ಪ್ರಿಯ ಮಿತ್ರರೆ ..
ಹೀಗೊಂದು ಓಲೆ ಬರೆಯುವೆ ಒಲವ್ ಅಲ್ಲೆ ...
ಈ ಪ್ರೀತಿಯ ಸಪ್ತಾಹ ಅಂದರೆ ಬರ್ಲಿರುವ ವಾರದಕೊನೆಯ ಪ್ರೆಮಿಗಳ ಹಬ್ಬ ಕ್ಕಾಗಿ, ನಿಮಗಾಗಿ ಪ್ರೀತಿಯ ಪತ್ರ,
ನಿಮ್ಮಪ್ರೀತಿಯನ್ನು ಪ್ರೇಮ ದೇವತೆಯ ಮುಂದೆ ನೈವೇದ್ಯ ಮಾಡದೆ ಅದನ್ನ ನಿವೆದಿಸಿಕ್ಕೊಳ್ಳಿ ನಿಮ್ಮ ಹೊಸ ಬಾಳಿಗೊಂದು ಮುನ್ನುಡಿ ಬರೆಯಿರಿ.
ಕಹಿ ನೆನಪು ತುಂಬಿ ಕಸದಬುಟ್ಟಿಯಾಗಿರುವ ಹೃದಯ ದಲ್ಲಿ ಪ್ರೀತಿಯ ಹೂವರಳಿಸಿ ಹೂ ಬುಟ್ಟಿ ಮಾಡಿ.
ಮೊಗ್ಗು ಹೂವಾಗುವ ,ಗುಂಡಿಗೆ ಹೃದಯ ವಾಗುವ...
ಆ ಸುಂದರ ಘಳಿಗೆ
ಎನೊ ಉಲ್ಲಾಸ ಒಳಗೊಳಗೆ
ಎಂಥಾ ವಿಸ್ಮಯಕಾರಿ ಶಕ್ತಿ ಇದೆ ಪ್ರೀತಿಗೆ
ಹೌದು ಈ ಪದಗಳನ್ನ ಓದಿದ್ರೆನೆ ಸಂಗಾತಿ ಬೇಕೆನಿಸೋ ಎಷ್ಟೊ ಹಾಡುಗಳು ನಿಮ್ಮ ನೆನಪಿಗೆ ಬರಬಹುದು
ಅಗೊಚರ ವಾದ ಈ ಅನುಭವವೆ ಹಾಗೆ ನಮ್ಮನಡುವೆ ಭಾಂದವ್ಯ ಬೆಸೆವ ಈ ಪ್ರೀತಿಯ ಪದ ಮಾಡುವ ಮೋಡಿ ಹಾಗೆನೆ .
ಕಾಯುತಲೆ ನಿಮಿಶ ಎಣಿಸಿ ಯುಗಕಂಡು,ಸಮಯದ ಪರಿವೆಯೆ ಇಲ್ಲದೆ ಕೂಡಿ ಕಳೆದಾ...
ಹೇಳಿದ ಸಮಯಕೆ ಬರದಿದ್ದರು ,ಹೇಳದೆ ಕೇಳದೆ ನೆನಪಿಗೆ ಬರುವ
ಸಂಗಾತಿ ಇರದ ಸಮಯ..
ತಿಳಿಯದೆ ನುಡಿದ ಕೋಪದ ನುಡಿಗಳಿಗೆ ಮರುಕ
ಇದೆಲ್ಲ ಮೀರಿ ಹುಸಿಮುನಿಸಿನ ಮೆರುಗು .
ಕೆಲವರಿಗೆ ಹುಸಿಯಾದ ಪ್ರೀತಿಯ ಕೊರಗು
ಈ ಅದ್ಭ್ಹುಅನುಭವ ಕೆ ಹಾತೊರೆವ ಆತುರದಲಿ ಅವಸರ ಬೇಡ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ.....
ತಪ್ಪು ಯಾರದೆ ಇರಲಿ ತಪ್ಪಿದಲ್ಲಿ ಪಶ್ಚಾತಾಪಕೆ ಕೊನೆ ಇರದು ಬಾಳಿನಲಿ..
ಸರಿ..ಓಕೆ ಓಕೆ ಕುಯ್ಯೊ ಟೈಮಲ್ಲಾ ಇದು ಪ್ರೀತಿಯ ಸ್ವಾತಿ ಹನಿಯೊ ಟೈಮು .
ಕಾರಣಬೆಕಿಲ್ಲ ಅಲೆದಾಡಲು,
ಹಗಲು ರಾತ್ರಿಗಳ ಪರಿವೆ ಇಲ್ಲ
ಆಗೊಲ್ಲಾ ತಿಲಿಯಲು ಏನಾಗಿದೆ ಎಂದು
,ಹೊಸ ಅಮಲು, ಆಸಕ್ತಿ ಇಲ್ಲ ಹಸಿವು ನಿದಿರೆಯಲು
ಕಾರಣ
LOVE IS DE-VINE
____________________________________________
ಮದುವೆಗೆ ಮುನ್ನ: ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿನಮ್ಮ ಬಾಳಿಗೆ
ನಂತರ: ಪ್ರೀತಿಸಿ ಮದುವೆ ಆಗಿದ್ದಕ್ಕೆ ಏನು ಇಲ್ಲ ಆಸ್ತಿ ನಮ್ಮ ಪಾಲಿಗೆ
_____________________________________________
ಸೂರ್ಯಾ ಚಂದ್ರಾ ಆಕಾಶಕೆ ಗಾಳಿ ನೀರು ಈ ಭೂಮಿಗೆ
ನೀ ನೆಂದು ನನ್ನ ಬಾಳಿಗೆ :)
ದುಡ್ಡಿಲ್ಲ ಅಕ್ಕಿ ಬೇಳೆಗೆ ಕಟ್ಟಿಲ್ಲಾ ಮನೆ ಬಾಡಿಗೆ :(
______________________________________________
ಕೆಲವು ಪ್ರೀತಿಯ ಸಾಲುಗಳೊಡನೆ ಮುಂದಿನ ಪತ್ರ್ದಲ್ಲಿ ಸಿಗ್ತೇನೆ
No comments:
Post a Comment