Thursday, February 13, 2014

ಶಿಳ್ಳೆ ಹೊಡಿತದೇ ಹಾರ್ಟು ನಾ ಹಾಕ್ದೆ ಕ್ರಿಷ್ಣನ್ ಪಾರ್ಟು

ತುಂಬಾ ದಿನ ಆಯ್ತಲ್ವ
 ಹಳ್ಳೀ ಹಾಡು  ಬರ್ರಲೇ ಹಾಡುಮ...

ಇವತ್ತು ಕಿಸ್ಸ್ಸ್ಸ್ಸ್ ಡೇ ಅಂತ್ರಪ್ಪಾ,
ಇದು ಮಾಸ್ ಸಾಂಗು.. ರಾಜಾಹುಲಿ, ದರ್ಶನ್, ಕಿಚ್ಚಾ , ಅಪ್ಪು ,ಉಪ್ಪಿ, ಯಾರ್ನಾನಾ ನೆನ್ಸಕಳಿ
ನೋಡು ಈ ಹಾಡು ಓದಾದ್ಮೇಲೆ ಯಾವ್ ಹುಡ್ಗಿ ನೆಪ್ಪಾಯ್ತಳೆ ಅವ್ಳ್ಗೆ ಐ ಲವ್ವು ಅನ್ನು ಹಾಳಾಗ್ ಹೋಗು.

ಬರ್ರಲೇ ಹಾಡುಮ...

ಕಣ್ಣು ಹೊಡೆದ್ರೇ ನೀನು  ಶಿಳ್ಳೆ ಹೊಡಿತದೇ ಹಾರ್ಟು
ಕಂಡ ಕೂಡ್ಳೇ ನೀನು  ನಾ ಹಾಕ್ದೆ  ಕ್ರಿಷ್ಣನ್ ಪಾರ್ಟು
ಕಯ್ಯಿಕೊಟು ಓಡಬ್ಯಾಡ ನಾ ನಿನ್ ಕಯ್ಯಹಿಡ್ಯೋ ಹಮ್ಮೀರ
ಕಳ್ಳನಲ್ಲ ಸುಳ್ಳನಲ್ಲ ಮಳ್ಳಿನಿನ್ನ ಸರದಾರ
ಬಾಗಿ ಬಾಗಿ ಬೀಳ್ ಬ್ಯಾಡ ವಯ್ ಸು ತುಂಬಾಭಾರ " Pallavi "

charana
ಕದ್ದುಮುಚ್ಚಿ ಕೊಂಚಾ ಕಚ್ಚಿ ತಿಂದಾ ಹಣ್ಣು ತುಂಬಾರುಚಿ
ಕಣ್ಣುಮುಚ್ಚಿ ಕೊಟ್ರೆ ಒಸಿ ಚಂದಾ ಹೆಣ್ಣೆ ತುಟಿರುಚಿ
ಕಬ್ಬುನ್ ಗದ್ದೆ ಏರಿಮ್ಯಾಗೆ ಸೂರ್ಯಮುಳ್ಗೊ ಹೊತ್ನಾಗೆ
ಕಬ್ಬುನ್ ಜಲ್ಲೆ ಸವಿಹಾಂಗೆ ಸಿಕ್ರೆಸಾಕು ಬತ್ತಾ ಹಂಗೆ
ಕಣ್ಣು ಮುಚ್ಚಿ ಬುಡೊದ್ರಾಗೆ ಕಂಡಂಗಾಯ್ತದೆ ಸ್ವರ್ಗ ನಿಂಗೇ

 ಕಣ್ಣು ಹೊಡೆದ್ರೇ ನೀನು ..
ಏಲೇ ಕಣ್ಣು ಹೊಡೆದ್ರೇ ನೀನು ..

charana
ನಾಟಿ ಇಟ್ಟ ಪೈರಿನಂಗೆ ನಾಟ್ಕೊಂಡೈತೆ ನಿನ್ ಪ್ರೀತಿ
ಘಾಟಿ ನೀನು ಹಳ್ಳಿಹುಡ್ಗಿ ನನ್ ಯಾಕೆ ಕಾಡ್ತಿ ಈರೀತಿ
ಅರ್ಳುರ್ದಂಗ್ ಮಾತಾಡ್ಕಂಡೇ ಅರ್ಳುಮರ್ಳು ಮಾಡ್ತಿ
ಹರ್ತಬಂದ್ರೆ ಯಾಕೇಹಿಂಗೇ ದುರ್ಗುಟ್ಕಂಡು ನೋಡ್ತಿ
ಕಂಡ್ರುಕಾಣ್ದಂಗ್ ಆಡ್ಬ್ಯಾಡ ಮನ್ಸಾಗದೇ ನಿನ್ಮ್ಯಾಗೇ

ಕಣ್ಣು ಹೊಡೆದ್ರೇ ನೀನು ..
 ಕಣ್ಣು ಹೊಡೆದ್ರೇ ನೀನು ..  ಶಿಳ್ಳೆ ಹೊಡಿತದೇ ನನ್ ಹಾರ್ಟು

-ಅನಿಕೇತನ ಹ್ಯಾಪ್ಪಿ B :) Y

Tuesday, February 11, 2014

ಪ್ರೀತಿಯ ಇರಿತ, ಮನಸು ಈಗ.. ಜರ್ಝರಿತ

ಥಟ್ ಅಂತ ಗೀಚಿದ್ದು ಹೇಗಿದೆ  ಓದಿ ಹಾಡಿ ಗುನುಗಿ ಹೇಗಿದೆ ಹೇಳಿ

ಓ ಪ್ರಿಯಾ ನನ್ನಾ ಪ್ರಿಯಾ
ಅನುಕ್ಷಣವು ಕಾಡಿ ಅತಿಯಾದ ರೂಢಿ ವಿಸ್ಮಯ
ನಿನ್ನಯಾ ನಿರೀಕ್ಷೆಯಾ
ಪ್ರತಿ ಘಳಿಗೆಯಲ್ಲು ಹೊಸದಾದ ನನ್ನ ಪರಿಚಯ "ಪಲ್ಲವಿ"

ಹೃದಯವಾ ಗೆಲ್ಲೊ ಸ್ವಾರ್ಥದೀ ಕೊಲ್ಲೊ ಪ್ರೀತಿಯ ಇರಿತ
ಮನಸು ಈಗ.. ಜರ್ಝರಿತ
ಮನಸು ಈಗ... ಜರ್ಝರಿತ " ಅನುಪಲ್ಲವಿ"

ಚರಣ 1
ರಾತ್ರಿಯ ಪಾಳಿಯ ನನ್ನ ಕನಸುಗಳು
ಕಂಡ ಕಲ್ಪನೆಗಳೇ ಪುರಾವೆಗಳು
ಕಾಣಲೂ ಕಾದಿರುವ ಈ
ಕಣ್ಣಮುಂದೆ ನಿಲ್ಲು ಅಪರೂಪದಾ ಒಲವ ಶಿಲ್ಪವಾಗಿ

ಹೃದಯದೀ ಚೆಲ್ಲೊ ಪ್ರೀತಿಯ ಹೊನಲು
ಪಸರಿಸಿದಲ್ಲೆಲ್ಲೂ ಕಂಡೇ ಸಂಪ್ರೀತಿಯಾ ಮಜಲು "ಅನುಪಲ್ಲವಿ"

ಚರಣ2
ಪಾರಾಗೋ ಬಗೆ ಹೇಳು ಬಂಧಿಯಾಗಿರಲು
ವಿರಹದಾ ಸೆರೆ ಬಿಡಿಸಿ ನೀ ಆಸರೆನೀಡು
ನಿನ್ನಯ ಸಹಚಾರಿಯಾ
ಸಹವಾಸ ನೀಡು ನಿಜ ಮಾಡು ನನ್ನ ಸವಿಸಂಶಯ

ಉದಿಸುಬಾ ಎದೆಯ ಬೆಳಗುವ ಶಶಿಯು ನೀ ಚಂದ್ರಮುಖಿಯಾಗಿ
ನನ್ನಾ ಪ್ರಾಣಸಖಿಯಾಗಿ.. "ಅನುಪಲ್ಲವಿ"

ಓ ಪ್ರಿಯಾ ನನ್ನಾ ಪ್ರಿಯಾ ..

-ಅನಿಕೇತನ ಹ್ಯಾಪ್ಪಿ B  Y
 — feeling hopeful.

Friday, February 7, 2014

ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ


ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ
 ನಾವೆಲ್ಲ ಶಾಲೆಗಳಲ್ಲಿ ಕಲಿತಂತೆ ಪ್ರಪಂತದ ಎಲ್ಲ ಭಾಗದ ಜನರಿಗೆ ಎನುಕೂಲವಾಗಲಿ ಎಂದು  ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆಫ್ ಯುನಿಟ್ಸ್ ಬಳಕೆ ಜಾರಿಗೆ ಬಂತು ಇದು ಅಳತೆ ಮಾಪನಕ್ಕೆ ಸಂಭಂಧಿಸಿದಂತೆ ಆದರೆ ವಾಣಿಜ್ಯ ಕ್ಷೇತ್ರದಲ್ಲೂ ಯಾಕೆ ಈ ವಿಧಾನ ಅನುಸರಿಸಲಿಲ್ಲ , ಕಾರಣ ಏಕರೂಪದ ಕರೆನ್ಸಿ ನೋಟುಗಳು ಏಕ ರೂಪದವಾದ ವಾಣಿಜ್ಯವಹಿವಾಟಿನಿಂದ ಬಂಡವಾಳಶಾಹಿಗಳಿಗೆ ಆಗುವ ನಶ್ಟ !! ಹೌದು ಇದೇ ಕಾರಣ
ಪ್ರಪಂಚದ ಎಲ್ಲ ಭಾಗಗಳಲ್ಲೂ ರೂಪಾಯಿ ಒಂದನ್ನೇ ಬಳಸಿ ಅವಾಗ ಎಲ್ಲ ಸರಿಹೋಗುತ್ತೆ
ಒಂದು ಕಿಲೋ ಅಕ್ಕಿಗೆ ಅಮೇರಿಕಾದಲ್ಲು ಒಂದೇ ಬೆಲೆ ಭಾರತದಲ್ಲು ಒಂದೇ ಬೆಲೆ , ಗೊತ್ತು ಮುಂದೆ ಏನು ಪ್ರಶ್ನೆ ಅಂತ ಸಾಗಣೆ ವೆಚ್ಚ ಅದು ಆಮದು ರಪ್ತು ನೀತಿಯಲ್ಲಿ ಸರಿಪಡಿಸಲಿ ಪೆಟ್ರೋಲ್ ಪ್ರಪಂಚದ ಎಲ್ಲ ಭಾಗದಲ್ಲೂ ಒಂದೇಬೆಲೆ ಆಗಲಿ ಸಾಗಣೆವೆಚ್ಚ ಹೊರತುಪಡಿಸಿ ಇದು ಸಾದ್ಯವಾ ಇಲ್ಲಾ ... ಹಾಗಿದ್ದಲ್ಲಿ ಪ್ರಪಂಚದ ಎಲ್ಲ ಭಾಗದಲ್ಲಿ ಒಂದೇ ಮಾಪಕ ಏಕೆ?

ಬೇಡಾ ನಮ್ಮ ಉತ್ಪನ್ನಗಳನ್ನ ನಮ್ಮ ಮಾರುಕಟ್ಟೆಯಲ್ಲಿ ನಮ್ಮದೇ ಆದ ಮಾಪನದಲ್ಲಿ ಮಾರುತ್ತೇವೆ ಅದರ ಬೆಲೆ ತೆತ್ತು ಕೊಂಡುಕೊಳ್ಳಿ ಎಂದು ಬೇರೆಯವರಿಗೆ ಹೇಳುವ ಮಟ್ಟಕ್ಕೆ ನಾವು ಬೆಳೆಯಬೇಕು ,ಪ್ರಸ್ತುತ ಪರಿಸ್ತಿತಿಯಲ್ಲಿ ಅದು ಅಸಾದ್ಯ ಆದರೆ ಅನಿವಾರ್ಯ, ಅವರ ಅಳತೆಗೋಲಿಗೆ ನಮ್ಮ ನಮ್ಮಪದಾರ್ಥ ಅವರುಗಳು ನಿರ್ಧರಿಸಿದ ಡಾಲರ್ ಬೆಲೆ ಇದ್ಯಾವ ನ್ಯಾಯ?
ಇದಕ್ಕೆಲ್ಲ ಕಾರಣ ಪರಾವಲಂಬನೆ , ಪರಾವಲಂಬನೆ ಅನ್ನುವುದಕ್ಕಿಂತ ನಮ್ಮಲ್ಲಿರುವ ಹಿಂಜರಿಕೆ ನಮ್ಮ ಬೆಲೆಯನ್ನ ಬೇರೆಯವರು ನಿರ್ಧರಿಸಲು ಅವಕಾಶ ಕೊಟ್ಟಿರುವುದು
ಜಾಗತಿಕ ಮಾರುಕಟ್ಟೆಯ ದುಷ್ಪರಿಣಾಮ ಕಿಲೊ ಲೆಕ್ಕದಲ್ಲಿ ಅಳತೆಯಾಗುತ್ತಿರುವ ಹಣ್ಣುತರಕಾರಿಗಳು ಅಧಿಕ ಬೆಲೆ ತೆರಬೇಕಾದ ಗ್ರಾಹಕರು ನಷ್ಟ ದಲ್ಲೇ ಇರುವ ಬೆಳೆಗಾರ / ಉತ್ಪಾದಕ ಲಾಭಪಡೆಯುತಿರುವ ಮಾರುಕಟ್ಟೆ .
ಚಿಂತನೆ ಚರ್ಚೆ ಗಳು ಈ ನಿಟ್ಟಿನಲ್ಲಿ ಆದರೆ ನಮ್ಮ ಉತ್ಪನ್ನಗಳನ್ನು ಪುಷ್ಠೀಕರಿಸುವ ತುಷ್ಠೀಕರಿಸುವ ಹೊಸ ಹೊಸ ಯೋಜನೆಗಳು  ಜಾರಿಯಾದರೆ ನಮ್ಮ ವಾಣಿಜ್ಯ ಮಾರುಕಟ್ಟೆ ಅಸ್ಥಿತ್ವ ಉಳಿಸಿಕೊಳ್ಳುತ್ತದೆ ಇಲ್ಲವಾದಲ್ಲಿ ರೂಪಾಯಿ ರೂಪ ಕಳೆದುಕೊಂಡು ದಾಸ್ಯದ ದಿನಗಳು ಮರುಕಳಿಸುವ ಸಮಯ ದೂರವಿಲ್ಲ

ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ

ಹೀಗೇ ಬಂದ ಆಲೋಚನೆ, ಯಾಕೆ ಚಿಂತನೆಯಾಗಬಾರದು ಅನ್ನಿಸ್ತು, ಆಮೇಲೆ ಜಾರಿಯಾದರೆ ಆಗಬಹುದಾದ ಅಧ್ಬುತವಾದ ಬದಲಾವಣೆ ಬಗ್ಗೆ ಹೆಮ್ಮೆ ಅನಿಸಿದೆ, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತಿರುವ ಉದ್ದೇಶ ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ.

ಜಗತ್ತಿನ ಯಾವುದೇಭಾಷೆಯನ್ನ ಅದರದೇಉಚ್ಛಾರಣೆಯ ಧಾಟಿಗೆ ಲಿಪಿಯಲ್ಲಿ ಹಾಗು ಭಾಷೆಯ ಉಚ್ಛಾರಣೆ ಅಳವಡಿಸಬಹುದಾದ ಶ್ರೀಮಂತ ಭಾಷೆ ಕನ್ನಡ 
ಹೀಗಿರುವಾಗ ಬೇರೇಭಾಷೆಯ ಲಿಪಿಯ ಮೇಲೆ ಅವಲಂಬಿಸುವುದರ ಅಗತ್ಯ ಏನಿದೆ? ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮುಖ್ಯವಾಗಿ ವಿನಯದಿಂದ ಪ್ರಾರ್ಥಿಸುವುದೇನೆಂದರೆ ಕನ್ನಡಿಗರು ಮೊದಲು ಸ್ವಚ್ಚವಾದ ಕನ್ನಡ ಬಳಸಿ, ಭಾಷೆಯ ಸೊಗಡು ಪ್ರಾಂತ್ಯ ದಿಂದ ಪ್ರಾಂತ್ಯಕ್ಕೆ ವಿಭಿನ್ನ ವಿರಬಹುದು ಆದರೆ" ಹ" ಕಾರ "ಅ" ಕಾರ ಗಳಉಚ್ಚಾರಣೆ ಬಗ್ಗೆ ದಯವಿಟ್ಟು ಕಾಳಜಿ ಇರಲಿ ವಿಶೇಷವಾಗಿ ವಿದ್ಯಾವಂತರಲ್ಲಿ ವಿನಂತಿ, ಕ್ಷಮೆ ಇರಲಿ ಬಹಳಷ್ಟು ಶಿಕ್ಷಕರಿಗೇ ಅದರ ಬಳಕೆ ಸರಿಯಾಗಿ ತಿಳಿದಿಲ್ಲ .
ಹಾಂ ವಿಷಯಕ್ಕೆ ಬರ್ತೇನೆ
ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮೂಗು ಮುರಿವ ಜನ ಮೂಗು ಮುಚ್ಚಿಕೊಂಡು ಕನ್ನಡ ಕಲಿಯಲೇಬೇಕಾದ ಉಸಿರುಕಟ್ಟಿಸುವ ಪ್ರಯತ್ನಗಳು ಆಗಲೇಬೇಕಾದ್ದು ಅನಿವಾರ್ಯ ಕೇವಲ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಬಲವಂತವಾಗಿ ನಮ್ಮಮೇಲೆ ಹೇರಲ್ಪಟ್ಟ ಭಾಷೆಗೆ ನಾವೇಕೆ ಇನ್ನೂ ಗುಲಾಮರಾಗಬೇಕು ಮನ್ನಣೆ ಕೊಡಬೇಕು? ನಮ್ಮಲ್ಲಿ ಅನುಕೂಲ ಇಲ್ಲವೆಂದಾಗ ಆಶ್ರಯಿಸೋಣ ನಮ್ಮಲ್ಲೇ ಎಲ್ಲ ಇರುವಾಗ ಅದರ ಅವಶ್ಯಕತೆ ಏನು
ಒಪ್ಪಿಕೊಳ್ಳುತ್ತೇನೆ ಇದನ್ನು ಅಚ್ಚಿಸುತ್ತಿರುವ ಕೀಲಿಮಣೆ ಸಹ ಆಂಗ್ಲಭಾಷೆಯಲ್ಲೇ ಇರಬಹುದು ಆದರೆ ಮೂಲದಿಂದ ಕನ್ನಡ ಬಳಕೆ ಗೆ ಉತ್ತೇಜನ ದೊರೆತಲ್ಲಿ ಕೀಲಿಮಣೆಗಳು ಕನ್ನಡದಲ್ಲಿ ತಯಾರಾಗುವುದರಲ್ಲಿ ಸಂದೇಹವೇಇಲ್ಲಾ 
ಚೈನ ಜಪಾನ್ ಥೈಲ್ಯಾಂಡ್ ಅರಬ್ ರಾಷ್ಟ್ರಗಳಂತೆ ಇಲ್ಲಿಯು ಸಹ ಭಾಷಾ ಸ್ವಾತಂತ್ರ್ಯ ಸ್ಥಾಪಿಸಬಹುದಲ್ಲವೇ ಅಲ್ಲಿನ ಗಣಕ ಯಂತ್ರಗಳ ಕೀಲಿಮಣೆ ಆಯಾ ಭಾಷೆಯಲ್ಲೇ ಇದೆ ಇದು ಗಮನಿಸಬೇಕಾದ ವಿಷಯ , 
ಪ್ರತಿಭಾವಂತರಿಗೆ ಹೇಗೆ ಮುಕ್ತ ಅವಕಾಶ ಸಿಗಬೇಕು ಎನ್ನುವುದು ಮಾನವತಾ ವಾದದ ಹಕ್ಕುಗಳಲ್ಲಿ ಒಂದೋ ಹಾಗೆ ಪ್ರೌಢ ಹಾಗು ಶ್ರೀಮಂತ ಭಾಷೆಯ ಅವನತಿ ಕೂಡ ವಿಷಾದ 
ದಯವಿಟ್ಟು ಸ್ವಾಭಿಮಾನ ಮೆರೆಯೋಣ ಸಾಕು, ಗೂಂಡಾವರ್ತನೆ ಚಳುವಳಿಗಳ ಅವಶ್ಯಕತೆ ಕಾಣುತಿಲ್ಲ, ಬಳಕೆ ಹೆಚ್ಚಿಸಿ , ಇತರ ಸ್ನೇಹಿತರು ಕರ್ನಾಟಕಕ್ಕೆ ಬರುವಾಗ ಕನ್ನಡದ ಜ್ಞಾನ ಅಗತ್ಯ ಅನ್ನೋದನ್ನ ಅವರಿಗೆ ಮನದಟ್ಟಾಗುವಂತೆ ನಡೆದುಕೊಳ್ಳೋಣ ಅಶ್ಟು ಸಾಲದೇ ...

ಹೆಚ್ಚೆಂದರೆ ಇದರ ಪ್ರಭಾವ ಏನು , ನಮ್ಮ ಕಂಪನಿಗಳಲ್ಲಿ ಕೆಲಸದಿಂದ ಓಡಿಸ್ತಾರ? 
ಅಂತಹ ಕಂಪನಿಗಳಿಗೆ ಕರ್ನಾಟಕದಲ್ಲಿ ಜಾಗ ಬೇಡ.. ಇದು ಇನ್ನೂ ಉಗ್ರರೂಪ ತಳೆದರೆ ನಿರುದ್ಯೋಗ ದ ಸಮಸ್ಯೆ ನಾ?
ಉತ್ತರ: ಈವಾಗ ಶೊಕಿ ತೆವ್ಲು ಹಚ್ಚ್ಕೋಂಡು ಪಟ್ಟಣ ಸೇರಿರೋ ಜನ ವಾಪಸ್ ಹಳ್ಳಿಗಳಿಗೆ ಬಂದರೆ ಕೂಲಿಕಾರರ ಸಮಸ್ಯೆ ಪರಿಹಾರವಾಗುತ್ತೆ ತಮ್ಮ ಊರಿನ ಜಮೀನಿನಲ್ಲಿ ಕೂಲಿ ಮಾಡೋಕೆ ಹೇಸಿಗೆ ಪಡೋಜನ ಇನ್ಯಾರ್ದೋ ಕಂಪನಿಯಲ್ಲಿ ಕೂಲಿ ಮಾಡೋಕೆ ದೌಡಾಯಿಸ್ತಾರೆ   ಎರಡೂಕಡೆ ಚಾಕರಿ ಒಂದೇ , ನನಗೇನೂ ವ್ಯತ್ಯಾಸ ಕಾಣ್ತಿಲ್ಲಾ , ಕೆಲಸಕ್ಕೆ ಜನ ಸಿಗಲ್ಲ ಅಂತ ನಮ್ಮ ಹಳ್ಳಿಗಳಲ್ಲಿ ವ್ಯವಸಾಯದ ಆಸಕ್ತಿ ಹಿರಿಯರಲ್ಲಿ ಅದನ್ನೇ ನಂಬಿಕೊಂಡವರಲ್ಲಿ ಕಡಿಮೆಯಾಗಿ ಬಂಡವಾಳ ಶಾಹಿಗಳ ಪಾಲಾಗುತ್ತಿದೆ ಜಮೀನುಗಳು, ತಮಿಳುನಾಡು ಕೇರಳಾದಿಂದ ಬಂದು ಜಮೀನುಗಳನ್ನು ಗುತ್ತಿಗೆ ಪಡೆದು ನಮ್ಮ ಜನರನ್ನ ಮುಟ್ಟಾಳರನ್ನಾಗಿ ಮಾಡುತಿದಾರೆ, ನಮ್ಮ ಜನ ಹೊಲಗದ್ದೆ ಮಾರಿ ಬೈಕು ಕಾರು ಶೋಕಿ ಗಾಗಿ ಪಟ್ಟಣಗಳಲ್ಲಿ ಕಾಲ್ ಸೆಂಟರ್ , ಲೋನ್ ರೆಕವೆರಿ , ಕೊರಿಯರ್, ಫೈನಾನ್ಸ್ ಧಂಧೆಗಳಲ್ಲಿ ತೊಡಗಿದ್ದಾರೆ, 
ಇದಕ್ಕೆ ಏನೆನ್ನಬೇಕು.
ಜಪಾನ್ ಚೀನಾ ಅರಬ್ ದೇಶಗಳು ಮೊದಲ ಪ್ರಾಮುಕ್ಯತೆ ನೀಡಿರುವುದು ಸ್ಥಳೀಯರಿಗೆ ಹೀಗಾಗಿ ಅಲ್ಲಿ ಅಭಿವ್ರುದ್ದಿ ಆಗಿರೋದು
ಚೀನಾ ಜಪಾನ್ ಮಾದರಿಯಲ್ಲಿ ಕರ್ನಾಟಕ ಯಾಕೆ ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳಬಾರದು ?
ಪ್ರವಾಸೋದ್ಯಮ ಇದೆ, ಸಂಪತ್ತಿದೆ ,ವನಸಿರಿ ಇದೆ, ವ್ಯವಸಾಯಕ್ಕೆ ಯೋಗ್ಯ ಫಲವತ್ತಾದ ಭೂಮಿ ಇದೆ, ನಾವು ಬೇರೆಯವರನ್ನ ಅವಲಂಬಿಸುವ ಹೆಚ್ಚಿನ ಅವಶ್ಯಕತೆಗಳಿಲ್ಲ , ಬರೀ ಕನ್ನಡಿಗರು ಕರ್ನಾಟಕದಲ್ಲಿ ಜೀವಿಸೋಕೆ ಇಲ್ಲಿನ ಸಂಪತ್ತೇನು ಕಡಿಮೆ ಇಲ್ಲ, ಆದರೆ ಯೋಜನೆಗಳಿಲ್ಲ ಸೂಕ್ತ ಯೋಜನೆಗಳು ಅನುಷ್ಟಾನಕ್ಕೆ ಬಂದರೆ, ನಾವೆಲ್ಲ ಬಿಗುಮಾನ ಬಿಟ್ಟು ಸ್ವಾಭಿಮಾನಕಾಗಿ ದುಡಿದರೆ, ನೆರೆ ರಾಜ್ಯಗಳಿಗಿಂತ ಏಕೇ ನೆರೆ ರಾಷ್ಟ್ರ ಗಳಜೊತೆ ಕೂಡ ಕರ್ನಾಟಕದ ಪ್ರಭಾವ ಏನು ಎಂದು ತೋರಿಸಬಹುದು, ಬರೀ ಗುಜರಾತ್ ಯಾಕೆ ಮುಂದುವರಿಬೇಕು ಕರ್ನಾಟಕದಲ್ಲಿ ಏನು ಕಡಿಮೆ ಇದೆ , ತಮಿಳುನಾಡಿನೊಂದಿಗೆ ಯಾವಾಗಲೋ ಯಾಕೆ ನಾವೇ ಹೊಂದಿಕೊಂಡು ನಡಿಬೇಕು , ಆಂಧ್ರದವರ ದಬ್ಬಾಳಿಕೆ ಬೆಂಗಳೂರಲ್ಲಿ ಏಕೆ , ಮಲಯಾಳಿಗಳ ಒಗ್ಗಟ್ಟು ಕರ್ನಾಟಕಕ್ಕೆ ಪಾಠವಾಗದಿದ್ದರೆ , ಮುಂದೆ ನಾವೆಲ್ಲರೂ ಅಂಗಡಿ ಸಾಮಾನು ಕೊಳ್ಳಲು ಮಲಯಾಳಂ ಕಲಿಬೇಕಾಗುತ್ತೆ.
ಮಿತಿಮೀರಿದರೆ ಕನ್ನಡನಾಡಲ್ಲಿ ಕನ್ನಡಿಗರಿಗೆ ಮಾತ್ರ ಸಹಕಾರ ಉಳಿದವರಿಗೆ ಅಸಕಾರ.
ಇಲ್ಲಿಗೆ ಕರ್ನಾಟಕ ಬಾವುಟ ಹಾರಿಸಿ ಕನ್ನಡರಾಜ್ಯೋತ್ಸವದ ಸಿಹಿ ಹಂಚಿದ ಗಂಟಲು ಹರಿದು ಚೀರಿದ ಕನ್ನಡ ಪ್ರೇಮಿಗಳ ಶ್ರಮ ಸಾರ್ಥಕ.

ಅಘೋಶಿತವಾಗಿ ಸ್ವಯಂಪ್ರೇರಿತ ವಾಗಿ ಜಾರಿಗೆ ಬರಬೇಕಾದವು :
ಫ್ಲ್ಯಾಶ್ ಮೋಬ್ ಗಳ ಮಾದರಿಯಲ್ಲೇ ನಾವು ಕೆಲಸ ಮಾಡುವ ಕಂಪನಿಗಳಲ್ಲಿ ಕನ್ನಡಪರ ಸಮೂಹ ಚರ್ಚೆಗಳು ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾರ್ವಜನಿಕ ತಾಣಗಳಲ್ಲಿ ಕನ್ನದ ಜಾಗೃತಿ 
ಮೊದಲನೆಯದಾಗಿ ರಾಜಧಾನಿ ಯಲ್ಲಿ ಕನ್ನಡಬಳಕೆ ಕಡ್ಡಾಯ ಹಾಗು ಅನಿವಾರ್ಯ ಆಗಲೇಬೇಕು 
ಗಡಿನಾಡು ಗಳಲ್ಲಿ ಕನ್ನಡ ನಾಡು ನುಡಿಗಳ ಬಳಕೆ ಹೆಚ್ಚಿಸಲು ಕಾರ್ಯಕ್ರಮಗಳು ಶಾಲೆಗಳಲ್ಲಿ ಕಾಲೇಜುಗಳಲ್ಲು ಸಹಾ ಕನ್ನಡದಬಗ್ಗೆ ವಿಶೇಷ ತರಗತಿಗಳು ಚಟುವಟಿಕೆ ಗಳು ಇದನ್ನು ಪ್ರಶ್ನೆ ಮಾಡಿದವರಿಗೆ ಮನವರಿಕೆ ಮಾಡಿ ಹೇಳಿ ( ಇಲ್ಲಿ ನೆರೆ ಯಾಜ್ಯಗಳ ಪುಂಡ ಪುಡಾರಿಗಳ ಸಮಸ್ಯೆ ಎದುರಾಗಬಹುದು ) ಹಾಗೆ ಪ್ರಶ್ನೆ ಮಾಡುವವರಿಗೆ ಒಕ್ಕೊರಳಿನ ಒಂದೇ ಉತ್ತರವಿರಲಿ ಇದು ಕರ್ನಾಟಕ ದಯವಿಟ್ಟು ಕನ್ನಡವನ್ನ ಗೌರವಿಸಿ ನಂತರ ನೀವೇ ಬಳಸಲು ಪ್ರಯತ್ನಿಸುತ್ತೀರ .
ಕನ್ನಡದಲ್ಲಿ ಅಸಾದ್ಯ ಅನ್ನುವ ಯಾವುದೇ ಉದಾಹರಣೆಗಳಿಲ್ಲ ಮೊದಲೇ ಹೇಳಿದಂತೆ ಪ್ರಪಂಚದ ಯಾವುದೇ ಭಾಷೆಯನ್ನು ಅದರದೇ ಧಾಟಿಯಲ್ಲಿ ನಮ್ಮ ಭಾಷೆಯಲ್ಲಿ ಉಚ್ಛರಿಸಬಹುದು ಹಾಗೂ ಬರೆಯಬಹುದು. 
ಕನ್ನಡ ಕಲಿಕೆ ಅನಿವಾರ್ಯವಾಗಲಿ 
ಮುಂದಿನ ಕೆಲವೇವರ್ಷಗಳಲ್ಲಿ ಕನ್ನಡ ಖಂಡಿತಾ ಒಂದು ಜಾಗತಿಕ ವ್ಯಾವಹಾರಿಕ ಭಾಷೆಯಾಗಿ ಗುರುತಿಸಿಕೊಳ್ಳುತ್ತದೆ ಪ್ರಯತ್ನ ಅಲ್ಲ ಪ್ರತಿಜ್ಞೆ ಮಾಡೋಣ 
ಜೈ ಕರ್ನಾಟಕ ಮಾತೆ