾ
ಸ್ಪರ್ದೆ ಗಾಗಿ ಜೀವನ ಬೇಡ ಜೀವನಕ್ಕಾಗಿ ಜೀವನ ಮಾಡೋಣ
ಮಾನವೀಯತೆ ಮೌಲ್ಯ ಮರೆಯೋದು ಬೇಡಾ
ನಮ್ಮ ಜೀವನ ದ ಮೂಲ ಉದ್ದೇಶ ?
ಅನಿವಾರ್ಯತೆ ಬಂದಿಲ್ಲ ಸೃಷ್ಟಿಸಿದ್ದೇವೆ .......!!!

ಮತ್ತೊಂದು

ಅನ್ನದಾತರ ಬಗೆಗಿನ ಮಾತುಗಳು ಬರವಣಿಗೇಲಿ ಭಾಷಣಗಳಲಿ ಸೀಮಿತವಾಗದೆ ಇರಲಿ
ನಮ್ಮ ಸುತ್ತಮುತಲಿನ ರೈತ ಮಿತ್ರರನ್ನ ಗೌರವಿಸೋಣ
ಪರಿಸ್ತಿತಿ ಕೈ ಮೀರಿ ಅನಿವಾರ್ಯತೆ ಅನುಭವಕ್ಕೆ ಬರುವ ಮುನ್ನ ಎಚ್ಚೆತುಕೊಳ್ಳೋಣ
ಮನುಸ್ಯನ ಆಸೆಗಳು ಭಾವನೆಗಳು ಹುಟ್ಟುವುದು ಸಹಜ ಆದರೆ ಅದನ್ನ ಬೆಳೆಸುವ ರೀತಿ ಮುಖ್ಯ
ಇರುಳು ಕಳೆದು ಹಗಲಾಗುವಷ್ಟರಲ್ಲಿ ಈ ಬದಲಾವಣೆ ಸಾಧ್ಯವಿಲ್ಲ ಇದು ಹಾಗೆ ನಡೆದು ಇಲ್ಲಾ ....
ಕೊಂಚ ನಾವು ನಡೆದು ಬಂದ ಹಾದಿಯೆಡೆಗೆ ಸಿಂಹಾವಲೋಕನ ಮಾಡೋಣ ...
ಸಕಾರಾತ್ಮಕ ಬದಲಾವಣೆಯ ಪ್ರಯತ್ನ ಮಾಡೋಣ .

ಕೊಂಚ ಚಿಂತಿಸೋಣ ಸಂಭ್ರಮಿಸೋ ಮೊದಲು

ಕೊನೆಗೆ, ಎಲ್ಲಾ ಮಾಯಾ ನಾಳೆ ನಾವು ಮಾಯ.... ಅದೇ ಸಿ ಅಶ್ವಥ್ ಅವರ ಕೂಗು ...
pls dont be crazy..
"LIFE IS NOT IMPRESS, IT'S TO EXPRESS "

ಮಿತ್ರರೇ ಈ ಎಲ್ಲದರ ನಡುವೆ ಸುಗ್ಗಿಯ ಸಡಗರದ ಹಬ್ಬ ಸಂಭ್ರಮದ ಸಂಕ್ರಾಂತಿ ತಮ್ಮೆಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಒಂದು ಪ್ರಾರ್ಥನೆ
ಸೂರ್ಯ ದೇವನ ಬದಲಾದ ಪಥ ನಮ್ಮೆಲ್ಲರ ಜೀವನದಲ್ಲಿ ಹೊಸ ಹೊಂಗಿರಣ ಬೀರಲಿ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ....

ಬೆಲ್ಲದ ಸವಿಯಂತೆ ಎಳ್ಳಿನ ಬಿಳಿಯಂತೆ ಸವಿಯಾದ ನಿಷ್ಕಲ್ಮಶ ಸ್ನೇಹಾ ಹೀಗೆ ಇರಲಿ ...

No comments:

Post a Comment