Thursday, June 19, 2014

ಒಂದಷ್ಟ್ ಲೈನ್ ಹೊಡ್ಯಣ ಅನ್ಸ್ತು ನೀವು ಲೈಕ್ ಹೊಡಿರಿ

ಪ್ರೀತಿಯ ಗಾಢತೆ ತಿಳಿಯಲು ನೆನಪಿಗೆ ಅಳತೆ ಹಾಕು :)

ಮೆಲುಕು ಹಾಕಲು ಹುಣಸೆ ಲಾಲ್ಲಿ ಪಪ್ ಥರ ನೆನಪುಗಳು ಸಲ್ಪ ಸಿಹಿ ಸಲ್ಪ ಹುಳಿ

ಸವಕಲು ನಾಣ್ಯ ಕೂಡ ಬೆಲೆಬಾಳುವ ಲೋಹವೇ , ಉಪಯೋಗ ಅರಿತು ಬದುಕನ್ನು ಉಪಯೋಗಿಸು :) (Y)

ಕಷ್ಟವೋ ನಷ್ಟ ವೋ ನಮ್ಮನ್ನೆಲ್ಲ ಸೃಷ್ಠಿಸುವುದೇ ಬ್ರಹ್ಮ ನ ಹಣೆಬರಹ :P  ಮೈನ್ಟೇನ್ ಕ್ವಾಲಿಟಿ ಇನ್ ಪ್ರೊಡಕ್ಟಿವಿಟಿ ಡಿಯರ್ ಗಾಡ್ ಫಾದರ್ .

ಮನೆಯಲ್ಲೊಂದು ದೇವರ ಕೋಣೆ , ಉಳಿದಲ್ಲೆಲ್ಲಾ ಏನೋ ನಾ ಕಾಣೆ :-O

ದೇವರಾಣೆ ದೇವರಿಗೊಂದು ಸುಳ್ಳು :)

ಹೌದು ಪ್ರತಿಯೊಬ್ಬ ಮನುಜನು ದೇವರ ಪ್ರತಿರೂಪ ಆದರೆ ಕಾಣುವುದು ಅಪರೂಪ

ಟೈಮ್ ಆಯ್ತು ನಾಳೆ ಒಂದಷ್ಟ್ ಬರಿತಿನಿ ನೆನ್ಪಿದ್ರೆ :P

Wednesday, June 18, 2014

"ಕನಸು - ನನಸು"

ಶೀರ್ಷಿಕೆ : "ಕನಸು - ನನಸು"

ಕಂಗಳು ಕಂಡಮೇಲು ಕನಸಲಿ ಬರಲೇಕೆ ನಾಚಿಕೆ
ಕನಸಲಿ ಬಂದಮೇಲೆ ಹೇಳು ಇದೆಯೆ ನಮಗ್ಯಾರ ಅಂಕೆ
ಕಾಡಲೆಂದೇ ಬಂದು ಮರೆಯಾದೆಯ
ಮರೆಯಾಗಬಹುದು ಮರೆಯಲಾರದು .
ಕನಸು - ನನಸು ಎರಡೂ ಒಂದೇ ನೀ ಬಂದು ಹೋದಮೇಲೆ ಹೃದಯಕೆ

-ಅನಿಕೇತನ ಹ್ಯಾಪ್ಪಿ B o Y
ನಾವ್ ಯೆಂಗೆ

ನಸು ನಗುವಿನ ಕಿಸುಕ್ ಕವನ

ನಸು ನಗುವಿನ ಕಿಸುಕ್ ಕವನ ಓದಿ ಮಿತ್ರರೇ

ನಸುಕಿನ ಕನಸಲಿ ನಸುನಕ್ಕವಳಾ ನೀ

ಒಳಗೊಳಗೆ ಕುಳಿತು ಇಡುತಿರಲು ಒಲುಮೆಯ ಕಚಗುಳಿ
ಒಮ್ಮೆಲೆ ಉಕ್ಕಿಬರುವ ಸಂತಸವ ಹೇಳಲಿ ಯಾರಬಳಿ
ಒಟ್ಟಿಗೆ ಬಂದಂತಾಯ್ತು ಹೃದಯದಿ ಛಳಿ ಮಳೆ ತಂಗಾಳಿ
ಒಂದೂ ತಿಳಿಯದೆ ಎಚ್ಛರವಾಗಲು ಬಿಡದೇ ನಿನ್ನ ಅಮಲಿನ ಸುಳಿ

-ಅನಿಕೇತನ ಹ್ಯಾಪ್ಪಿ BO Y

ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ

ಮಿಲನ ಸಿನೆಮಾ ದು ಮದರಂಗಿಯಲ್ಲಿ ಹಾಡು ನೋಡ್ತಿದ್ದೆ ,
ನಾನ್ ಯಾಕ್ ಈ ಥರ ಒಂದು ಹಾಡು ಕಟ್ಟೋ ಪ್ರಯತ್ನ ಮಾಡ್ಬಾರ್ದು ಅನ್ಸಿ ಮೂಡಿದ ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ ರಚನೆಯ ಪ್ರಯತ್ನ

ಬೆರಳಿಗುಂಟು ಉಂಗುರದ ಬಯಕೆ
ಹರಕೆ ಹೊತ್ತ ಮನಸು ಮಾಂಗಲ್ಯಕೆ
ಬಯಸಿ ಬಯಸಿ ಅನುರಾಗಕೆ
ಹೃದಯ ತುದಿಗಾಲಲಿ ನಿಂತಿದೆ ಹೂ ಮಾಲೆ ವಿನಿಮಯಕೆ

ಇಂದ್ರನ ಓಲಗ ಮೀರಿಸೋ ಮದುವೆಯ ಮಂಟಪ
ಗಂಧರ್ವರ ನಾಚಿಸೋ ಮಧುಮಕ್ಕಳ ಸಲ್ಲಾಪ
ಎದೆಯಲಿ ಕಚಗುಳಿ ಬೆರಳಲಿ ರಂಗೋಲಿ
ಗಡಿಬಿಡಿ ಅವಸರ ಸಂತಸ ಸಡಗರ
ವಿಷೇಶವಾಗಿ ಇಳೆಗೆ ಇಳಿದ ಸ್ವರ್ಗವೆ ಎಲ್ಲೆಲ್ಲು ಬರೀ ನಗುವೇ

ನಾಚುವ ಹೊಸ ಪರಿ ಬೆರೆಯಲು ತರಾತುರಿ ಬೆಡಗಿನ ರಸಮಂಜರಿ
ನೋಡಲು ಈಸಿರಿ ಬಂದಿದೆ ಬಳಗವೆ ಸಾಗಿ ಸಗಿ ನೂರು ದಾರಿ

ತಾಳ ಮೇಳ ಮಂಗಳವಾದ್ಯಕೆ ಸಖಿಯರ ಬಿನ್ನಾಣಕೆ
ಅಂದ ಚಂದ ನಾಚಿಕೆ ಗೆಳೆಯರೊಳಗೆ ಹೊಸ ಹವಣಿಕೆ
ಬಂಗಾರದ ಭಾರಕೆ ಬಳುಕಿ ಬಳುಕಿ ಅತಿಯಾದ ಹೊಗಳಿಕೆಗೆ
ಜಾರುವಸೆರಗಿಗೆ ಸರಿಯಾಗದು ನೂರುಬಾರಿ ತೀಡಿದರು ನೆರಿಗೆ

ಮರುಳುಮಾಡೊ ಸನ್ನೆಯನೋಟ ಮನಸುಸೆಳೆವ ಮಾತಿನ ಮಾಟ
ಜಾರಿ ಬೀಳೊ ಹಳ್ಳದ ಕಡೆಗೆ ಹೂವಿನ ಮೆತ್ತೆಯ ಮೇಲೇ ನಡೆದಾಟ

like ಅಯ್ತಾ friends
-ಅನಿಕೇತನ ಹ್ಯಾಪ್ಪಿ BOY

ವಿಧಿಗೊಂದು ಸೂತ್ರ

ಸಂಧರ್ಭಕ್ಕೆ ಹೊಂದುವ ಗೀತೆಗಳ ರಚನೆಯ ಪ್ರಯತ್ನದಲ್ಲಿ ಓದಿ ಬಳಸಬಹುದಾದಲ್ಲಿ ಬಳಸಿಕೊಳ್ಳಿ

ವಿಧಿಸು ವಿಧಿಗೊಂದು ಸೂತ್ರ
ವಿವರಿಸು ಜೀವದ ಪಾತ್ರ
ವಿಪರೀತ ವೈಚಿತ್ರ್ಯ
ವಿಶಾದಾ ಚಾರಿತ್ರ್ಯ
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೂಬಳ್ಳಿಯ ಮುಳ್ಬೇಲಿ ಮೇಲೇಕೆ ಇಟ್ಟೇ
ಹೂವಲ್ಲಿ ಆ ಅಂದವ ಯಾಕೇ ಕೊಟ್ಟೆ ನೀ ..
ಹೂನಗುವೇ ಶಾಪವೇ ಆನಗುವಿಗೇ ಮರುಳಾದೆನೇ
ತಪ್ಪೇ ಆಕರ್ಷಣೇ ಯಾಕೇ ಈ ಶೋಧನೇ ವಿವರಿಸಲಾಗದ ವೇದನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೊಗೋ ದಾರೀಲಿ ಹೂ ಕಂಪ ಜೊಂಪಲ್ಲಿ
ಹೇಗೋ ಮೈಮರೆತ ಕ್ಷಣದಲ್ಲಿ ನೀ ..
ಹೊವಿದೇ ಮುಳ್ಳಲಿ ನರಳದಿರು ನೋವಲಿ
ತಂಗಾಳಿ ಮೈ ಮರೆಸೋ ಮುನ್ನ ಬಿರುಗಾಳಿ ಹೊತ್ತುಹೋಯ್ತೆ ಹೂವನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

- ಅನಿಕೇತನ ಹ್ಯಾಪ್ಪಿ B Y

ಚಿಂತನ-ಕವನ

ಪುಟ್ಟದೊಂದು ಚಿಂತನ-ಕವನ
ನಮ್ಮನು ಜಗತ್ತಿಗೆ ಗೋಚರಿಸುವಂತೆ ಮಾಡುವ ನಿಸ್ವಾರ್ಥ ಸೇವೆಗೆ ಹೆಸರು ಬೆಳಕು

ನೀ ಇದ್ದರೆ ನಿನ್ನನು ತೋರುವುದು ಬೆಳಕು
ನೀ ತೊರೆದು ಎಲ್ಲ ಅಳುಕು ನಡೆದರೆ ಸಾಕು ಕಾಣುವತ್ತ ಬೆಳಕು
ನೀ ಕಲ್ಲಾದರು ಸಾಕು ಮಿನುಗಿಸಬಲ್ಲದು ನಿನ್ನನು ಬೆಳಕು
ನೀ ನಿಧಿ ನೀ ವಾರಿಧಿ ನೀ ನಿನ್ನ ಎಲ್ಲಾ ವರದಿ ಬಹಿರಂಗ ಗೊಳಿಸುವುದೇ ಬೆಳಕು
ನೀ ಇದ್ದಂತೆ ತೋರುವುದು ನೀ ಕೊಳಕೋ ಹುಳುಕೋ ಥಳುಕೋ ಬೆಳಕು ಹರಿವನಕ ಮುಸುಕು ಎಲ್ಲಾ ಮಸುಕು

-ಹೆಸರು ಬೇರೆ ಬೇಕೆ : ) ಸರ್ವವ್ಯಾಪಿ ಬೆಳಕೆ

yakara bidvappa Androidige nemdi haalagoythu cell phonige

Mobile alli whatsapp Install maadi Message galige hedaridodentaiyya

yakara bidvappa Androidige nemdi haalagoythu cell phonige
hengo saakagittu SMS gale , nodi shuru aythu whatsapp ragale
time alli bejaru kaliyoke walkamannu saakittu swamy
life alli beddene iruve bittukollodu bekitta swamy

cellphone madda martin cooper ge Androidu gottirlilla nodi
aaga android iddidre cooper ee tappu madtirlila bidi
Androide devolppu aagdiddare chennagi irutitte ee Lokave
memory fullagi mobilu hyangaadaga pralayaane swamy
networku ildidre data workaagdidre ellaru dammi

yaakaara biddvappa Androidige

FB BB whatsapp hiku wechatu Mobile na kothi bonu
beku bekanta hakkondu manga agivi artha agilla innu
billu bandaga currentu hodyodu gyarenty swamy
recharge kasilde byatry downagidru chatu nillalla swamy

yaakaara biddvappa androidige ..

hmmm
msg mele msg anta madkollor ondkade aadre, msg lilla anta bejar madkollor ondkade .
network haalag hoga Mobile ge virus bandu ekkuttoga ottalli 1100 shapa ivella

ಪಂಚಿಂಗ್ ಲೈನ್

ಬಿಟ್ಟಿಯಾಗ್ ಗಟ್ಟಿಯಾಗಿ ಒಂದಷ್ಟು ಪಂಚಿಂಗ್ ಲೈನ್ ಬರ್ತಿವೆ ಓದ್ಕೊಳ್ಳಿ.. ಎಂಜಾಯ್

ಸ್ನೆಹ ಪ್ರೀತಿ ಬೇಡ ಅಂದ್ರು ಸಿಗೊ ಬೈ ಒನ್ ಗೆಟ್ ಒನ್ ಆಫರ್, ಬಿಲ್ಲು ಭಾರೀ ನೇ ಕಡ್ಮೆ ಇಲ್ಲ ಸೊ ಎಂಜಾಯ್

ಸ್ನೆಹ ನೀ ನೌಕರಿ ಇಂದ ವಜಾಗೊಳಿಸುವ ಮೊದಲೇ ನನ್ನ ರಾಜಿನಾಮೆ ತಯಾರಿದೆ ,
ಪ್ರೀತಿ ಇಂದ ರಾಜಿ ಯಾಗೋಣವೇ

ಸ್ವಾಭಿಮಾನ ಒಂದೇ ಆರ್ಡರ್ ಮಾಡಿದರು ಅಭಿಮಾನ ಜೊತೆಕೂತು ಬೈ ಟೂ ಮಾಡು ಅಂತಿದೆ

ಪ್ರೀತಿ ಅತಿಯಾಯ್ತು ಎಲ್ಲಾ ಮರ್ತೋಯ್ತು ನಿನ್ಗೆ ನೋವಾಗುತ್ತೆ ಅನ್ನೋದು ಸಹಾ

ನೀನ್ ಸೈಲೆಂಟಾಗಿದಿಯ ಅಂದ್ರೆ ನನ್ ಮಾತು ಅಂದ್ರೆ ನಿನ್ಗ್ ಇಷ್ಟ ಅಂತ ತಾನೆ ಅರ್ಥ

ಎಲ್ಲಾ ನಾನೆ ಅರ್ಥ ಮಾಡ್ಕೊಂಡು ನೀನ್ ಮಾತಡಲ್ಲ ಅಂದ್ರೆ ತಪ್ಪು ನಂದೇ ಅಲ್ವ

ಬೇಡ ಬಿಡು ಬೇಡ ಬಿಡು ಹೂ ನಾನು ಅದೇ ಹೇಳ್ತಿರೊದು ಬೇಡಾ ಬಿಡು ಕೋಪ, ನನ್ ಜೇಬಿಗೆ ಒಳ್ಳೇದಲ್ಲ

ಇನ್ನೂ ಇದೆ ...

ನನ್ನ ಕೋರಿಕೆ

ನಿನ್ನ ಲವಲವಿಕೆ ನನ್ನ ಎಲ್ಲ ನೊವುಗಳಿಗೆ ಅರೆವಳಿಕೆ
ನಿನ್ನ ಆರೈಕೆ ನನ್ನ ಕನಸುಗಳ ಕನವರಿಕೆ
ನಿನ್ನ ನೇವರಿಕೆ ನೆರವೇರದ ಮುಗ್ದ ಬಯಕೆ
ನಿನಗೆ ಆಗುವುದೆಂತು(ದು) ಮನವರಿಕೆ
ನನ್ನ ಕೋರಿಕೆ
-ಹ್ಯಾಪ್ಪಿ BO Y

ಜ್ಞಾನಿ ಎಂದರು.

ಓದುಗನಿಲ್ಲದ ಬರಹ
ಕೇಳುಗನಿಲ್ಲದ ಹಾಡು
ನೋಡುಗನಿಲ್ಲದ ಅಂದ
ಅರಿವಿಗೆ ಬಾರದ ಪ್ರೀತಿ

ತನ್ನ ಇರುವನ್ನು ಶಪಿಸುವುದ ಕಂಡು, ಪರಿಹಾರ ತಿಳಿಯದವರು
ಈ ಲೋಕವೆಲ್ಲ ಒಂದು ಮಾಯೆ ಇದೆಲ್ಲವನು ಮೀರಿದವನು ಜ್ಞಾನಿ ಎಂದರು.

ಹೃದಯ ಬಿಡಿಸಲಾರದ ಪಝಲ್ ನಿನ್ನ ಈ ಗಜಲ್

ಪುಟ್ಟದೊಂದು ಸುಪರ್ ಹಿಟ್ ಪದ್ಯ ಓದಿ ಆನಂದಿಸಿ

ಹೃದಯ ಬಿಡಿಸಲಾರದ ಪಝಲ್ ನಿನ್ನ ಈ ಗಜಲ್

ಮೌನಂ ಸಮ್ಮತಿ ಲಕ್ಷಣಂ , ನಿನ್ನ ಮೌನದ ಅರ್ಥವೇನು ಹುಡುಗಿ
ಹೇಳಿಬಿಡು ಹುಡುಗಿ ಅರ್ಥ ಅಪಾರ್ಥ ವಾಗಿ ಅನರ್ಥವಾಗಿ ಜೀವನ ವ್ಯರ್ಥವೆನಿಸುವಮುನ್ನ ,

ಮುನಿಸಿಲ್ಲದ ಅ ನಿನ್ನ ಮನಸಲ್ಲಿ ಬೆರೆಸಿಬಿಡು ಈ ನಗುವನ್ನು
ಮರೆಸಿಬಿಡು ನನ್ನನ್ನು

ಚೆಂದದ ಹೊಂಗನಸೊಂದು ಸುಂದರವಾದ ಬದುಕಿನ ಸೂಚನೆ ನೀಡಿದೆ
ನಿಜವೆ ನಾ ಕಂಡ ಕನಸು

ವಿನೋದಕೊಂದು ಹೆಸರಿಡು ಸಲ್ಲಾಪಗಳಿಗೆ ನೀನೇ ಉಸಿರು
ವಿಚಾರ ಮಾಡು

ಮೌನಂ ಸಮ್ಮತಿ ಲಕ್ಷಣಂ , ನಿನ್ನ ಮೌನದ ಅರ್ಥವೇನು ಹುಡುಗಿ

-ಅನಿಕೇತನ ಹ್ಯಾಪ್ಪಿ B Y

ಒಲವಿನಲಿ ಎಲ್ಲಾ ಸರಿ

ಎಂದಿನಂತೆ ಮನಕಂಡಂತೆ
ನಿನ್ನ ಅಂದಕೊಂದು ಚೆಂದಕೊಂದು ಮುತ್ತಿನಂಥ ಪದಗಳ ಈ ಕಾಣಿಕೆ , ಓದಲು ನಗಬಹುದು ತುಸು ನಾಚಿಕೆ Enjoy u

ಚಂದಿರನ ಊರಿಂದ ಸಿಂಗರಿಸಿ ಭುವಿಗಿಳಿದ ಬೆಳದಿಂಗಳ ಸೋದರಿ
ಏನೆಂದು ಬಣ್ಣಿಸಲಿ ಬಾನಂಗಳದ ವೈಖರಿ ನೀ ಎದೆಯಂಗಳದ ಐಸಿರಿ
ಹೆಚ್ಚೆಂದರೆ ತುಸು ಹುಚ್ಚಾಗ ಬಹುದೇ ಸರಿ
ಈ ಮಿತಿಮೀರಿದ ಗಾಬರಿ
ಕಣ್ಣೆವೆಯ ನಾ ಹಾಕದೆ ನೋಡಿದರು ಸಾಕಾಗದೇ
ಏಕಾಂತವೇ ಕೆಳು ಹೃದಯಗಳ ಕುಶಲೋಪರಿ
ಒಲವಿನಲಿ ಎಲ್ಲಾ ಸರಿ

ಆನಿನ್ನಾ ಆಗಮನಕೇ ಅಣಿಯಾಯ್ತೆ ಸ್ವಾಗತಕೆ
ಉಸಿರಿನಲಿ ಹೊಸ ಆಲಾಪವು ಹೃದಯದಲಿ ಅನುರಾಗವು
ಏನೋ ಸಂಭ್ರಮ ಏನೋ ಸಡಗರ ಹಬ್ಬವಿದು ಎದೆಯಲಿ ಒಂಥರ
ಸಿಹಿಯಾದ ಸವಿಮಾತ ತಿನಿಸೊಂದಿದೆ
ಸವಿಯಾದ ಔತಣವಿದೇ...

ದಣಿದಿರುವೆ ಯಾ ತುಸು ಅಣಿಸಲೇನು ತಂಗಾಳಿಯನು..
ತುಸು ವಿರಮಿಸುನೀ ಈ ತೋಳಲೀ..
ಒಲವಿನಲಿ ಎಲ್ಲಾ ಸರಿ

ಕನಸಿನರಮನೆಯೆ ನಿಂದು ಇಲ್ಲುಂಟು ನೀ ಬೇಕೆಂದು ಬಯಸಿದ್ದು
ಇರುಳಿರಲಿ ಹಗಲಿರಲಿ ಸಲ್ಲಾಪ ಸಾಗಿರಲಿ
ಆ ಸ್ವರ್ಗ ಕೂಡಾ ತುಸು ಕಂಗೆಟ್ಟು ಅನಿಸಿದೆ ಮಾಸಲು
ನೀ ನಿಲ್ಲಿ ಕಂಗೊಳಿಸಲು
ಹುಸಿಕೋಪದಲ್ಲು ಹೊಂಬಣ್ಣ ರಂಗೇರಿದೆ ಈ ಎದೆಗೂಡು ಬೆಳಕಾಗಿದೆ

ಮನಸಲ್ಲಿ ಬಯಸಿದ್ದು ನಿಜವೆಂದು ಅರಿವಾಗಲಿ
ಈ ಕನಸೆಲ್ಲ ನನಸಾಗಲಿ
ಒಲವಿನಲಿ ಎಲ್ಲಾ ಸರಿ

ಚಂದಿರನ ಊರಿಂದ ಸಿಂಗರಿಸಿ ಭುವಿಗಿಳಿದ ಬೆಳದಿಂಗಳ ಸೋದರಿ
ಏನೆಂದು ಬಣ್ಣಿಸಲಿ ಬಾನಂಗಳದ ವೈಖರಿ ನೀ ಎದೆಯಂಗಳದ ಐಸಿರಿ

-ಬೇಸರ ಕಳೆಯಲೆಂದೇ ಜನ್ಮತಳೆದೆ
ಭಾವನೆಗಳ ತಂಟೆಕೋರ ಹ್ಯಾಪ್ಪಿ BOY

ಬೊಂಬೆಯಾಗ ಬಾರದಿತ್ತೆ

ಬೊಂಬೆ ಆಡ್ಸೋನು ಮ್ಯಾಲೆ ಕುಂತೋನು ನಮ್ಗೆ ನಿಮಗೆ ಯಾಕೆ ಟೆನ್ಶನ್ನು
ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ಬೊಂಬೆಯಾಗ ಬಾರದಿತ್ತೆ ನೀನು
ಬೊಂಬೆಯಾಗ ಬಾರದಿತ್ತೆ ನೀನು
ಎಷ್ಟಾದರಾಗಲಿ ಕೊಂಡೊಯ್ಯುತಿದ್ದೆ
ಕೊನೆಗೆ ಕದ್ದೊಯ್ಯಬಹುದಿತ್ತೇ ನೋ... : )
ನೀ.. ನೋ ಎನ್ನುವಂತಿರಲಿಲ್ಲ ನೀ ನೋಯುವಂತಿರಲಿಲ್ಲ
ನಿನ್ನ ನಗುಮಾಸುತ್ತಿರಲಿಲ್ಲ ಮುಖ ಕಳೆಗುಂದುತಿರಲಿಲ್ಲ

ಹೃದಯವನ್ನೆ ಮುಡಿಪಿಟ್ಟರೂ
ಪ್ರೀತಿಯನೆ ತೆತ್ತರೂ
ನೀ ಕ್ಯಾರೇ ಎನ್ನುವಂತೆ ಕಾಣುತ್ತಿಲ್ಲ ,
ನಿನಗೆ ತಿಳಿದ ಸತ್ಯ ನನಗೆ ಅರ್ಥವಾಗಿರಲಿಲ್ಲ
ಜೀವನ ಬೊಂಬೆಯಾಟವಲ್ಲ
ಜೀವನ ಬೊಂಬೆಯಾಟವಲ್ಲ

ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸೈಯ್ಯಾ
like . comment . share

ಚಾಯ್ with ಹ್ಯಾಪ್ಪಿ B :) Y

ಒಂದು ಶೋ ಮಾಡಣ ಅಂತಿದ್ದೀನಿ, ತುಂಬಾವರ್ಷಗಳ ನಂತರ RJ ಆಗೋ ಆಸೆ ಮತ್ತೆ ಬರ್ತಿದೆ ,
" ಚಾಯ್ with ಹ್ಯಾಪ್ಪಿ B Y "

ಬುದ್ದ ಅಲ್ದೇ ಹೋದ್ರು ಬುದ್ದಿ ಕೈ ಲಿ ಇರ್ತಿತ್ತು , ಪೆದ್ ಪೆದ್ದಾ ಗಿ ಆಡೋ ಮನ್ಸು ಮಕ್ಕಳ ಥರ ಹಠ ಮಾಡೋಕೆ ಕಲಿಯೋದೆ ಈ ಪ್ರೀತಿ ಶುರು ಆದಾಗ.

ನಮ್ ಪಾಡಿಗ್ ನಾವಿದ್ದಾಗ ಲೈಫ್ ಅಲ್ಲಿ ತಂಬಾ ಕಾನ್ಫಿಡೆಂಟ್ ಹಾಗಿದ್ದಾಗ ಯಾರು ಬೇಕಾಗಿರಲ್ಲ ಏನ್ ಆದ್ರು ಏನ್ ಹೋದ್ರು ನಾವ್ ಕೇರ್ ಮಾಡಲ್ಲ ನಮ್ಗೆ ಹೇಗೆ ಇಷ್ಟ ಹಾಗೆ ಬೆರೆಯವ್ರ್ ಜತೆ ಮಾತಾಡ್ತಿವಿ .
ಅದೆ ನಮಗೆ ಯಾರಾದ್ರು ಬೇಕು ಅನ್ನಿಸ್ ದಾಗ ಅದೇ ಕಾನ್ಫಿಡೆನ್ಸ್ ಸ್ವಲ್ಪ ಸ್ವಲ್ಪ ಕಡ್ಮೆ ಆಗ್ತಾ ಬರುತ್ತೆ , ಏನೇ ಮಾಡೋ ಮಾತಾಡೊ ಮೊದ್ಲು ಯೋಚ್ನೆ ಮಾಡ್ಬೇಕು ಅನ್ಸುತ್ತೆ ಏನ್ ಆಗುತ್ತೋ ಏನ್ ಹೋಗುತ್ತೊ ಸಿಗೋ ಮುಂಚೇನೆ ... ಕಳ್ಧೋದ್ರೆ ಏನು , ಆಮೇಲೆ ಹೇಗೆ , ಇದು ತಪ್ಪಾ ಸರಿನಾ ಅನ್ನೋ... ದೂ(ದು)ರಾಲೋಚನೆ ಶುರು ಆಗುತ್ತೆ , ಇಲ್ಲದೇ ಇರೊ ಏನೋ ಆತಂಕ
ಮಾತಾಡ್ಬೇಕೋ ಬೇಡ್ವೋ ಕಡ್ಮೆನೋ ಜಾಸ್ತಿನೋ ಒಳ್ಳೇದೋ ಕೆಟ್ಟದ್ದೋ ಇಷ್ಟೆಲ್ಲಾ ಯೋಚ್ನೆ ,
ಹೋ... ಬನ್ರಪ್ಪಾ ಟೀ ಕುಡಿಯೋಣ ಲೈಫು ಈಗ್ಲೆ ಬೊಂಬಾಟ್ ಆಗಿದೆ ಮಜಾ ತಗೋಳಕ್ ಹೋಗಿ ದೊಂಬರಾಟ ಆದ್ರೆ ಕಷ್ಟ

ಬುದ್ದ ಅಲ್ದೇ ಹೋದ್ರು ಬುದ್ದಿ ಕೈ ಲಿ ಇರ್ತಿತ್ತು , ಪೆದ್ ಪೆದ್ದಾ ಗಿ ಆಡೋ ಮನ್ಸು ಮಕ್ಕಳ ಥರ ಹಠ ಮಾಡೋಕೆ ಕಲಿಯೋದೆ ಈ ಪ್ರೀತಿ ಶುರು ಆದಾಗ ಏನಂತೀರ

ಬನ್ನಿ ಟೀ ಕುಡಿಯೋಣ ಎಂಜಾಯ್
ಚಾಯ್ with ಹ್ಯಾಪ್ಪಿ B :) Y
- ನಿಮ್ಮ ಅನಿ ಭಾವನೆ ಗಳಾ ತಂಟೆಕೋರ .

ಇವತ್ತೇ ಮನೆಗ್ ಹೋಗಿ ಈ ಸ್ಕ್ರಿಪ್ಟ್ ರೆಕಾರ್ಡ್ ಮಾಡ್ತಿನಿ ಚೆನ್ನಾಗಿದೆಯಾ ...

ಕವಿಯಲ್ಲ ನಾನು ಎಂದರೂ ಬರೆಸದೇ ಬಿಡುವುದಿಲ್ಲ ನೀನು ;)

ನಿದ್ದೆ ಬಂದಿಲ್ವ ಫ್ರೆಂಡ್ಸ್.. ನನ್ಗು ಬಂದಿಲ್ಲ
ಹ್ಮ್ ಓದಿ ಖುಷಿ ಕೊಡುತ್ತೆ

ಕವಿಯಲ್ಲ ನಾನು ಎಂದರೂ ಬರೆಸದೇ ಬಿಡುವುದಿಲ್ಲ ನೀನು

ಅದೆಷ್ಟು ಒಲವು ನಿನಗೆ ನೀ ಬರೆಸೊ ಪದಗಳ ಮೇಲೆ
ಅದೆಷ್ಟು ಒಲವು ನಿನಗೆ ನೀ ಬರೆಸೊ ಪದಗಳ ಮೇಲೆ
ವರಿಸಲು ಕಾದಿದೆ ಹೃದಯ ಹಿಡಿದು ಒಲವಿನ ಮಾಲೆ
ವರಿಸಲು ಕಾದಿದೆ ಹೃದಯ ಹಿಡಿದು ಒಲವಿನ ಮಾಲೆ
------------------------------------------

ನನ್ನವಳ ನೋಡಲು ಮರೆಯಲೆ ಇಣುಕುವೆ ಏಕೆ
ನನ್ನವಳ ನೋಡಲು ಮರೆಯಲೆ ಇಣುಕುವೆ ಏಕೆ
ಮೋಡಗಳು ತಾಗಿ ಎಡವಿಬಿದ್ದೀಯೆ ಜೋಕೆ
ಮುಜುಗರ ಬೇಡ ತಳಮಳ ಬೇಡ ನೋಡಿ ನಡೆ

ಅವಳುಂಡು ಉಳಿಸಿದ ಹಾಲ ಬಟ್ಟಲು ನೀನು
ಅವಳುಂಡು ಉಳಿಸಿದ ಹಾಲ ಬಟ್ಟಲು ನೀನು
ಅವಳೊಮ್ಮೆ ನಸುನಗಲು ಮಾಸಿ ಹೋಗುವೆ ನೀನು

ಅವಳಂದ ಚಂದದ ಮಾತೇಕೆ ಸಾಟಿಯಲ್ಲ ನೀ ಅವಳ ಕಿರು ನೋಟಕೆ

ನಿನ್ನ ನೋಡಲು ಪುಟ್ಟ ಕಂದನ ಕೇಕೆ ತಿಳಿಯದೇ., ಏಕೆ ?
ನಿನ್ನ ನೋಡಲು ಪುಟ್ಟ ಕಂದನ ಕೇಕೆ ತಿಳಿಯದೇ., ಏಕೆ ?
ನನ್ನ ನು ನೆನೆದು ನನ್ನವಳು ನಿನ್ನನ್ನು ಶಪಿಸಿದ್ದಕ್ಕೆ

{ ಚಂದಮಾಮ ನಿಗೆ :) }
----------------------------------------------

-ಅನಿಕೇತನ ಹ್ಯಾಪ್ಪಿ B :) Y

ಆಯ್ಕೆ ನಿಮ್ಮದು :)

ಜೀವನ್ದಲ್ಲಿ :
ಟೈಂ ಪಾಸ್ ಮಾಡ್ಬೇಕು ಅಂದ್ರೆ ಸುಳ್ಳು ಹೇಳಿ
ಟೈಂ ಸೇವ್ ಮಾಡ್ಬೇಕು ಅಂದ್ರೆ ನಿಜ ಹೇಳಿ

ಜೀವನ ನಿಮ್ಮದು ಆಯ್ಕೆ ನಿಮ್ಮದು :)

ಹುಚ್ಚುತನವಲ್ಲದೆ ಮತ್ತೇನು .. ?

ಎಲ್ಲರಂತೆ :
ಎಲ್ಲರಂತೆ ನೀನು ಎಲ್ಲರಂತೆ ನಾನು
ಆದಾಗ್ಯೂ
ನನ್ನೋಳಗೊಬ್ಬ ನಾನು ನಿನ್ನೊಳಗೊಬ್ಬ ನೀನು

ನೀ ನನ್ನ ನಾ ನಿನ್ನ ಎಷ್ಟು ವಿಶೇಷ ವಾಗಿ ಕಾಣೋಕೆ ಇಷ್ಟಪಡ್ತಿವಿ

ಹುಚ್ಚುತನವಲ್ಲದೆ ಮತ್ತೇನು .. ? :)

Tuesday, February 11, 2014

ಪ್ರೀತಿಯ ಇರಿತ, ಮನಸು ಈಗ.. ಜರ್ಝರಿತ

ಥಟ್ ಅಂತ ಗೀಚಿದ್ದು ಹೇಗಿದೆ  ಓದಿ ಹಾಡಿ ಗುನುಗಿ ಹೇಗಿದೆ ಹೇಳಿ

ಓ ಪ್ರಿಯಾ ನನ್ನಾ ಪ್ರಿಯಾ
ಅನುಕ್ಷಣವು ಕಾಡಿ ಅತಿಯಾದ ರೂಢಿ ವಿಸ್ಮಯ
ನಿನ್ನಯಾ ನಿರೀಕ್ಷೆಯಾ
ಪ್ರತಿ ಘಳಿಗೆಯಲ್ಲು ಹೊಸದಾದ ನನ್ನ ಪರಿಚಯ "ಪಲ್ಲವಿ"

ಹೃದಯವಾ ಗೆಲ್ಲೊ ಸ್ವಾರ್ಥದೀ ಕೊಲ್ಲೊ ಪ್ರೀತಿಯ ಇರಿತ
ಮನಸು ಈಗ.. ಜರ್ಝರಿತ
ಮನಸು ಈಗ... ಜರ್ಝರಿತ " ಅನುಪಲ್ಲವಿ"

ಚರಣ 1
ರಾತ್ರಿಯ ಪಾಳಿಯ ನನ್ನ ಕನಸುಗಳು
ಕಂಡ ಕಲ್ಪನೆಗಳೇ ಪುರಾವೆಗಳು
ಕಾಣಲೂ ಕಾದಿರುವ ಈ
ಕಣ್ಣಮುಂದೆ ನಿಲ್ಲು ಅಪರೂಪದಾ ಒಲವ ಶಿಲ್ಪವಾಗಿ

ಹೃದಯದೀ ಚೆಲ್ಲೊ ಪ್ರೀತಿಯ ಹೊನಲು
ಪಸರಿಸಿದಲ್ಲೆಲ್ಲೂ ಕಂಡೇ ಸಂಪ್ರೀತಿಯಾ ಮಜಲು "ಅನುಪಲ್ಲವಿ"

ಚರಣ2
ಪಾರಾಗೋ ಬಗೆ ಹೇಳು ಬಂಧಿಯಾಗಿರಲು
ವಿರಹದಾ ಸೆರೆ ಬಿಡಿಸಿ ನೀ ಆಸರೆನೀಡು
ನಿನ್ನಯ ಸಹಚಾರಿಯಾ
ಸಹವಾಸ ನೀಡು ನಿಜ ಮಾಡು ನನ್ನ ಸವಿಸಂಶಯ

ಉದಿಸುಬಾ ಎದೆಯ ಬೆಳಗುವ ಶಶಿಯು ನೀ ಚಂದ್ರಮುಖಿಯಾಗಿ
ನನ್ನಾ ಪ್ರಾಣಸಖಿಯಾಗಿ.. "ಅನುಪಲ್ಲವಿ"

ಓ ಪ್ರಿಯಾ ನನ್ನಾ ಪ್ರಿಯಾ ..

-ಅನಿಕೇತನ ಹ್ಯಾಪ್ಪಿ B  Y
 — feeling hopeful.

Friday, February 7, 2014

ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ


ತುಂಬಾದಿನಗಳಿಂದ ಕಾಡುತಿದ್ದ ಪ್ರಶ್ನೆ
 ನಾವೆಲ್ಲ ಶಾಲೆಗಳಲ್ಲಿ ಕಲಿತಂತೆ ಪ್ರಪಂತದ ಎಲ್ಲ ಭಾಗದ ಜನರಿಗೆ ಎನುಕೂಲವಾಗಲಿ ಎಂದು  ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆಫ್ ಯುನಿಟ್ಸ್ ಬಳಕೆ ಜಾರಿಗೆ ಬಂತು ಇದು ಅಳತೆ ಮಾಪನಕ್ಕೆ ಸಂಭಂಧಿಸಿದಂತೆ ಆದರೆ ವಾಣಿಜ್ಯ ಕ್ಷೇತ್ರದಲ್ಲೂ ಯಾಕೆ ಈ ವಿಧಾನ ಅನುಸರಿಸಲಿಲ್ಲ , ಕಾರಣ ಏಕರೂಪದ ಕರೆನ್ಸಿ ನೋಟುಗಳು ಏಕ ರೂಪದವಾದ ವಾಣಿಜ್ಯವಹಿವಾಟಿನಿಂದ ಬಂಡವಾಳಶಾಹಿಗಳಿಗೆ ಆಗುವ ನಶ್ಟ !! ಹೌದು ಇದೇ ಕಾರಣ
ಪ್ರಪಂಚದ ಎಲ್ಲ ಭಾಗಗಳಲ್ಲೂ ರೂಪಾಯಿ ಒಂದನ್ನೇ ಬಳಸಿ ಅವಾಗ ಎಲ್ಲ ಸರಿಹೋಗುತ್ತೆ
ಒಂದು ಕಿಲೋ ಅಕ್ಕಿಗೆ ಅಮೇರಿಕಾದಲ್ಲು ಒಂದೇ ಬೆಲೆ ಭಾರತದಲ್ಲು ಒಂದೇ ಬೆಲೆ , ಗೊತ್ತು ಮುಂದೆ ಏನು ಪ್ರಶ್ನೆ ಅಂತ ಸಾಗಣೆ ವೆಚ್ಚ ಅದು ಆಮದು ರಪ್ತು ನೀತಿಯಲ್ಲಿ ಸರಿಪಡಿಸಲಿ ಪೆಟ್ರೋಲ್ ಪ್ರಪಂಚದ ಎಲ್ಲ ಭಾಗದಲ್ಲೂ ಒಂದೇಬೆಲೆ ಆಗಲಿ ಸಾಗಣೆವೆಚ್ಚ ಹೊರತುಪಡಿಸಿ ಇದು ಸಾದ್ಯವಾ ಇಲ್ಲಾ ... ಹಾಗಿದ್ದಲ್ಲಿ ಪ್ರಪಂಚದ ಎಲ್ಲ ಭಾಗದಲ್ಲಿ ಒಂದೇ ಮಾಪಕ ಏಕೆ?

ಬೇಡಾ ನಮ್ಮ ಉತ್ಪನ್ನಗಳನ್ನ ನಮ್ಮ ಮಾರುಕಟ್ಟೆಯಲ್ಲಿ ನಮ್ಮದೇ ಆದ ಮಾಪನದಲ್ಲಿ ಮಾರುತ್ತೇವೆ ಅದರ ಬೆಲೆ ತೆತ್ತು ಕೊಂಡುಕೊಳ್ಳಿ ಎಂದು ಬೇರೆಯವರಿಗೆ ಹೇಳುವ ಮಟ್ಟಕ್ಕೆ ನಾವು ಬೆಳೆಯಬೇಕು ,ಪ್ರಸ್ತುತ ಪರಿಸ್ತಿತಿಯಲ್ಲಿ ಅದು ಅಸಾದ್ಯ ಆದರೆ ಅನಿವಾರ್ಯ, ಅವರ ಅಳತೆಗೋಲಿಗೆ ನಮ್ಮ ನಮ್ಮಪದಾರ್ಥ ಅವರುಗಳು ನಿರ್ಧರಿಸಿದ ಡಾಲರ್ ಬೆಲೆ ಇದ್ಯಾವ ನ್ಯಾಯ?
ಇದಕ್ಕೆಲ್ಲ ಕಾರಣ ಪರಾವಲಂಬನೆ , ಪರಾವಲಂಬನೆ ಅನ್ನುವುದಕ್ಕಿಂತ ನಮ್ಮಲ್ಲಿರುವ ಹಿಂಜರಿಕೆ ನಮ್ಮ ಬೆಲೆಯನ್ನ ಬೇರೆಯವರು ನಿರ್ಧರಿಸಲು ಅವಕಾಶ ಕೊಟ್ಟಿರುವುದು
ಜಾಗತಿಕ ಮಾರುಕಟ್ಟೆಯ ದುಷ್ಪರಿಣಾಮ ಕಿಲೊ ಲೆಕ್ಕದಲ್ಲಿ ಅಳತೆಯಾಗುತ್ತಿರುವ ಹಣ್ಣುತರಕಾರಿಗಳು ಅಧಿಕ ಬೆಲೆ ತೆರಬೇಕಾದ ಗ್ರಾಹಕರು ನಷ್ಟ ದಲ್ಲೇ ಇರುವ ಬೆಳೆಗಾರ / ಉತ್ಪಾದಕ ಲಾಭಪಡೆಯುತಿರುವ ಮಾರುಕಟ್ಟೆ .
ಚಿಂತನೆ ಚರ್ಚೆ ಗಳು ಈ ನಿಟ್ಟಿನಲ್ಲಿ ಆದರೆ ನಮ್ಮ ಉತ್ಪನ್ನಗಳನ್ನು ಪುಷ್ಠೀಕರಿಸುವ ತುಷ್ಠೀಕರಿಸುವ ಹೊಸ ಹೊಸ ಯೋಜನೆಗಳು  ಜಾರಿಯಾದರೆ ನಮ್ಮ ವಾಣಿಜ್ಯ ಮಾರುಕಟ್ಟೆ ಅಸ್ಥಿತ್ವ ಉಳಿಸಿಕೊಳ್ಳುತ್ತದೆ ಇಲ್ಲವಾದಲ್ಲಿ ರೂಪಾಯಿ ರೂಪ ಕಳೆದುಕೊಂಡು ದಾಸ್ಯದ ದಿನಗಳು ಮರುಕಳಿಸುವ ಸಮಯ ದೂರವಿಲ್ಲ

ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ

ಹೀಗೇ ಬಂದ ಆಲೋಚನೆ, ಯಾಕೆ ಚಿಂತನೆಯಾಗಬಾರದು ಅನ್ನಿಸ್ತು, ಆಮೇಲೆ ಜಾರಿಯಾದರೆ ಆಗಬಹುದಾದ ಅಧ್ಬುತವಾದ ಬದಲಾವಣೆ ಬಗ್ಗೆ ಹೆಮ್ಮೆ ಅನಿಸಿದೆ, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತಿರುವ ಉದ್ದೇಶ ಕನ್ನಡದ ಬಗೆಗಿನ ಕಳಕಳಿ ಹಾಗು ಮನವಿ.

ಜಗತ್ತಿನ ಯಾವುದೇಭಾಷೆಯನ್ನ ಅದರದೇಉಚ್ಛಾರಣೆಯ ಧಾಟಿಗೆ ಲಿಪಿಯಲ್ಲಿ ಹಾಗು ಭಾಷೆಯ ಉಚ್ಛಾರಣೆ ಅಳವಡಿಸಬಹುದಾದ ಶ್ರೀಮಂತ ಭಾಷೆ ಕನ್ನಡ 
ಹೀಗಿರುವಾಗ ಬೇರೇಭಾಷೆಯ ಲಿಪಿಯ ಮೇಲೆ ಅವಲಂಬಿಸುವುದರ ಅಗತ್ಯ ಏನಿದೆ? ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮುಖ್ಯವಾಗಿ ವಿನಯದಿಂದ ಪ್ರಾರ್ಥಿಸುವುದೇನೆಂದರೆ ಕನ್ನಡಿಗರು ಮೊದಲು ಸ್ವಚ್ಚವಾದ ಕನ್ನಡ ಬಳಸಿ, ಭಾಷೆಯ ಸೊಗಡು ಪ್ರಾಂತ್ಯ ದಿಂದ ಪ್ರಾಂತ್ಯಕ್ಕೆ ವಿಭಿನ್ನ ವಿರಬಹುದು ಆದರೆ" ಹ" ಕಾರ "ಅ" ಕಾರ ಗಳಉಚ್ಚಾರಣೆ ಬಗ್ಗೆ ದಯವಿಟ್ಟು ಕಾಳಜಿ ಇರಲಿ ವಿಶೇಷವಾಗಿ ವಿದ್ಯಾವಂತರಲ್ಲಿ ವಿನಂತಿ, ಕ್ಷಮೆ ಇರಲಿ ಬಹಳಷ್ಟು ಶಿಕ್ಷಕರಿಗೇ ಅದರ ಬಳಕೆ ಸರಿಯಾಗಿ ತಿಳಿದಿಲ್ಲ .
ಹಾಂ ವಿಷಯಕ್ಕೆ ಬರ್ತೇನೆ
ಕನ್ನಡಿಗರೊಂದಿಗೆ ವ್ಯವಹರಿಸಬೇಕಾದವರು ಕನ್ನಡ ಕಲಿಯಲಿ ಎಂಬ ಒಂದು ಕಟ್ಟುನಿಟ್ಟಾದ ಸ್ವಾಭಿಮಾನಿ ಧೋರಣೆ ಅಘೋಶಿತವಾಗಿ ಜಾರಿಗೆ ಬಂದರೆ ಹೇಗಿರಬಹುದು ,
ಮೂಗು ಮುರಿವ ಜನ ಮೂಗು ಮುಚ್ಚಿಕೊಂಡು ಕನ್ನಡ ಕಲಿಯಲೇಬೇಕಾದ ಉಸಿರುಕಟ್ಟಿಸುವ ಪ್ರಯತ್ನಗಳು ಆಗಲೇಬೇಕಾದ್ದು ಅನಿವಾರ್ಯ ಕೇವಲ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಬಲವಂತವಾಗಿ ನಮ್ಮಮೇಲೆ ಹೇರಲ್ಪಟ್ಟ ಭಾಷೆಗೆ ನಾವೇಕೆ ಇನ್ನೂ ಗುಲಾಮರಾಗಬೇಕು ಮನ್ನಣೆ ಕೊಡಬೇಕು? ನಮ್ಮಲ್ಲಿ ಅನುಕೂಲ ಇಲ್ಲವೆಂದಾಗ ಆಶ್ರಯಿಸೋಣ ನಮ್ಮಲ್ಲೇ ಎಲ್ಲ ಇರುವಾಗ ಅದರ ಅವಶ್ಯಕತೆ ಏನು
ಒಪ್ಪಿಕೊಳ್ಳುತ್ತೇನೆ ಇದನ್ನು ಅಚ್ಚಿಸುತ್ತಿರುವ ಕೀಲಿಮಣೆ ಸಹ ಆಂಗ್ಲಭಾಷೆಯಲ್ಲೇ ಇರಬಹುದು ಆದರೆ ಮೂಲದಿಂದ ಕನ್ನಡ ಬಳಕೆ ಗೆ ಉತ್ತೇಜನ ದೊರೆತಲ್ಲಿ ಕೀಲಿಮಣೆಗಳು ಕನ್ನಡದಲ್ಲಿ ತಯಾರಾಗುವುದರಲ್ಲಿ ಸಂದೇಹವೇಇಲ್ಲಾ 
ಚೈನ ಜಪಾನ್ ಥೈಲ್ಯಾಂಡ್ ಅರಬ್ ರಾಷ್ಟ್ರಗಳಂತೆ ಇಲ್ಲಿಯು ಸಹ ಭಾಷಾ ಸ್ವಾತಂತ್ರ್ಯ ಸ್ಥಾಪಿಸಬಹುದಲ್ಲವೇ ಅಲ್ಲಿನ ಗಣಕ ಯಂತ್ರಗಳ ಕೀಲಿಮಣೆ ಆಯಾ ಭಾಷೆಯಲ್ಲೇ ಇದೆ ಇದು ಗಮನಿಸಬೇಕಾದ ವಿಷಯ , 
ಪ್ರತಿಭಾವಂತರಿಗೆ ಹೇಗೆ ಮುಕ್ತ ಅವಕಾಶ ಸಿಗಬೇಕು ಎನ್ನುವುದು ಮಾನವತಾ ವಾದದ ಹಕ್ಕುಗಳಲ್ಲಿ ಒಂದೋ ಹಾಗೆ ಪ್ರೌಢ ಹಾಗು ಶ್ರೀಮಂತ ಭಾಷೆಯ ಅವನತಿ ಕೂಡ ವಿಷಾದ 
ದಯವಿಟ್ಟು ಸ್ವಾಭಿಮಾನ ಮೆರೆಯೋಣ ಸಾಕು, ಗೂಂಡಾವರ್ತನೆ ಚಳುವಳಿಗಳ ಅವಶ್ಯಕತೆ ಕಾಣುತಿಲ್ಲ, ಬಳಕೆ ಹೆಚ್ಚಿಸಿ , ಇತರ ಸ್ನೇಹಿತರು ಕರ್ನಾಟಕಕ್ಕೆ ಬರುವಾಗ ಕನ್ನಡದ ಜ್ಞಾನ ಅಗತ್ಯ ಅನ್ನೋದನ್ನ ಅವರಿಗೆ ಮನದಟ್ಟಾಗುವಂತೆ ನಡೆದುಕೊಳ್ಳೋಣ ಅಶ್ಟು ಸಾಲದೇ ...

ಹೆಚ್ಚೆಂದರೆ ಇದರ ಪ್ರಭಾವ ಏನು , ನಮ್ಮ ಕಂಪನಿಗಳಲ್ಲಿ ಕೆಲಸದಿಂದ ಓಡಿಸ್ತಾರ? 
ಅಂತಹ ಕಂಪನಿಗಳಿಗೆ ಕರ್ನಾಟಕದಲ್ಲಿ ಜಾಗ ಬೇಡ.. ಇದು ಇನ್ನೂ ಉಗ್ರರೂಪ ತಳೆದರೆ ನಿರುದ್ಯೋಗ ದ ಸಮಸ್ಯೆ ನಾ?
ಉತ್ತರ: ಈವಾಗ ಶೊಕಿ ತೆವ್ಲು ಹಚ್ಚ್ಕೋಂಡು ಪಟ್ಟಣ ಸೇರಿರೋ ಜನ ವಾಪಸ್ ಹಳ್ಳಿಗಳಿಗೆ ಬಂದರೆ ಕೂಲಿಕಾರರ ಸಮಸ್ಯೆ ಪರಿಹಾರವಾಗುತ್ತೆ ತಮ್ಮ ಊರಿನ ಜಮೀನಿನಲ್ಲಿ ಕೂಲಿ ಮಾಡೋಕೆ ಹೇಸಿಗೆ ಪಡೋಜನ ಇನ್ಯಾರ್ದೋ ಕಂಪನಿಯಲ್ಲಿ ಕೂಲಿ ಮಾಡೋಕೆ ದೌಡಾಯಿಸ್ತಾರೆ   ಎರಡೂಕಡೆ ಚಾಕರಿ ಒಂದೇ , ನನಗೇನೂ ವ್ಯತ್ಯಾಸ ಕಾಣ್ತಿಲ್ಲಾ , ಕೆಲಸಕ್ಕೆ ಜನ ಸಿಗಲ್ಲ ಅಂತ ನಮ್ಮ ಹಳ್ಳಿಗಳಲ್ಲಿ ವ್ಯವಸಾಯದ ಆಸಕ್ತಿ ಹಿರಿಯರಲ್ಲಿ ಅದನ್ನೇ ನಂಬಿಕೊಂಡವರಲ್ಲಿ ಕಡಿಮೆಯಾಗಿ ಬಂಡವಾಳ ಶಾಹಿಗಳ ಪಾಲಾಗುತ್ತಿದೆ ಜಮೀನುಗಳು, ತಮಿಳುನಾಡು ಕೇರಳಾದಿಂದ ಬಂದು ಜಮೀನುಗಳನ್ನು ಗುತ್ತಿಗೆ ಪಡೆದು ನಮ್ಮ ಜನರನ್ನ ಮುಟ್ಟಾಳರನ್ನಾಗಿ ಮಾಡುತಿದಾರೆ, ನಮ್ಮ ಜನ ಹೊಲಗದ್ದೆ ಮಾರಿ ಬೈಕು ಕಾರು ಶೋಕಿ ಗಾಗಿ ಪಟ್ಟಣಗಳಲ್ಲಿ ಕಾಲ್ ಸೆಂಟರ್ , ಲೋನ್ ರೆಕವೆರಿ , ಕೊರಿಯರ್, ಫೈನಾನ್ಸ್ ಧಂಧೆಗಳಲ್ಲಿ ತೊಡಗಿದ್ದಾರೆ, 
ಇದಕ್ಕೆ ಏನೆನ್ನಬೇಕು.
ಜಪಾನ್ ಚೀನಾ ಅರಬ್ ದೇಶಗಳು ಮೊದಲ ಪ್ರಾಮುಕ್ಯತೆ ನೀಡಿರುವುದು ಸ್ಥಳೀಯರಿಗೆ ಹೀಗಾಗಿ ಅಲ್ಲಿ ಅಭಿವ್ರುದ್ದಿ ಆಗಿರೋದು
ಚೀನಾ ಜಪಾನ್ ಮಾದರಿಯಲ್ಲಿ ಕರ್ನಾಟಕ ಯಾಕೆ ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳಬಾರದು ?
ಪ್ರವಾಸೋದ್ಯಮ ಇದೆ, ಸಂಪತ್ತಿದೆ ,ವನಸಿರಿ ಇದೆ, ವ್ಯವಸಾಯಕ್ಕೆ ಯೋಗ್ಯ ಫಲವತ್ತಾದ ಭೂಮಿ ಇದೆ, ನಾವು ಬೇರೆಯವರನ್ನ ಅವಲಂಬಿಸುವ ಹೆಚ್ಚಿನ ಅವಶ್ಯಕತೆಗಳಿಲ್ಲ , ಬರೀ ಕನ್ನಡಿಗರು ಕರ್ನಾಟಕದಲ್ಲಿ ಜೀವಿಸೋಕೆ ಇಲ್ಲಿನ ಸಂಪತ್ತೇನು ಕಡಿಮೆ ಇಲ್ಲ, ಆದರೆ ಯೋಜನೆಗಳಿಲ್ಲ ಸೂಕ್ತ ಯೋಜನೆಗಳು ಅನುಷ್ಟಾನಕ್ಕೆ ಬಂದರೆ, ನಾವೆಲ್ಲ ಬಿಗುಮಾನ ಬಿಟ್ಟು ಸ್ವಾಭಿಮಾನಕಾಗಿ ದುಡಿದರೆ, ನೆರೆ ರಾಜ್ಯಗಳಿಗಿಂತ ಏಕೇ ನೆರೆ ರಾಷ್ಟ್ರ ಗಳಜೊತೆ ಕೂಡ ಕರ್ನಾಟಕದ ಪ್ರಭಾವ ಏನು ಎಂದು ತೋರಿಸಬಹುದು, ಬರೀ ಗುಜರಾತ್ ಯಾಕೆ ಮುಂದುವರಿಬೇಕು ಕರ್ನಾಟಕದಲ್ಲಿ ಏನು ಕಡಿಮೆ ಇದೆ , ತಮಿಳುನಾಡಿನೊಂದಿಗೆ ಯಾವಾಗಲೋ ಯಾಕೆ ನಾವೇ ಹೊಂದಿಕೊಂಡು ನಡಿಬೇಕು , ಆಂಧ್ರದವರ ದಬ್ಬಾಳಿಕೆ ಬೆಂಗಳೂರಲ್ಲಿ ಏಕೆ , ಮಲಯಾಳಿಗಳ ಒಗ್ಗಟ್ಟು ಕರ್ನಾಟಕಕ್ಕೆ ಪಾಠವಾಗದಿದ್ದರೆ , ಮುಂದೆ ನಾವೆಲ್ಲರೂ ಅಂಗಡಿ ಸಾಮಾನು ಕೊಳ್ಳಲು ಮಲಯಾಳಂ ಕಲಿಬೇಕಾಗುತ್ತೆ.
ಮಿತಿಮೀರಿದರೆ ಕನ್ನಡನಾಡಲ್ಲಿ ಕನ್ನಡಿಗರಿಗೆ ಮಾತ್ರ ಸಹಕಾರ ಉಳಿದವರಿಗೆ ಅಸಕಾರ.
ಇಲ್ಲಿಗೆ ಕರ್ನಾಟಕ ಬಾವುಟ ಹಾರಿಸಿ ಕನ್ನಡರಾಜ್ಯೋತ್ಸವದ ಸಿಹಿ ಹಂಚಿದ ಗಂಟಲು ಹರಿದು ಚೀರಿದ ಕನ್ನಡ ಪ್ರೇಮಿಗಳ ಶ್ರಮ ಸಾರ್ಥಕ.

ಅಘೋಶಿತವಾಗಿ ಸ್ವಯಂಪ್ರೇರಿತ ವಾಗಿ ಜಾರಿಗೆ ಬರಬೇಕಾದವು :
ಫ್ಲ್ಯಾಶ್ ಮೋಬ್ ಗಳ ಮಾದರಿಯಲ್ಲೇ ನಾವು ಕೆಲಸ ಮಾಡುವ ಕಂಪನಿಗಳಲ್ಲಿ ಕನ್ನಡಪರ ಸಮೂಹ ಚರ್ಚೆಗಳು ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾರ್ವಜನಿಕ ತಾಣಗಳಲ್ಲಿ ಕನ್ನದ ಜಾಗೃತಿ 
ಮೊದಲನೆಯದಾಗಿ ರಾಜಧಾನಿ ಯಲ್ಲಿ ಕನ್ನಡಬಳಕೆ ಕಡ್ಡಾಯ ಹಾಗು ಅನಿವಾರ್ಯ ಆಗಲೇಬೇಕು 
ಗಡಿನಾಡು ಗಳಲ್ಲಿ ಕನ್ನಡ ನಾಡು ನುಡಿಗಳ ಬಳಕೆ ಹೆಚ್ಚಿಸಲು ಕಾರ್ಯಕ್ರಮಗಳು ಶಾಲೆಗಳಲ್ಲಿ ಕಾಲೇಜುಗಳಲ್ಲು ಸಹಾ ಕನ್ನಡದಬಗ್ಗೆ ವಿಶೇಷ ತರಗತಿಗಳು ಚಟುವಟಿಕೆ ಗಳು ಇದನ್ನು ಪ್ರಶ್ನೆ ಮಾಡಿದವರಿಗೆ ಮನವರಿಕೆ ಮಾಡಿ ಹೇಳಿ ( ಇಲ್ಲಿ ನೆರೆ ಯಾಜ್ಯಗಳ ಪುಂಡ ಪುಡಾರಿಗಳ ಸಮಸ್ಯೆ ಎದುರಾಗಬಹುದು ) ಹಾಗೆ ಪ್ರಶ್ನೆ ಮಾಡುವವರಿಗೆ ಒಕ್ಕೊರಳಿನ ಒಂದೇ ಉತ್ತರವಿರಲಿ ಇದು ಕರ್ನಾಟಕ ದಯವಿಟ್ಟು ಕನ್ನಡವನ್ನ ಗೌರವಿಸಿ ನಂತರ ನೀವೇ ಬಳಸಲು ಪ್ರಯತ್ನಿಸುತ್ತೀರ .
ಕನ್ನಡದಲ್ಲಿ ಅಸಾದ್ಯ ಅನ್ನುವ ಯಾವುದೇ ಉದಾಹರಣೆಗಳಿಲ್ಲ ಮೊದಲೇ ಹೇಳಿದಂತೆ ಪ್ರಪಂಚದ ಯಾವುದೇ ಭಾಷೆಯನ್ನು ಅದರದೇ ಧಾಟಿಯಲ್ಲಿ ನಮ್ಮ ಭಾಷೆಯಲ್ಲಿ ಉಚ್ಛರಿಸಬಹುದು ಹಾಗೂ ಬರೆಯಬಹುದು. 
ಕನ್ನಡ ಕಲಿಕೆ ಅನಿವಾರ್ಯವಾಗಲಿ 
ಮುಂದಿನ ಕೆಲವೇವರ್ಷಗಳಲ್ಲಿ ಕನ್ನಡ ಖಂಡಿತಾ ಒಂದು ಜಾಗತಿಕ ವ್ಯಾವಹಾರಿಕ ಭಾಷೆಯಾಗಿ ಗುರುತಿಸಿಕೊಳ್ಳುತ್ತದೆ ಪ್ರಯತ್ನ ಅಲ್ಲ ಪ್ರತಿಜ್ಞೆ ಮಾಡೋಣ 
ಜೈ ಕರ್ನಾಟಕ ಮಾತೆ

Friday, January 24, 2014

ಎದೆಯ ಕಪಾಟಿನಲಿ ಈ ಹಾರ್ಟಿನಲಿ



ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ
BGM

ಇರಬಹುದೇ ಆ ನಗುವಲೀ ಕಂಡಂತಿದೆ ತುಟಿಯಂಚಲಿ
ಬಿನ್ನಾಣದಾ ಆ ವಯ್ಯಾರದ ಕೊಂಕಿನ ಅಣಕು ಮಾತಿನಲಿ
ಕೆಣಕುತ ಕರೆಯುತ ಹೃದಯಕೆ ಹೊಸ ವ್ಯಸನವ ಕಲಿಸುತ ಮಿಡಿವುದಮರೆ ದುಡಿಸಿದೆ ಅರೆಘಳಿಗೆಯಲಿ ....

ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

BGM

ತಿಳಿಯುವ ಹಂಬಲ ತಾಳೆನುತಳಮಳ ನೀ ನನ್ನೋಳಾ
ತಿಳಿಸೆಯ ಕಂಗಳ ತಾಗಿದ ಕ್ಷಣಗಳ ಆ ವಿಸ್ಮಯದ ಕಥೆಗಳಾ
ಜನುಮದ ಜನುಮಾಂತರದ ಆ ಪುಟಗಳ ಕಳೆಯುತ ಯುಗಗಳ ತೆರೆದಿಡು ಪ್ರೀತಿಯ ಪರ್ವಗಳಾ...

ಹಾ ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

- ಅನಿಕೇತನ ಹ್ಯಾಪ್ಪಿ BoY :)

Thursday, January 23, 2014

ಯಕ್ಷಿಣಿ ಕಾಯ್ಕಿಣಿ

ಜಯಂತ್ ಕಾಯ್ಕಿಣಿ ಅವರ ಹುಟ್ಟು ಹಬ್ಬಕ್ಕೆ ನನ್ನ ಪುಟ್ಟ ತೊದಲು ನುಡಿಗಳ ಹಾರೈಕೆ
ರವಿ ಬರುವ ಸಮಯ ಕವಿನುಡಿಯ ವಿಸ್ಮಯ
ಕವಿ ಬರುವ ಸಮಯ ಚಂದ್ರೋದಯ ನೆಚ್ಚಿನ ಕವಿವರ್ಯರಿಗೆ ಜನ್ಮದಿನದ ಶುಭಾಷಯ

-------------------------------------------
ಅನಿಸುತಿದೆ ಯಾಕೋ ಇಂದು ಬರೆಯದೆ ಇರಲಾರೆ ಎಂದು :)
 ನಿಮ್ಮ ಅಪ್ಪಣೆ ನಿಮಗಿದೊ ಅರ್ಪಣೆ  ಕಾವ್ಯ ಟಿಪ್ಪಣೆ
------------------------------------------
ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ
 
ಅನವರತ ಜಪಿಸುತ ಮಧುರ ಗೀತೆಯ
 ಅಪರಿಮಿತ ಆನಂದದಿ ಮನಸು ತನ್ಮಯ
ಬರೆಯುತ ಹೃದಯಗಳ ನಾಡಗೀತೆಯ 
ಆದಿರಿ ನಲ್ಮೆಯ ಹೃದಯಗಳ ಕವಿವಿಸ್ಮಯ 
ಕೊಲ್ಲುವ ಹುಡುಗಿಯ ಮೊಹಕ ನಶೆಯ 
ಸವಿಯುತ ಕಳೆದುಹೊದ ಕಾಲಕೆ ಮಿತಿಇಲ್ಲ

ಓಡಿಬಂದು ನಿಂತಿವೆ ಸಾಲು ಸಾಲು ಪದಗಳು
ಪ್ರೀತಿಯ  ಅಕ್ಷರಮಾಲೆಯ ಪದಗಳಾಗಲು
ಕೆನ್ನೆಯೊಂದಿಗೆ ಸವಿ ಮಾತಾಡಲು
ಮಿಡಿಡುಕಾಡಿವೆ ಹನಿಗಳು ಕಂಬನಿಯಾಗಲು
ಸೋತು ಶರಣಾಗಿವೆ ಭಾವಜೀವಗಳು ಬಹುಪಾಲು
ಸಿಗಬಹುದೆ ತುಸು ಸಮಯ ಕೇಳಲು ಭಾವಗಳ ಈ ಅಹವಾಲು

ಬರೆದರೆ ತೀರದ ಭಾವ ಕಾಡುತಿದೆ ಪದಗಳ ಅಭಾವ
ಏನೆಂದು ಹೆಸರಿಡಲಿ ನಿಮಗೆ ನನಗಿಷ್ಟ ಆಗೋಹಾಗೆ
ಕವಿ ಎನ್ನಲಾ ಕಣ್ಮುಂದೆ ಭಾವನೆಗಳ ಕಡೆದುನಿಲ್ಲಿಸೊ ಶಿಲ್ಪಿ ಎನ್ನಲಾ
ಶಿಲ್ಪಕಲೆಗೂ ಭಾವಸೆಲೆಗೂ ಅಕ್ಷರಮಾಲೆಗೂ ಒಮ್ಮೆಗೆ ಸಂಧಿಸೊ ಹಂಬಲ

ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ

-ಅನಿಕೇತನ 
ಹ್ಯಾಪ್ಪಿ BoY :)