Wednesday, June 18, 2014

ಹುಚ್ಚುತನವಲ್ಲದೆ ಮತ್ತೇನು .. ?

ಎಲ್ಲರಂತೆ :
ಎಲ್ಲರಂತೆ ನೀನು ಎಲ್ಲರಂತೆ ನಾನು
ಆದಾಗ್ಯೂ
ನನ್ನೋಳಗೊಬ್ಬ ನಾನು ನಿನ್ನೊಳಗೊಬ್ಬ ನೀನು

ನೀ ನನ್ನ ನಾ ನಿನ್ನ ಎಷ್ಟು ವಿಶೇಷ ವಾಗಿ ಕಾಣೋಕೆ ಇಷ್ಟಪಡ್ತಿವಿ

ಹುಚ್ಚುತನವಲ್ಲದೆ ಮತ್ತೇನು .. ? :)

Tuesday, February 11, 2014

ಪ್ರೀತಿಯ ಇರಿತ, ಮನಸು ಈಗ.. ಜರ್ಝರಿತ

ಥಟ್ ಅಂತ ಗೀಚಿದ್ದು ಹೇಗಿದೆ  ಓದಿ ಹಾಡಿ ಗುನುಗಿ ಹೇಗಿದೆ ಹೇಳಿ

ಓ ಪ್ರಿಯಾ ನನ್ನಾ ಪ್ರಿಯಾ
ಅನುಕ್ಷಣವು ಕಾಡಿ ಅತಿಯಾದ ರೂಢಿ ವಿಸ್ಮಯ
ನಿನ್ನಯಾ ನಿರೀಕ್ಷೆಯಾ
ಪ್ರತಿ ಘಳಿಗೆಯಲ್ಲು ಹೊಸದಾದ ನನ್ನ ಪರಿಚಯ "ಪಲ್ಲವಿ"

ಹೃದಯವಾ ಗೆಲ್ಲೊ ಸ್ವಾರ್ಥದೀ ಕೊಲ್ಲೊ ಪ್ರೀತಿಯ ಇರಿತ
ಮನಸು ಈಗ.. ಜರ್ಝರಿತ
ಮನಸು ಈಗ... ಜರ್ಝರಿತ " ಅನುಪಲ್ಲವಿ"

ಚರಣ 1
ರಾತ್ರಿಯ ಪಾಳಿಯ ನನ್ನ ಕನಸುಗಳು
ಕಂಡ ಕಲ್ಪನೆಗಳೇ ಪುರಾವೆಗಳು
ಕಾಣಲೂ ಕಾದಿರುವ ಈ
ಕಣ್ಣಮುಂದೆ ನಿಲ್ಲು ಅಪರೂಪದಾ ಒಲವ ಶಿಲ್ಪವಾಗಿ

ಹೃದಯದೀ ಚೆಲ್ಲೊ ಪ್ರೀತಿಯ ಹೊನಲು
ಪಸರಿಸಿದಲ್ಲೆಲ್ಲೂ ಕಂಡೇ ಸಂಪ್ರೀತಿಯಾ ಮಜಲು "ಅನುಪಲ್ಲವಿ"

ಚರಣ2
ಪಾರಾಗೋ ಬಗೆ ಹೇಳು ಬಂಧಿಯಾಗಿರಲು
ವಿರಹದಾ ಸೆರೆ ಬಿಡಿಸಿ ನೀ ಆಸರೆನೀಡು
ನಿನ್ನಯ ಸಹಚಾರಿಯಾ
ಸಹವಾಸ ನೀಡು ನಿಜ ಮಾಡು ನನ್ನ ಸವಿಸಂಶಯ

ಉದಿಸುಬಾ ಎದೆಯ ಬೆಳಗುವ ಶಶಿಯು ನೀ ಚಂದ್ರಮುಖಿಯಾಗಿ
ನನ್ನಾ ಪ್ರಾಣಸಖಿಯಾಗಿ.. "ಅನುಪಲ್ಲವಿ"

ಓ ಪ್ರಿಯಾ ನನ್ನಾ ಪ್ರಿಯಾ ..

-ಅನಿಕೇತನ ಹ್ಯಾಪ್ಪಿ B  Y
 — feeling hopeful.

Friday, February 7, 2014

ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ


ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ
 ನಾವೆಲ್ಲ ಶಾಲೆಗಳಲ್ಲಿ ಕಲಿತಂತೆ ಪ್ರಪಂತದ ಎಲ್ಲ ಭಾಗದ ಜನರಿಗೆ ಎನುಕೂಲವಾಗಲಿ ಎಂದು  ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆಫ್ ಯುನಿಟ್ಸ್ ಬಳಕೆ ಜಾರಿಗೆ ಬಂತು ಇದು ಅಳತೆ ಮಾಪನಕ್ಕೆ ಸಂಭಂಧಿಸಿದಂತೆ ಆದರೆ ವಾಣಿಜ್ಯ ಕ್ಷೇತ್ರದಲ್ಲೂ ಯಾಕೆ ಈ ವಿಧಾನ ಅನುಸರಿಸಲಿಲ್ಲ , ಕಾರಣ ಏಕರೂಪದ ಕರೆನ್ಸಿ ನೋಟುಗಳು ಏಕ ರೂಪದವಾದ ವಾಣಿಜ್ಯವಹಿವಾಟಿನಿಂದ ಬಂಡವಾಳಶಾಹಿಗಳಿಗೆ ಆಗುವ ನಶ್ಟ !! ಹೌದು ಇದೇ ಕಾರಣ
ಪ್ರಪಂಚದ ಎಲ್ಲ ಭಾಗಗಳಲ್ಲೂ ರೂಪಾಯಿ ಒಂದನ್ನೇ ಬಳಸಿ ಅವಾಗ ಎಲ್ಲ ಸರಿಹೋಗುತ್ತೆ
ಒಂದು ಕಿಲೋ ಅಕ್ಕಿಗೆ ಅಮೇರಿಕಾದಲ್ಲು ಒಂದೇ ಬೆಲೆ ಭಾರತದಲ್ಲು ಒಂದೇ ಬೆಲೆ , ಗೊತ್ತು ಮುಂದೆ ಏನು ಪ್ರಶ್ನೆ ಅಂತ ಸಾಗಣೆ ವೆಚ್ಚ ಅದು ಆಮದು ರಪ್ತು ನೀತಿಯಲ್ಲಿ ಸರಿಪಡಿಸಲಿ ಪೆಟ್ರೋಲ್ ಪ್ರಪಂಚದ ಎಲ್ಲ ಭಾಗದಲ್ಲೂ ಒಂದೇಬೆಲೆ ಆಗಲಿ ಸಾಗಣೆವೆಚ್ಚ ಹೊರತುಪಡಿಸಿ ಇದು ಸಾದ್ಯವಾ ಇಲ್ಲಾ ... ಹಾಗಿದ್ದಲ್ಲಿ ಪ್ರಪಂಚದ ಎಲ್ಲ ಭಾಗದಲ್ಲಿ ಒಂದೇ ಮಾಪಕ ಏಕೆ?

ಬೇಡಾ ನಮ್ಮ ಉತ್ಪನ್ನಗಳನ್ನ ನಮ್ಮ ಮಾರುಕಟ್ಟೆಯಲ್ಲಿ ನಮ್ಮದೇ ಆದ ಮಾಪನದಲ್ಲಿ ಮಾರುತ್ತೇವೆ ಅದರ ಬೆಲೆ ತೆತ್ತು ಕೊಂಡುಕೊಳ್ಳಿ ಎಂದು ಬೇರೆಯವರಿಗೆ ಹೇಳುವ ಮಟ್ಟಕ್ಕೆ ನಾವು ಬೆಳೆಯಬೇಕು ,ಪ್ರಸ್ತುತ ಪರಿಸ್ತಿತಿಯಲ್ಲಿ ಅದು ಅಸಾದ್ಯ ಆದರೆ ಅನಿವಾರ್ಯ, ಅವರ ಅಳತೆಗೋಲಿಗೆ ನಮ್ಮ ನಮ್ಮಪದಾರ್ಥ ಅವರುಗಳು ನಿರ್ಧರಿಸಿದ ಡಾಲರ್ ಬೆಲೆ ಇದ್ಯಾವ ನ್ಯಾಯ?
ಇದಕ್ಕೆಲ್ಲ ಕಾರಣ ಪರಾವಲಂಬನೆ , ಪರಾವಲಂಬನೆ ಅನ್ನುವುದಕ್ಕಿಂತ ನಮ್ಮಲ್ಲಿರುವ ಹಿಂಜರಿಕೆ ನಮ್ಮ ಬೆಲೆಯನ್ನ ಬೇರೆಯವರು ನಿರ್ಧರಿಸಲು ಅವಕಾಶ ಕೊಟ್ಟಿರುವುದು
ಜಾಗತಿಕ ಮಾರುಕಟ್ಟೆಯ ದುಷ್ಪರಿಣಾಮ ಕಿಲೊ ಲೆಕ್ಕದಲ್ಲಿ ಅಳತೆಯಾಗುತ್ತಿರುವ ಹಣ್ಣುತರಕಾರಿಗಳು ಅಧಿಕ ಬೆಲೆ ತೆರಬೇಕಾದ ಗ್ರಾಹಕರು ನಷ್ಟ ದಲ್ಲೇ ಇರುವ ಬೆಳೆಗಾರ / ಉತ್ಪಾದಕ ಲಾಭಪಡೆಯುತಿರುವ ಮಾರುಕಟ್ಟೆ .
ಚಿಂತನೆ ಚರ್ಚೆ ಗಳು ಈ ನಿಟ್ಟಿನಲ್ಲಿ ಆದರೆ ನಮ್ಮ ಉತ್ಪನ್ನಗಳನ್ನು ಪುಷ್ಠೀಕರಿಸುವ ತುಷ್ಠೀಕರಿಸುವ ಹೊಸ ಹೊಸ ಯೋಜನೆಗಳು  ಜಾರಿಯಾದರೆ ನಮ್ಮ ವಾಣಿಜ್ಯ ಮಾರುಕಟ್ಟೆ ಅಸ್ಥಿತ್ವ ಉಳಿಸಿಕೊಳ್ಳುತ್ತದೆ ಇಲ್ಲವಾದಲ್ಲಿ ರೂಪಾಯಿ ರೂಪ ಕಳೆದುಕೊಂಡು ದಾಸ್ಯದ ದಿನಗಳು ಮರುಕಳಿಸುವ ಸಮಯ ದೂರವಿಲ್ಲ

ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ

ಹೀಗೇ ಬಂದ ಆಲೋಚನೆ, ಯಾಕೆ ಚಿಂತನೆಯಾಗಬಾರದು ಅನ್ನಿಸ್ತು, ಆಮೇಲೆ ಜಾರಿಯಾದರೆ ಆಗಬಹುದಾದ ಅಧ್ಬುತವಾದ ಬದಲಾವಣೆ ಬಗ್ಗೆ ಹೆಮ್ಮೆ ಅನಿಸಿದೆ, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತಿರುವ ಉದ್ದೇಶ ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ.

ಜಗತ್ತಿನ ಯಾವುದೇಭಾಷೆಯನ್ನ ಅದರದೇಉಚ್ಛಾರಣೆಯ ಧಾಟಿಗೆ ಲಿಪಿಯಲ್ಲಿ ಹಾಗು ಭಾಷೆಯ ಉಚ್ಛಾರಣೆ ಅಳವಡಿಸಬಹುದಾದ ಶ್ರೀಮಂತ ಭಾಷೆ ಕನ್ನಡ 
ಹೀಗಿರುವಾಗ ಬೇರೇಭಾಷೆಯ ಲಿಪಿಯ ಮೇಲೆ ಅವಲಂಬಿಸುವುದರ ಅಗತ್ಯ ಏನಿದೆ? ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮುಖ್ಯವಾಗಿ ವಿನಯದಿಂದ ಪ್ರಾರ್ಥಿಸುವುದೇನೆಂದರೆ ಕನ್ನಡಿಗರು ಮೊದಲು ಸ್ವಚ್ಚವಾದ ಕನ್ನಡ ಬಳಸಿ, ಭಾಷೆಯ ಸೊಗಡು ಪ್ರಾಂತ್ಯ ದಿಂದ ಪ್ರಾಂತ್ಯಕ್ಕೆ ವಿಭಿನ್ನ ವಿರಬಹುದು ಆದರೆ" ಹ" ಕಾರ "ಅ" ಕಾರ ಗಳಉಚ್ಚಾರಣೆ ಬಗ್ಗೆ ದಯವಿಟ್ಟು ಕಾಳಜಿ ಇರಲಿ ವಿಶೇಷವಾಗಿ ವಿದ್ಯಾವಂತರಲ್ಲಿ ವಿನಂತಿ, ಕ್ಷಮೆ ಇರಲಿ ಬಹಳಷ್ಟು ಶಿಕ್ಷಕರಿಗೇ ಅದರ ಬಳಕೆ ಸರಿಯಾಗಿ ತಿಳಿದಿಲ್ಲ .
ಹಾಂ ವಿಷಯಕ್ಕೆ ಬರ್ತೇನೆ
ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮೂಗು ಮುರಿವ ಜನ ಮೂಗು ಮುಚ್ಚಿಕೊಂಡು ಕನ್ನಡ ಕಲಿಯಲೇಬೇಕಾದ ಉಸಿರುಕಟ್ಟಿಸುವ ಪ್ರಯತ್ನಗಳು ಆಗಲೇಬೇಕಾದ್ದು ಅನಿವಾರ್ಯ ಕೇವಲ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಬಲವಂತವಾಗಿ ನಮ್ಮಮೇಲೆ ಹೇರಲ್ಪಟ್ಟ ಭಾಷೆಗೆ ನಾವೇಕೆ ಇನ್ನೂ ಗುಲಾಮರಾಗಬೇಕು ಮನ್ನಣೆ ಕೊಡಬೇಕು? ನಮ್ಮಲ್ಲಿ ಅನುಕೂಲ ಇಲ್ಲವೆಂದಾಗ ಆಶ್ರಯಿಸೋಣ ನಮ್ಮಲ್ಲೇ ಎಲ್ಲ ಇರುವಾಗ ಅದರ ಅವಶ್ಯಕತೆ ಏನು
ಒಪ್ಪಿಕೊಳ್ಳುತ್ತೇನೆ ಇದನ್ನು ಅಚ್ಚಿಸುತ್ತಿರುವ ಕೀಲಿಮಣೆ ಸಹ ಆಂಗ್ಲಭಾಷೆಯಲ್ಲೇ ಇರಬಹುದು ಆದರೆ ಮೂಲದಿಂದ ಕನ್ನಡ ಬಳಕೆ ಗೆ ಉತ್ತೇಜನ ದೊರೆತಲ್ಲಿ ಕೀಲಿಮಣೆಗಳು ಕನ್ನಡದಲ್ಲಿ ತಯಾರಾಗುವುದರಲ್ಲಿ ಸಂದೇಹವೇಇಲ್ಲಾ 
ಚೈನ ಜಪಾನ್ ಥೈಲ್ಯಾಂಡ್ ಅರಬ್ ರಾಷ್ಟ್ರಗಳಂತೆ ಇಲ್ಲಿಯು ಸಹ ಭಾಷಾ ಸ್ವಾತಂತ್ರ್ಯ ಸ್ಥಾಪಿಸಬಹುದಲ್ಲವೇ ಅಲ್ಲಿನ ಗಣಕ ಯಂತ್ರಗಳ ಕೀಲಿಮಣೆ ಆಯಾ ಭಾಷೆಯಲ್ಲೇ ಇದೆ ಇದು ಗಮನಿಸಬೇಕಾದ ವಿಷಯ , 
ಪ್ರತಿಭಾವಂತರಿಗೆ ಹೇಗೆ ಮುಕ್ತ ಅವಕಾಶ ಸಿಗಬೇಕು ಎನ್ನುವುದು ಮಾನವತಾ ವಾದದ ಹಕ್ಕುಗಳಲ್ಲಿ ಒಂದೋ ಹಾಗೆ ಪ್ರೌಢ ಹಾಗು ಶ್ರೀಮಂತ ಭಾಷೆಯ ಅವನತಿ ಕೂಡ ವಿಷಾದ 
ದಯವಿಟ್ಟು ಸ್ವಾಭಿಮಾನ ಮೆರೆಯೋಣ ಸಾಕು, ಗೂಂಡಾವರ್ತನೆ ಚಳುವಳಿಗಳ ಅವಶ್ಯಕತೆ ಕಾಣುತಿಲ್ಲ, ಬಳಕೆ ಹೆಚ್ಚಿಸಿ , ಇತರ ಸ್ನೇಹಿತರು ಕರ್ನಾಟಕಕ್ಕೆ ಬರುವಾಗ ಕನ್ನಡದ ಜ್ಞಾನ ಅಗತ್ಯ ಅನ್ನೋದನ್ನ ಅವರಿಗೆ ಮನದಟ್ಟಾಗುವಂತೆ ನಡೆದುಕೊಳ್ಳೋಣ ಅಶ್ಟು ಸಾಲದೇ ...

ಹೆಚ್ಚೆಂದರೆ ಇದರ ಪ್ರಭಾವ ಏನು , ನಮ್ಮ ಕಂಪನಿಗಳಲ್ಲಿ ಕೆಲಸದಿಂದ ಓಡಿಸ್ತಾರ? 
ಅಂತಹ ಕಂಪನಿಗಳಿಗೆ ಕರ್ನಾಟಕದಲ್ಲಿ ಜಾಗ ಬೇಡ.. ಇದು ಇನ್ನೂ ಉಗ್ರರೂಪ ತಳೆದರೆ ನಿರುದ್ಯೋಗ ದ ಸಮಸ್ಯೆ ನಾ?
ಉತ್ತರ: ಈವಾಗ ಶೊಕಿ ತೆವ್ಲು ಹಚ್ಚ್ಕೋಂಡು ಪಟ್ಟಣ ಸೇರಿರೋ ಜನ ವಾಪಸ್ ಹಳ್ಳಿಗಳಿಗೆ ಬಂದರೆ ಕೂಲಿಕಾರರ ಸಮಸ್ಯೆ ಪರಿಹಾರವಾಗುತ್ತೆ ತಮ್ಮ ಊರಿನ ಜಮೀನಿನಲ್ಲಿ ಕೂಲಿ ಮಾಡೋಕೆ ಹೇಸಿಗೆ ಪಡೋಜನ ಇನ್ಯಾರ್ದೋ ಕಂಪನಿಯಲ್ಲಿ ಕೂಲಿ ಮಾಡೋಕೆ ದೌಡಾಯಿಸ್ತಾರೆ   ಎರಡೂಕಡೆ ಚಾಕರಿ ಒಂದೇ , ನನಗೇನೂ ವ್ಯತ್ಯಾಸ ಕಾಣ್ತಿಲ್ಲಾ , ಕೆಲಸಕ್ಕೆ ಜನ ಸಿಗಲ್ಲ ಅಂತ ನಮ್ಮ ಹಳ್ಳಿಗಳಲ್ಲಿ ವ್ಯವಸಾಯದ ಆಸಕ್ತಿ ಹಿರಿಯರಲ್ಲಿ ಅದನ್ನೇ ನಂಬಿಕೊಂಡವರಲ್ಲಿ ಕಡಿಮೆಯಾಗಿ ಬಂಡವಾಳ ಶಾಹಿಗಳ ಪಾಲಾಗುತ್ತಿದೆ ಜಮೀನುಗಳು, ತಮಿಳುನಾಡು ಕೇರಳಾದಿಂದ ಬಂದು ಜಮೀನುಗಳನ್ನು ಗುತ್ತಿಗೆ ಪಡೆದು ನಮ್ಮ ಜನರನ್ನ ಮುಟ್ಟಾಳರನ್ನಾಗಿ ಮಾಡುತಿದಾರೆ, ನಮ್ಮ ಜನ ಹೊಲಗದ್ದೆ ಮಾರಿ ಬೈಕು ಕಾರು ಶೋಕಿ ಗಾಗಿ ಪಟ್ಟಣಗಳಲ್ಲಿ ಕಾಲ್ ಸೆಂಟರ್ , ಲೋನ್ ರೆಕವೆರಿ , ಕೊರಿಯರ್, ಫೈನಾನ್ಸ್ ಧಂಧೆಗಳಲ್ಲಿ ತೊಡಗಿದ್ದಾರೆ, 
ಇದಕ್ಕೆ ಏನೆನ್ನಬೇಕು.
ಜಪಾನ್ ಚೀನಾ ಅರಬ್ ದೇಶಗಳು ಮೊದಲ ಪ್ರಾಮುಕ್ಯತೆ ನೀಡಿರುವುದು ಸ್ಥಳೀಯರಿಗೆ ಹೀಗಾಗಿ ಅಲ್ಲಿ ಅಭಿವ್ರುದ್ದಿ ಆಗಿರೋದು
ಚೀನಾ ಜಪಾನ್ ಮಾದರಿಯಲ್ಲಿ ಕರ್ನಾಟಕ ಯಾಕೆ ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳಬಾರದು ?
ಪ್ರವಾಸೋದ್ಯಮ ಇದೆ, ಸಂಪತ್ತಿದೆ ,ವನಸಿರಿ ಇದೆ, ವ್ಯವಸಾಯಕ್ಕೆ ಯೋಗ್ಯ ಫಲವತ್ತಾದ ಭೂಮಿ ಇದೆ, ನಾವು ಬೇರೆಯವರನ್ನ ಅವಲಂಬಿಸುವ ಹೆಚ್ಚಿನ ಅವಶ್ಯಕತೆಗಳಿಲ್ಲ , ಬರೀ ಕನ್ನಡಿಗರು ಕರ್ನಾಟಕದಲ್ಲಿ ಜೀವಿಸೋಕೆ ಇಲ್ಲಿನ ಸಂಪತ್ತೇನು ಕಡಿಮೆ ಇಲ್ಲ, ಆದರೆ ಯೋಜನೆಗಳಿಲ್ಲ ಸೂಕ್ತ ಯೋಜನೆಗಳು ಅನುಷ್ಟಾನಕ್ಕೆ ಬಂದರೆ, ನಾವೆಲ್ಲ ಬಿಗುಮಾನ ಬಿಟ್ಟು ಸ್ವಾಭಿಮಾನಕಾಗಿ ದುಡಿದರೆ, ನೆರೆ ರಾಜ್ಯಗಳಿಗಿಂತ ಏಕೇ ನೆರೆ ರಾಷ್ಟ್ರ ಗಳಜೊತೆ ಕೂಡ ಕರ್ನಾಟಕದ ಪ್ರಭಾವ ಏನು ಎಂದು ತೋರಿಸಬಹುದು, ಬರೀ ಗುಜರಾತ್ ಯಾಕೆ ಮುಂದುವರಿಬೇಕು ಕರ್ನಾಟಕದಲ್ಲಿ ಏನು ಕಡಿಮೆ ಇದೆ , ತಮಿಳುನಾಡಿನೊಂದಿಗೆ ಯಾವಾಗಲೋ ಯಾಕೆ ನಾವೇ ಹೊಂದಿಕೊಂಡು ನಡಿಬೇಕು , ಆಂಧ್ರದವರ ದಬ್ಬಾಳಿಕೆ ಬೆಂಗಳೂರಲ್ಲಿ ಏಕೆ , ಮಲಯಾಳಿಗಳ ಒಗ್ಗಟ್ಟು ಕರ್ನಾಟಕಕ್ಕೆ ಪಾಠವಾಗದಿದ್ದರೆ , ಮುಂದೆ ನಾವೆಲ್ಲರೂ ಅಂಗಡಿ ಸಾಮಾನು ಕೊಳ್ಳಲು ಮಲಯಾಳಂ ಕಲಿಬೇಕಾಗುತ್ತೆ.
ಮಿತಿಮೀರಿದರೆ ಕನ್ನಡನಾಡಲ್ಲಿ ಕನ್ನಡಿಗರಿಗೆ ಮಾತ್ರ ಸಹಕಾರ ಉಳಿದವರಿಗೆ ಅಸಕಾರ.
ಇಲ್ಲಿಗೆ ಕರ್ನಾಟಕ ಬಾವುಟ ಹಾರಿಸಿ ಕನ್ನಡರಾಜ್ಯೋತ್ಸವದ ಸಿಹಿ ಹಂಚಿದ ಗಂಟಲು ಹರಿದು ಚೀರಿದ ಕನ್ನಡ ಪ್ರೇಮಿಗಳ ಶ್ರಮ ಸಾರ್ಥಕ.

ಅಘೋಶಿತವಾಗಿ ಸ್ವಯಂಪ್ರೇರಿತ ವಾಗಿ ಜಾರಿಗೆ ಬರಬೇಕಾದವು :
ಫ್ಲ್ಯಾಶ್ ಮೋಬ್ ಗಳ ಮಾದರಿಯಲ್ಲೇ ನಾವು ಕೆಲಸ ಮಾಡುವ ಕಂಪನಿಗಳಲ್ಲಿ ಕನ್ನಡಪರ ಸಮೂಹ ಚರ್ಚೆಗಳು ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾರ್ವಜನಿಕ ತಾಣಗಳಲ್ಲಿ ಕನ್ನದ ಜಾಗೃತಿ 
ಮೊದಲನೆಯದಾಗಿ ರಾಜಧಾನಿ ಯಲ್ಲಿ ಕನ್ನಡಬಳಕೆ ಕಡ್ಡಾಯ ಹಾಗು ಅನಿವಾರ್ಯ ಆಗಲೇಬೇಕು 
ಗಡಿನಾಡು ಗಳಲ್ಲಿ ಕನ್ನಡ ನಾಡು ನುಡಿಗಳ ಬಳಕೆ ಹೆಚ್ಚಿಸಲು ಕಾರ್ಯಕ್ರಮಗಳು ಶಾಲೆಗಳಲ್ಲಿ ಕಾಲೇಜುಗಳಲ್ಲು ಸಹಾ ಕನ್ನಡದಬಗ್ಗೆ ವಿಶೇಷ ತರಗತಿಗಳು ಚಟುವಟಿಕೆ ಗಳು ಇದನ್ನು ಪ್ರಶ್ನೆ ಮಾಡಿದವರಿಗೆ ಮನವರಿಕೆ ಮಾಡಿ ಹೇಳಿ ( ಇಲ್ಲಿ ನೆರೆ ಯಾಜ್ಯಗಳ ಪುಂಡ ಪುಡಾರಿಗಳ ಸಮಸ್ಯೆ ಎದುರಾಗಬಹುದು ) ಹಾಗೆ ಪ್ರಶ್ನೆ ಮಾಡುವವರಿಗೆ ಒಕ್ಕೊರಳಿನ ಒಂದೇ ಉತ್ತರವಿರಲಿ ಇದು ಕರ್ನಾಟಕ ದಯವಿಟ್ಟು ಕನ್ನಡವನ್ನ ಗೌರವಿಸಿ ನಂತರ ನೀವೇ ಬಳಸಲು ಪ್ರಯತ್ನಿಸುತ್ತೀರ .
ಕನ್ನಡದಲ್ಲಿ ಅಸಾದ್ಯ ಅನ್ನುವ ಯಾವುದೇ ಉದಾಹರಣೆಗಳಿಲ್ಲ ಮೊದಲೇ ಹೇಳಿದಂತೆ ಪ್ರಪಂಚದ ಯಾವುದೇ ಭಾಷೆಯನ್ನು ಅದರದೇ ಧಾಟಿಯಲ್ಲಿ ನಮ್ಮ ಭಾಷೆಯಲ್ಲಿ ಉಚ್ಛರಿಸಬಹುದು ಹಾಗೂ ಬರೆಯಬಹುದು. 
ಕನ್ನಡ ಕಲಿಕೆ ಅನಿವಾರ್ಯವಾಗಲಿ 
ಮುಂದಿನ ಕೆಲವೇವರ್ಷಗಳಲ್ಲಿ ಕನ್ನಡ ಖಂಡಿತಾ ಒಂದು ಜಾಗತಿಕ ವ್ಯಾವಹಾರಿಕ ಭಾಷೆಯಾಗಿ ಗುರುತಿಸಿಕೊಳ್ಳುತ್ತದೆ ಪ್ರಯತ್ನ ಅಲ್ಲ ಪ್ರತಿಜ್ಞೆ ಮಾಡೋಣ 
ಜೈ ಕರ್ನಾಟಕ ಮಾತೆ

Friday, January 24, 2014

ಎದೆಯ ಕಪಾಟಿನಲಿ ಈ ಹಾರ್ಟಿನಲಿ



ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ
BGM

ಇರಬಹುದೇ ಆ ನಗುವಲೀ ಕಂಡಂತಿದೆ ತುಟಿಯಂಚಲಿ
ಬಿನ್ನಾಣದಾ ಆ ವಯ್ಯಾರದ ಕೊಂಕಿನ ಅಣಕು ಮಾತಿನಲಿ
ಕೆಣಕುತ ಕರೆಯುತ ಹೃದಯಕೆ ಹೊಸ ವ್ಯಸನವ ಕಲಿಸುತ ಮಿಡಿವುದಮರೆ ದುಡಿಸಿದೆ ಅರೆಘಳಿಗೆಯಲಿ ....

ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

BGM

ತಿಳಿಯುವ ಹಂಬಲ ತಾಳೆನುತಳಮಳ ನೀ ನನ್ನೋಳಾ
ತಿಳಿಸೆಯ ಕಂಗಳ ತಾಗಿದ ಕ್ಷಣಗಳ ಆ ವಿಸ್ಮಯದ ಕಥೆಗಳಾ
ಜನುಮದ ಜನುಮಾಂತರದ ಆ ಪುಟಗಳ ಕಳೆಯುತ ಯುಗಗಳ ತೆರೆದಿಡು ಪ್ರೀತಿಯ ಪರ್ವಗಳಾ...

ಹಾ ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

- ಅನಿಕೇತನ ಹ್ಯಾಪ್ಪಿ BoY :)

Thursday, January 23, 2014

ಯಕ್ಷಿಣಿ ಕಾಯ್ಕಿಣಿ

ಜಯಂತ್ ಕಾಯ್ಕಿಣಿ ಅವರ ಹುಟ್ಟು ಹಬ್ಬಕ್ಕೆ ನನ್ನ ಪುಟ್ಟ ತೊದಲು ನುಡಿಗಳ ಹಾರೈಕೆ
ರವಿ ಬರುವ ಸಮಯ ಕವಿನುಡಿಯ ವಿಸ್ಮಯ
ಕವಿ ಬರುವ ಸಮಯ ಚಂದ್ರೋದಯ ನೆಚ್ಚಿನ ಕವಿವರ್ಯರಿಗೆ ಜನ್ಮದಿನದ ಶುಭಾಷಯ

-------------------------------------------
ಅನಿಸುತಿದೆ ಯಾಕೋ ಇಂದು ಬರೆಯದೆ ಇರಲಾರೆ ಎಂದು :)
 ನಿಮ್ಮ ಅಪ್ಪಣೆ ನಿಮಗಿದೊ ಅರ್ಪಣೆ  ಕಾವ್ಯ ಟಿಪ್ಪಣೆ
------------------------------------------
ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ
 
ಅನವರತ ಜಪಿಸುತ ಮಧುರ ಗೀತೆಯ
 ಅಪರಿಮಿತ ಆನಂದದಿ ಮನಸು ತನ್ಮಯ
ಬರೆಯುತ ಹೃದಯಗಳ ನಾಡಗೀತೆಯ 
ಆದಿರಿ ನಲ್ಮೆಯ ಹೃದಯಗಳ ಕವಿವಿಸ್ಮಯ 
ಕೊಲ್ಲುವ ಹುಡುಗಿಯ ಮೊಹಕ ನಶೆಯ 
ಸವಿಯುತ ಕಳೆದುಹೊದ ಕಾಲಕೆ ಮಿತಿಇಲ್ಲ

ಓಡಿಬಂದು ನಿಂತಿವೆ ಸಾಲು ಸಾಲು ಪದಗಳು
ಪ್ರೀತಿಯ  ಅಕ್ಷರಮಾಲೆಯ ಪದಗಳಾಗಲು
ಕೆನ್ನೆಯೊಂದಿಗೆ ಸವಿ ಮಾತಾಡಲು
ಮಿಡಿಡುಕಾಡಿವೆ ಹನಿಗಳು ಕಂಬನಿಯಾಗಲು
ಸೋತು ಶರಣಾಗಿವೆ ಭಾವಜೀವಗಳು ಬಹುಪಾಲು
ಸಿಗಬಹುದೆ ತುಸು ಸಮಯ ಕೇಳಲು ಭಾವಗಳ ಈ ಅಹವಾಲು

ಬರೆದರೆ ತೀರದ ಭಾವ ಕಾಡುತಿದೆ ಪದಗಳ ಅಭಾವ
ಏನೆಂದು ಹೆಸರಿಡಲಿ ನಿಮಗೆ ನನಗಿಷ್ಟ ಆಗೋಹಾಗೆ
ಕವಿ ಎನ್ನಲಾ ಕಣ್ಮುಂದೆ ಭಾವನೆಗಳ ಕಡೆದುನಿಲ್ಲಿಸೊ ಶಿಲ್ಪಿ ಎನ್ನಲಾ
ಶಿಲ್ಪಕಲೆಗೂ ಭಾವಸೆಲೆಗೂ ಅಕ್ಷರಮಾಲೆಗೂ ಒಮ್ಮೆಗೆ ಸಂಧಿಸೊ ಹಂಬಲ

ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ

-ಅನಿಕೇತನ 
ಹ್ಯಾಪ್ಪಿ BoY :)

Tuesday, October 11, 2011

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ....!!!

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ....!!!  
ನನ್ನ ಮಹದೇಶ್ವರ ಬೆಟ್ಟ ತೀರ್ಥ ಯಾತ್ರೆಯ ಒಂದು ಅವಲೋಕನ  ಬನ್ನಿ ಹಂಚಿಕೊಳ್ಳೋಣ..

ಕರ್ನಾಟಕದ ಕಾರ್ಗಿಲ್  ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್  ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ  ಮಹದೇಶ್ವರ ನ ದರ್ಶನ  ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚೆಗೆ ಆಯುಧ ಪೂಜೆಯ ದಿನ, 
ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ.....!!! ಅಂತಾ  ಮಹದೇಶ್ವರ ನ ದರ್ಶನ ಪಡೆಯೋಣ ಅಂತ ತೀರ್ಮಾನ  ಮಾಡಿ ಹೊರಟ್ವಿ 
  
ನವರಾತ್ರಿ ವಿಶೇಷ ಹೇಗೋ ಕಷ್ಟ ಪಟ್ಟು ಸ್ಥಳ  ಮಾಡಿ ಬಸ್ಸಲ್ಲಿ ಕೂತ್ವಿ  ಉಘೆ ಉಘೆ ಅನ್ನೋ ಉಧ್ಘೋಶಗಳ ನಡುವೆ ಬಸ್ಸಿನ ಸದ್ದು ಕೇಳಿಸ್ತಲೇ ಇರ್ಲಿಲ್ಲ 
ಮಧ್ಯಾನ್ನ  ಭರ್ಜರಿ ಊಟ ಆಗಿತ್ತು  ಸರಿ ಸ್ವಲ್ಪ ದೂರ ಸಾಗಿದ್ಮೇಲೆ ನಿದ್ದೇನು ಬಂತು . 
ಎಚ್ಚ್ರಾಗೊ  ಹೊತ್ಗೆ   ಬಸ್ಸು ನಿಧನ ವಾಗಿ ಸಾಗ್ತಿತು ಯಾವ ಸದ್ದು  ಇರ್ಲಿಲ್ಲ ಎಲ್ರು ನಿದ್ದ್ರೆಗೆ ಜಾರಿದ್ರು,ಸಂಜೆ 5 ಘಂಟೆ ಆಗಿತ್ತು  ಅಲ್ಲಲ್ಲಿ ಕೆಂಪನೆ ಬಿಸಿಲು ಮಂದ ಬೆಳಕು ನಿದ್ರೆ ಮಂಪರು ಬಂದಿದ್ ಕಣ್ಗೆ ಎಲ್ಲಾ ಮಂಕಾಗಿ ಕಾಣತಿತ್ತು  ನೋಡ್ ನೋಡ್ ತಿದ್ದಂತೆ ಎಲ್ಲೆಲ್ಲು ಹಸ್ರು,  ಬಸ್ಸು ಗಭೀರವಾಗಿ ವನರಾಜನಂತೆ ಚಲಿಸುತ್ತಿರುವಾಗ ಕಣ್ಣರಳಿಸಿ ಕುತ್ತಿಗೆ ಹೊರಳಿಸಿದೆ
ಅಬ್ಬ ಎಂಥ ದೃಶ್ಯ ಮಾತೇ ಇಲ್ಲಾ ...

ಕರ್ನಾಟಕದ ಜಮ್ಮು  ಕಣಿವೆಗಳ ಮಧ್ಯದಲ್ಲಿ ಬಸ್ಸು ಜಮ್ಮಂತ  ಸಾಗಿತ್ತು ಒಂದುಕಡೆ ಆಕಾಶ ಇಷ್ಟ ಆಗಿದೆಯೋ ಅನ್ನೋ ಎತ್ತರದ ಗಿರಿ ಶಿಖರ ಇನ್ನೊಂದ್ಕಡೆ ಪಾತಾಳದ ಅಡ್ರೆಸ್ಸ್ ಕೊಡೊ ಪ್ರಪಾತ ಗಳು, "ವಾಲುತ್ತ ತೇಲುತ್ತ ಏಳುಮಲೆಗೆ ವಾಲಾಡಿ ಬಂದ್ವೋ..." ಅನ್ನೋ ಹಾಡಿನ ಸಾಲು ನೆನಪಾಗದೆ ಇರ್ಲಿಲ್ಲ ಹಾಗಿತು ಅಲ್ಲಿ ಬಸ್ಸುಗಳ  ಸವಾರಿ ಮಲೆಯ ಬೆನ್ನೇರಿ.. ವಾಹ್ ಅಧ್ಬುತ ದೃಶ್ಯ ಓಲಾಡಿ ತೇಲಾಡಿ ಸಾಗ್ತಿದ್ವು 
  

ಸುತ್ತುವರಿದ ಬೆಟ್ಟಗಳು ಗಂಧದ ಸೀಮೆಯ ಸೌಗಂಧ ತಂಪಾದ ಸೂರ್ಯ ಹಸಿರುಟ್ಟ ಬೆಟ್ಟ ಅಲ್ಲಲ್ಲಿ ಮುತ್ತಿ ಮಾಯವಾಗೋ ಮೋಡಗಳು 
ಎಂಥ ಸೊಗಸಾದ ನೋಟ ಅದ್ಭುತ  

ತಿರುವುಗಲ್ಲಿ ಮೈಮೇಲೆ ಎರಗಿದಂತೆ ಬರೋ ವಾಹನಗಳು ಕಿರಿದಾದ ರಸ್ತೆ ಅಲ್ಲಲಿ ಯಮನ ಸಂದರ್ಶನ ವಾದಂತೆ ಭಾಸ ಉಘೆ ಎನ್ನುವ ಭಕ್ತರ  ಕೂಗು.
ಒಂದರ ಹಿಂದೆ ಒಂದು ಬೆಟ್ಟಸಾಲು,ಪಯಣ  ಎಲ್ಲಿ ಶುರು ಆಯಿತು ಅನುವಾ ಜಾಡು ಹಿಡಿಯಲಾರದ ಹಾಗೆ ಒಂದನ್ನೊಂದು ಮರೆ ಮಾಡುವ ಬೆಟ್ಟಸಾಲು
ಎಪ್ಪತ್ತೇಳು ಬೆಟ್ಟಗಳ ಮದ್ಯದಲ್ಲಿ ನೆಲೆಸಿದ ಮಾದಪ್ಪ ನೀನು ತುಂಬ ಗ್ರೇಟ್ ಅಪ್ಪ,
 ಸಾಮಾನ್ಯ ವಾಗಿ ದೇವರು ಗಳು ಬೆಟ್ಟದ  ಮೇಲೆ ನೆಲೆಸಿರ್ತಾರೆ ಆದರೆ ಇಲ್ಲಿಯ ವಿಶೇಷ ಅಂದರೇ ಬೆಟ್ಟ ಸಾಲು ಗಳನ್ನ ಹತಿ ಇಳಿದು ನಂತರ ದೇವಸ್ತಾನ 

ಏಳು ಬೆಟ್ಟಗಳ ಏರುತ ಇಳಿಯುತ ಬದುಕಿನ ತತ್ವ ಸಾರುತ ಸಾಗುತ್ತದೆ ಪಯಣ ಮಹದೇಶ್ವರನ ದರ್ಶನಕ್ಕೆ .....
ಮುಂದುವರೆಯುತ್ತದೆ ... 

photo courtesy GOOGLE ...