Wednesday, August 13, 2025

Vostro account "deal in INR" ಜಗತ್ತಿನ ಅವಶ್ಯಕತೆ + ಭಾರತದ ಸಾಮರ್ಥ್ಯ = ರೂಪಾಯಿ ಮೌಲ್ಯ

Vostro account deal in INR ನಮ್ ದಾಸರು ಆಗಲೇ ಹೇಳಿದ್ರು ಕೆರೆಯ ನೀರನು ಕೆರೆಗೆ ಚೆಲ್ಲಿ ಅಂತ ಮತ್ತೆ ದೊಡ್ಡ ಫಿಲಾಸಫಿ ಅಂದ್ರೆ ಪ್ರಪಂಚ ನಡೆಯೋದೇ ಅದರ ಮೇಲೆ 🙂👍 ನಾನು ಕೊಡೋ ಭರವಸೆ ನ ಪೂರೈಕೆ ಮಾಡೋ ಶಕ್ತಿ ಇರ್ಬೇಕು ಆಗಲೇ ಅದಕ್ಕೆ ಬೆಲೆ. ಅರ್ಥ ಆಗಲಿಲ್ಲ!? ಇಡೀ ಬ್ರಹ್ಮಾಂಡದ ಸೃಷ್ಟಿ ಯ ಬಿಸಿನೆಸ್ ಇದು ವಾಹ್. ಬೆಲೆ ಬರ್ಬೇಕು ಅಂದ್ರೆ ಪೂರೈಕೆ ಮಾಡೋ ಕೆಪಾಸಿಟಿ ಇರ್ಬೇಕು ಅದು ಯಾರು ಕ್ರಿಯೇಟರ್ ಅವ್ರ್ ಗೆ ಮಾತ್ರ ಇರುತ್ತೆ. ಬಯಕೆಯ ಪ್ರತಿಯಾಗಿ ಪೂರೈಕೆ ಆದ್ರೆ ಈ ಮಧ್ಯೆ ಇರೋ ಭರವಸೆ ನೇ ನಾವು ನೀವು ಬಳಸೋ ಕರೆನ್ಸಿ, ಅದು ಕೊಟ್ಟು ನಮಗೆ ಬೇಕಾದ್ದು ತಗೊಬೋದು ಅಂತ ಅದೇ ಕೆಲಸ ಭಾರತ ಈಗ ಮಾಡೋಕೆ ಶುರು ಮಾಡ್ತಿದೆ ರುಪಾಯಿ ನ ಬಲಪಡಿಸೋಕೆ ಟ್ರೇಡ್ ಇನ್ ರುಪಿ ಐ ಎನ್ ಆರ್ 👍ಕೊಡೋ ಸಾಮರ್ಥ್ಯ. ನಾವು ಸೃಷ್ಟಿ ಮಾಡೋ ಪ್ರಾಡಕ್ಟ್ ಮತ್ತು ಪ್ರಪಂಚದಲ್ಲಿ ಅದಕ್ಕೆ ಬೇಡಿಕೆ ಇರೋಥರ ಆಗುವ ಕನಸು ಹೊತ್ತು ಹೊರಟಿದೆ.
ನೀನು 100 ರೂಪಾಯಿ ಕೊಟ್ಟು ಒಂದು ಭಾರತದ ಸರಕನ್ನ ಕೊಂಡುಕೊಳ್ಳೋಕೆ ಆಸಕ್ತಿ ಇದೆ ಅಂದಾಗ ಭಾರತದ 100 ರೂಪಾಯಿ ಗೆ ಮೌಲ್ಯ ಬರೋದು ಆ ನಿಟ್ಟಿನಲ್ಲಿ ಭಾರತ ಯಾವಾಗ ಹೊರಗಿ ವ್ಯಾಪಾರಿಗಳು ಬಂದಾಗ ಡಾಮಿನೇಟ್ ಮಾಡೋ ಹಂತದಲ್ಲಿ ವಹಿವಾಟು ನಡೆಸಿತ್ತು ಅಂತ ಕೇಳಿದೀವಲ್ಲ ಆ ಥರ ಮತ್ತೆ ಆಗ್ಬೇಕು. ನಾವು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರೂಪಾಯಿ ಬಳಕೆಯ ಹೊಸ ಹೆಜ್ಜೆ ಗೆ ಪೂರೈಕೆ ತುಂಬಾ ಮುಖ್ಯ.. ಯ್ಯೂಟ್ಯೂಬ್ ಕಂಟೆಂಟ್ ಅಲ್ಲ ಇಲ್ಲಿ ಖಾಸಗಿ ವಿಚಾರ ನ ಇಲ್ಲಿ ನ ಜನಕ್ಕೆ ಸೇಲ್ ಮಾಡಿ ಯೂಟ್ಯೂಬ್ ಆ್ಯಡ್ ಏಜೆನ್ಸಿ ಗಳಿಗೆ ಲಾಭ ಮಾಡಿಕೊಡೋದಲ್ಲ ಅದೇ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಮೊಲಕ ಭಾರತದ ಉತ್ತಮ ಉತ್ಪಾದನೆ ಹಾಗೂ ಪೂರೈಕೆ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಗಾಳಿ ಸುದ್ದಿ ಗಿಂತ ನಿಜವಾದ ವಸ್ತು ಸ್ಥಿತಿ ಗೆ ಮನ್ನಣೆ ಇರೋದು ಅದನ್ನು ಬಲಪಡಿಸೋಕೆ ಶುರುಮಾಡ್ಬೇಕು.. ಬಯಕೆ ಪೂರೈಕೆ ಗೆ ಬೆಲೆ ಬರೋದು.
ಈಗ ಭಾರತದ ಜನಸಂಖ್ಯೆ ನ ಬಯಕೆ ನ ಪ್ರಪಂಚದಲ್ಲಿ ಹೇಗೆ ಎನ್ ಕ್ಯಾಶ್ ಮಾಡ್ತಿದಾರೆ ಹಾಗೆ. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಇದನ್ನು ಜವಾಬ್ದಾರಿ ಇಂದ ಪ್ರತಿ ನಾಗರಿಕರು ಅರ್ಥ ಮಾಡಿಕೊಂಡು ಉತ್ತಮ ಉತ್ಪಾದನೆ ಮತ್ತು ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಬೇಕು 👍
ಇವತ್ತು ಜಗತ್ತಿನ ಅವಶ್ಯಕತೆ + ಭಾರತದ ಸಾಮರ್ಥ್ಯ = ರೂಪಾಯಿ ಮೌಲ್ಯ
ಈ ಎಲ್ಲದರ ಪೂರೈಕೆ ಗೆ ನಮ್ಮ ತಯಾರಿಕೆ ಏನು!?
1 ಆಹಾರ 2 ಬಟ್ಟೆ 3 ಔಷಧಿ 4 ಸೇವೆ 5 ಸೌಲಭ್ಯ
 ಯಾವುದೇ ಫಾರ್ಮ್ಯಾಟ್ ನ ಬಿಸಿನೆಸ್ ಮೊದಲು ನೋಡೋದು ಅವಶ್ಯಕತೆ ಏನಿದೆ ಎಷ್ಟು ಅಂತ, ಆದ್ರೆ ಪಾಶ್ಚಾತ್ಯ ರು ಮಾಡಿದ ದೊಡ್ಡ ಬ್ಲಂಡರ್ ಏನು ಅಂದ್ರೆ ಅವರ ಉತ್ಪಾದನೆ ಗೆ ಅನುಗುಣವಾಗಿ ಪ್ರಪಂಚದಲ್ಲಿ ಮಾರುಕಟ್ಟೆ ಸೃಷ್ಟಿಸಿ ದ್ದು, ಎಲ್ಲದಕ್ಕೂ ಅವರದ್ದೇ ಬ್ರಾಂಡ್ ಮಾಡಿದ್ದು. ಅದಕ್ಕೆ ಅವರ ಮೊದಲ ಅಸ್ತ್ರ, ಶ್ರೇಣಿ ಕೃತ ವ್ಯವಸ್ಥೆ, ಶ್ರೇಷ್ಠ ತೆ ಅನ್ನೋದು ತಮಗೆ ಮಾತ್ರ ಅನ್ವಯ ಅಂತ ಜನರನ್ನು ನಂಬಿಸಿ ದ್ದು.
ತುಂಬಾ ಸರಳವಾಗಿದೆ ಮತ್ತೆ ಅಷ್ಟೇ ಪರಿಣಾಮಕಾರಿಯಾಗಿ ಜಾರಿಗೆತಂದು ಇನ್ನೂ ನಮಗೆಲ್ಲ ಅದೇ "ಬ್ರಾಂಡ್" ಅನ್ನೋ ಮಬ್ಬು ಹಿಡ್ಸಿದಾರೆ. ಆಗೋದೆಲ್ಲ ಒಳ್ಳೆಯ ದೇ,  ಬ್ರಾಂಡ್ ನಮ್ಮ ದಾಗಿರಬೇಕು ಅದು ಮುಖ್ಯ, ಈಗ ರುಪಾಯಿ ವಹಿವಾಟಿಗೆ. ಅಂದ್ರೆ
ಉತ್ತಮ ಅನ್ನೋ ಬ್ರಾಂಡ್ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಆ ಸ್ವಾತಂತ್ರ್ಯವನ್ನು ಮನಸ್ಸುಗಳನ್ನು ಬ್ರಾಂಡ್ ಮಾಡೋ ಮೂಲಕ ಪುಷ್ಠಿ ಗೊಳಿಸಬೇಕು. ಆಗ ಮಾತ್ರ ನಮ್ಮ ಉತ್ಪಾದನೆ ಗೆ ನಾವು ಬೆಲೆ ನಿರ್ಧಾರ ಮಾಡೋಕೆ ಸಾಧ್ಯ ಇದು ಬರೀ ಮೋಟಿವೇಶನ್ ಗೆ ಮಾತ್ರ ಅಂತ ಅಂದ್ಕೊಂಡ್ ಅಲ್ಲಿಗೆ ಬಿಟ್ಟರೆ ಅಷ್ಟೇ. ಈಗ ಸಮಯ ಬಂದಿದೆ ಸರ್ಕಾರ ಒಂದು ಒಳ್ಳೆಯ  ನಿರ್ಧಾರ ಮಾಡಿದೆ. ನಮ್ಮ ಉತ್ತರ ಜಾಗತಿಕ ಮಟ್ಟದಲ್ಲಿ ಈಗಾಗಲೇ ಇರುವ ವಿಶ್ವಾಸಾರ್ಹ ಬ್ರಾಂಡ್ ಅಂದ್ರೆ ಪ್ರಾಚೀನ ಭಾರತೀಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಗ್ಗೆ ಹೆಚ್ಚಿನ ಜ್ಞಾನ ಪ್ರಬುದ್ಧತೆ ನಾವು ಸಂಪಾದನೆ ಮಾಡಿ ಸ್ಪೂರ್ತಿ ಪಡೆದು ಅದನ್ನು ಈಗಿನ ಕಾಲಘಟ್ಟದಲ್ಲಿ ಹೇಗೆ ಅಳವಡಿಸಬಹುದು ಅಂತ ಅದನ್ನ ರೀ ಡಿಸೈನ್ ಮಾಡಿ ಕೊಡೋದು.
ಅದು ಆಹಾರ ಪೂರೈಕೆ ಹೊಸ ರುಚಿ ರೂಪ ಅಥವಾ ಸಾಂಪ್ರದಾಯಿಕ ಹೆಸರಲ್ಲಿ ಪೂರೈಕೆ ಇರ್ಬೇಕು ಹಾಗೇ ನಮ್ಮ ಸಂಸ್ಕೃತಿ ಮೊದಲ ನಮ್ಮ ಆತ್ಮ ವಿಶ್ವಾಸ ಬಲಪಡಿಸೋಕೆ  ಆಗ್ಬೇಕು ಇದು ಶ್ರೇಷ್ಠ ಅಂತ ಪ್ರಪಂಚ ನಮ್ ನ ಫಾಲೋ ಮಾಡ್ಬೇಕು ಆಥರ ಇರೋದ್ರ ಲ್ಲಿ ಯೋಗ ಮತ್ತು ಆಯುರ್ವೇದ ಆಧ್ಯಾತ್ಮ ಸರ್ವರಿಗೂ ಸರ್ವಕಾಲಕ್ಕೂ ಅವಶ್ಯಕತೆ ಇರೋದು. ಮನರಂಜನೆ ದೃಷ್ಟಿಯಿಂದ ಅಸಂಬದ್ಧವಾದ ಆಚರಣೆಗಳನ್ನು ಮಾರಾಟ ಮಾಡುತ್ತಿರುವ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮನ್ನು ನಾವು ಶ್ರೇಷ್ಠ ಆಚರಣೆ ಮೂಲಕ ಪ್ರತಿನಿಧಿಸಬೇಕಿದೆ ಭಾರತೀಯರ ನಿಷ್ಠೆ ಕೌಶಲ್ಯ ವೃತ್ತಿಪರ ತರಬೇತಿ ಕಾಳಜಿ ರಾಷ್ಟ್ರಾಭಿಮಾನಗಳೇ ಬ್ರಾಂಡ್ ಆಗಿ ಮಾದರಿ ಆದಾಗ ನಮ್ಮ ವಸ್ತು ಗಳಿಗೂ ಉತ್ಪಾದನೆ ಗಳಿಗೂ ಮತ್ತು ರೂಪಾಯಿ ಗೂ ಮೌಲ್ಯ ಸಿಗೋದು.
Vostro concept ತುಂಬಾ ಪ್ರಮುಖ ನಿರ್ಧಾರಗಳಲ್ಲೊಂದು ಇದರ ಸದುಪಯೋಗ ಪಡಿಸಿಕೊಂಡು ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಬೇಕು.

Wednesday, April 23, 2025

ಭಯೋತ್ಪಾದನೆ ಗೆ ಧೈರ್ಯ ವೇ ಉತ್ತರ!!

 ಅನಿ'ಸಿಕೆ :-

ಕ್ಷಣಿಕ ಉದ್ವೇಗ ತೀವ್ರವಾದ ಭಾವನಾತ್ಮಕ ಕೃತ್ಯಗಳು ಖಂಡಿಸಿದಾಗ ಪ್ರತಿಭಟನೆ ಅಥವಾ ಮಾತುಕತೆ ಇಂದ ಸರಿ ಹೋಗಬಹುದು. ಆದರೆ   ಅಂಧಶ್ರದ್ಧೆ ಅಥವಾ ಕ್ರೂರ ಮಾನಸಿಕತೆ  ಹಿನ್ನೆಲೆಯಲ್ಲಿ ನ ಸಮಸ್ಯೆಗಳನ್ನು ಬೇರೇ ರೀತಿಯಲ್ಲೇ ಬಗೆಹರಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ಇದು ಶಾಂತಿ ಮಂತ್ರ ಕ್ಕೆ ಬಗ್ಗುವ ಒಗ್ಗುವ ಕರಗುವ ಮಾನಸಿಕತೆಯಲ್ಲ. ಇದೆಲ್ಲ ಒಂದು ಯೋಜಿತ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುವ ಚಟುವಟಿಕೆ ಈ ಎಲ್ಲದರ ಮೂಲ ಮತ್ತು ಇದರ ಹಿಂದಿನ ಕೈಗಳು ಎಂದಿಗೂ ಈ ಕೃತ್ಯಗಳ ಕುರುಹನ್ನು ಅಂಟಿಸಿಕೊಳ್ಳುವುದಿಲ್ಲ ಹಾಗೂ ಸದಾ ಶುಭ್ರವಾದಂತೆ ತೋರುತ್ತವೆ.

ಹಾಗೇ ಇಂಥಹದನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳು ನಮ್ಮ ನಡುವೆ ಆಂತಕ ಸೃಷ್ಟಿಸಿ ಭಯವನ್ನು ಸೃಷ್ಟಿಸುವಂತೆ ಮಾಡುವ ಬದಲು ಎಚ್ಚರಿಕೆ ಘಂಟೆಯ ಹಾಗೆ ಸದಾ ಮೊಳಗುತ್ತಿರಬೇಕು.

ನಮ್ಮ ಸಂಕಟ ನೋವು ಇಂಥ ಕೃತ್ಯಗಳನ್ನು ಮತ್ತಷ್ಟು ಬಲಪಡಿಸುವ ಸರಕಾಗದೇ ನಮ್ಮ ಆಲೋಚನೆಗಳನ್ನು ಸ್ವಲ್ಪ ಮಟ್ಟಿಗೆ ಪರಾಮರ್ಶೆ ನಡೆಸಿ ಬದಲಾಗುವ ಮೂಲಕ ಇಂಥ ಚಟುವಟಿಕೆಗಳಿಗೆ ಪುಷ್ಠಿಕೊಡುವ ಮೂಲಗಳೊಂದಿಂಗೆ ನಮ್ಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಹಾಗೂ ಇಂಥವನ್ನು ಬೆಂಬಲಿಸುವ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ನಡೆ ಯನ್ನು ಬದಲಿಸಿಕೊಂಡು ಅವಲಂಬನೆ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ.

ತುಂಬಾ ಆಳದಿಂದ ಸರಿಯಾದ ಚಿಕಿತ್ಸೆ ಆಗಬೇಕಾದ ಪರಿಸ್ಥಿತಿ ಇದೆ ಮುಲಾಮುಗಳಿಗೆ ವಾಸಿಯಾಗುವ ಗಾಯವಲ್ಲ ಈ ಭಯೋತ್ಪಾದನೆ, ಧೈರ್ಯ ತೋರಲೇ ಬೇಕಾಗಿದೆ, ಭಯೋತ್ಪಾದನೆ ಎಂಬುದು ಸ್ವಯಂಪ್ರೇರಿತವೇ ಆದರೆ ಎಷ್ಟು ಕಾಲ ಸಾಧ್ಯ!? ಇದರ ಪ್ರೇರಣೆ ಪೋಷಣೆ ಗೆ ಒಂದು ತಿಲಾಂಜಲಿ ಅಗತ್ಯವಿದೆ.!

ಉರಿವ ಬೆಂಕಿಗೆ ನಮ್ಮನ್ನು ಕಟ್ಟಿಗೆಯಂತೆ ತೈಲದಂತೆ ಬಳಸಲಾಗುತ್ತಿದೆ ನಾವು ನಮ್ಮ ದುಡಿಮೆ ಸಹಕಾರ ಸಹಾಯ ವನ್ನು ಇಂಥ ವಿಚಾರಗಳನ್ನು ಬೆಂಬಲಿಸುವ ಈ ಕೃತ್ಯಗಳನ್ನು ಸಮರ್ಥನೆಮಾಡುವ ಯಾವುದೇ ವ್ಯಕ್ತಿ ಸಂಸ್ಥೆ ಹಾಗೂ ಈ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸದವರೊಂದಿಗೆ ವ್ಯವಹಾರಗಳಿಂದ ದೂರ ಇರ್ಬೇಕಾದ್ದು ಮೊದಲ ಹೆಜ್ಜೆ. ಪ್ರತಿಯೊಂದು ಇಂಥ ಘಟನೆಗಳು ನಮಗೆ ಎಚ್ಚರಿಕೆ ಹಾಗೂ ಪರೀಕ್ಷೆಗಳೇ ಅಸ್ತಿತ್ವಕ್ಕೆ! ಕಾರ್ಯೋನ್ಮುಖರಾಗದ ಹೊರತು ಮುಂದೆ ಪ್ರತಿಭಟನೆಗಳಿಗೆ ಯಾವುದೇ ಬೆಲೆ ಇಲ್ಲ ಹಾಗೂ ಅದು ಅವರ ಕೃತ್ಯಕ್ಕೆ ಮತ್ತೆ ಉತ್ತೇಜನ ನೀಡುತ್ತದೆ. ಭಯೋತ್ಪಾದನೆ ಗೆ ಧೈರ್ಯ ವೇ ಉತ್ತರ.

ಆ ಧೈರ್ಯ ನಮ್ಮಲ್ಲಿ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಕೆಲಸಗಳಲ್ಲಿ ನಮ್ಮ ಸ್ವಾವಲಂಬನೆಯಲ್ಲಿ ವ್ಯಕ್ತವಾಗಬೇಕು!


ಜೈ ಹಿಂದ್! ವಂದೇ ಮಾತರಂ!

Friday, April 18, 2025

ಅನಿ'ಸಿಕೆ :- ಎಷ್ಟು ದ್ವೇಷ ಇದೆ ಜನಿವಾರದ ಮೇಲೆ.. 🙂

 ಅನಿ'ಸಿಕೆ :-

ಎಷ್ಟು ದ್ವೇಷ ಇದೆ ಜನಿವಾರದ ಮೇಲೆ.. 🙂

ಇದು ಸಮಾಜದ ಸಾಮರಸ್ಯ ಕದಡುವ ಹುನ್ನಾರ ಜನರ ಗಮನ ಬೇರೆಡೆ ಸೆಳೆಯೋ ಯೋಚನೆ ಅನ್ಬೇಕೇ ಅಥವಾ ಆ ನೆಪದಲ್ಲಿ ತಮ್ಮ ಮಾನಸಿಕತೆ ಯನ್ನು ತಮ್ಮ ಅಧಿಕಾರ ಚಲಾವಣೆ ಮಾಡಿ ತೃಪ್ತಿ ಪಟ್ಟರು ಅನ್ನೋ ದೋ ಅಂತ ಗೊತ್ತಾಗದಷ್ಟು ಸೂಕ್ಷ್ಮ ಈ ವಿಚಾರ. ಏನೇ ಆದ್ರೂ ಇವರ ಎಲ್ಲ ದ್ವೇಷ ಕ್ಕೆ ಗುರಿಯಾಗಿದ್ದು ಮಾತ್ರ ಜನಿವಾರ (ಬ್ರಹ್ಮ ಜ್ಞಾನ ಸಾಧನೆಯ ಸಂಕೇತ ವಾದ ಪವಿತ್ರ ಯಜ್ಞೋಪವೀತ) ಬ್ರಹ್ಮ ಜ್ಞಾನ ಪಡ್ಕೋಂಡ್ ಇರೀ ಮೆಡಿಕಲ್ ಇಂಜಿನಿಯರಿಂಗ್ ಸಿ ಇ ಟಿ ಯಾಕ್ ಬೇಕು ಅಂತ ಅಪಹಾಸ್ಯ ಮಾಡೋ ಮಟ್ಟದ ಜನರೂ ಆಸುಪಾಸಿನಲ್ಲಿ ಇದ್ದೇ ಇದಾರೆ. (ಅವರ ಬಗ್ಗೆ ಎಲ್ಲ ತಲೆಬಿಸಿ ಮಾಡಿಕೊಳ್ಳಬಾರದಷ್ಟು ಪ್ರೌಢಿಮೆ ಇದೆ) . ಈ ಬಿಸಿನೆಸ್ ಮಾಡಲ್ ಆಗಿರೋ ವಿವಾದ ಗಳ ಆಯಸ್ಸು ಇಷ್ಟೇ, ಟೈಂ ಪಾಸ್ ಆದಂತೆ ಮರೆತು ಹೋಗೋ ವಿಚಾರವಾಗಿ , ಟೀವಿ ಟಿ ಆರ್ ಪಿ ಸೋಶಿಯಲ್ ಮೀಡಿಯಾ ಟ್ರೆಂಡ್ ಗೆ ಅಷ್ಟೇ ಸೀಮಿತವಾಗಿಸಿ ನಿಜವಾದ ಜಾಗೃತಿ ಮೂಡಿಸುವ ಯಾವುದೇ ಪ್ರಯೋಜನವಾಗಿಲ್ಲ(ಸಂಘ ಸಂಸ್ಥೆಗಳು ಮತ್ತು ಯಾವುದೇ ಸಂಘಟನೆ ಇದರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡೋದಿಲ್ಲ) . ಪ್ರತಿಯೊಬ್ಬ ಯಜ್ಞೋಪವೀತ ಧಾರಿ ತನ್ನ ಕರ್ತವ್ಯವನ್ನು ತಿಳ್ಕೋಬೇಕು, ಇದಕ್ಕೆಲ್ಲ ಕಾರಣ ನಿಮಗೆ ನಿಮ್ಮ ಆಚರಣೆ ಸಂಪ್ರದಾಯ ಸಿಲ್ಲಿ ಅನ್ಸೋಕ್ ಶುರು ಆಯ್ತಲ್ಲ ಅದೇ ಮೂಲ, ಸಾರ್ವಜನಿಕ ಜೀವನದಲ್ಲಿ ಅನಿವಾರ್ಯ ಅಂತ ನಿಮ್ಮನ್ನು ನೀವು ಬಿಟ್ಟುಕೊಟ್ಟ ಪರಿಣಾಮ, ನಿಮ್ಮ ಜ್ಞಾನ ನಿಮ್ಮ ಪ್ರಯತ್ನ ದ ಮೇಲೆ ನಿಮಗಿಲ್ಲದ ಅರಿವು, ನಿಮ್ಮಿಂದ ಪ್ರಪಂಚದಲ್ಲಿ ಆಗಬಹುದಾದ ಎಷ್ಟೋ ಅದ್ಭುತಗಳ ಅರಿವು ಇಲ್ಲದಿರುವುದು.

ನಮ್ಮ ಜವಾಬ್ದಾರಿ ಏನು ಅಂದ್ರೆ, ನಾವು ಸರಿಯಾಗಿ ಇದ್ದೂ ನಮ್ಮ ಜೊತೆಗೆ ಬೇರೆಯವರ ನಡವಳಿಕೆ ನೂ ಸರಿಯಾಗಿ ಇರಲೇ ಬೇಕು ಅಂತ ನಡವಳಿಕೆ ಮೂಲಕ ತೋರಿಸಿ ಕೊಡುವುದು.

ಅದರಲ್ಲಿ ಈಗಿನ 2 ತಲೆಮಾರಿನ ಯುವ ಪೀಳಿಗೆ ವಿಫಲವಾಗಿದೆ, ಇನ್ನೂ ಅಳಿದುಳಿದ ಕೆಲವರಿಗೆ ಪ್ರಸ್ತುತ ಸಮಾಜದಲ್ಲಿ ನ ಇಂಥ ನಡವಳಿಕೆಗಳು ಅನನೋಕಾಗಲ್ಲ ಅನುಭವಿಸಕ್ಕೆ ಆಗಲ್ಲ.

ಹೆಗಲ ಮೇಲೆ ಕೈ ಹಾಕಿದಾಗ ಮುಗೀತು, ನೀನು ಅಂದ್ಕೋತೀಯಲ್ಲ "ಸಮಾಜದಲ್ಲಿ ನಾನು ನನ್ನ ಥರ ಇದ್ಬಿಟ್ರೆ  ಒಂಟಿ ಅಂತ" ನಿನ್ನ ತನ ಬಿಡ್ತೀಯ ಅದೇ ಮೊದಲ  ಸೋಲು.

 ನಿನ್ನ ತನ ವನ್ನು ನೀನು ನಿನ್ನ ಆಚರಣೆಗಳನ್ನು ನೀನು ಉಳಿಸಿ ಕೊಂಡುಹೋಗುವುದರ  ಫಲ ನಿನಗಷ್ಟೇ ಅಲ್ಲ ಎಲ್ಲರೂ ಅದರ ಫಲಾನುಭವಿಗಳಾಗುವಂತೆ ಮಾಡುವ ದೊಡ್ಡ ಗುರುತರಜವಾಬ್ದಾರಿ ಈ ಜನಿವಾರ ಕ್ಕೆ ಇದೆ, ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಿ ಇತರಿಗೂ ಅದನ್ನು ತಿಳಿಸುವ ಜವಾಬ್ದಾರಿ ಈ ಜನಿವಾರ ಕ್ಕೆ ಇದೆ, ಈ ಜನಿವಾರ ದ ಮಹತ್ವ ವನ್ನು ತಿಳಿಯದೇ ನಾವುಗಳೇ ನಮ್ಮ ತನ ಬಿಟ್ಟು ಬದುಕುವಂತೆ ಮಾಡಲು ಅದರ ಮೇಲೆ ಈ ಬಂಡವಾಳ ಶಾಹಿ ಅಧಿಕಾರ ದಾಹಿ ಶಕ್ತಿ ಗಳು ಒಂದು ವ್ಯವಸ್ಥಿತ ಹಾಗೂ ಸತತವಾಗಿ ದಾಳಿ ನಡೆಸ್ತಿದೆ ಮತ್ತು ಭಾರತೀಯರು ಅದನ್ನು ಬೆಂಬಲಿಸುವ ಮೂಲಕ ತಮ್ಮ ಅಸ್ತಿತ್ವ ಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ವಿಷಾದನೀಯ . 

ಸಾರ್ವಜನಿಕ ವಾಗಿ ಇಂಥ ಅಸಭ್ಯ ವರ್ತನೆಗಳು ನಡೆದಾಗ, 

ಸಿನಿಮಾ ಕಾಲ್ಪನಿಕ ಅದೂ ಇದೂ ಅಂತ ಸಮರ್ಥನೆ ಮಾಡ್ಕೋತಿದ್ದ್ರು, (ಅನಿಷ್ಟ ಕ್ಕೆ ಶನೀಶ್ವರ ಕಾರಣ ಅನ್ನೋ ಹಾಗೆ ಎಲ್ಲ ರೀತಿಯ ಶೋಷಣೆಗಳಿಗೂ ಜನಿವಾರವನ್ನೇ ಹೊಣೆ ಮಾಡಿದರು) .

ಈಗ  ಎಂಥ ವಾಸ್ತವ ಸ್ಥಿತಿ ಇದೆ ಅಂತ ಅರ್ಥ ಆಗ್ತಿದೆ.. ಅವಕಾಶ ಸಿಕ್ಕಲ್ಲೆಲ್ಲ ಇದರ ತೇಜೋವಧೆ ನಡಿತಾನೇ ಇದೆ. ಈ ಮಟ್ಟಕ್ಕೆ ದ್ವೇಷ ಸಮಾಜದಲ್ಲಿ ಅದೂ ಅಧಿಕೃತವಾಗಿ.

ಜನಿವಾರದವರೇ ಕೇಳಿ! ಕೌಶಲ್ಯ ವೃದ್ಧಿಗೆ ಒತ್ತು ಕೊಡಿ ಒಂದು ಸರ್ಟಿಫಿಕೇಟ್ ಇಂದ ಏನೂ ಆಗಲ್ಲ. ನಿಮ್ಮನ್ನು ಸರ್ಟಿಫೈ ಮಾಡೋ ಯೋಗ್ಯತೆ ಇದೆಯೇ ಅಂತ ತಮ್ಮ ನ್ನು ತಾವು ಪ್ರಶ್ನೆ ಮಾಡ್ಕೊಳೋ ಮಟ್ಟದಲ್ಲಿ ಜೀವಿಸಿ, ಅದೇ ಉತ್ತರ.

 ಯೋಚನೆ ಮಾಡಿ!! ಅಸ್ತಿತ್ವಕ್ಕೆ ಜ್ಞಾನ ಮತ್ತು ಅನುಭವ ಎರಡೂ ಮುಖ್ಯ. ಹಿರಿಯರ ಅನುಭವದ ಮಾತು ಆಧುನಿಕ ಜ್ಞಾನ ಪ್ರಬುದ್ಧತೆ ಎರಡೂ ಇದ್ದರೆ ಮಾತ್ರ ಸಾಧ್ಯ.

ಸಂಪ್ರದಾಯ ನಿತ್ಯ ಅನುಷ್ಠಾನ ಸಾಧನೆ ಗೊಡ್ಡು ಅಲ್ಲ, ಅದರ ಹಿಂದೆ ಅಗಾಧ ಅನುಭವ ಮತ್ತು ಅರ್ಥ ಇದೆ, ಅದನ್ನ ಬಿಟ್ಟು ಹೋದ ಮೇಲೆ ಜೀವನದಲ್ಲಿ ಅಸ್ತಿತ್ವಕ್ಕೆ ಯಾವುದೇ ಅರ್ಥ ಇರೋದಿಲ್ಲ. ಪುಸ್ತಕ ನೋಡ್ಕೋಂಡ್ ಅಡುಗೆ ಮಾಡಿದ್ದೆಲ್ಲ ಒಂದೇ ಸ್ವಾದ ಪುಸ್ತಕ ನೋಡ್ಕೋಂಡ್ ನುಡಿಸಿದ್ದೆಲ್ಲ ಒಂದೇ ನಾದ ಬರೋ ಹಾಗಿದ್ದರೆ 🙂.

ಅಸ್ಥಿತ್ವವೇ ಜೀವನಾನುಭವ ಆ ಅನುಭವ ಆಚರಣೆ ಇಂದ ಮಾತ್ರ ಸಾಧ್ಯ , ನಮ್ಮನ್ನು ನಾವು ನಮ್ಮತನ ದಿಂದ ಬೇರೆಯಾಗಿ ನೋಡುವ ಊಹೇ ಯಾಕೆ!? ಪ್ರಪಂಚದಲ್ಲಿ ಆಧುನಿಕತೆ ಮತ್ತು ಪ್ರಗತಿ ಹೆಸರಲ್ಲಿ ನಡೆಯುವ ಈ ವ್ಯವಸ್ಥಿತ ಸಂಚು ನಿಮ್ಮ ಅಸ್ತಿತ್ವಕ್ಕೆ ಬಂದಿರುವ ಸವಾಲು. ಬರೀ ಅಧಿಕಾರದಲ್ಲಿ ಇದ್ದವರ  ಅಭಿಪ್ರಾಯಗಳೇ ಎಲ್ಲರಿಗೂ ವೇದ್ಯ ವಾಗಬೇಕೂ ಅನ್ನೋದು ಪರಮಾವಧಿ ಹಾಗೂ ಅಧಿಕೃತ ದಬ್ಬಾಳಿಕೆ.

ಇದೆಲ್ಲ ಬರೀ ವಿರೋಧಿಸಿ ಏನೂ ಪ್ರಯೋಜನವಿಲ್ಲ ನಮ್ಮ ತನ ನಮ್ಮ ಆಚರಣೆಗೆ ನಾವು ಮಹತ್ವ ಕೊಟ್ಟು ಅದರಂತೆ ನಡ್ಕೊಬೇಕು ಆಗ ನಮ್ಮಲ್ಲಿ ನಮಗೆ ಒಂದು ನಂಬಿಕೆ ಮೂಡೋದು.

ನಮ್ ಮೇಲೇ ನಮಗೆ ನಿಯಂತ್ರಣ ಇಲ್ಲ ದೇ ಆಧುನಿಕ ಯುಗದಲ್ಲಿ ದುರುದ್ದೇಶ ಪೂರಿತ ಪ್ರಭಾವ ದ ಹುಚ್ಚಾಟದ ಸೆಳೆತಕ್ಕೆ ಒಳಗಾಗಿ ಹುಸಿ ಜಾತ್ಯತೀತ ವಾದಕ್ಕೆ ಬಲಿಯಾಗಿ ನಿಮ್ ತನ ನೀವೇ ಕಳ್ಕೊಂಡಾಗ ನಿಮ್ಮ ಸಹಾಯಕ್ಕೆ ನಿಲ್ಲುವ ಸಾಮರ್ಥ್ಯ ಇಡೀ ಸಮುದಾಯಕ್ಕೆ ಇಲ್ಲದಿದ್ದರೆ ಆ ದೌರ್ಬಲ್ಯ ಕ್ಕೆ ನಿಮ್ಮ ಕೊಡುಗೆಯಾಗಿ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ನಮ್ಮ ತನ ಇಡೀ ವಿಶ್ವದ ಒಳಿತಿಗಾಗಿ ಅತ್ಯಂತ ಮುಖ್ಯ.

ಯಜ್ಞೋಪವೀತಂ ಬಲಮಸ್ತು ತೇಜಃ||

 ಗೋ ಬ್ರಾಹ್ಮಣೇಭ್ಯ ಶುಭಂ ಭವತು

ಸರ್ವೇ ಜನಾಃ  ಸುಖಿನೋಭವಂತು 🙏.


 ಅನಿಕೇತನ ಶರ್ಮ