Wednesday, February 10, 2010

ಧನ್ಯವಾದಗಳು

ಬಾರದ ಮಳೆಗೆ ಕಾದಿರುವ ಇಳೆಗೆ
ಈ ಹನಿಗಳು ತಂಪೆರೆಯಬಲ್ಲವಾದರೆ ಒಂದು ಘಳಿಗೆ
ಧನ್ಯವಾದಗಳು ಜನ್ಮವಿತ್ತ ಕಂಗಳಿಗೆ

ಎದೆಯ ಕಡಲ ಒಳಗೆ ಸಿಲುಕಿ ನೋವ ಅಲೆಗೆ
ಮುಳುಗಲಿರುವ ನಗುವ ದೋಣಿಗೆ ಆಸರೆಯಾದರೆ ಒಂದು ಘಳಿಗೆ
ಧನ್ಯವಾದಗಳು ಮುದ್ದು ಮುಖಾರವಿಂದಗಳಿಗೆ

ಕಾರಿರುಳ ಕತ್ತಲೆಯೊಳಗೆ ಅಲೆದಾಡುವ ನೆನಪುಗಳಿಗೆ
ನೆಲೆ ನೀಡಬಲ್ಲವಾದರೆ ಮುಂಜಾನೆವರೆಗೆ
ಧನ್ಯವಾದಗಳು ಸುಂದರ ಕನಸುಗಳಿಗೆ

No comments:

Post a Comment