Wednesday, August 13, 2025

Vostro account "deal in INR" ಜಗತ್ತಿನ ಅವಶ್ಯಕತೆ + ಭಾರತದ ಸಾಮರ್ಥ್ಯ = ರೂಪಾಯಿ ಮೌಲ್ಯ

Vostro account deal in INR ನಮ್ ದಾಸರು ಆಗಲೇ ಹೇಳಿದ್ರು ಕೆರೆಯ ನೀರನು ಕೆರೆಗೆ ಚೆಲ್ಲಿ ಅಂತ ಮತ್ತೆ ದೊಡ್ಡ ಫಿಲಾಸಫಿ ಅಂದ್ರೆ ಪ್ರಪಂಚ ನಡೆಯೋದೇ ಅದರ ಮೇಲೆ 🙂👍 ನಾನು ಕೊಡೋ ಭರವಸೆ ನ ಪೂರೈಕೆ ಮಾಡೋ ಶಕ್ತಿ ಇರ್ಬೇಕು ಆಗಲೇ ಅದಕ್ಕೆ ಬೆಲೆ. ಅರ್ಥ ಆಗಲಿಲ್ಲ!? ಇಡೀ ಬ್ರಹ್ಮಾಂಡದ ಸೃಷ್ಟಿ ಯ ಬಿಸಿನೆಸ್ ಇದು ವಾಹ್. ಬೆಲೆ ಬರ್ಬೇಕು ಅಂದ್ರೆ ಪೂರೈಕೆ ಮಾಡೋ ಕೆಪಾಸಿಟಿ ಇರ್ಬೇಕು ಅದು ಯಾರು ಕ್ರಿಯೇಟರ್ ಅವ್ರ್ ಗೆ ಮಾತ್ರ ಇರುತ್ತೆ. ಬಯಕೆಯ ಪ್ರತಿಯಾಗಿ ಪೂರೈಕೆ ಆದ್ರೆ ಈ ಮಧ್ಯೆ ಇರೋ ಭರವಸೆ ನೇ ನಾವು ನೀವು ಬಳಸೋ ಕರೆನ್ಸಿ, ಅದು ಕೊಟ್ಟು ನಮಗೆ ಬೇಕಾದ್ದು ತಗೊಬೋದು ಅಂತ ಅದೇ ಕೆಲಸ ಭಾರತ ಈಗ ಮಾಡೋಕೆ ಶುರು ಮಾಡ್ತಿದೆ ರುಪಾಯಿ ನ ಬಲಪಡಿಸೋಕೆ ಟ್ರೇಡ್ ಇನ್ ರುಪಿ ಐ ಎನ್ ಆರ್ 👍ಕೊಡೋ ಸಾಮರ್ಥ್ಯ. ನಾವು ಸೃಷ್ಟಿ ಮಾಡೋ ಪ್ರಾಡಕ್ಟ್ ಮತ್ತು ಪ್ರಪಂಚದಲ್ಲಿ ಅದಕ್ಕೆ ಬೇಡಿಕೆ ಇರೋಥರ ಆಗುವ ಕನಸು ಹೊತ್ತು ಹೊರಟಿದೆ.
ನೀನು 100 ರೂಪಾಯಿ ಕೊಟ್ಟು ಒಂದು ಭಾರತದ ಸರಕನ್ನ ಕೊಂಡುಕೊಳ್ಳೋಕೆ ಆಸಕ್ತಿ ಇದೆ ಅಂದಾಗ ಭಾರತದ 100 ರೂಪಾಯಿ ಗೆ ಮೌಲ್ಯ ಬರೋದು ಆ ನಿಟ್ಟಿನಲ್ಲಿ ಭಾರತ ಯಾವಾಗ ಹೊರಗಿ ವ್ಯಾಪಾರಿಗಳು ಬಂದಾಗ ಡಾಮಿನೇಟ್ ಮಾಡೋ ಹಂತದಲ್ಲಿ ವಹಿವಾಟು ನಡೆಸಿತ್ತು ಅಂತ ಕೇಳಿದೀವಲ್ಲ ಆ ಥರ ಮತ್ತೆ ಆಗ್ಬೇಕು. ನಾವು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರೂಪಾಯಿ ಬಳಕೆಯ ಹೊಸ ಹೆಜ್ಜೆ ಗೆ ಪೂರೈಕೆ ತುಂಬಾ ಮುಖ್ಯ.. ಯ್ಯೂಟ್ಯೂಬ್ ಕಂಟೆಂಟ್ ಅಲ್ಲ ಇಲ್ಲಿ ಖಾಸಗಿ ವಿಚಾರ ನ ಇಲ್ಲಿ ನ ಜನಕ್ಕೆ ಸೇಲ್ ಮಾಡಿ ಯೂಟ್ಯೂಬ್ ಆ್ಯಡ್ ಏಜೆನ್ಸಿ ಗಳಿಗೆ ಲಾಭ ಮಾಡಿಕೊಡೋದಲ್ಲ ಅದೇ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಮೊಲಕ ಭಾರತದ ಉತ್ತಮ ಉತ್ಪಾದನೆ ಹಾಗೂ ಪೂರೈಕೆ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಗಾಳಿ ಸುದ್ದಿ ಗಿಂತ ನಿಜವಾದ ವಸ್ತು ಸ್ಥಿತಿ ಗೆ ಮನ್ನಣೆ ಇರೋದು ಅದನ್ನು ಬಲಪಡಿಸೋಕೆ ಶುರುಮಾಡ್ಬೇಕು.. ಬಯಕೆ ಪೂರೈಕೆ ಗೆ ಬೆಲೆ ಬರೋದು.
ಈಗ ಭಾರತದ ಜನಸಂಖ್ಯೆ ನ ಬಯಕೆ ನ ಪ್ರಪಂಚದಲ್ಲಿ ಹೇಗೆ ಎನ್ ಕ್ಯಾಶ್ ಮಾಡ್ತಿದಾರೆ ಹಾಗೆ. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಇದನ್ನು ಜವಾಬ್ದಾರಿ ಇಂದ ಪ್ರತಿ ನಾಗರಿಕರು ಅರ್ಥ ಮಾಡಿಕೊಂಡು ಉತ್ತಮ ಉತ್ಪಾದನೆ ಮತ್ತು ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಬೇಕು 👍
ಇವತ್ತು ಜಗತ್ತಿನ ಅವಶ್ಯಕತೆ + ಭಾರತದ ಸಾಮರ್ಥ್ಯ = ರೂಪಾಯಿ ಮೌಲ್ಯ
ಈ ಎಲ್ಲದರ ಪೂರೈಕೆ ಗೆ ನಮ್ಮ ತಯಾರಿಕೆ ಏನು!?
1 ಆಹಾರ 2 ಬಟ್ಟೆ 3 ಔಷಧಿ 4 ಸೇವೆ 5 ಸೌಲಭ್ಯ
 ಯಾವುದೇ ಫಾರ್ಮ್ಯಾಟ್ ನ ಬಿಸಿನೆಸ್ ಮೊದಲು ನೋಡೋದು ಅವಶ್ಯಕತೆ ಏನಿದೆ ಎಷ್ಟು ಅಂತ, ಆದ್ರೆ ಪಾಶ್ಚಾತ್ಯ ರು ಮಾಡಿದ ದೊಡ್ಡ ಬ್ಲಂಡರ್ ಏನು ಅಂದ್ರೆ ಅವರ ಉತ್ಪಾದನೆ ಗೆ ಅನುಗುಣವಾಗಿ ಪ್ರಪಂಚದಲ್ಲಿ ಮಾರುಕಟ್ಟೆ ಸೃಷ್ಟಿಸಿ ದ್ದು, ಎಲ್ಲದಕ್ಕೂ ಅವರದ್ದೇ ಬ್ರಾಂಡ್ ಮಾಡಿದ್ದು. ಅದಕ್ಕೆ ಅವರ ಮೊದಲ ಅಸ್ತ್ರ, ಶ್ರೇಣಿ ಕೃತ ವ್ಯವಸ್ಥೆ, ಶ್ರೇಷ್ಠ ತೆ ಅನ್ನೋದು ತಮಗೆ ಮಾತ್ರ ಅನ್ವಯ ಅಂತ ಜನರನ್ನು ನಂಬಿಸಿ ದ್ದು.
ತುಂಬಾ ಸರಳವಾಗಿದೆ ಮತ್ತೆ ಅಷ್ಟೇ ಪರಿಣಾಮಕಾರಿಯಾಗಿ ಜಾರಿಗೆತಂದು ಇನ್ನೂ ನಮಗೆಲ್ಲ ಅದೇ "ಬ್ರಾಂಡ್" ಅನ್ನೋ ಮಬ್ಬು ಹಿಡ್ಸಿದಾರೆ. ಆಗೋದೆಲ್ಲ ಒಳ್ಳೆಯ ದೇ,  ಬ್ರಾಂಡ್ ನಮ್ಮ ದಾಗಿರಬೇಕು ಅದು ಮುಖ್ಯ, ಈಗ ರುಪಾಯಿ ವಹಿವಾಟಿಗೆ. ಅಂದ್ರೆ
ಉತ್ತಮ ಅನ್ನೋ ಬ್ರಾಂಡ್ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಆ ಸ್ವಾತಂತ್ರ್ಯವನ್ನು ಮನಸ್ಸುಗಳನ್ನು ಬ್ರಾಂಡ್ ಮಾಡೋ ಮೂಲಕ ಪುಷ್ಠಿ ಗೊಳಿಸಬೇಕು. ಆಗ ಮಾತ್ರ ನಮ್ಮ ಉತ್ಪಾದನೆ ಗೆ ನಾವು ಬೆಲೆ ನಿರ್ಧಾರ ಮಾಡೋಕೆ ಸಾಧ್ಯ ಇದು ಬರೀ ಮೋಟಿವೇಶನ್ ಗೆ ಮಾತ್ರ ಅಂತ ಅಂದ್ಕೊಂಡ್ ಅಲ್ಲಿಗೆ ಬಿಟ್ಟರೆ ಅಷ್ಟೇ. ಈಗ ಸಮಯ ಬಂದಿದೆ ಸರ್ಕಾರ ಒಂದು ಒಳ್ಳೆಯ  ನಿರ್ಧಾರ ಮಾಡಿದೆ. ನಮ್ಮ ಉತ್ತರ ಜಾಗತಿಕ ಮಟ್ಟದಲ್ಲಿ ಈಗಾಗಲೇ ಇರುವ ವಿಶ್ವಾಸಾರ್ಹ ಬ್ರಾಂಡ್ ಅಂದ್ರೆ ಪ್ರಾಚೀನ ಭಾರತೀಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಗ್ಗೆ ಹೆಚ್ಚಿನ ಜ್ಞಾನ ಪ್ರಬುದ್ಧತೆ ನಾವು ಸಂಪಾದನೆ ಮಾಡಿ ಸ್ಪೂರ್ತಿ ಪಡೆದು ಅದನ್ನು ಈಗಿನ ಕಾಲಘಟ್ಟದಲ್ಲಿ ಹೇಗೆ ಅಳವಡಿಸಬಹುದು ಅಂತ ಅದನ್ನ ರೀ ಡಿಸೈನ್ ಮಾಡಿ ಕೊಡೋದು.
ಅದು ಆಹಾರ ಪೂರೈಕೆ ಹೊಸ ರುಚಿ ರೂಪ ಅಥವಾ ಸಾಂಪ್ರದಾಯಿಕ ಹೆಸರಲ್ಲಿ ಪೂರೈಕೆ ಇರ್ಬೇಕು ಹಾಗೇ ನಮ್ಮ ಸಂಸ್ಕೃತಿ ಮೊದಲ ನಮ್ಮ ಆತ್ಮ ವಿಶ್ವಾಸ ಬಲಪಡಿಸೋಕೆ  ಆಗ್ಬೇಕು ಇದು ಶ್ರೇಷ್ಠ ಅಂತ ಪ್ರಪಂಚ ನಮ್ ನ ಫಾಲೋ ಮಾಡ್ಬೇಕು ಆಥರ ಇರೋದ್ರ ಲ್ಲಿ ಯೋಗ ಮತ್ತು ಆಯುರ್ವೇದ ಆಧ್ಯಾತ್ಮ ಸರ್ವರಿಗೂ ಸರ್ವಕಾಲಕ್ಕೂ ಅವಶ್ಯಕತೆ ಇರೋದು. ಮನರಂಜನೆ ದೃಷ್ಟಿಯಿಂದ ಅಸಂಬದ್ಧವಾದ ಆಚರಣೆಗಳನ್ನು ಮಾರಾಟ ಮಾಡುತ್ತಿರುವ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮನ್ನು ನಾವು ಶ್ರೇಷ್ಠ ಆಚರಣೆ ಮೂಲಕ ಪ್ರತಿನಿಧಿಸಬೇಕಿದೆ ಭಾರತೀಯರ ನಿಷ್ಠೆ ಕೌಶಲ್ಯ ವೃತ್ತಿಪರ ತರಬೇತಿ ಕಾಳಜಿ ರಾಷ್ಟ್ರಾಭಿಮಾನಗಳೇ ಬ್ರಾಂಡ್ ಆಗಿ ಮಾದರಿ ಆದಾಗ ನಮ್ಮ ವಸ್ತು ಗಳಿಗೂ ಉತ್ಪಾದನೆ ಗಳಿಗೂ ಮತ್ತು ರೂಪಾಯಿ ಗೂ ಮೌಲ್ಯ ಸಿಗೋದು.
Vostro concept ತುಂಬಾ ಪ್ರಮುಖ ನಿರ್ಧಾರಗಳಲ್ಲೊಂದು ಇದರ ಸದುಪಯೋಗ ಪಡಿಸಿಕೊಂಡು ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಬೇಕು.

No comments:

Post a Comment