ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........
ಆಲ್ವಾ ... ನನ್ನ ಮನಸಿನ ಮಾತುಗಳನ್ನ ನಿಮ್ಮಜೊತೆ ಹಂಚಿಕೊಳ್ಳೋಣ ಅಂತ ...
ಈ ಜೀವನ ಎಷ್ಟು ಅನಿಶ್ಚಿತ
೨೪ ತಾಸುಗಳಲ್ಲಿ ಕನ್ನಡದ ಎರಡು ಮಹಾನ್ ಕಲಾಚೇತನಗಳ ಅಗಲಿಕೆ,
ಸಂಗೀತಲೋಕದಲ್ಲಿ ಅದ್ಭುತ ಸಾಧನೆ ಮಾಡಿದ ತಮ್ಮದೇ ಶೈಲಿಯ ಹಾಡುಗಳಿಗೆ ಮನೆ ಮಾತಾದ ಭಾವ ಜೀವಿಗಳ ಹೃದಯಕೆ ಮಿಡಿದ, ಜಾನಪದ ಲೋಕ ಮರೆಯದ, ತಾತ್ವಿಕ ಹಾಡುಗಳಿಗೆ ಜೀವತುಂಬಿದ,ಗಾನ ಗಾರುಡಿಗ ಕಂಚಿನ ಕಂಠದ
ಸಿ .ಅಶ್ವಥ್ ,
ಹಾಗೆ
ಕರುನಾಡು ಕಂಡ ಉತ್ತಮ ಸ್ಸ್ನೇಹ ಜೀವಿ ಸಭ್ಯತೆಗೆ ಹೃದಯ ವೈಶಾಲ್ಯತೆಗೆ ಹೆಸರಾದ, ಯಾವುದೇ ಪಾತ್ರಗಳಿಗೆ ಜೀವ ತುಂಬಬಲ್ಲ, ಸಾಹಸಸಿಂಹ ಎಂದೇ ಪ್ರಸಿದ್ದವಾದ, ಕುಚಿಕು ನಮ್ಮೆಲ್ಲರ ಮೆಚ್ಚಿನ ನಟ ಡಾ .ವಿಷ್ಣುವರ್ಧನ್ ಆತ್ಮೀಯವಾಗಿ ಹೇಳ್ಬೇಕು ಅಂದ್ರೆ ನಮ್ ವಿಷ್ಣು ....ಲೊಡ್ಡೆ,
ಹೆಚ್ಚಿಗೆ ಹೇಳೋ ಅವಶ್ಯಕತೆ ಇಲ್ಲಾ... ಸುಮಾರು ಬುದ್ದಿ ತಿಳಿದು ಬಂದ ವಯಸಿನಿಂದಲೂ ಅವರ ಚಿತ್ರಗಲನ ನೋಡಿ ಬೆಳೆದವರು ನಾವೆಲ್ಲಾ , ನಾನು ಬೆಳದದ್ದು ಹಳ್ಳಿ ವಾತಾವರಣ ಆದ್ದರಿಂದ ಅದರಪ್ರಭಾವ ಸ್ವಲ್ಪ ಮಟ್ಟಿಗೆ ಜಾಸ್ತಿನೆ ಇತ್ತು.
ಮತ್ತೊಬ್ಬರಲ್ಲಿ ಹುಡುಕಲಾರದ ಇನ್ನೊಬ್ಬರಿಗೆ ಹೋಲಿಸಲಾರದ ಈ ಕಲಾಚೇತನಗಳ ಅಗಲಿಕೆ ಇಂದ
ಊಹೆಗೂ ನಿಲುಕದ ಮಾತಿಗೆ ಸಿಗದ ಅನುಭವಗಳು, ಒಂದರಹಿಂದೆ ಒಂದು ಬಂದು ಎರಗಿದ ಸುದ್ದಿಗಳಿಂದ ಜರ್ಜರಿತವಾದ ಮನಸು, ತಮ್ಮದೇ ಆದ ಜೀವನ -ಶೈಲಿಯಿಂದ ನಮ್ಮಜೀವನದಲ್ಲಿ ಹೃದಯದಲಿ ಒಂದು ಛಾಪು ಮೂಡಿಸಿದ್ದ ಈ ಇಬ್ಬರು ಮಹಾನ್ ಕಲಾ ಚೇತನಗಳು, ಅಗಲಿಕೆಯನ್ನು ಏಕ ಕಾಲಕ್ಕೆ ಸಹಿಸಲಾಗದ, ಎಂದೆಂದೂ ಭರಿಸಲಾರದ ದುಃಖ ದ ಸಂಕಟಮಯ ವಾತಾವರಣ.ನಮ್ಮವರೆಂದು ಕೊಂಡವರ ಅಗಲಿಕೆ ತರುವ ನೋವು ಹೇಳಲಾಗುವುದಿಲ್ಲ ಅಲ್ಲವಾ ....
ಇಂಥ ಮಹಾನ್ ಚೇತನ ಗಳು ಬದುಕಿದ ರೀತಿ ಅಧ್ಬುತ ,ನಮಗಿರುವ ಎಲ್ಲಾ ಸಾದ್ಯತೆಗಳು ಅವರಿಗೂ ಇದ್ವು ಸಾಮಾನ್ಯವಾಗಿ ನಾವು ಜೀವನದಲ್ಲಿ ಸಾಧನೆ ಅಂದುಕೊಂಡಿರೋ ವಿಧ್ಯಬ್ಯಾಸ , ಡಿಗ್ರಿ, ಬಯಸಿದರೆ ಒಳ್ಳೆ ಕೆಲಸ , ಆದರೆ ಅವರ ಜೀವನ ದ ಗುರಿ ಅವರು ಸಾಗಿದ ರೀತಿ .....!!!!
ವಿಧ್ಯಬ್ಯಾಸ , ಡಿಗ್ರಿ, ಬಯಸಿದರೆ ಒಳ್ಳೆ ಕೆಲಸ ಅದೆಲ್ಲವೂ ಯಾರಾದರೂ ಸಂಪಾದಿಸ ಬಹುದು, ಆದರೆ ಕಲೆ...?
ಎಲ್ಲರಿಗು ಒಲಿಯುವುದಿಲ್ಲ ಅದರಲ್ಲೂ ಲಕ್ಷಾಂತರ ಜನ (ಸಾಮಾನ್ಯರಿಂದ -- ಬುದ್ಧಿಜೀವಿಗಳ ತನಕ) ಎಲ್ಲರ ಮೆಚ್ಚುಗೆಗೆ ಪಾತ್ರರಾಗೋ ಆ ಸಾಧನೆ ಅಧ್ಬುತ
ಜೀವನದಲ್ಲಿ ಎಷ್ಟೇ ಕಷ್ಟ ಗಳು ಅಡೆತಡೆಗಳು ಬಂದರು ವಿಚಲಿತರಾಗದೆ ಅಚಲರಾಗಿ ನಮ್ಮೆಲ್ಲರನ್ನೂ ರಂಜಿಸಿದ ಮಹಾನ್ ಕಲಾವಿದರು
ನಮ್ಮ ಚಿಂತೆ ನೋವುಗಳನ್ನ ಮರೆಯುವಂತೆ ಮಾಡಿದಷ್ಟೇ ಅಲ್ಲ ಅವರ ಅನುಸರಣೆಗೆ ಪ್ರೇರಣೆ ಆದವರು ,
ಅವರು ನಂಬಿದ ಕಲೆ ಅದರಲ್ಲಿ ಅವರ ದುಡಿಮೆ ಎಂಥವರಿಗೂ ಮಾದರಿ ಆಗುವಂಥದು.
(ಸಾಧನೆ ಅಂದಾಗೆಲ್ಲ ನನಗನಿಸ್ಸೋದು ಓದಿ ಎಂಜಿನಿಯರ್ ಆಗಿ ಒಂದುಕಂಪನಿಲಿ ಕೆಲಸ ಗಿಟ್ತಿಸೋದೆ ಜೀವನದ ಗುರಿ ಆಗಬಾರದು ,ಪ್ರತಿಒಂದಕ್ಕು ಅದರದೇ ಗೌರವ ಇದೇ ಅದನ್ನು ಸಹ ಗೌರವಿಸಬೇಕು, ಪ್ರತಿಯೊಂದಕ್ಕೂ ಅದರದೇ ಆದ ಗುರುತಿನ ಚೀಟಿ ಇದೇ .... ಅದೇನ್ ಮಹಾ ಅಂತ ಮುಖ ತಿರುಗಿಸೋ ಸುತ್ತಮುತ್ತಲಿನ ನಮ್ಮಜನ ಕ್ಕೆ ತಿಳಿಸಿ ಹೇಳ್ಬೇಕು ಅನ್ನಿಸೋ ಅವರಿಗೆ ಅರ್ಥ ಆಗದ ಮಾತುಗಳು)
ನಮಗಿದ್ದ ಎಲ್ಲಾ ಅವಕಾಶಗಳು ಇದ್ರೂ ಕಲೆಯಲ್ಲಿ ತಮ್ಮಜೀವನ ಕಂಡುಕೊಂಡ ನಮ್ಮನ್ನೆಲ್ಲ ನಾವಿರೋ ತನಕ ರಂಜಿಸೋ ಅವರ ಸಾಧನೆಗಳಿಗೆ ಕೋಟಿ ಧನ್ಯವಾದಗಳೊಂದಿಗೆ ಈ ಸಂದರ್ಭದಲ್ಲಿ ಒಂದು ಭಾವ ಪೂರ್ಣ ಅಶ್ರುನಮನ....
ಮೇಲೆ ಹೇಳಿರುವ ಹಂಸಲೇಖ ಅವರ ತಾತ್ವಿಕ ನುಡಿಯಂತೆ ಯಾರೂ ವಿಧಿಯಮುಂದೆ ನಿಲ್ಲುವರಿಲ್ಲ ಒಂದುದಿನ ಹೋಗುವವರೇ ಎಲ್ಲಾ.. ಹೋಗುವ ಮೊದಲು ಏನಾದರು ಒಳ್ಳೆಯದು ಮಾದಬೇಕೆಮ್ಬುದಷ್ಟೇ ಹಂಬಲ
Wednesday, February 10, 2010
Subscribe to:
Post Comments (Atom)
No comments:
Post a Comment