ಅನಿ'ಹನಿ:-
ನನ್ನ ಕಲ್ಪನೆಗೂ ತಿಳಿದಿಲ್ಲ ನಿನ್ನ ಹೊರತು ಬೇರೇನೂ..
ಇನ್ನು ಹೊರತಲ್ಲ ನಾನೂ, ಅಗಲಿ ಹೇಗಿರಲಿ ನಿನ್ನನ್ನು .
ತೆರೆಸಿ ಒಲವ ಕಣ್ಣನು, ತಣಿಸಿ ಮನದ ದಣಿವನು
ಬರೆಸೆ ಒಲವ ಗೀತೆಯನು ಕವಿತೆಯಾಗಿ ಅರಳಿದ
:) ಭಾವ ಶಿಲ್ಪಿಯ ಒಲವಿನ ಪುತ್ತಳಿ ನೀನು..
ಅನಿಕೇತನ Happy B :) Y
ಅನಿ'ಹನಿ:-
ಕಳೆದ ನೆನಪುಗಳು ಮತ್ತೆ ಮತ್ತೆ ತಂದುಕೊಟ್ಟ ನಿನ್ನ
ಕಳೆದುಕೊಂಡೆ ಎನ್ನುವ ಮೂರ್ಖ ನಾ ..
ಕಳೆದ ನನ್ನ ಕಂಡುಕೊಳ್ಳುವ ಬಯಕೆ ನೆನೆಯುತ ನಿನ್ನ
ತೋರಿಸಲಾರರು ನಿನ್ನ ವಿನಹ , ಒಲವಾಗಬಹುದೆಂದು ನಿರೂಪಿಸಿ ನೀ ರೂಪಿಸಿದ ನನ್ನ :)
ಕಡೆಗಣ್ಣ ನೋಟದಿ ನೀ ಕಡೆದ ನನ್ನ ನೀನೇ ಕಡೆಗಾಣಿಸಿದರೂ .. ಕಡೆವರೆಗೂ ನೆನೆಯುವೆ ನಾ
ತೀರದ ಒಲವ ಋಣವಿರಲು ಮುಕ್ತನಾಗಬಹುದೇ ನಾ
ಇಂತಿ
ಅನಿಕೇತನ Happy B :) Y
ಅನಿ'ಹನಿ:-
ಹುಸಿಮುನಿಸ ಒಳಗಿನ ನಗುವಿನಲ್ಲಿ
ಕಾಡಿಸುತ ಕಳೆದ ದಿನವೆಲ್ಲಿ
ತಂಗಾಳಿ ಪಿಸುನುಡಿವ ಇರುಳಲ್ಲಿ
ಮನಮುಟ್ಟಿದ ಇನಿದನಿ ಎಲ್ಲಿ
ತುಸು ಮರೆವ ಮುನ್ನ ನೆನಪಿಸುತಿದ್ದೆ ಸವಿ ಸಂದೇಶವಾಗಿ
ಮರೆಯಲಾಗದ ನೆನಪಾಗಿ ಉಳಿದೆ
ಕನಸುಗಳು ತಿದ್ದಿ ತೀಡಿದ ಪ್ರತಿಬಿಂಬದ ಪ್ರತಿರೂಪವಾಗಿ
ಅನಿಕೇತನ Happy B :) Y
ಅನಿ'ಹನಿ:-
ನೂರು ಜನ್ಮಕೂ ನೂರಾರೂ ಜನ್ಮಕೂ
ನಿನ್ನ ನೆನಪಲ್ಲೇ ಈ ಬದುಕು
ನೆನಪಷ್ಟೇ ನೀ ಜನುಮ ಜನುಮಕೂ
ನಾನೆಂದೂ ಒಲವಿನ ಸೇವಕ
ನಾನಲ್ಲ ಅದರ ಮಾಲೀಕ
ವಿಧಿಯಾಟ ಯಾವ ಕೋಪಕೋ ಕರುಣೆ ಬಾರದು ಕಾಲಕೂ
ಅನಿಕೇತನ Happy B :) Y
ಅನಿ'ಹನಿ:-
ಎಂದೋ ಮುಗಿದ ಕಥೆಯ ನೆನಪಿನ ಮುದ್ರಣ
ಮತ್ತೆ ಮತ್ತೆ ಓದಬೇಕೆನಿಸುವ ಒಲವಿನ ಅಂಕಣ
ಕಣ್ಣಿಗೆ ಕಟ್ಟಿದಂತಿದೇ ಚಿತ್ರಣ
ತುಸೂ ಮಾಸದ ಬಣ್ಣ
ಅನಿಕೇತನ Happy B :) Y
ಅನಿ'ಹನಿ:-
ನಾನಂದು ಕೂಂಡ ಮಾತ್ರಕ್ಕೆ
ನೀನಾಗಲೇ ಬೇಕೆಂದಿಲ್ಲ ನನ್ನಾಕೆ
ಈ ಡೇರಲಿಲ್ಲ ನಾನಾಗುವ ಬಯಕೆ
ನಿನ್ನೊಲವ ಶೀರ್ಷಿಕೆ
ಆದರೆ ನೀನಾದೆ ಕಾವ್ಯ ಕನ್ನಿಕೆ
ಕಲ್ಪನೆಯ ಶಿಲಾ ಬಾಲಿಕೆ
ಅನಿಕೇತನ Happy B :) Y
ಅನಿ'ಹನಿ:-
ಗೆದ್ದವರಾರೂ ಇಲ್ಲ ಒಂದೇ ಪ್ರಯತ್ನಕೆ
ಸೋಲದೇ ಪ್ರೀತಿ ಹೃದಯದ ಮರು ಪ್ರಯತ್ನಕೆ
ಎಂದುಕೊಂಡರೆ
ಹುಚ್ಚುತನ ವಲ್ಲದೆ ಇನ್ನೇನು ಇದು
ಗೆಲ್ಲುವುದು ಪ್ರೀತಿಯ ವಾಡಿಕೆ , ಸೊಲುವುದೇ ಕಾಯಕ ಹೃದಯಕೆ
ಸೋಲೇ ಮುನ್ನುಡಿಯು ಪ್ರೇಮಕೆ, ಒಲವೇ ಅದರ ಶೀರ್ಷಿಕೆ .
ಅನಿಕೇತನ Happy B :) Y
ಅನಿ'ಹನಿ:-
ಎಣಿಕೆ ಗಳಿಕೆಯಲ್ಲಿ ಸೋತರೂ ಹೃದಯಕೆ
ಎಂದಿಗೂ ನಿನದೇ ಸವಿ ಕನವರಿಕೆ
ನನ್ನೊಲವೇ ನನನ್ನರಸಿ ಬಾ ಮನದ ಅಂತಃಪುರಕೆ
ನಲಿಯುತ ಸದಾ ನಗುತಿರು ಅರಸಿಯಾಗಿ ನನ್ನ ಒಲುಮೆಯ ಸಾಮ್ರಾಜ್ಯ ಕೆ
ಅನಿಕೇತನ Happy B :) Y
ಅನಿ'ಹನಿ:-
ತುಳಿಯದೇ ಸಪ್ತಪದಿ ತಿಳಿಯದೇ ಒಲವಹಾದಿ
ಬರಡಾಗುತಿದೆ ಬದುಕು ಬತ್ತಿರಲು ಭಾವಶರಧಿ
ಹಸನಾಗ ಬಹುದೇ ಬಾಳು ನೀ ಬರಲು ಕಾರಂಜಿ ತೆರದಿ
ಹಾಡುಬಾ ಹೊಸಬಾಳಿಗೆ ನಾಂದಿ ಅನುರಾಗ ಮೂಡಿಸೆ ಮನದಿ
ಮನೆ ಮನ ಬೆಳಗುವ ಮಡದಿ
ಅನಿ'ಹನಿ:-
ತುಳಿಯದೇ ಸಪ್ತಪದಿ ತಿಳಿಯದೇ ಒಲವಹಾದಿ
ಬರಡಾಗುತಿದೆ ಬದುಕು ಬತ್ತಿರಲು ಭಾವಶರಧಿ
ಹಸನಾಗ ಬಹುದೇ ಬಾಳು ನೀ ಬರಲು ಕಾರಂಜಿ ತೆರದಿ
ಹಾಡುಬಾ ಹೊಸಬಾಳಿಗೆ ನಾಂದಿ ಅನುರಾಗ ಮೂಡಿಸೆ ಮನದಿ
ಮನೆ ಮನ ಬೆಳಗುವ ಮಡದಿ
ಅನಿಕೇತನ Happy B :) Y