ಅನಿ'ಸಿಕೆ :- ಜೀವನದಲ್ಲಿ ಬೀಳು ಏಳು ಸಹಜ..
ಅದನ್ನೇ ದೊಡ್ಡ ಮ್ಯಾಟ್ರು ಮಾಡ್ಕೋಬೇಡ ಮನುಜ..
ಹೊಸದೇನಲ್ಲ ಬಿದ್ದು ನೋವ್ ಮಾಡ್ಕೋಳದು ಏಳದು ಸಾಧ್ಯ ಆದಷ್ಟು ಮುಂದೆ ಹೋಗಕ್ ಟ್ರೈ ಮಾಡೋದು..
ಚಿಕ್ಕೋರಿಂದ ಆಗಿರೋದ್ ಅದೇ ಅಲ್ವಾ, ಬಿದ್ದು ಎದ್ದು ನಿಂತು ಅತ್ತು ಚಪ್ಪಾಳೆ ಸದ್ದು ಗಮನ ಸೆಳೆದು ಮತ್ತೆ ನಕ್ಕು ಏನೂ ಆಗಿಲ್ಲ ಎಂಬಂತೆ ಎಲ್ಲರೂಡನೆ ಇದ್ದು ಹೋಗೋದು ಜೀವನದ ಪ್ರತಿ ಹಂತದಲ್ಲೂ ತುಂಬಾ ಸಹಜ ಆಗೋಗಿದೆ ಬದುಕು ಇರೋದೇ ಹೀಗೆ.
ಆದ್ರೆ ಈ ಕಹಾನಿ ಮೆ ಟ್ವಿಸ್ಟ್ ಇರೋದ್ ಇಲ್ಲಿ.. ಈ ವಯಸ್ಸು ಅನ್ನೋ ವ್ಯತ್ಯಾಸ ಇದೆಯಲ್ಲ ಅದು.
ಒಬ್ಬ ಮನುಷ್ಯ 4 ರಲ್ಲಿ ಬಿದ್ದು ಏಳೋದಕ್ಕೂ 40 ರಲ್ಲಿ ಬಿದ್ದು ಎದ್ದು ನಿಲ್ಲೋದಕ್ಕೂ ವ್ಯತ್ಯಾಸ ಇದೆ.. ಆಗ ಅನುಭವ ಇರಲ್ಲ ಬೀಳ್ತೀವಿ ಕಲಿಕೆ ಅದು ಸಹಜ ಹಾಗಂತ 40 ಆದಾಗ ಬಿಳಲ್ಲ ಅಂತ ಏನು ಗ್ಯಾರಂಟಿ ನ ಜೀವನದ ಫಾರ್ಮ್ಯಾಟ್ ಆ ದೋಡ್ಡೋರ್ ಆದ್ಮೇಲೇ ಯಾರೂ ಬಿಳೋದೇ ಇಲ್ಲ ಅಂತ.. 😂
ವಿಷಯ 4 ರಲ್ಲಿ ಬಿದ್ದಾಗ ಸಂತೈಸಿ ಆರೈಕೆ ಮಾಡಿದ ಕೈಗಳೇ 40 ರಲ್ಲು ಕಾಯ್ತಿರೋದು ಪುಣ್ಯ ಅದು ತಾಯಿ ನನ್ನ ಅಮ್ಮ. ಮಗನ ಯೋಗಕ್ಷೇಮವೇ ತನ್ನ ಜೀವನದ ಪರಮಗುರಿ ಅಂತ ಬದುಕೋ ಜೀವ. ನಾನು ಏನ್ ಹೇಳಿದ್ರು ಏನ್ ಮಾಡಿದ್ರು ನಿಂಗ್ ನೀನೇ ಸಾಟಿ, ಕೆಲವು ಸಲ ಅಸಹನೆ ಅಸಹಾಯಕತೆ ಗೆ ಕೋಪ ತಾಪ ಸಹಜ ನಾನು ಏರುದನಿಯಲ್ಲಿ ಮಾತಾಡಿ ಎಷ್ಟೋ ಬಾರಿ ನೋವ್ ಮಾಡಿರ್ತೀನಿ ಆದ್ರೆ ನನ್ನ ನೋವಲ್ಲಿ ಅದ್ಯಾವದು ನಿನಗೆ ನೆನಪಾಗಲ್ಲ ನೀನ್ ಅದೇ ಅಮ್ಮ, ನನಗೆ ಮಾತ್ರ ನಾನು ದೋಡ್ಡೋನಾಗಿದೀನಿ ಅನ್ನೋ ಭ್ರಮೆ.
ಈ 4 ಮತ್ತು 40 ರ ಬೀಳು ಏಳುಗಳಿಗೆ ಕಾರಣ ಏನಾದ್ರೂ ಇರ್ಲಿ ಸಂತೈಸಿ ಆರೈಕೆ ಮಾಡೋರು ಇದ್ರು, ಆದ್ರೆ ಪರಿಣಾಮ ಮಾತ್ರ ಬೇರೆ..
ನನ್ನ 4 ರಲ್ಲಿ ಇದ್ದ ಅಮ್ಮನ ಪ್ರಾಯ 40 ರಲ್ಲಿ ಇರಲ್ಲ ಆದ್ರೂ ಯೋಗಕ್ಷೇಮ ನೋಡೋದ್ ರಲ್ಲಿ ಏನೂ ವ್ಯತ್ಯಾಸ ಇಲ್ಲ. 4 ರಲ್ಲಿ ನಾನು ಎಳೇಕಂದ ಏನೂ ಅನಿಸುವುದಿಲ್ಲ, 40ರ ಈ ಧಡಿಯನಿಗೆ ಟೈಂ ಕೈ ಕಟ್ಟಿಹಾಕಿದಾಗ ಆಗೋ ಎಲ್ಲ ಅನಾನುಕೂಲ ಪ್ರತಿಯೊಂದಕ್ಕೂ ಅವಲಂಬನೆ ಸ್ವಾವಲಂಬಿ ವ್ಯಕ್ತಿಗೆ ಸವಾಲಾಗಿರೋ ಜೀವನ, ಯಾರು ಬೇಡ ಬದುಕನ್ನು ಸಮರ್ಥವಾಗಿ ಎದುರಿಸಬಲ್ಲೆ ನಾನು ಅಷ್ಟು ಶಕ್ತ ಎಂಬ ಆತ್ಮವಿಶ್ವಾಸ ಕ್ಕೆ ಇಂಥ ಪರಿಕ್ಷೆ ಅವಶ್ಯಕತೆ ಇತ್ತಾ.. ನನ್ನ ದೇ ನೇ ಇರಲಿ, ಅಮ್ಮ ನಿನ್ನ ಕಥೆ ಏನು! ನಾನು ಮನೆಲೇ ಇದ್ದ್ರು 4 ಮಾತು ಊಟತಿಂಡಿ ಕಂಪ್ಯೂಟರ್ ಇಷ್ಟೇ ಬದುಕು ಇದೇ ಸಾಧನೆ ಅಂತಿದ್ದರೆ ನೀನು ಇದ್ಯಾವುದನ್ನೂ ಲೆಕ್ಕಿಸದೇ ನಮ್ಮನ್ನು ಕಾಯೋ ಶಕ್ತಿ ಅಂತ ಮತ್ತೆ ಮತ್ತೆ ಪ್ರೂವ್ ಮಾಡ್ತಿದೀಯ.. ಬಹಳಸಲ ಅಂದ್ಕೋತೀನಿ ಈ ಅವಲಂಬನೆ ಒಳ್ಳೆಯದಲ್ಲ ಒಬ್ಬನೇ ಬದುಕಬೇಕಾದ ಪರಿಸ್ಥಿತಿ ಬಂದಾಗ ನನ್ನ ನಾನು ನೋಡ್ಕೋಳೋ ಕೆ ಸಿದ್ದ ಇರ್ಬೇಕು ಅಂತ. ಆದ್ರೆ ನೀನು ನನ್ನ ನೋಡ್ಕೊಳೋಹಾಗೆ ನಿನ್ನ ಹಾಗೆ ನಿನ್ನ ನೋಡ್ಕೋಳೋ ದು ನನಗೆ ಸಾಧ್ಯವಾ..!?
4 ರ ನಂತರ ಬದುಕು ಸುಲಭ 40 ನಂತರ ಅಷ್ಟು ಸುಲಭವಲ್ಲ ಇಲ್ಲಿ ಜವಾಬ್ದಾರಿ ಇದೆ ಉತ್ತರಿಸಬೇಕಾದ ಬಹಳಷ್ಟು ಮಂದಿ ಇದ್ದಾರೆ ಕಮಿಟ್ಮೆಂಟ್ ಇದೆ ಇದ್ಯಾವುದೂ ನಿನ್ ನೋಡ್ಕೋಳೋ ಕೆ ಸಹಾಯ ಮಾಡಲ್ಲ ನನ್ನ ಜೀವನ ಗುರಿ ಸಾಧನೆ ಅನ್ನೋ ಸ್ವಾರ್ಥ ಕ್ಕೆ ನಾನು ಕಟ್ಟುತ್ತಿರುವ ನನ್ನ ಪ್ರಪಂಚ.. ಎಷ್ಟು ವಿಚಿತ್ರ ನಿನಗೆ ಇದ್ಯಾವುದೂ ಅಷ್ಟು ಮುಖ್ಯ ಅಲ್ಲ ನನ್ನ ಯೋಗಕ್ಷೇಮ ಅಷ್ಟೇ .
ಆದ್ರೆ ನಾನು ನೀನು ಇರೋಕೆ ಇಷ್ಟೆಲ್ಲಾ ಬೇಕಾ..ಹಾಗಂತ ನಮ್ಮ ಪ್ರಪಂಚ ತುಂಬಾ ಚಿಕ್ಕದಲ್ಲ ನಾಲ್ಕಾರು ಜನ ಸಂಬಂಧ ಬಳಗ ಸಮಾರಂಭದಲ್ಲಿ ನಿನ್ ಮಗ ಕೂಡ ವಾರಗೆಯವರಂತೆ ಒಂದು ಚಂದದ ಕುಟುಂಬದೊಂದಿಗೆ ಸಮಾಜದ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಕಾಣಬೇಕಾದ್ದೂ ಅನಿವಾರ್ಯ ವೇ.. ಅಲ್ಲಿ ಎಲ್ಲರ ಪ್ರಶ್ನೆ ಗಳಿಗೆ ಉತ್ತರಿಸಬೇಕಾದವಳೂ ನೀನೇ ಎಲ್ಲಿಂದ ಎಲ್ಲಿಗೂ ನೀನೇ ನನ್ನ ಜೀವನದ ಬೀಳು ಏಳು ಗಳನ್ನು ಸಹಿಸಿಕೊಳ್ಳಬೇಕಾದವಳು.
ಅಲ್ವಾ
ನಂಗೊತ್ತು ಈಥರ ಫೇಸ್‌ಬುಕ್ ಅಲ್ಲಿ 4 ಜನರಮುಂದೆ ನಾನು ಅಸಹಾಯಕತೆ ಹಂಚಿಕೊಳ್ಳೋದು ನಿಂಗ್ ಇಷ್ಟ ಇಲ್ಲ, ಜನರ ದೃಷ್ಟಿಯಲ್ಲಿ ಚಿಕ್ಕೋನಾಗ್ತೀನಿ, ಬೆಲೆ ಇರಲ್ಲ.
ದೊಡ್ಡಸ್ಥಿಕೆಗಷ್ಟೇ ಈ ಸಮಾಜ ಬೆಲೆಕೊಡೋದು ಆದ್ರೂ ಇರ್ಲಿ, ನೋಡಿಸ್ವಾಮಿ ನಾವಿರೋದು ಹೀಗೆ.
ನಾನೇನು ಕೊಡಬಲ್ಲೆ ನಿನಗೆ..
ನನ್ನ ಯೋಗಕ್ಷೇಮ ನನ್ನ ಸಂತಸದ ಹೊರತು.
ಟೈಂ ಟೈಂ ಗೆ ನೀನ್ ಕರ್ದಾಗ ಬಂದು ಊಟ ತಿಂಡಿ ಮಾಡಿ ಆರೋಗ್ಯ ನೋಡ್ಕೊಂಡ್ ಚೆನ್ನಾಗಿ ಇದ್ರೆ ಸಾಕು ಅಷ್ಟೇ ನೀನ್ ಹೇಳೋದು ಯಾವಾಗಲೂ ಕೆಲಸ ಕೆಲಸ ಕೆಲಸ ಅದನ್ ಮಾಡ್ತಿರ್ತಿಯೋ ಗೊತ್ತಿಲ್ಲ ಪ ನೀನೋಬ್ನೇ ನಾ ಪ್ರಪಂಚದಲ್ಲಿ ಕೆಲಸ ಮಾಡೋದು ಊಟ ತಿಂಡಿ ನಿದ್ದೆ ಗೂ ಮೋಸ ಮಾಡ್ಕೊಂಡ್ ಅನ್ನೋ ನಿನ್ ಖಾರವಾದ ಮಾತಿನ ಹಿಂದೆ ಇರೋ ಸಿಹಿ ಅಕ್ಕರೆ ಕಾಳಜಿ ಗೇ ನಿನ್ನ ಅಮ್ಮ ಅನ್ನೋದು.
ಬೀಳೋದು ಹವ್ಯಾಸ ಆಲ್ಲ ಆಕಸ್ಮಿಕ ಆದ್ರೆ ಜೀವನ ಬರೀ ಇಂಥ ಆಕಸ್ಮಿಕ ಗಳ ಸರಮಾಲೆಯೇ ಆಗಿದೆ ಸಾಂಧರ್ಬಿಕವಾಗಿ ವ್ಯಾವಹಾರಿಕ ವಾಗಿ ಎಲ್ಲದರಲ್ಲು ನನ್ನ ವಾಸ್ತವ ಬೀಳುಗಳೇ ನೀನು ಇನ್ನೆಷ್ಟು ಶಕ್ತಿಯನ್ನು ಒಗ್ಗೂಡಿಸಬೇಕು ನನ್ನ ಸಂತೈಸಲು ದಣಿದಿದ್ದೇನೆ ಅಂತ ಹೇಳ್ಬೇಕಿಲ್ಲ ನಿನಗೆ ಚೆನ್ನಾಗಿ ಗೊತ್ತು ಆದ್ರೆ ನೀನೂ ಅಷ್ಟೇ ಶಕ್ತಿಉಳಿಸಿಕೊಂಡಿರಬೇಕಲ್ಲ.
ದೈಹಿಕ ಮಾನಸಿಕ ಸಾಮರ್ಥ್ಯ ಸಂದರ್ಭ ಕ್ಕೆ ತಕ್ಕಂತೆ ಸಧೃಡವಾಗಿಸಲು ನಿನ್ನ ಆಶ್ರಯದಲ್ಲಿ ಸದಾ ಇದ್ದುಬಿಡಬೇಕು ನೀನೇ ಸರ್ವಶಕ್ತೆ ನನ್ನ ಪಾಲಿಗೆ ಅಂತ ಅನ್ನಿಸುತ್ತೆ. ಆದ್ರೆ ನಾನು 4 ರ ಪೋರನಲ್ಲ 40 ರ ಧೀರನಾಗಿ ಬದುಕು ಕಟ್ಟಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸಲು ಮತ್ತೆ ಕೈ ಹಿಡಿದು ಮೇಲೆತ್ತಲು ನೀ ಪಡುವ ಪಾಡಿಗೆ ಒಂದ್ ಹಾಡಾದ್ರೂ ಮಾಡ್ಬೇಕು ನಿನ್ ಮನಸ್ಸು ಯಾವುದರಲ್ಲಿ ಆನಂದ ಪಡುತ್ತೋ ಅದನ್ನೇ ಮಾಡಿ ನಿನಗೆ ನನ್ನ ಧನ್ಯವಾದ ತಿಳ್ಸ್ಬೇಕು.. ಏನ್ ಕೊಡ್ಲಿ ನಿಂಗೆ ಕಷ್ಟದಲ್ಲಿ ಅಮ್ಮ ಅನ್ನೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.
No comments:
Post a Comment