Wednesday, February 10, 2010

ಪ್ರೀತಿಯ ಸಾಲುಗಳು ನಿಮಗಾಗಿ

ಪ್ರೀತಿಯ ಸಾಲುಗಳು ನಿಮಗಾಗಿ

ಉದಯಿಸುವ ಕಾಲಕೆ
ಮೂಡಣದ ಹೊನ್ನ ರಶ್ಮಿಯಂತೆ ರಮ್ಯ ಈ ಪ್ರೀತಿ

ಮುಂಬೆಳಕಿನ ಕಿರಣದಿ ಮಿನುಗೋ
ಮುಂಜಾನೆಯ ಮಂಜು ಈ ಪ್ರೀತಿ

ನಯನದಿ ಅರಳಲು
ಚಂದದಿ ನಗುವ ಸುಮದಂತೆ ಈ ಪ್ರೀತಿ

ಬೆಳಕಾಗಲು ಹೃದಯದಲಿ
ದಿವ್ಯತೆಯ ಪ್ರತಿರೂಪ ಈ ಪ್ರೀತಿ

ಕಾದು ಕಾದು ಬಳಲಿದ ಮನಸಿಗೆ
ಸುಡುವ ವಿರಹದ ತಾಪ ಈ ಪ್ರೀತಿ

ಕಂಡಾ ಕ್ಷಣ ಸಂಭ್ರಮದಿ
ಎದೆಯ ಢಂಗೂರ ಸಾರುವ ಸದ್ದು ಈ ಪ್ರೀತಿ
ಕಣ ಕಣವು ಕಂಪಬೀರೋ ಚಂದನ
ಕಂಪಿನ ಕಂಪನ ಈ ಪ್ರೀತಿ

ಮುನಿದಾಗ ಕೆನ್ನೆಗಳಲ್ಲಿ
ಮುಸ್ಸಂಜೆ ರಂಗಂತೆ ಚೆಂದ ಈ ಪ್ರೀತಿ

ಶ್ರುತಿ ಬೆರೆತರೆ ಹಾಡಂತೆ
ಮಧುರ ಅನುರಾಗ ಈ ಪ್ರೀತಿ

ಮಂದ ಮಾರುತದ ಇರುಳಲಿ
ತಂಪಾದ ಹುಣ್ಣಿಮೆ ಈ ಪ್ರೀತಿ

ನಿದಿರೆ ಸುಳಿಯದ ಘಳಿಗೆ
ಹಂಬಲಿಸಿ ಲಾಲಿಗೆ
ತಾಯಿ ಪ್ರೀತಿ ಕಾಣದ ಮಗುವಂತೆ ಈ ಪ್ರೀತಿ
-- ನಿಮ್ಮ ನಿರ್ಮಲವಾದ ಒನ್ ಸೈಡ್ ಲವ್ !!!

ಏನಂತೀರ ರೈಟಾ......
ಕ್ಲ್ಯಾಪಾ.....

No comments:

Post a Comment