Friday, August 21, 2009

ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಜಗನ್ಮಾತೆ ಸರ್ವಮಂಗಳೇ ಶ್ರೀ ಸ್ವರ್ಣಗೌರಿಯ ಹಾಗು
ನಿರ್ವಿಘ್ನ ಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ
ಎಲ್ಲರಿಗು ಸರ್ವ ವಿಧವಾದ ಶುಭಫಲಗಳನ್ನು ಕರುಣಿಸಲಿ
ಸರ್ವೇಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Saturday, August 1, 2009

ಗೆಳೆತನ ಇದು ಶಾಶ್ವತ body ಹೋದರೂ !!!!

Friendship day ಗೆ ಚಂದದ ಸಾಲುಗಳು

ಮುದ್ದು ಮನಸಿನ ಎಳೆತನ ಈ ಗೆಳೆತನ
ವಿಶಾಲ ಹೃದಯದ ಹಿರಿತನ ಈ ಗೆಳೆತನ
ಹುಸಿ ಮುನಿಸಿನ ಹಸಿ ಸುಳ್ಳಿನ ಸವಿ ಸವಿ ಗೆಳೆತನ
ಬದುಕಿಗೆ ಹೊಂಗನಸಿನ ದೀವಿಗೆ ಈ ಗೆಳೆತನ
ಮಧುರಾ ಭಾವನೆಗಳ ಚೈತನ್ಯದ ಚಿಲುಮೆ ಈ ಗೆಳೆತನ
ಎಂದು ಅಳಿಯದ ಆತ್ಮೀಯತೆ ಈ ಗೆಳೆತನ

ಹೃದಯದಿ ಅರಳೋ ಕೋಮಲ ವಾದ ಭಾವನೆ ,ಆದರೆ ...
ಹೂವಲ್ಲ ಗೆಳೆಯ ಬಾಡಿ ಹೋಗಲು,
ಗೆಳೆತನ ಇದು ಶಾಶ್ವತ body ಹೋದರೂ !!!!

Friday, July 31, 2009

ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!

ಈ ತಲೆ ಬರಹ ನೋಡಿದ್ರೆ ನಿಮಗೆ ಅನ್ಸ್ಬಹುದು ಸ್ವಲ್ಪ ವಿಚಿತ್ರ ಅಂತ ಆದ್ರೆ ಇದು ನಮ್ಮ ನಡುವೆ ನಾವು ನಮ್ಮನ್ನ ನಮ್ಮವರನ್ನ ಗುರುತಿಸೋ ರೀತಿ ಕಂಡಾಗ ನನಗೆ ಅನಿಸಿದ್ದು ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?! .
ಕೆಲ ಸಮಯ ಬೇಜಾರಿರ್ಬಹುದು , ತಮಾಷೆ ಅನ್ಸ್ಬಹುದು , ಸಹಜ ಅನ್ನಿಸಿ ಏನು ಅನಿಸ್ದೇನೆ ಇರಬಹುದು ಆ ಎಲ್ಲ ಸಮಯ ಗಳಲ್ಲಿ ನಮ್ಮನ್ನ ನಾವು ನೋಡೋ ರೀತಿ ಮಾತ್ರ ಬೇರೆ.

ನನ್ನಲ್ಲಿ ಈ ಆಶ್ಚರ್ಯ ಚಕಿತ ಪ್ರಶ್ನೆ ಉಂಟಾಗೋಕೆ ಕಾರಣ ತುಂಬಾ ಚಿಕ್ಕದು ,ಸರಳವಾಗಿ ನಮ್ಮ ಹೋಲಿಕೆ ಪದಗಳಲಿ ಸಹಜವಾಗಿ ಸೇರಿ ಹೋಗಿರೋ ಕೆಲವು ಶಬ್ದಗಳು(ಪ್ರಾಣಿಗಳು ಪಕ್ಷಿಗಳು )
ಉದಾಹರಣೆಗೆ : ಗೂಬೆ , ಕತ್ತೆ , ನಾಯಿ, ನರಿ , ಕುರಿ, ಮಂಗ ,ಕಪ್ಪೆ, ಇತ್ಯಾದಿ ಇತ್ಯಾದಿ ......

ವಿಷಯಕ್ಕೆ ಬರೋಣ

ಹಾಸ್ಯಸ್ಪದವೋ ವಿಷಾದವೋ ಗೊತ್ತಿಲ್ಲಾ ..

ಯಾರಾದ್ರೂ ಒಬ್ಬ ಮನುಷ್ಯ ಸುಮ್ನೆ ಕೂತಿದ್ರೆ active ಆಗಿಲ್ಲ ಅಂದ್ರೆ ನಾವು ಅವನ್ನ ಸಾಮಾನ್ಯ ಹೋಲಿಸೋದು ಗೂಬೆ ಗೆ, ನೋಡು ಗೂಬೇಥರ ಕೂತಿದಾನೆಅಂತ .ಇದರಲ್ಲೇನಿದೆ ಸಹಜ ಅನ್ಬೋದು , ಆದ್ರೆ ಮಾನವನ ಒಳಗಿರೋ ಗೂಬೆ ನೋಡೋ ನಾವು,ಗೂಬೆ ಬಗ್ಗೆ ಶಕುನ ನುಡಿಯೋ ನಾವು , ನಮ್ಮೊಡನೆ ಇರೋ ಇಥವರನ್ನ ಒಲ್ಲೇ.. ಅಂದಾಗ ಅನ್ಸೋದು ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!

ಸರಿ ಮತ್ತೊಂದು ವಿಷ್ಯ ಇದಕ್ಕೆ ವ್ಯತಿರಿಕ್ತ, ತುಂಬಾ active ಆಗಿ ಒಂದುಕಡೆ ಸುಮ್ನಿರ್ದೆ ಸದಾ ಬೇರೆಯವರನ್ನ ಸಹ active ಆಗಿಡೋಕೆ ಪ್ರಯತ್ನ ಪಡೋ,

ತಮ್ಮ ತರಲೆ ತಂಟೆಗಳಿಂದ ನಗುಸ್ತ ಇದ್ರೆ ಹೇಳೋದು ಒಳ್ಳೇ ಮಂಗ್ಯಾ(ಮಂಗ )ನ ಸಹವಾಸ ಆತಲ್ಲ, ಒಂದ್ಕಡೆ ಸುಮ್ನೆ ಕೂರಲ್ಲ, ಬರೀ ಚೇಷ್ಟೆ ಗಳು ಅಂತೀವಿ..





ಪಾಪ ಯಾರ ಗೊಡವೆಗೂ ಹೋಗದೆ ತನಗೆ ತಿಳಿಯದಂತೆ ತನ್ನ ದಾರೀಲಿ ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ರೆ ಆಗಲಾದರೂ
ಸುಮ್ನಿರ್ತಾರ, ಅದಕ್ಕುಹೇಳ್ತಾರೆ ಏನು ಪ್ರಯೋಜನ ಕತ್ತೆ ಥರ ಕೆಲ್ಸಮಾಡ್ತಾನೆ ಮೂರ್ಖ ಏನು ಅರ್ಥ ಆಗಲ್ಲ ಅಂತ, ಹಾಗೆ ಅಂದಾಗ ಅವನು

ಜಾಡ್ಸಿದ್ರೆ ಅದಕ್ಕೂ ನಾವು ಹೇಳೋದು ಕತ್ತೆಥರ ಒದಿತಾನೆ ಅಂತ.




ಹಾಗೆ ಮುಂದೆ ಹೋದ್ರೆ , ತನ್ನಪಾಲಿಗೆ ಬಂದದ್ದೆ ಪಂಚಾಮೃತ ಅಂತ ನೀಯತ್ತಾಗಿ ನಂಬಿಕೆಗೆ ಹೆಸರಾಗಿ ಸದಾ ಜೊತೆ ಇರೋರಿಗೆ, ಸದಾ busy but no job ಅನ್ಕೊಂಡು ತಿರುಗಾಡೋರು ನಮಗೆ ಕಾಣೋ ರೀತಿ ನಾಯಿ ಹಾಗೆ, ಹುಡುಗಿ ಹಿಂದೆ ಅಲೆಯೋ ಹುಡುಗ್ರೆನಾದ್ರು ಕಂಡ್ರೆ
ಮೊದ್ಲು ಹೇಳೋದು ನಾಯಿ ಹಾಗೆ ಹಿಂದೇನೆ ಅಲಿತಾನೆ ಅಂತ ಸ್ವಲ್ಪ ಕಿರುಚಾಡಿದ್ರೆ ನಾಯಿಥರ ಸುಮ್ನೆ ಬೊಗಳ್ಬೇಡ ಅನ್ನೋ ವಾಗ ಅವನಲ್ಲಿ ನಾಯಿನ ಕಾಣೋ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!




ಇನ್ಕೆಲವರು ಬೇರೆಯವರ ಹಾದಿ ಅನುಸರ್ಸಿ ಸರಿ-ತಪ್ಪು ತಿಳಿಯದ ಅಮಾಯಕರು ತಲೆಬಗ್ಗಿಸಿ ನಡೆಯೋದೊಂದೇ ಗುರಿ, ಅತ್ತ ಇತ್ತ ಏನಾದ್ರು ಅದರ ಪರಿವೆಯೇ ಇಲ್ಲ ತಮ್ಮಷ್ಟಕ್ಕೆ ತಾವಿರೋ ಈ ಅಮಾಯಕರನ್ನ ನಾವು ಹೋಲಿಸೊದು ಕುರಿಗೆ, ಎಲ್ಲವನ್ನು ನಂಬೋ ಅಮಾಯಕತೆ ನ ಗುರುತಿಸೋದು ಕುರಿಯಿಂದ.

ಸ್ವಲ್ಪ ಬುದ್ಧಿ ವಂತನಾಗಿ ಜಾಣ್ಮೆ ತೋರಿದರೆ ಅಪಾಯ ತಪ್ಪಿಸಿಕೊಳ್ಳೋ ಉಪಾಯ ಬಲ್ಲವನಿಗೆ ಕಾದಿರಿಸಿದ ಪಟ್ಟ ನರಿಬುದ್ದಿ , ಹೇಳಿದ್ದೆಲ್ಲ ಕೇಳಿದ್ರೆ ಕೋಲೆಬಸವ , ದನಿ ಚಂದ ಇದ್ರೆ ಕೋಗಿಲೆ ವ್ಯತ್ಯಾಸ ಆದ್ರೆ ಕಾಗೆ, ಹಾಡೋದ್ ಬೇಡ ಮಾತಾಡ್ತಾ ನೆ ಇರಣಪ್ಪ ಅಂದ್ರೆ ಕಪ್ಪೆಥರ ವಟ ವಟ ಅನ್ನೋ ಬಿರುದು ,ಒಳ್ಳೆಯವರೊಳಗೆ ಕೆಟ್ಟವರು ಇರೋ ಈ ಪ್ರಪಂಚದಲ್ಲಿ ಹಾವಿಗೆ ಹಾಲೆರೆದಂತೆ ಅನ್ನೋ ಪದ ಎಷ್ಟು ಸಮಂಜಸ?,ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!

ಶಕುನದ ಹಕ್ಕಿಗೂ ಅಪಶಕುನದ ಮಾರ್ಜಾಲಕು
ಹಿಡಿತ ಇಲ್ಲದ ಮನಸ್ಸು ಮರ್ಕಟ ರೀ ..,.
ನೀಯತ್ತಿನ ನಾಯಿ ನರಿಯಾದರು ಸರಿ
ಅಪಾಯ ತಪ್ಪಿಸಿ ಕೊಳ್ಳೋ ದಾರಿ ನೀಅರಿ ,
ಗುರಿ ಇಲ್ಲದ ಕುರಿ, ಮದವೇರಿದ್ರೆ ಕರಿ, ಗತ್ತಿಗೆ ಸರಿ ಕೇಸರಿ,
ಸಾಧುವಾದರೆ ನೀ ಪಶುವೇ ಸರಿ ....

ಇಂತೆಲ್ಲ ಸದಾ ಪ್ರಾಣಿಗಳ ಬಗೆಗೆ ಚಿಂತಿಸಿವ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಸಿಂಹ ಎಂದು ತನ್ನನು ಹುಲಿಯಾಗಿ ಕಂಡಿಲ್ಲ , ಹುಲಿಯೆದು ನರಿಯಾಗ ಬಯಸಿಲ್ಲ , ಆನೆಗೇಕೆ slim ಆಗೋ ಆಸೆ ಇಲ್ಲ , ಪಶು ನಮಗಾಗೆ ನೀಡುವುದೆಲ್ಲ, ಇದೆಲ್ಲ ಅರಿತ ನಾವೇಕೆ ನಮ್ಮಂತಿಲ್ಲ ?!
ಉಳ್ಳವರನ್ನು ದೇವರಂತೆಯು ಇಲ್ಲದವರನ್ನು ಪ್ರಾಣಿಗಳಿಗೂ ಕಡೆಯಾಗಿಯೂ ಕಾಣುವ, ಮನೆಯ ನಾಯಿಯನ್ನೂ ಮುದ್ದಿಸುವ ಪರರನ್ನು ದ್ವೇಷಿಸುವ, ಇಚ್ಚಿಸಿದ್ದನ್ನು ಮೆಚ್ಚಿಸುವ ಇಚ್ಚಯಿರದಿದ್ದರೆ ಕಿಚ್ಚಾಗುವ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!

ಮನುಷ್ಯ ತನ್ನಲ್ಲಿ ತನ್ನನು ಕಾಣಲಾಗದಷ್ಟು ಅಂಧ ನಾ .. ಅಥವಾ ಅರಿವಿಲ್ಲವಾ..
ಮಾನವ ಜನ್ಮ ದೊಡ್ಡದು ಎಂದು ಹಾಡಿದ ಪುರಂದರ ದಾಸರ ಸಾಲುಗಳು ಮರೆಯುವಷ್ಟು ನಮ್ಮನ್ನು ನಾವು ಮರೆತೆವಾ ..
ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!

Friday, June 19, 2009

ತುಂಟನೋ ಇವ ತುಂಟನೋ


ತುಂಟನೋ ಇವ ತಾಳೆ ಇವನ ಆಟ ತುಂಟನೋ
ಸುಳ್ಳನೋ ಇವ ಹುಸಿ ಮುನಿಸಲು ನಗಿಸೋ ಸುಳ್ಳನೋ
ನಂಟನೋ ಇವ ಜನುಮಕೆ ಅಂಟಿದ ನಂಟನೋ
ಭಂಟನೋ ನಂಬಿದವರ ಕಾವ ಭಂಟನೋ.. "ಪ "

ಹಾಲ ಹಸುಳೆ ಇವನು ಎಳೆಯರೊಳಗೆ ಬಲು ಹಳೆಯನೋ
ಬಾಯೊಳಗೆ ತೋರಿದ ಇಳೆಯನು ಇವ
ಮೊಳಕೆಯಲೇ ತೋರಿದ ಬೆಳೆಯನು
ಕಂದನೋ ಇವ ನಂದನೋ ನಂದದ ಆನಂದ ಈವನೋ. "ತುಂಟನೋ " "೧ "

ಮಳ್ಳನೋ ಮರುಳು ಮಾತಿನ ಮಳ್ಳ ಜಾಣನೋ
ಕಳ್ಳನೋ ಇವ ಮುರಳಿಯ ಮೋಹದಿ ಮನ ಕದಿಯುವನೋ
ಗೆಳೆಯನೋ ಇವ ಗೋಪಿಯರ ಪ್ರಿಯ ಪ್ರಾಣನೋ
ಪುಂಡ ಇವ ಪುಂಡರಿಗೊಡೆಯ ಪುಂಡರೀಕನು "ತುಂಟನೋ " "೨ "

ಕುಟಿಲನೋ ಇವ ಬಯಸನು ಎಂದೂ ಕೇಡನು
ಕಪಟನೋ ಇವ ಕೆಡುಕಿನ ಕಡುವೈರಿಯೋ
ಕೆಡುವರ ಕಾಡುವನು ಬಿಡದೆ ಬೇಡಿದರೆ ಒಲಿವನು
ಕಡು ಕೃಷ್ಣನೋ ಇವ ಬೆಳ್ಳನೆ ಹಾಲಿನ ಮನದವನು..."ತುಂಟನೋ " "೩ "


how is it :)
to be continued ....!!

Wednesday, June 17, 2009

ಗೆಜ್ಜಲು ಹುಳಗಲಿಗು ಬೇಡವಾಗಿ ಉಳಿದ ಪಳೆಉಳಿಕೆಗಳೊ... ಅಳಿಯದ ನೆನಪುಗಳೊ :) !!!!

In my earlier day when one of my dream to make a music album ....still its dream only ,scribbled in that time (now it may feel like childish, have it like a side dish in ur free time)
some of theme are here,
which i got from my old dusted scribbled ಶೀಟ್ಸ್
JUST to EXPRESS MYSELF, NOT TO IMPRESS...,
ಗೆಜ್ಜಲು ಹುಳಗಲಿಗು ಬೇಡವಾಗಿ ಉಳಿದ ಪಳೆಉಳಿಕೆಗಳೊ... ಅಳಿಯದ ನೆನಪುಗಳೊ :) !!!!

---------------******-----------*********----------*********------------------
#1
Dialog: ಕಣ್ಣಲ್ಲೇ ಹುಟ್ಟುತ್ತೆ ಆದ್ರೂ ಯಾರಿಗೂ ಕಾಣಲ್ಲ ಮನಸಲ್ಲೇ ಇದ್ದು ಹೃದಯಾನ ಸೂರೆ ಮಾಡುತ್ತೆ ಅದ್ರು ಗೊತ್ತಾಗಲ್ಲ ಪ್ರೀತಿ ಅಂದ್ರೆ ಇದೇನಾ .......

M: ಕೇಳೆ ನನ್ನ ಕವನ ಪ್ರೀತಿ ಅಂದ್ರೆ ಇದೇನಾ
ಕಣ್ಣಲ್ಲಿ ಮೂಡೋದು ಯಾರಿಗೂ ಕಾಣದ್ದು
ಮನಸಲ್ಲಿ ನಿಲ್ಲೋದು ಹೃದಯಾನ ಸೂರೆ ಮಾಡೋದು .
"ಕೇಳೆ ನನ್ನ ಕವನ"
ಯಾರನ್ನು ನೋಡಿದೆ ಗೊತ್ತಿಲ್ಲ
ಏನನ್ನು ಹೇಳಲಿಲ್ಲ
ಒಪ್ಪಿಗೆ ಕೇಳಲಿಲ್ಲ ಗೊತ್ತಿಲ್ದೆ ಶುರುವಾಯ್ತಲ್ಲ
ಮನಸಲ್ಲಿ ಮನೆ ಮಾಡಿತಲ್ಲ ಯಾವುದೀ ಮಧುರಾ ಭಾವನೆ
ಪ್ರೀತಿ ಅಂದ್ರೆ ಇದೇನಾ .....
"ಕೇಳೆ ನನ್ನ ಕವನ"
F: ಹೇಳಲು ಮಾತಲ್ಲಿಲ್ಲ
ನೋಡಲು ಕಾಣೋದಿಲ್ಲ
ತೋರಿಸಲು ರೂಪ ಇಲ್ಲಾ
ಅನುಭವಿಸದೇ ಗೊತ್ತಾಗಲ್ಲ
ಹೃದಯಾನ ಸೂರೆ ಮಾಡಿತಲ್ಲ ಯಾವುದೀ ಮಧುರಾ ಯಾತನೆ
ಪ್ರೀತಿ ಅಂದ್ರೆ ಇದೇನಾ ....
"ಕೇಳೆ ನನ್ನ ಕವನ"
------------******--------******------------*********------------------
#೨
F:ನಿನ್ನ ಹೃದಯ ಬಿಟ್ಟು ನನ್ನ ಮನಕೆ
ಎಲ್ಲಿದೆ ನೆಲೆ ಎಲ್ಲಿದೆ ನೆಲೆ ಎಲ್ಲಿದೆ ....

F: ತಂಪು ಗಾಳಿಯ ಹಾಗೆ ಬಂದೆ ನೀ..
ನನ್ನ ಈ ಮನಸಿಗೆ ಉಸಿರಲಿ ಬೆರೆತೆ ನೀ..
ಗಾಳಿಯಾ ಹಾಗೆ ಬಂದು ಸೋಕಿದೆ
ಯಾರಿಗೂ ಕಾಣದೆ ನೆನಪದು ನಿನ್ನದೇ
ಕಾಡಿದೇ ಕಾಣದೆ ಸೆಳೆತವ ತಂದಿದೆ ಹಿತವಾಗಿದೆ .
"ನಿನ್ನ ಹೃದಯ"
M: ನಿನ್ನ ಹಾಡಿದು ರಾಗವಾಗಿದೆ
ನನ್ನೀ ಹೃದಯ ತಾಳಕೆ
ಮನಸಿದೂ ಹಾಡಿದೆ
ಕಡಲು ಹುಣ್ಣಿಮೆಯ ಹಾಗೆ ಸೇರುವಾ
ಪ್ರಕೃತಿಯೇ ಸಾಕ್ಷಿಯೇ ನಮ್ಮ ಈ ಪ್ರೀತಿಗೆ
ರೆಪ್ಪೆ ಮುಚ್ಚಿಡು ಕನಸ ಬಿಚ್ಚಿಡು ಬಾ ಒಂದಾಗುವ ."ನಿನ್ನ ಹೃದಯ"
F: ಕನಸು ಕಾದಿದೆ ರಾತ್ರಿ ಮರುಗಿದೆ
ಎಲ್ಲಿಹೆ ಬಾರದೆ ಮನಸಿದೋ ನೊಂದಿದೆ
ಕನಸಲಿ ನಾವು ಸೇರುವ ಎಂದೂ
ಯಾರಿಗೂ ಕಾಣದೆ ಕನಸಿದು ನಿನ್ನದು
ಕೂಗಿದು ಕೇಳದೆ ಎಲ್ಲಿಯೂ ಕಾಣದೆ ಎಲ್ಲಿರುವೆ ನೀ ..."ನಿನ್ನ ಹೃದಯ"

M: ಬಾ .. ಹೋಗುವ ಅಲ್ಲೇ ಸೇರುವಾ
ಕನಸದು ನಮ್ಮದೇ ನೆಮ್ಮದಿ ಅಲ್ಲಿದೆ
ಮನಸಿನಾ ಊರ ಹೃದಯದರಮನೆಗೆ
ಕನಸಿದೆ ದಾರಿಯೇ ಸಾಗುವಾ ಜೊತೆಯಲೇ
ಒಲವಿನ ಸಿರಿಯು ಪ್ರೀತಿಯ ಸವಿಯು ನಮ್ಮ ದಾಗಲಿ .."ನಿನ್ನ ಹೃದಯ"
-------********--------*******------------*********______*****-------
#೩
ಇದೇನೆ ಅದು ಅದೇನೇ ಇದು ಎಲ್ಲ ಬೇಡೋದಿದು ಎಲ್ಲ ಹುಡುಕೊದಿದು

ಮಾತು ಮಾತಿನಲಿ ಹೇಳಲಾಗದ
ಒಗಟು ಇದು
ಕಣ್ಣ ಅನ್ಚಿನ್ನಲ್ಲಿ ಕಾಣೋದಿದು
ಬಯಸಿದಾಗ ಕೂಗಿ ಕರೆಯುವಾಗ
ಎಂದು ಬರದು ಇದು
ಬಂದಮೇಲೆ ಎಂದು ಬಿಟ್ಟು ಕೊಡದು ಇದು
ಹಸಿವು ದಾಹಗಳ
ಹಗಲು ರಾತ್ರಿಗಳ ಮರೆಸೋದಿದು
ಕಾಲವನ್ನೇ ಮರೆಸಿ ಕಯಿಸೋದುಇದು
ಮನಸುಗಳ ಚಿಗುರಿಸೋ ಚೈತ್ರ ಕಾಲ ಇದು
ಸೋಲುಗಳನೆ ಮರೆಸಿ ಜಗವ ಗೆಲಿಸೋದಿದು

ಕ್ಷಣದಲೇನೆ ಕವಿಮನಸ ಸೃಷ್ಟಿಸೋ
ಕವನ ಇದು
ಮನಸುಗಳನು ನಲಿಸೋ ಹೊಂಗನಸು ಇದು
ಮನದ ಇರುಳಿಗೆ ಬೆಳಕು ಚೆಲ್ಲುವ
ಬೆಳದಿಂಗಳು ಇದು
ದಣಿವು ದಾಹ ನೀಗೋ ಒಲವ ಒರತೆ ಇದು .


ಎಲ್ಲೂ ಇಲ್ಲಾ ಅದು ಇಲ್ಲೇ ಇದೆ ಅದು ಮನಸು ಹುದುಕೊದಿದು ಹೃದಯ ಬಯಸೋದಿದು..
--******-----******--------********--------********---------******-------*****
#4
ಬಂತು ಬಂತು ಬಂತು ವಸಂತ ಬಾಳಿಗೆ
ತಂತು ತಂತು ತಂತು ಸಂಭ್ರಮ ಮನಸಿಗೆ
ಕನಸುಗಳು ಚಿಗುರಿದವು
ಹಸಿರಾಯ್ತು ಮನಸುಗಳು
ಮೊದಲ ಸ್ವಾತಿ ಹನಿಗೆ ಕಾದಿದೆ ಒಡಲು
ಹನಿದಾಗ ಮನದಿ ಹೊನಲು ..

ಮಣ್ಣಿನ ವಾಸನೆಗೆ ಮೈ ಝಂ ಎಂದಿದೆ
ಮನದಲಿ ಸಂತಸ ತುಂಬಿದೆ
ಕಾರ್ಮೋಡ ಕತ್ತಲ ಚಪ್ಪರ ಹಾಕಿದೆ
ಮಿಂಚಿನ ಬೆಳಕಿಗೆ ಕಣ್ಣು ಹಾತೊರೆದಿದೆ

ಹಸಿರು ಹೂವಿಂದ ಸಿಂಗರಿಸಿದ
ಮನಸಿನ ಕಾಯಿ ಮಾಗಿ ಹಣ್ಣಾಗಿದೆ
ಪ್ರೀತಿಯ ಸವಿತುಂಬಿ ಸಿಹಿಯಾಗಿದೆ
ಸವಿಯಲು ಮನ ಹಾತೊರೆದಿದೆ .

-----******------****_____******--------*********
#೫
ನಲ್ಮೆಯ ಒಲವೆ
ನೆನಿರಲು ಜಗವೆಲ್ಲ ಚೆಲುವೇ
ನೀನಿರಲು ನನಗೆ ಬಲವೆ
ಇಲ್ಲದಿರೆ ಕಾಣದು ಲೋಕವೇ

ಆಗದಿರಲಿ ಒಲವು ಹಗುರ
ಅದುವೇ ಬಾಳಿಗೆ ಶೃಂಗಾರ
ಬಂದರೆ ಒಲವಿಗೆ ಬರ
ನೀಗದು ಮನದ ಭಾರ
ಒಲವಿದ್ದರೆ ನಡೆಯದು ಯಾವ ಸಮರಾ
ಅಶಾಂತಿ ಬಲು ದೂರ
ಒಲವು ಜೀವನದ ಕಲೆ
ಬತ್ತದಿರಲಿ ಒಲವ ಸೆಲೆ
ನೆಮ್ಮದಿಗೆ ಇದೆ ನೆಲೆ
ದೂರಾಗದ ಭಾವದ ಅಲೆ
ಇದು ಬಾಡದ ಹೂಗಳ ಮಾಲೆ ಬಣ್ಣಿಸಲು ಸಾಲದು ಸಾಲೆ ....

------**********-------********---------**********----------************-----

#೬
ಪೆದ್ದು ಮನಸಿನ ಮುದ್ದು ಪ್ರೀತಿ
ಬುದ್ದಿ ಇಲ್ಲದ ಶುದ್ದ ಪ್ರೀತಿ
ಹೂವಿನಲ್ಲಿ ಜೇನಿನ ರೀತಿ
ಗಾಳಿಯಲ್ಲಿ ಗಂಧ ಈ ಪ್ರೀತಿ

ಮನಸಿನ ಮೌನ ರಾಗ
ಹೃದಯದ ತಾಳದ ವೇಗ
ಬೆರೆತು ಬಂದ ಮಧುರಾ ರಾಗ
ಅಮರ ಮಧುರಾ ಈ ಅನುರಾಗ
ಸೆಳೆತದ ಈ ಸಿಹಿ ನೋವ ಸುಖ
ಪ್ರೀತಿಯ ಅಂದದ ಮುಖ
ಕಲೆತಾಗ ತಾನೇ ಸ್ವರ್ಗ ಸುಖ
ಸಾಟಿ ಇಲ್ಲಾ ಇನ್ನಾವ ಸುಖ
-------*******--------********---------*********-------------
#೭

ಸಿಂಧೂರವೇ ಹಣೆಗೆ ಶೃಂಗಾರ
ಮಲ್ಲಿಗೆಯೇ ಮುಡಿಗೆ ಮಂದಾರ
ಕೊರಳಲಿ ಆ ಮುತ್ತಿನ ಹಾರ
ಇನ್ನೇಕೆ ಬಂಗಾರ ಹೊರಲಾರದ ಭಾರ
ಅರಳುವ ಮಲ್ಲಿಗೆ ಮೊಗ್ಗು
ಕಂಡಾಗ ನಿನ ಮೊಗದಲ್ಲಿ ನಗು
ಅಸೂಯೆ ಬಂತು ಆ ಹುಣ್ಣಿಮೆಗೂ
ಎಂದೆಂದೂ ಶಾಶ್ವತ ಇರಲಿ ಈ ಸೊಬಗು

ಸಾಗರನ ಹೃದಯದ ಸಂಪತ್ತು
ನಿನ್ನ ಕೊರಳಿನ ಮಣಿ ಮುತ್ತು
ಸಿಂಗರಿಸಿ ಹೀಗೆ ಇರಲಿ ಯಾವತ್ತು
ನೀ ನನ್ನೀ ಹೃದಯದ ಸಂಪತ್ತು

------*******------******-------*****------*****------******
#೮
ಚಲಿಸುವ ಮೋಡದ ಮೇಲೆ
ಬರೆದಿಹ ಒಲವಿನ ಓಲೆ
ಓದುವೆಯ ನೀನು ತಡಮಾಡದೆ ಇನ್ನು

ಹೃದಯದ ಒಲವಿನ ಚಿಲುಮೆ
ಕಂಬನಿಯಾಗಿ ಹರಿದು
ಮೋದದಿ ಹನಿಯಾಗಿ ನಿಂದು
ರಚಿಸಿದ ಒಲವಿನ ಓಲೆ
ಇದು ಹೃದಯದ ಅಕ್ಷರ ಮಾಲೆ

ನನ್ನ ಹೃದಯ ದ ಕಂಬನಿ
ಹನಿಸಿದೆ ಪ್ರೀತಿಯ ಮಳೆಹನಿ
ನಗುತಿರಲಿ ನಿನ್ನೆದೆ ಹೂಬನ
ಹರುಷದಿ ಹಾಡುತಿರಲಿ ಈ ಮನ
ಇದು ಮನಸು ತೊದಲಿದ ಪುಟ್ಟ ಕವನ
-------********---------*********_______**********---------***********
#೯
ಕಣ್ಣಲಿ ಮಡುಗಟ್ಟಿರುವುದು
ದನಿಯನು ಬಿಗಿದಿಟ್ಟಿರುವುದು
ಎದೆಯೊಳಗೆ ಬಚ್ಚಿಟ್ಟಿರುವುದು
ನಗುವೋ ಅಳುವೋ ಅರಿಯೆ ನಾ
ಹೇಳಿಕೋ ನೀ ಪೂರ ಇಳಿಸಿಕೋ ಮನಸಿನ ಭಾರ

ಕಣ್ಣಿದು ಮನಸಿನ ಕನ್ನಡಿ
ನಾ ಅರಿಯೆ ಇದರ ಮುನ್ನುಡಿ
ವಿನೋದವೋ ವಿಷಾದವೋ ಆದರೂ
ಇದು ವಿಶಾಲವೂ ನಿಷ್ಕಲ್ಮಶವು

ಏನೆಂದು ಹೇಳಲಿ ಇದರ ಹುಚ್ಚು
ಬಚ್ಚಿದುವುದೇ ಅಚು ಮೆಚ್ಚು
ನೋವೋ ನಲಿ ವೋ ಛಲವೋ
ಎದೆ ಇದು ಬತದ ಭಾವದ ಸಾಗರವು ....
-------********-------*******------********--------*******-------***********------
#೧೦
ಒಂಟಿಪಯಣ ನಿನ್ನದು
ಗುರಿ ಇರದ ದಾರಿಯಲಿ
ಕಾರಿರುಲಾ ಕತ್ತಲಲಿ ಮುಗಿಯದ ಪಯಣ ನಿನ್ನದು

ಮನದ ಅಇರುಲಿಗೆ ಚಂದಿರನು ಬಾರನೇ
ಇರುಳ ಕಳೆವ ಸೂರ್ಯನು ಹಗಲನು ತಾರನೇ
ಕಟ್ಟಲು ಕಳೆದು ಬೆಳಕು ಹರಿಯುವುದೇ
"ಒಂಟಿಪಯಣ "
ಜೊತೆ ಇರದ ಬಾಳಿನಲಿ ನೆನಪುಗಳೇ ಸ್ನೇಹಿತರು
ನೆನಪಿರದ ಬದುಕಿನಲಿ ನೋವು ನಲಿವೆ ಬಂಧುಗಳು
ಕನಸಿನ ಲಾಂದ್ರ ಹಿಡಿದು ನೀ ನಡೆ...
"ಒಂಟಿಪಯಣ "
-------******-------*******--------********--------********-------------
May be continueee....

Saturday, March 28, 2009

ಯುಗದ ಆದಿ ಸಿಹಿ ಕೊಂಚ ಕಹಿ ಕೊಂಚ ಹಂಚಿ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಯುಗದ ಆದಿ ತೋರಲಿ ನಿಮ್ಮ ಹೊಸ ಕನಸುಗಳಿಗೆ ಹಾದಿ

ಉದಯನ ಹೊಸಕಿರಣ ಬೀರಲಿ ನಿಮ್ಮ ಬಾಳಿನಲಿ ಹೊಂಗಿರಣ
ಹಸಿರು ತೋರಣ ತಣಿಸಲಿ ನಿಮ್ಮ ಕಂಗಳನ
ಕೋಗಿಲೆಯ ಗಾನ ತಣಿಸಲಿ ನಿಮ್ಮ ಮನಸನ್ನ
ಮಾವಿನ ಸವಿ ಯಂತೆ ಸಿಹಿಯಾಗಿರಲಿ ನಿಮ್ಮ ಮುಂದಿನ ಜೀವನ



Ugadi, a kannada poem by SLS Kumar



ಹೊಸ ಚಿಗುರಿನಂತೆ ಹಸಿರಾಗಿರಲಿ ಜೀವನ

ಚಿಗುರಿದ ಕನಸುಗಳ ಸಿಂಗರಿಸಲಿ ಹೂಮನ
ಸಿಹಿ ಇರಲಿ ಕಹಿ ಇರಲಿ ಆದರೆ ಸವಿಯುವ ಮನಸಿರಲಿ
ಹೊಸವರುಷಕೆ ಶುಭವಾಗಲಿ
ಸಂಭ್ರಮದ ಹಬ್ಬ ಯುಗಾದಿಯು
ಮನೆಮಂದಿಗಳಲಿ ಸಂತಸ ತರಲಿ
ಯುಗ ಯುಗಗಳಲಿ............



ಹೊಸವರುಷದ ಹೊಸ ಬಾಳಿಗೆ ಹಸಿರು ತೋರಣ
ಹೊಸ ಹೊಸ ಕನಸುಗಳ ಸವಿ ಹೂರಣ
ಪ್ರಗತಿಯತ್ತ ಸಾಗಲಿ ಚಾರಣ
ಯುಗದ ಆದಿ ಯಾ ಸಂಭ್ರಮದ ರಸದೌತಣ



ಸಿಹಿ ಕೊಂಚ ಕಹಿ ಕೊಂಚ ಹಂಚಿ
ಕಾಲ ಹೋಗಲಿದೆ ಮಿಂಚಿ
ಸಾಧಿಸುವ ಮನಸಿದ್ದರೆ ನೀ ಸವ್ಯಸಾಚಿ

--
ಆತ್ಮೀಯ ಅनिKतನ
AnikethanA.H.S
....The InfinitY....

Wednesday, March 11, 2009

ಆಡದ ಮಾತು ಒಡೆಯದ ಮುತ್ತು

ನಯನಗಳು ಒಂದಾದರು ಮನಸುಗಳು ಒಂದಾಗಲಿಲ್ಲ ತುಟಿಯಂಚಲಿ ಬಂತು ಎರಡಕ್ಷರ ತುಟಿ ಎರಡಾಗಲಿಲ್ಲ ಅಮೂಲ್ಯವಾದ ಮೂರು ಮುತ್ತುಗಳು ಮಾತಾಗಲೇಇಲ್ಲ ಆಡದ ಮಾತು ಒಡೆಯದ ಮುತ್ತು ನನ್ನಲ್ಲೇ ಉಳಿಯಿತಲ್ಲ ....!!!!

Sunday, February 1, 2009

ನೆರಳು

ತಪ್ಪು -ಒಪ್ಪುಗಳ ಜೊತೆಗಿನ ಈ ಬಾಳ ಪಯಣದಲಿ
ತಪ್ಪಿನ ನೆರಳು ಕೆಲವೊಮ್ಮೆ ಕಣ್ಮುಂದೆ
ಕೆಲವೊಮ್ಮೆ ಬೆನ್ನ ಹಿಂದೆ ...
ಅದೇನೇ ಇರಲಿ ಸಾಗಿ ನೀ ನಡೆ ಮುಂದೆ
ಒಪ್ಪಿ ನಿನ್ನ ತಪ್ಪನು ಇಂದೇ
ಬಿಟ್ಟರು ಬಿಡದ ಮಾಯೆ ಇದೇ !!?

ಅಂದು-ಇಂದು

ಅಂದು ತಂಪೆರೆವಮುನ್ನ ಮೋಡಗಳ ಹೊತ್ತೊಯ್ದ ಬಿರುಗಾಳಿ
ಇಂದು ತಂಗಾಳಿಯಾಗಿ ಬಂದಾಗ ಏನ ಹೇಳಲಿ
ಮೊದಲೇ ನಾನಿರುವೆ ಛಳಿಯಲ್ಲಿ
ಬೆಚ್ಚನೆ ಗೂಡಿನ ನಿರೀಕ್ಷೆಯಲಿ !!?

ನೀನೇ ನೀರೆ

ನೀ ಬಂದ ಆ ಸವಿಘಳಿಗೆ
ನನ್ನ ಒಡಲೊಳಗೆ ಮಾಯವಾಯ್ತು ಬೇಗೆ
ಹೊಮ್ಮಿತು ಹರುಷದ ನಗೆ
ಕಾರಣ ನೀನೇ ನೀರೆ !
.
.
.
.
.
ಎಳನೀರೆ....!!

ಮಧುರಾ..

ಮನಸುಗಳ ಮಾತು ಮಧುರಾ.. ಅದರ ಸವಿನೆನಪು ಅಮರ ...
ಅರಳಿದ ನಗುವಿನಷ್ಟೇ ಸುಂದರ ,
ಹೃದಯದೊಳಗೆ ಬೆಳಗಿದಂತೆ ಹುಣ್ಣಿಮೆ ಚಂದಿರ
,
ನೆನೆಯಲು ಬೇಸರ ದೂರ ದೂರ.

Saturday, January 31, 2009

ಮರೆಯಲಾರೆ ಯಾವತ್ತೂ..

ನಾ ಹೆಗೆಮರೆಯಲಿ ನಿನ್ನ
ಜನುಮ ಕ್ಕೆ ಜೀವ ನೀಡಿದ ದೇವತೆಯನ್ನ
ಮರೆಯಲಾರೆ ಯಾವತ್ತೂ.. ನಿನ್ನ ಮಮತೆಯ ಮುತ್ತು
ನೀನಿತ್ತ ವಾತ್ಸಲ್ಯದ ತುತ್ತು
.
.
.
.
.
ನಾ.. ಅಮ್ಮಾss ಅಂದ ಆಹೊತ್ತು !!!

Sunday, January 25, 2009

ಹೆಜ್ಜೆಗುರುತು

ಹೊತ್ತಲ್ಲದ ಹೊತ್ತಲ್ಲಿ ಸದ್ದಿಲ್ಲದೆ ಬಂದು ಹೋಗುವ ಭಾವನೆಗಳ ಹೆಜ್ಜೆಯ ಸದ್ದು ಕೇಳಿಸದು ,
ಕೊನೆಗೆ ಉಳಿವುದು ಮಧುರ ನೆನಪುಗಳ ಹೆಜ್ಜೆಗುರುತು ಮಾತ್ರಾ ....

ಸಾರ್ಥಕಾ ಜೀವನ

ಸೊಗಸು
ಪದಗಳಾದಮೇಲೆ ಭಾವನೆಗಳು,
ನಗೆಯಾದಾಗ ಸಂತೋಷದ ಕ್ಷಣಗಳು ,
ಸಕ್ಕರೆಯಾದಾಗ ಕಬ್ಬಿನಹಾಲು
ಜೇನಾದಾಗ ಹೂವಿನಾ ಹನಿಗಳು ,
ಬಾಳು ಹರುಷದಿ ಹರಿವ ನೀರಾದಾಗ ....
ಆನಂದದ ಕಡಲ ಸೇರಿದಾಗ.




ಸಾರ್ಥಕಾ ಜೀವನ
ಸಾಧನೆ ನೀನಾದಾಗ......!!
माँ तुझे सलाम
वन्दे मातरम !!!!!
जय हिंद

ಕಣ್ಣು ಬೇರೆ ದೃಷ್ಟಿ ಒಂದು ನಾವು ಭಾರತೀಯರು
ಭಾಷೆ ಬೇರೆ ಭಾವ ಒಂದು ನಾವು ಭಾರತೀಯರು,
ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು,
भाषा हे अनेक बात है एक,
जश्ने मुबारक .
गणतंत्र दिन का मुबारक पुरे दिल से ,
happy REPUBLIC DAY
JAI HIND ,


- ಆತ್ಮೀಯ ಅनिKतನ