Friday, July 19, 2024

ದುಡ್ಡೇ ಸಮಸ್ಯೆ ನಾ...

 ಅನಿ'ಸಿಕೆ:-

ಫೇಸ್ ಬುಕ್ ಗೆ ಬಂದಾದ್ಮೇಲೆ ಬ್ಲಾಗ್ ಬರ್ಯೋದು ನಿಂತೇ ಹೋಗಿದೆ ಇರ್ಲಿ ಜನಕ್ ಯಾವ್ದ್ ಜಾಸ್ತಿ ತಲ್ಪುತ್ತೆ ಆ ಮಾಧ್ಯಮ ನೇ ಉಪ್ಯೋಗ್ಸಣ.

' ದುಡ್ಡು' , ಸಂಬಂಧ ವಿಶ್ವಾಸ ನ ಹಾಳ್ ಮಾಡು ತ್ತೆ ಅಂತಾರೆ ಪಾಪ ಎಲ್ಲರಿಗೂ ತಮ್ಮ ತಪ್ಪನ್ನು ಹೊರಿಸೋಕೆ ಪುನಃ ಉತ್ತರ ಕೊಡದೇ ಇರೋ ಒಂದ್ ವಸ್ತು ಬೇಕು..ಅಂಥ ಆಯ್ಕೆ ಯಾವಾಗಲೂ ಅವರಿಗಿಂತ ಕಡಿಮೆ ಬಲಶಾಲಿ ಅಸಹಾಯಕ ಅಥವಾ ಪ್ರತಿರೋಧ ಒಡ್ಡಲಾರದ್ದೇ ಆಗಿರುತ್ತದೆ ಅದರಲ್ಲಿ ಈ ದುಡ್ಡೂ ಒಂದು, ಅದು ಮಾತಾಡಲ್ಲ ನೋಡಿ ಅದೊಂದು ವಸ್ತು, ತಮ್ಮ ತಪ್ಪನ್ನು ಅದರ ಮೇಲೆ ಹೊರಿಸೋಕೆ ಸುಲಭ . ಇದೊಂದು ಸೂಕ್ಷ್ಮ ಹಾಗೂ ಮುಖ್ಯ ವಿಚಾರ. ಅದರ ಆಳ ತುಂಬಾ ಇದೆ ಅಷ್ಟೇ ಸರಳವಾಗಿ ಅರ್ಥ ಮಾಡ್ಕೋಬಹುದೂ ಕೂಡ, ಆ ಮನಸ್ಥಿತಿ ದೃಷ್ಟಿಯಿಂದ ನೋಡ್ಬೇಕು ಅಷ್ಟೇ.

ಈ ದುಡ್ಡೇ ಯಾಕೆ ಇಂಥ ದೋಷಾರೋಪ ಪಟ್ಟಿ ಗೆ ಹಣೆ ಆಗ್ಬೇಕು..!

ಅದ್ ಬಿಟ್ಟು ಬೇರೆ ಯಾವುದೂ ಅಂಥಾ ಬೆಲೆ ಬಾಳೋ ದು ಇಲ್ವ ಪ್ರಪಂಚದಲ್ಲಿ.. ಎಂಥೆಂಥಾದೆಲ್ಲ ಕೈ ತಪ್ಪಿದ ಉದಾಹರಣೆ ಇದೆ, ಇಡೀ ಜೀವನದಲ್ಲಿ ಏನೇನೆಲ್ಲ ಕಳ್ಕೊಂಡ್ ಇರ್ತೀವಿ, ಕೈ ತಪ್ಪಿ ಹೋಗಿರುತ್ತೆ ನಾವೇ ಬೇಡ ಹೋಗ್ಲಿ ಅಂಥ ಅಸಡ್ಡೆ ತೋರ್ಸಿರ್ತೀವಿ ಕೆಲವುಸಲ ಸ್ವಂತದವರನ್ನೂ .

ಆದ್ರೆ ಈ ದುಡ್ಡು ಕಳ್ಕೊತೀವಿ ಅಥವಾ ಕಳ್ಕೊಂಡ್ವಿ ಇಲ್ಲ ಬರಬೇಕಾದ್ದು ಬಂದಿಲ್ಲ ಕೊಡಬೇಕಾದೋರ್ ಕೊಟ್ಟಿಲ್ಲ,

 ನಾವು ಕೊಡಬೇಕಾದವರಿಗೆ ಕೊಡುವ ಸಮಯ ಬಂದಾಗ ನಮ್ಮ ಹತ್ತಿರ ಇಲ್ಲ ಅಂದಾಗ, ನಮಗೆ ಕೊಡಕ್ ಇಷ್ಟ ಇಲ್ಲ, ಕಷ್ಟ ದ್ರೂ ಕೊಡಬೇಕು ಅಂದಾಗ, ಆಗೋ ಒಂದ್ ಥರ ಅನುಭವ ಇದ್ಯಲ್ಲ, ಅದ್ರು ಮುಂದೆ ಸಂಬಂಧ ಪ್ರೀತಿ ಪ್ರೇಮ ವಿಶ್ವಾಸ ಗೌರವ ಅಭಿಮಾನ ಎಲ್ಲ ಪುಸ್ತಕದ ಬದನೇಕಾಯಿ ಅನ್ಸುತ್ತೆ . ಇದನ್ ಹೇಳೋಕು ಒಂದ್ ಧೈರ್ಯ ಬೇಕು (ಅದಕ್ ಬೆಲೆ ಕೊಡದೇ ಬದುಕೋಕೆ ಸಾಧ್ಯ ಇರೋ ವ್ಯವಸ್ಥೆ ಲಿ ಯಾರೂ ಇಲ್ಲ )

ಹೀಗೆಲ್ಲ ಅನ್ಸೋಕೆ ಕಾರಣ ಹಣ, ಆದ್ರೆ ತಪ್ಪು ಹಣದ್ದಾ..!! !?


ಯೋಚನೆ ಮಾಡ್ಳೇಬೇಕು ಎಷ್ಟು ದೊಡ್ಡ ವಿಚಾರ, ಒಡಹುಟ್ಟಿದವರು ಒಂದು ಜೀವ ಎರಡು ದೇಹ ಅಂದ್ಕೊಂಡೋರೂ ಈ ಒಂದು ವಸ್ತು ಗೋಸ್ಕರ ಏನೆನೆಲ್ಲ ಆಗೋದ್ರು .. :-)


ಎಷ್ಟೋ ಅಮೂಲ್ಯವಾದ ವಿಷೇಶವಾದ ಸಂಬಂಧ ಭಾವನೆ ಗಳು ಹಾಳಾದಾಗ್ಲೂ ಒಂದ್ ಥರ ಹೋಗ್ಲಿ ಬಿಡು ಅನ್ತೀವಿ, ಒಂದ್ ಮಟ್ಟಕ್ಕೆ ಬೇಜಾರಾಗಿದ್ರೂ ಓಕೆ ಸಹಿಸ್ಕೋತೀವಿ, ಆದ್ರೆ ಈ ಹಣಕ್ಕಾಗಿ ಮುಖವಾಡ ಹಣಕ್ಕಾಗಿ ದುಷ್ಕೃತ್ಯ ಹಣಕ್ಕಾಗಿ ಆಗೋ ದುರಂತ ಆ ಹಣಕ್ಕೆ ಅಂತ ನೇ ಆತ್ಮ ಸಾಕ್ಷಿ, ಮರ್ಯಾದೆ, ಕೆಲವರಂತೂ ಮಾರಾಟ ಆಗೋ ದರ್ಜೆ ಗೆ ಇಳಿದ ಜನ ತಮ್ಮನ್ನು ಮಾರಿಕೊಳ್ಳೋ ಮಟ್ಟದಲ್ಲಿ ಕೊನೆಯ ದಾಗಿ ಅದರಿಂದ ಪ್ರಾಣ ಬಿಡಬೇಕಾಗ್ ಬಂದರೂ ಮಟ್ಟಕ್ಕೆ ಬೇಕಾದರೂ ಜನ ಯೋಚನೆ ಮಾಡ್ತಾರೆ ಅಂದ್ರೆ... ಹ್ಮ್ 

 ದುಡ್ಡಿನ ವಿಷಯದಲ್ಲಿ ಉಳಿದ ಎಲ್ಲ ಕಿಂತ ಅದೇ ಒಂದ್ ಕೈ ಮೇಲೆ ಒಂದ್ ತೂಕ ಜಾಸ್ತಿ ಒಂದ್ ವಿಷೇಶ ಸ್ಥಾನ ಅದನ್ ಮಾತ್ರ ಬಿಟ್ಕೋಡಕ್ ತಯಾರಿರೋಕೆ ಸಾಧ್ಯ ಇಲ್ಲ ಯಾಕ್ ಹೀಗೆ..!? 


ಸರಿ ಈ ದುಡ್ಡಿಂದ ನೇ ಸಂತೋಷ ಅಂತ ಯಾಕ್ ಅನ್ಸುತ್ತೆ,.! ದುಡ್ಡು ಅಲ್ಟಿಮೇಟ್ ಅನ್ನೋ ಭಾವನೆ ಹೇಗೆ!? ದುಡ್ಡಿಂದನೇ ಯಾಕೆ ಎಲ್ಲ 'ದಿ ಎಂಡ್ಆಗ್ಬೇಕು!? ಪರಮ ಗುರಿ ದುಡ್ಡೇ ಯಾಕ್ ಆಗ್ಬೇಕು!? ಅಥವಾ ಪ್ರೀತಿ ಮೋಹ ದ್ವೇಶ ದುರಾಸೆ ಅಸೂಯೆ ಹುಟ್ಬೇಕು!?


ಅಲ್ವಾ ದುಡ್ಡೇ ಸಮಸ್ಯೆ ನಾ..


ನಿಜಕ್ಕೂ ಹೌದಾ..


ಯೋಚನೆ ಮಾಡಿ..


ಹೌದು 

ನಾವು ನೀವು ಕೂಡಿಡೋಕೆ, ಮತ್ತೆ ಲೆಕ್ಕ ಇಡೋಕೆ, ಚಲಾವಣೆ ಮಾಡೋಕೆ, ಅದರ ಪ್ರಭಾವದಿಂದ ಕೆಲಸ ಆಗೋಕೆ, ಕಾರಣ ಅದನ್ ಕೊಟ್ಟು ಮತ್ತೊಂದು ಸಿಗೋಕೆ ಸಾಧ್ಯ ಆಗಿರೋದು, ಅದೊಂದೇ ವಸ್ತು ದುಡ್ಡು..!!! ನಾನು ಸಂಭಾವಿತ, ಸಾತ್ವಿಕ , ಶ್ರೇಷ್ಠ, ಮನಸ್ಸಿಗೆ ಹತ್ತಿರವಾದವ, ಆಪ್ತ, ಒಡಹುಟ್ಟಿದವ ನನ್ನ ಮಾತಿಂದ ಏನಾದ್ರೂ ಕೆಲಸ ಆಗುತ್ತೆ ಅನ್ನೋದಾದರೆ, ಕೊನೆಗೆ ಅಲ್ಲಿ ಸಿಗುವ ವಸ್ತು ದುಡ್ಡೇ, ಅಥವಾ ಶಿಫಾರಸುಗಳು ಪ್ರಭಾವ ಬೈಗುಳ ಬೆದರಿಕೆ ಗಳ ಪರಿಣಾಮ ಕೆಲಸ ಏನೇ ಇರಲಿ ಕೊನೆಗೆ ಅಲ್ಲಿ ಸಿಗುವ ವಸ್ತು ಹಣ. ಈ ಒಳ್ಳೆಯ ತನ ಪ್ರಾಮಾಣಿಕತೆ ಅಥವಾ ಪ್ರಭಾವ ಬೆದರಿಕೆ ಗಳು ಬೇಗ ಸಿಗೋಹಾಗೆ ಅಥವಾ ಕೊಡಬೇಕಾದ ಹಣದಲ್ಲಿ ಸ್ವಲ್ಪ ರಿಯಾಯಿತಿ ಸಿಗೋ ಹಾಗೆ ಮಾಡಬಹುದು ಅಷ್ಟೇ, ಅಥವಾ ನಿಮ್ ಬದಲಿಗೆ ಇನ್ಯಾರಾದ್ರೂ ಅದನ್ನು ಕೊಡೋ ಜವಾಬ್ದಾರಿ ಹೊರಲೇ ಬೇಕು ಅದನ್ ಬಿಟ್ಟು ಬೇರೆ ಯಾವುದೇ ಆಯ್ಕೆ ಇರಲ್ಲ .

ಹೌದು ಎಲ್ಲದಕ್ಕೂ ಕಾರಣ 'ಹಣ'

 ಆ ಸ್ಥಾನ ದಲ್ಲಿ ಯಾವುದೇ ಇದ್ದರೂ, ಅದರ ಹೆಸರು ದುಡ್ಡು ಅಂತ ಇಲ್ಲದೆ ಇನ್ನೇನೇ ಇದ್ದರೂ, ಅದರ ಸಲುವಾಗಿ ನೇ ಎಲ್ಲ ಆಗ್ತಾ ಇದ್ದಿದ್ದು..


ನೀವು ಲೆಕ್ಕ ಇಡೋದು ಯಾವುದು ಮುಖ್ಯ ಅದನ್ನೇ..

ಇದು ಮುಖ್ಯ ಆಗಿದ್ದು ಹೇಗೆ ಅನ್ನೋ ತರ್ಕ ಕ್ಕೆ ಕೊನೆ.. !?

ಅದೇ ಅದರ ಚಲಾವಣೆ, ಸರಿ ಚಲಾವಣೆ ಯಾಕೆ ಅಂದ್ರೆ ಅದುಕ್ಕೆ ಬೆಲೆ ಇದೆ, ಅದಕ್ ಬೆಲೆ ಯಾಕೆ, ಅದನ್ ಕೊಟ್ಟಾಗ ನಮಗೆ ಅವಶ್ಯಕತೆ ಇರೋದು ನಮಗೆ ಸಿಗುತ್ತೆ. ಇಂಥ ಒಂದ್ ರೀತಿ ಮನೋಪಲೈಸ್ಡ್ ಸಿಸ್ಟಂ ಒಳಗೆ ಎಲ್ಲ ಇದೀವಿ ಹೀಗಿದ್ದೂ... 

ಮನುಷ್ಯನಿಗಿಂತ ದುಡ್ಡೇ ಮುಖ್ಯ ನಾ ಅಂತ ಕೇಳೋರ್ಗೆ ಒಂದ್ ಮಾತು, ಆ ದುಡ್ಡು ಮುಖ್ಯ ಅಲ್ಲ ಅಂದ್ಮೇಲೆ ನೀವು ಯಾಕೆ ಅದನ್ ಬಳಸ್ತೀರ, ಅದಿಲ್ಲದೇ ಬದುಕ್ತೀರ..! ಅದಿಲ್ಲ ಅಂದಾಗ ಅದರ ಅವಶ್ಯಕತೆ ಗಾಗಿ ಯಾಕ್ ಅದಕ್ ಇನ್ನೊಬ್ಬರ ಸಹಾಯ ತಗೊಂಡ್ರೀ.

ದುಡ್ಡು ಮುಖ್ಯ ಅಲ್ಲ ಅಂತ ಆವಾಗ್ ಲೇ ಬಿಡ್ಬೋದಿತ್ತಲ್ಲ, ದುಡ್ ಇಲ್ಲದೇ ಸಮಸ್ಯೆ ಬಗೆ ಹರ್ಸ್ಕೋತೀನಿ ಅಂತ. ಅದಿಲ್ಲ ಅಂದ್ರೆ ಏನು ಪರ್ವಾಗಿಲ್ಲ ಬದುಕ್ತೀನಿ ಅಂತ ..

ಸಾಧ್ಯ ಇಲ್ಲ ಅಲ್ವಾ..

ತಗೊಂಡಾಗ ಅದಕ್ಕೆ ಎಷ್ಟು ಪ್ರಾಮುಖ್ಯ ಇರುತ್ತೆ ಮತ್ತೆ ನೀವು ವಾಪಸ್ ಕೊಡಬೇಕು ಅಂದಾಗಲು ಅದಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಡೋ ಏಕೈಕ ವಸ್ತು ದುಡ್ಡು ಹಣ..

 ಅದು ಮುಖ್ಯ ಅಂತ ಅಲ್ಲೇ ಸಾಬೀತು ಪಡ್ಸ್ತಿದೇ..


ವಿಚಾರ ಏನು ಅಂದ್ರೆ ದುಡ್ಡು ಎಲ್ಲರನು ಹೀಗ್ ಮಾಡಿದೆ ಅಂತ ಆಪಾದನೆ, ಹೌದು ಅದು ಹಾಗ್ ಮಾಡೇ ಮಾಡುತ್ತೆ ಮಾಡ್ಳೇಬೇಕು ಕೂಡ, ಅದು ಅದಕ್ಕಿರೋ ಮಹತ್ವ, ಶಕ್ತಿ ಸಾಮರ್ಥ್ಯ. ದುಡ್ಡು ಹಣ ಅಥವಾ ಅಂಥ ಬೆಲೆ ಇರೋ ಯಾವುದೇ ಕೇಂದ್ರೀಕೃತವಾದ ಒಂದ್ ವಸ್ತು, ವ್ಯವಸ್ಥೆ ಯಲ್ಲಿ ಯಾವುದೇ ಹೆಸರಿನಲ್ಲಿ ಇದ್ದರೂ ಅದರಿಂದ ಆಗೋ ಪರಿಣಾಮ ಇದೇ..

ಅದನ್ ಕೊಟ್ಟಾಗ ನಿಮ್ ಗೆ ಪರ್ಯಾಯವಾಗಿ ಇನ್ ಎಕ್ಸ್‌ಚೇಂಜ್ ಇನ್ ಎಕ್ಸೆರ್ಸೈಸ್ ಯು ಗೆಟ್ ಯುವರ್ ಡಿಸೈರ್ಡ್ ಥಿಂಗ್ ಅಂದ್ರೆ ಅದಕ್ಕಾಗಿ ಎಲ್ಲರೂ ಹೆಚ್ಚಿನ ಮಹತ್ವ ಕೊಟ್ಟೇ ಕೊಡ್ತಾರೆ..

ಆದ್ರೆ ನಿಜವಾದ ಸಮಸ್ಯೆ ಇರೋದು, ಅಷ್ಟೊಂದು ನಾವು ಅವಲಂಬಿಸಿರುವ ಒಂದ್ ವಸ್ತು ನಮಗೆ ಎಷ್ಟು ಮುಖ್ಯ ವೋ ಇನ್ನೊಬ್ಬರಿಗೂ ಅದೇ ಅನಿವಾರ್ಯ ಅಂತ ನಾವು ಭಾವಿಸಿಲ್ಲದೇ ಇರೋದರಲ್ಲಿ. ನಮ್ ಸಮಯಕ್ಕೆ ಅದ್ ಹೇಗಾದರೂ ಅದನ್ ಒಟ್ಟುಗೂಡಿಸಿ ನಮ್ಮ ಅವಶ್ಯಕತೆ ಪೂರೈಕೆ ಮಾಡಿಕೊಳ್ಳೋಕೆ ತೋರಿಸೋ ಆಸಕ್ತಿ ನ ಅದನ್ ವಾಪಸ್ ಕೊಡೋಕೊ ಇಲ್ಲ ಅದನ್ನ ಪಡೆದಿದ್ದಕ್ಕೆ ಅಷ್ಟೇ ಮೌಲ್ಯದ ಮತ್ತೊಂದನ್ನ ನಾವು ಹಿಂತಿರುಗಿಸೋದಕ್ಕೋ ತೋರಿಸದೇ ಇದ್ದಾಗ, ಸಂಬಂಧ ಸಂಸಾರ ಸಹವಾಸ ವಿಶ್ವಾಸ ಭಾವನೆ ಎಲ್ಲ ಪುಸ್ತಕದ ಬದನೆಕಾಯಿ ಅನ್ನೋದು ನಿಜ ಅನ್ಸುತ್ತೆ.. ಯಾಕೆ ಅಂದ್ರೆ ಆ ಹಣ ನಿಮಗೆ ಎಷ್ಟು ಮುಖ್ಯ ವೋ ಇನ್ನೊಬ್ಬರಿಗೂ ಅಷ್ಟೇ ಮುಖ್ಯ ಆಗಿರುತ್ತೆ ಅಲ್ವಾ.. ಅಂಥದ್ದನ್ನ ನೀವು ಮೋಸದಿಂದ ಅಥವಾ ನಿಮ್ಮ ನಯವಾದ ನಾಜೋಕಿನ ಮಾತಿಂದ ನಿಮ್ಮಮೇಲೆ ಇರೋ ನಂಬಿಕೆಯನ್ನೋ ಅದ್ಭುತವಾದ ಚಮತ್ಕಾರ ಪ್ರಭಾವ ಶಕ್ತಿ ಬಳಸಿ ನಿಮ್ಮದಾಗಿಸಿಕೊಳ್ಳೋ ಪ್ರಯತ್ನ ಮಾಡಿದಾಗ ಈ ವ್ಯವಸ್ಥೆ ಯ ಸಮತೋಲನ ತಪ್ಪೋದು, ಮತ್ತು ಅದರ ಅವಶ್ಯಕತೆ ಇದ್ದ ಮತ್ತೊಬ್ಬ ಅದರ ಮೇಲೆ ತನ್ನಹಕ್ಕುಸ್ಥಾಪನೆಗೆ ಮುಗಿಬೀಳೋದು.. ಮುಂದಿನದು ದುರಂತವಷ್ಟೇ.

ಅಲ್ವಾ ದುಡ್ಡೇ ಸಮಸ್ಯೆ ನಾ..


ನಿಜಕ್ಕೂ ಹೌದಾ..


ಯೋಚನೆ ಮಾಡಿ


ಅದನ್ ಎಷ್ಟು ಜಾಗರೂಕತೆಯಿಂದ ಗೌರವದಿಂದ ಸಂಪಾದಿಸಿ ಅವಶ್ಯಕತೆ ಗೆ ಅನುಗುಣವಾಗಿ ಮಾತ್ರ ಬಳಸಿದಾಗಲೇ ಅದು ಒಂದು ವರದಾನ.. ಅದಕ್ಕೆ ಅಂತ ಸಾಲ ಸುಳ್ಳು ಕಳ್ಳತನ ಮೋಸ ವಂಚನೆ ದುರ್ಮಾಗ ಅಥವಾ ಅದನ್ನು ದುರ್ಬಳಕೆ ಮಾಡಿದಾಗ ಪರಿಣಾಮ ಅನಾಹುತ ಬಿಟ್ಟು ಇನ್ನೇನೂ ಸಾಧ್ಯ ಇಲ್ಲ.

_ಇಂತಿ ನಿಮ್ಮ ಆತ್ಮೀಯ 

ಅನಿಕೇತನ ಶರ್ಮ

ಹ್ಯಾಪ್ಪಿ B :-) Y

No comments:

Post a Comment