ಶಿವರಾತ್ರಿಯ ಜಾಗರಣೆಯ ಈ ವಿಶೇಷ ಸಂಧರ್ಭದಲ್ಲಿ ಒಂದು ಅವಲೋಕನ ನಮ್ಮ ಜಾಗತಿಕ ಜಗತಿನ ನಿತ್ಯಜಾಗರಣೆ ನಡೆಯುವ ಕೆಲವು ಪುಣ್ಯ ಕ್ಷೇತ್ರಗಳ ದರ್ಶನ ಈ ಲೇಖನ .
_________________________________________________________________
ಅಂದು ಸ್ವಾಮಿ ವಿವೆಕಾನದ ರು ಹೇಳಿದ್ದರು ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ......!!!!! जागोरे ಅಂತಾ ...
ಆದರೆ ಇಂದು
ಹೊಸ ಹೊಸ ಕನಸುಗಳನು ಹೊತ್ತ ಕಂಗಳಲಿ ನಿದಿರೆಗೆ ಜಾಗ ಇನ್ನೆಲ್ಲಿ ...ಹಗಲು ಹಿರಿದಾಗಿ ರಾತ್ರಿಗಳು ಚಿಕ್ಕದಾಗಿ, ಈ ಜೀವನ ಗಡಿಯಾರದ ಸೆಕೆಂಡಿನ ಮುಳ್ಳಿನ ಮೇಲೆ ಕ್ಷಣ-ಕ್ಷಣ ಬದಲಾಗುತ್ತಾ ಸಾಗಿರುವಾಗ ,ಸ್ಪರ್ಧೆ ಎಂಬ ಪ್ರವಾಹದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಅ-ಸಾಮಾನ್ಯ ಜೀವನ ಶೈಲಿ , ನಮ್ಮನ್ನು ನಾವು ಅರ್ಥೈಸಿಕೊಳ್ಳುವ ಮೊದಲೇ ಜಾಗತಿಕಮಟ್ಟದಲ್ಲಿ ಆರ್ಥಿಕವಾಗಿ ಗುರುತಿಸಿ ಕೊಳ್ಳಬೇಕೆಂಬ ಗುರಿ ಇಟ್ಟುಕೊಂಡು ಮತಿ- ಇಲ್ಲದೆ, ಗತಿ ಇಲ್ಲದವರಂತೆ ಮೊರೆ ಇಡುತ್ತ ಪ್ರತಿ ದಿನ ನಡೆದಿದೆ ಜಾಗತಿಕ ನಾಗರೀಕರ "ಜಾಗತಿಕ- ಜಾಗರಣೆ"
ರಾತ್ರಿಯ ಉಚಿತ ಟಾಕ್ -ಟೈಮ್ ಪ್ಲಾನ್ ಗಳಲ್ಲಿ ಸೆಲ್ ಫೋನ್ ಹಾವಳಿಗಳಲಿ , SMS, MMS, ಘೀಳಿನಲಿ , Inter Net chat-room ಗಳಲ್ಲಿ ತಮ್ಮ ಅಂತರಂಗ ತೆರೆದಿಡುವ , ಸಮಯದ ಪರಿವೆಯೇ ಇಲ್ಲದೆ ಜಗತ್ತನ್ನೇ ಪುಟ್ಟ ಪರದೆಯ ಮೇಲೆ ಮೂಡಿಸುವಲ್ಲಿ ನಮ್ಮವರನ್ನೇ ಮರೆತು ನಮ್ಮವರೊಡನೆ ನಡೆದುಕೊಳ್ಳುವ ಬಗೆ ಹೀಗೇಕೆ ಸಂಯಮ ಮರೆತು ,ಬಾಳಲಾರೆವ ನಮ್ಮವರ ಬೆರೆತು ಸಲ್ಲದ ಚಿಂತೆ ಮರೆತು ,
ಇರುಳಲ್ಲಿ ನಿದಿರೆಗಿಂತ ಜಾಗತಿಕ ಜನರ ಓಲೈಕೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಪೂಜಿಸುತ ಅವರ ಸೇವೆಯಲ್ಲೇ ನಿರತರಾಗಿ ಪ್ರತಿದಿನ ನಡೆದಿದೆ
"ಜಾಗತಿಕ- ಜಾಗರಣೆ"
ಮದಿರಾ ನದಿಯ ತಟದ ತೀರ್ಥ ಕ್ಷೇತ್ರಗಳಲ್ಲಿ
ತೂಗಾಡುವ ಮಂದಬೆಳಕಿನ ದೀಪಗಳಲ್ಲಿ
ಅಬ್ಬರದ ತಾಳ ಮೇಳಗಳ ಸಂಗೀತದ ಅಮಲಿನಲ್ಲಿ ,
ಸುರ-ಪಾನಕದ ಸವಿಯಲ್ಲಿ ಬೆರೆತು
ಇಹಪರಗಳ ಚಿಂತೆ ಮರೆತು
ಸರ್ವ ಸಂಗ ಸತ್ಸಂಗ ದಲಿ
ವಿಶೇಷ ಸೇವೆಗಳ ಸಂಪ್ರೀತ ಸುಪ್ರಸನ್ನರಾಗಿ,
ಕ್ಷುದ್ರ ಮಾನಸ ರೌದ್ರನ ರಮಿಸಲು
ಮಾದಕ ಊದು ಬತ್ತಿಯ ಆ-ರತಿಯ ವೈಭವದ
ಚಮಕ್ -ಗಿಮಿಕ್ ಸಂಕೀರ್ತನೆಯ ನಿಷ್ಠೆ ಇಂದ ನೆರವೇರಿಸಿ
ಹಲವಾರು ಅನಿಷ್ಟ ಗಳಿಗೆ ಪ್ರೇರಣೆ ಯ
ಅನಾವಶ್ಯಕ ಅನುಕರಣೆ ಅನುಚಿತ ಆಚರಣೆ
ನಿತ್ಯವೂನದೆದಿದೆ ಜಾಗತಿಕ-ಜಾಗರಣೆ
ಅಂದು ಶರಣ ಬಸವಣ್ಣ ಹೇಳಿದ್ದು ಕಾಯಕವೇ ಕೈಲಾಸ ಆದರೆ ಇಂದು ಹಲವರ ಕಾಯಕವೇ ಕೈಸಾಲ, ಜಾಗತೀಕರಣ ಜಾರಿ ಇಂದ ಸಣ್ಣ-ಮದ್ಯಮ
ವ್ಯಾಪಾರಸ್ತರು , ಹೂಡಿಕೆ ದಾರರು, ಕಾರ್ಮಿಕರು ,ಸ್ಪರ್ದೆಯಲಿ ಉಳಿಯಲಾರದೇ ಜಾಗ ಕಳೆದುಕೊಂಡಿದ್ದಾರೆ ,ನೆಮ್ಮದಿಯ ಜೀವನ ನಡೆಸಲು ಆಗದೆ ಹಗಲಲ್ಲಿ ಉಪಾಹಾರ ಇಲ್ಲವೇ ಉಪವಾಸ ರಾತ್ರಿಯಲ್ಲಿ ಭಗವಂತಾ ನಾಳೆ ಎಂದರೆ ಹೇಗೆ ಎಂಬ ಕಲ್ಪನೆ ಇಲ್ಲದೆ ಇಂದೇ ನಿನ್ನ ಸಾಕ್ಷಾತ್ಕಾರ ಕರುಣಿಸು ಎಂದು ಸ್ಮರಿಸುತ್ತ ಚಿಂತೆ ಇಂದ ನಿದ್ದೆ ಬಾರದ ಕಣ್ಣುಗಳಲಿ "ಜಾಗತಿಕ -ಜಾಗರಣೆ"
ಸಾಮಾನ್ಯನಿಗೂ ಶೋಕಿಯ ಮದವೇರಿ ಹೊರಟಿಹನು ಅಗ್ಗದ ಕಾರು ಬೈಕು ಗಳನ್ನೇರಿ ಹೊಲ ಗದ್ದೆ ಮಾರಿ ,ತನ್ನ ನೀತಿ ಮೀರಿ , ವಿಜ್ರುಂಬಿಸಿಹುದು ಸ್ವೇಚ್ಚಾಚಾರದ ಮಾರಿ , ಈ ಹುಚ್ಚ್ಚುಮನಸಿನ ಅಲೆಮಾರಿ ಚಿಂತಿಸಬೇಕಿದೆ ಸ್ವಲ್ಪ ಸಹನೆ ತೋರಿ ಏನು ನಮ್ಮ ಜೀವನದ ಗುರೀ...?!!
ಈ ಅನಿವಾರ್ಯತೆಯ ನಡುವೆ ಬದುಕುತ್ತಿರುವ ನಾವು ನಿಜಕ್ಕೂ ಎಚ್ಚರಗೊಳ್ಳಬೇಕಿದೆ जागोरे ....!!!
ಜಾಗತಿಕ ಜಾಗರಣೆ ಆಚರಿಸೋಣ ಬನ್ನಿ ನಮ್ಮ ತನ ನಮ್ಮ ಸಂಸ್ಕೃತಿ ಯ ಮಾದರಿಯಾಗುವಂತೆ, ಇತರರ ಅನುಕರಣೆಯಲ್ಲಿ ಕಳೆದು ಹೋಗದೆ ಉಳಿಸಿಕೊಳ್ಳುವಲ್ಲಿ ,ಅತಿಯಾದ ಮೋಹದ ವ್ಯಾಮೊಹದೆ ತೇಲದೆ,ಇರುವ ಸ್ವಾತಂತ್ರ ಕೈತಪ್ಪಿ ಹೋಗದಂತೆ ಎಚ್ಚರ ವಹಿಸಿ जागोरे ...
ನಮ್ಮ್ವರೊಡನೆ ಕಳೆಯಲು ಸಮಯ ಮೀಸಲಿಡಿ ನಮ್ಮಲ್ಲೇ ನೆಮ್ಮದಿ ಕಂಡುಕೊಳ್ಳಿ ,ಮರೀಚಿಕೆಯ ಬೆನ್ನು ಹತ್ತದೆ ಭ್ರಮೆಯ ಮಂಪರಿನ ತೆರೆ ಸರಿಸಲು जागोरे ...
ನಿನ್ನ ಹೃದಯ ಮಂದಿರದಲ್ಲೇ ಇದ್ದಾನೆ ಭಗವಂತ ಅದ ಮರೆಯದಿರು ಓ ಬುದ್ಧಿವಂತ.
ಸಾಕು ಸಾಕು ಅನುಕರಣೆ , ನಿಲ್ಲಿಸಿ ನಟನೆ
ಒಳಿತಿಗಿರಲಿ ನಮ್ಮ ಪ್ರಪಂಚ ಪರ್ಯಟನೆ
ಸಾಗಲಿ ಎಂದಿನಂತೆ ಹಿಂದಿನಿಂದ ನಡೆದು ಬಂದ ಆಚರಣೆ
ಜಾಗತಿಕ ಮಟ್ಟದಲ್ಲಿ ಭಗವಂತನ ಸ್ಮರಣೆ ಜಾಗತಿಕ ಜಾಗರಣೆ
ಈಶಾನಃ ಸರ್ವ ವಿದ್ಯಾನಂ ಈಶಾನಃ ಸರ್ವ ಭೂತಾನಾಂ ಬ್ರಹ್ಮಾಧಿ ಪತಿ ಬ್ರಾಹ್ಮಣೋಧಿಪತಿ ಬ್ರಹ್ಮ ಶಿವೋ ಮೇ ಅಸ್ತು ಸದಾ ಶಿವೊಂ
* ಶುಭವಾಗಲಿ *
______________________________________________________________
ಆತ್ಮೆಯರೇ ವಿಷಯವನ್ನು ಚೊಕ್ಕವಾಗಿ ಒಂದು ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸುವಲ್ಲಿ ಆದಷ್ಟು ಭಾಷೆಯ ಬಳಕೆಯಲ್ಲಿ ಕಾಳಜಿ ವಹಿಸಿದೇನೆ ಏನಾದರು ತಪ್ಪಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ ಎಚ್ಚರಿಸಿ
ಮುಂದಿನ ಲೇಖನ ಗಳನ್ನು ಉತ್ತಮ ಗೊಳಿಸುವಲ್ಲ್ಲಿ ಸಹಕರಿಸಿ .
-- ಇಂತಿ
ಆತ್ಮೀಯ ಅनिKतನ
-- ಇಂತಿ
ಆತ್ಮೀಯ ಅनिKतನ