Friday, June 19, 2009

ತುಂಟನೋ ಇವ ತುಂಟನೋ


ತುಂಟನೋ ಇವ ತಾಳೆ ಇವನ ಆಟ ತುಂಟನೋ
ಸುಳ್ಳನೋ ಇವ ಹುಸಿ ಮುನಿಸಲು ನಗಿಸೋ ಸುಳ್ಳನೋ
ನಂಟನೋ ಇವ ಜನುಮಕೆ ಅಂಟಿದ ನಂಟನೋ
ಭಂಟನೋ ನಂಬಿದವರ ಕಾವ ಭಂಟನೋ.. "ಪ "

ಹಾಲ ಹಸುಳೆ ಇವನು ಎಳೆಯರೊಳಗೆ ಬಲು ಹಳೆಯನೋ
ಬಾಯೊಳಗೆ ತೋರಿದ ಇಳೆಯನು ಇವ
ಮೊಳಕೆಯಲೇ ತೋರಿದ ಬೆಳೆಯನು
ಕಂದನೋ ಇವ ನಂದನೋ ನಂದದ ಆನಂದ ಈವನೋ. "ತುಂಟನೋ " "೧ "

ಮಳ್ಳನೋ ಮರುಳು ಮಾತಿನ ಮಳ್ಳ ಜಾಣನೋ
ಕಳ್ಳನೋ ಇವ ಮುರಳಿಯ ಮೋಹದಿ ಮನ ಕದಿಯುವನೋ
ಗೆಳೆಯನೋ ಇವ ಗೋಪಿಯರ ಪ್ರಿಯ ಪ್ರಾಣನೋ
ಪುಂಡ ಇವ ಪುಂಡರಿಗೊಡೆಯ ಪುಂಡರೀಕನು "ತುಂಟನೋ " "೨ "

ಕುಟಿಲನೋ ಇವ ಬಯಸನು ಎಂದೂ ಕೇಡನು
ಕಪಟನೋ ಇವ ಕೆಡುಕಿನ ಕಡುವೈರಿಯೋ
ಕೆಡುವರ ಕಾಡುವನು ಬಿಡದೆ ಬೇಡಿದರೆ ಒಲಿವನು
ಕಡು ಕೃಷ್ಣನೋ ಇವ ಬೆಳ್ಳನೆ ಹಾಲಿನ ಮನದವನು..."ತುಂಟನೋ " "೩ "


how is it :)
to be continued ....!!

No comments:

Post a Comment