Wednesday, February 10, 2010

ತೇಲಿ ತೇಲಿ ತಂಗಾಳಿಯಲಿ

ಆಹಾ ಹಾ ಹ hmmmm hmmmm
ತೇಲಿ ತೇಲಿ ತಂಗಾಳಿಯಲಿ ಹೋದಹಾಗೆ ಈ ಮನಸಿನಲಿ
ತಿಳಿ ತಿಳಿ ನೀರಿನಲಿ ಹೊಸ ಅಲೆ ಅಲೆಯ ಹಾಗೆ ಈ ಹೃದಯದಲಿ
ಚಿಲಿ ಪಿಲಿ ಕಲರವ ಕಚಗುಳಿ ಇಟ್ಟಂತೆ ಈ ಎದೆಗೂಡಿನಲಿ
ಪಿಳಿ ಪಿಳಿ ಕಣ್ಣಲಿ ಹೊಳೆದಿದೆ ಮಿಂಚೊಂದು
ಬಿಸಿ ಉಸಿರಿನ ಪಿಸು ಮಾತಲಿ ಸುದ್ದಿಯಾಗಿದೆ ಪ್ರೀತಿ ಬಂದಿದೆ ಎಂದು....

ಕದ್ದು ನೋಡಲು ನಾ ನಿನ್ನನ್ನ
ಸೆರೆ ಮಾಡಬಹುದೇ ಬಹುದೇ
ನನ್ನೀ ಹೃದಯಾನ
ಸೆರೆಯಾದೆ ಎಂದು ನೋವಿಲ್ಲ
ನೋಯಯದಿರಲಿ ಹೃದಯ ಜೋಪಾನ

ಮನಸಾರೆ ಒಪ್ಪ್ಪಿದೆ ತಪ್ಪನ್ನ
ಮುನಿಸೇಕೆ ಒಪ್ಪಿಸೆ ಹೃದಯಾನ,

ತುಸು ಕಾಡಬೇಕಿದೆ ನಿನ್ನನ್ನ
ಹುಸಿ ಮುನಿಸಲೇ ನೀ ಚೆನ್ನ
ಅತಿಯಾದರೂ ಮಿತಿಮೀರದು
ಹಿತ ವಾದ ಹುಸಿ ಆಟ ಇದು ಮನ್ನಿಸು ನೀ ಎನ್ನಾ

ತೇಲಿ ತೇಲಿ ತಂಗಾಳಿಯಲಿ....

No comments:

Post a Comment