Tuesday, May 26, 2015

My Home studio "Music Spa" musical treat 4ur Sound

As you all familiar with my musical n lyrical jobs, I would like to share a look of my new small home studio setup http://studiomusicspa.blogspot.in/
Ani's "Music Spa" Home Studio, musical treat 4Ur Sound.
recording mixing mastering can be done here.
samples Visit:  https://soundcloud.com/studio-musicspa
 undertaking jingles audio albums recordings, live concert recordings. Lyrics n music programming jobs, 



Thursday, June 19, 2014

ಒಂದಷ್ಟ್ ಲೈನ್ ಹೊಡ್ಯಣ ಅನ್ಸ್ತು ನೀವು ಲೈಕ್ ಹೊಡಿರಿ

ಪ್ರೀತಿಯ ಗಾಢತೆ ತಿಳಿಯಲು ನೆನಪಿಗೆ ಅಳತೆ ಹಾಕು :)

ಮೆಲುಕು ಹಾಕಲು ಹುಣಸೆ ಲಾಲ್ಲಿ ಪಪ್ ಥರ ನೆನಪುಗಳು ಸಲ್ಪ ಸಿಹಿ ಸಲ್ಪ ಹುಳಿ

ಸವಕಲು ನಾಣ್ಯ ಕೂಡ ಬೆಲೆಬಾಳುವ ಲೋಹವೇ , ಉಪಯೋಗ ಅರಿತು ಬದುಕನ್ನು ಉಪಯೋಗಿಸು :) (Y)

ಕಷ್ಟವೋ ನಷ್ಟ ವೋ ನಮ್ಮನ್ನೆಲ್ಲ ಸೃಷ್ಠಿಸುವುದೇ ಬ್ರಹ್ಮ ನ ಹಣೆಬರಹ :P  ಮೈನ್ಟೇನ್ ಕ್ವಾಲಿಟಿ ಇನ್ ಪ್ರೊಡಕ್ಟಿವಿಟಿ ಡಿಯರ್ ಗಾಡ್ ಫಾದರ್ .

ಮನೆಯಲ್ಲೊಂದು ದೇವರ ಕೋಣೆ , ಉಳಿದಲ್ಲೆಲ್ಲಾ ಏನೋ ನಾ ಕಾಣೆ :-O

ದೇವರಾಣೆ ದೇವರಿಗೊಂದು ಸುಳ್ಳು :)

ಹೌದು ಪ್ರತಿಯೊಬ್ಬ ಮನುಜನು ದೇವರ ಪ್ರತಿರೂಪ ಆದರೆ ಕಾಣುವುದು ಅಪರೂಪ

ಟೈಮ್ ಆಯ್ತು ನಾಳೆ ಒಂದಷ್ಟ್ ಬರಿತಿನಿ ನೆನ್ಪಿದ್ರೆ :P

Wednesday, June 18, 2014

"ಕನಸು - ನನಸು"

ಶೀರ್ಷಿಕೆ : "ಕನಸು - ನನಸು"

ಕಂಗಳು ಕಂಡಮೇಲು ಕನಸಲಿ ಬರಲೇಕೆ ನಾಚಿಕೆ
ಕನಸಲಿ ಬಂದಮೇಲೆ ಹೇಳು ಇದೆಯೆ ನಮಗ್ಯಾರ ಅಂಕೆ
ಕಾಡಲೆಂದೇ ಬಂದು ಮರೆಯಾದೆಯ
ಮರೆಯಾಗಬಹುದು ಮರೆಯಲಾರದು .
ಕನಸು - ನನಸು ಎರಡೂ ಒಂದೇ ನೀ ಬಂದು ಹೋದಮೇಲೆ ಹೃದಯಕೆ

-ಅನಿಕೇತನ ಹ್ಯಾಪ್ಪಿ B o Y
ನಾವ್ ಯೆಂಗೆ

ನಸು ನಗುವಿನ ಕಿಸುಕ್ ಕವನ

ನಸು ನಗುವಿನ ಕಿಸುಕ್ ಕವನ ಓದಿ ಮಿತ್ರರೇ

ನಸುಕಿನ ಕನಸಲಿ ನಸುನಕ್ಕವಳಾ ನೀ

ಒಳಗೊಳಗೆ ಕುಳಿತು ಇಡುತಿರಲು ಒಲುಮೆಯ ಕಚಗುಳಿ
ಒಮ್ಮೆಲೆ ಉಕ್ಕಿಬರುವ ಸಂತಸವ ಹೇಳಲಿ ಯಾರಬಳಿ
ಒಟ್ಟಿಗೆ ಬಂದಂತಾಯ್ತು ಹೃದಯದಿ ಛಳಿ ಮಳೆ ತಂಗಾಳಿ
ಒಂದೂ ತಿಳಿಯದೆ ಎಚ್ಛರವಾಗಲು ಬಿಡದೇ ನಿನ್ನ ಅಮಲಿನ ಸುಳಿ

-ಅನಿಕೇತನ ಹ್ಯಾಪ್ಪಿ BO Y

ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ

ಮಿಲನ ಸಿನೆಮಾ ದು ಮದರಂಗಿಯಲ್ಲಿ ಹಾಡು ನೋಡ್ತಿದ್ದೆ ,
ನಾನ್ ಯಾಕ್ ಈ ಥರ ಒಂದು ಹಾಡು ಕಟ್ಟೋ ಪ್ರಯತ್ನ ಮಾಡ್ಬಾರ್ದು ಅನ್ಸಿ ಮೂಡಿದ ಮದುವೆಯ ಸಂಧರ್ಭ ಕೆ ಹೊಂದುವಂಥ ಸಾಹಿತ್ಯ ರಚನೆಯ ಪ್ರಯತ್ನ

ಬೆರಳಿಗುಂಟು ಉಂಗುರದ ಬಯಕೆ
ಹರಕೆ ಹೊತ್ತ ಮನಸು ಮಾಂಗಲ್ಯಕೆ
ಬಯಸಿ ಬಯಸಿ ಅನುರಾಗಕೆ
ಹೃದಯ ತುದಿಗಾಲಲಿ ನಿಂತಿದೆ ಹೂ ಮಾಲೆ ವಿನಿಮಯಕೆ

ಇಂದ್ರನ ಓಲಗ ಮೀರಿಸೋ ಮದುವೆಯ ಮಂಟಪ
ಗಂಧರ್ವರ ನಾಚಿಸೋ ಮಧುಮಕ್ಕಳ ಸಲ್ಲಾಪ
ಎದೆಯಲಿ ಕಚಗುಳಿ ಬೆರಳಲಿ ರಂಗೋಲಿ
ಗಡಿಬಿಡಿ ಅವಸರ ಸಂತಸ ಸಡಗರ
ವಿಷೇಶವಾಗಿ ಇಳೆಗೆ ಇಳಿದ ಸ್ವರ್ಗವೆ ಎಲ್ಲೆಲ್ಲು ಬರೀ ನಗುವೇ

ನಾಚುವ ಹೊಸ ಪರಿ ಬೆರೆಯಲು ತರಾತುರಿ ಬೆಡಗಿನ ರಸಮಂಜರಿ
ನೋಡಲು ಈಸಿರಿ ಬಂದಿದೆ ಬಳಗವೆ ಸಾಗಿ ಸಗಿ ನೂರು ದಾರಿ

ತಾಳ ಮೇಳ ಮಂಗಳವಾದ್ಯಕೆ ಸಖಿಯರ ಬಿನ್ನಾಣಕೆ
ಅಂದ ಚಂದ ನಾಚಿಕೆ ಗೆಳೆಯರೊಳಗೆ ಹೊಸ ಹವಣಿಕೆ
ಬಂಗಾರದ ಭಾರಕೆ ಬಳುಕಿ ಬಳುಕಿ ಅತಿಯಾದ ಹೊಗಳಿಕೆಗೆ
ಜಾರುವಸೆರಗಿಗೆ ಸರಿಯಾಗದು ನೂರುಬಾರಿ ತೀಡಿದರು ನೆರಿಗೆ

ಮರುಳುಮಾಡೊ ಸನ್ನೆಯನೋಟ ಮನಸುಸೆಳೆವ ಮಾತಿನ ಮಾಟ
ಜಾರಿ ಬೀಳೊ ಹಳ್ಳದ ಕಡೆಗೆ ಹೂವಿನ ಮೆತ್ತೆಯ ಮೇಲೇ ನಡೆದಾಟ

like ಅಯ್ತಾ friends
-ಅನಿಕೇತನ ಹ್ಯಾಪ್ಪಿ BOY

ವಿಧಿಗೊಂದು ಸೂತ್ರ

ಸಂಧರ್ಭಕ್ಕೆ ಹೊಂದುವ ಗೀತೆಗಳ ರಚನೆಯ ಪ್ರಯತ್ನದಲ್ಲಿ ಓದಿ ಬಳಸಬಹುದಾದಲ್ಲಿ ಬಳಸಿಕೊಳ್ಳಿ

ವಿಧಿಸು ವಿಧಿಗೊಂದು ಸೂತ್ರ
ವಿವರಿಸು ಜೀವದ ಪಾತ್ರ
ವಿಪರೀತ ವೈಚಿತ್ರ್ಯ
ವಿಶಾದಾ ಚಾರಿತ್ರ್ಯ
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೂಬಳ್ಳಿಯ ಮುಳ್ಬೇಲಿ ಮೇಲೇಕೆ ಇಟ್ಟೇ
ಹೂವಲ್ಲಿ ಆ ಅಂದವ ಯಾಕೇ ಕೊಟ್ಟೆ ನೀ ..
ಹೂನಗುವೇ ಶಾಪವೇ ಆನಗುವಿಗೇ ಮರುಳಾದೆನೇ
ತಪ್ಪೇ ಆಕರ್ಷಣೇ ಯಾಕೇ ಈ ಶೋಧನೇ ವಿವರಿಸಲಾಗದ ವೇದನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

ಹೊಗೋ ದಾರೀಲಿ ಹೂ ಕಂಪ ಜೊಂಪಲ್ಲಿ
ಹೇಗೋ ಮೈಮರೆತ ಕ್ಷಣದಲ್ಲಿ ನೀ ..
ಹೊವಿದೇ ಮುಳ್ಳಲಿ ನರಳದಿರು ನೋವಲಿ
ತಂಗಾಳಿ ಮೈ ಮರೆಸೋ ಮುನ್ನ ಬಿರುಗಾಳಿ ಹೊತ್ತುಹೋಯ್ತೆ ಹೂವನೇ..
ವಿರಮಿಸು ಕಾಲವೆ ನಡುಗಿದೆ ಜೀವವೆ ನಿನ್ನ ದಾಳಿಗೆ ಕಾದಿದೆ ತಂಗಾಳಿಗೆ

- ಅನಿಕೇತನ ಹ್ಯಾಪ್ಪಿ B Y

ಚಿಂತನ-ಕವನ

ಪುಟ್ಟದೊಂದು ಚಿಂತನ-ಕವನ
ನಮ್ಮನು ಜಗತ್ತಿಗೆ ಗೋಚರಿಸುವಂತೆ ಮಾಡುವ ನಿಸ್ವಾರ್ಥ ಸೇವೆಗೆ ಹೆಸರು ಬೆಳಕು

ನೀ ಇದ್ದರೆ ನಿನ್ನನು ತೋರುವುದು ಬೆಳಕು
ನೀ ತೊರೆದು ಎಲ್ಲ ಅಳುಕು ನಡೆದರೆ ಸಾಕು ಕಾಣುವತ್ತ ಬೆಳಕು
ನೀ ಕಲ್ಲಾದರು ಸಾಕು ಮಿನುಗಿಸಬಲ್ಲದು ನಿನ್ನನು ಬೆಳಕು
ನೀ ನಿಧಿ ನೀ ವಾರಿಧಿ ನೀ ನಿನ್ನ ಎಲ್ಲಾ ವರದಿ ಬಹಿರಂಗ ಗೊಳಿಸುವುದೇ ಬೆಳಕು
ನೀ ಇದ್ದಂತೆ ತೋರುವುದು ನೀ ಕೊಳಕೋ ಹುಳುಕೋ ಥಳುಕೋ ಬೆಳಕು ಹರಿವನಕ ಮುಸುಕು ಎಲ್ಲಾ ಮಸುಕು

-ಹೆಸರು ಬೇರೆ ಬೇಕೆ : ) ಸರ್ವವ್ಯಾಪಿ ಬೆಳಕೆ