Wednesday, June 18, 2014

ಕವಿಯಲ್ಲ ನಾನು ಎಂದರೂ ಬರೆಸದೇ ಬಿಡುವುದಿಲ್ಲ ನೀನು ;)

ನಿದ್ದೆ ಬಂದಿಲ್ವ ಫ್ರೆಂಡ್ಸ್.. ನನ್ಗು ಬಂದಿಲ್ಲ
ಹ್ಮ್ ಓದಿ ಖುಷಿ ಕೊಡುತ್ತೆ

ಕವಿಯಲ್ಲ ನಾನು ಎಂದರೂ ಬರೆಸದೇ ಬಿಡುವುದಿಲ್ಲ ನೀನು

ಅದೆಷ್ಟು ಒಲವು ನಿನಗೆ ನೀ ಬರೆಸೊ ಪದಗಳ ಮೇಲೆ
ಅದೆಷ್ಟು ಒಲವು ನಿನಗೆ ನೀ ಬರೆಸೊ ಪದಗಳ ಮೇಲೆ
ವರಿಸಲು ಕಾದಿದೆ ಹೃದಯ ಹಿಡಿದು ಒಲವಿನ ಮಾಲೆ
ವರಿಸಲು ಕಾದಿದೆ ಹೃದಯ ಹಿಡಿದು ಒಲವಿನ ಮಾಲೆ
------------------------------------------

ನನ್ನವಳ ನೋಡಲು ಮರೆಯಲೆ ಇಣುಕುವೆ ಏಕೆ
ನನ್ನವಳ ನೋಡಲು ಮರೆಯಲೆ ಇಣುಕುವೆ ಏಕೆ
ಮೋಡಗಳು ತಾಗಿ ಎಡವಿಬಿದ್ದೀಯೆ ಜೋಕೆ
ಮುಜುಗರ ಬೇಡ ತಳಮಳ ಬೇಡ ನೋಡಿ ನಡೆ

ಅವಳುಂಡು ಉಳಿಸಿದ ಹಾಲ ಬಟ್ಟಲು ನೀನು
ಅವಳುಂಡು ಉಳಿಸಿದ ಹಾಲ ಬಟ್ಟಲು ನೀನು
ಅವಳೊಮ್ಮೆ ನಸುನಗಲು ಮಾಸಿ ಹೋಗುವೆ ನೀನು

ಅವಳಂದ ಚಂದದ ಮಾತೇಕೆ ಸಾಟಿಯಲ್ಲ ನೀ ಅವಳ ಕಿರು ನೋಟಕೆ

ನಿನ್ನ ನೋಡಲು ಪುಟ್ಟ ಕಂದನ ಕೇಕೆ ತಿಳಿಯದೇ., ಏಕೆ ?
ನಿನ್ನ ನೋಡಲು ಪುಟ್ಟ ಕಂದನ ಕೇಕೆ ತಿಳಿಯದೇ., ಏಕೆ ?
ನನ್ನ ನು ನೆನೆದು ನನ್ನವಳು ನಿನ್ನನ್ನು ಶಪಿಸಿದ್ದಕ್ಕೆ

{ ಚಂದಮಾಮ ನಿಗೆ :) }
----------------------------------------------

-ಅನಿಕೇತನ ಹ್ಯಾಪ್ಪಿ B :) Y

No comments:

Post a Comment