Friday, January 24, 2014

ಎದೆಯ ಕಪಾಟಿನಲಿ ಈ ಹಾರ್ಟಿನಲಿ



ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ
BGM

ಇರಬಹುದೇ ಆ ನಗುವಲೀ ಕಂಡಂತಿದೆ ತುಟಿಯಂಚಲಿ
ಬಿನ್ನಾಣದಾ ಆ ವಯ್ಯಾರದ ಕೊಂಕಿನ ಅಣಕು ಮಾತಿನಲಿ
ಕೆಣಕುತ ಕರೆಯುತ ಹೃದಯಕೆ ಹೊಸ ವ್ಯಸನವ ಕಲಿಸುತ ಮಿಡಿವುದಮರೆ ದುಡಿಸಿದೆ ಅರೆಘಳಿಗೆಯಲಿ ....

ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

BGM

ತಿಳಿಯುವ ಹಂಬಲ ತಾಳೆನುತಳಮಳ ನೀ ನನ್ನೋಳಾ
ತಿಳಿಸೆಯ ಕಂಗಳ ತಾಗಿದ ಕ್ಷಣಗಳ ಆ ವಿಸ್ಮಯದ ಕಥೆಗಳಾ
ಜನುಮದ ಜನುಮಾಂತರದ ಆ ಪುಟಗಳ ಕಳೆಯುತ ಯುಗಗಳ ತೆರೆದಿಡು ಪ್ರೀತಿಯ ಪರ್ವಗಳಾ...

ಹಾ ಹಾ ಹಾ ಹಾ ಹಾ

ನಿನ್ನದೇ ಒಲವ ಪಡೆವ ನಿಟ್ಟಿನಲಿ
ನನ್ನದೇ ಎನುವ ಹಠದಲ್ಲಿ
 ಓಡಿದೆ ನಿನ್ನೆಡೆ ಮನಸು ಒಂದೇ ಓಟದಲಿ

ನಿನಗೆಂದೆ ಬಚ್ಚಿಟ್ಟ ಒಲವಿನ ಉಡುಗೊರೆಯೊಂದಿದೆ ಎದೆಯ ಕಪಾಟಿನಲಿ
ನೀನೇ ತರಬೇಕಿದೆ ಪ್ರೀತಿಯ ಕೀಲಿ ಏನಿದೆನೋಡಲು ಈ ಹಾರ್ಟಿನಲಿ

- ಅನಿಕೇತನ ಹ್ಯಾಪ್ಪಿ BoY :)

Thursday, January 23, 2014

ಯಕ್ಷಿಣಿ ಕಾಯ್ಕಿಣಿ

ಜಯಂತ್ ಕಾಯ್ಕಿಣಿ ಅವರ ಹುಟ್ಟು ಹಬ್ಬಕ್ಕೆ ನನ್ನ ಪುಟ್ಟ ತೊದಲು ನುಡಿಗಳ ಹಾರೈಕೆ
ರವಿ ಬರುವ ಸಮಯ ಕವಿನುಡಿಯ ವಿಸ್ಮಯ
ಕವಿ ಬರುವ ಸಮಯ ಚಂದ್ರೋದಯ ನೆಚ್ಚಿನ ಕವಿವರ್ಯರಿಗೆ ಜನ್ಮದಿನದ ಶುಭಾಷಯ

-------------------------------------------
ಅನಿಸುತಿದೆ ಯಾಕೋ ಇಂದು ಬರೆಯದೆ ಇರಲಾರೆ ಎಂದು :)
 ನಿಮ್ಮ ಅಪ್ಪಣೆ ನಿಮಗಿದೊ ಅರ್ಪಣೆ  ಕಾವ್ಯ ಟಿಪ್ಪಣೆ
------------------------------------------
ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ
 
ಅನವರತ ಜಪಿಸುತ ಮಧುರ ಗೀತೆಯ
 ಅಪರಿಮಿತ ಆನಂದದಿ ಮನಸು ತನ್ಮಯ
ಬರೆಯುತ ಹೃದಯಗಳ ನಾಡಗೀತೆಯ 
ಆದಿರಿ ನಲ್ಮೆಯ ಹೃದಯಗಳ ಕವಿವಿಸ್ಮಯ 
ಕೊಲ್ಲುವ ಹುಡುಗಿಯ ಮೊಹಕ ನಶೆಯ 
ಸವಿಯುತ ಕಳೆದುಹೊದ ಕಾಲಕೆ ಮಿತಿಇಲ್ಲ

ಓಡಿಬಂದು ನಿಂತಿವೆ ಸಾಲು ಸಾಲು ಪದಗಳು
ಪ್ರೀತಿಯ  ಅಕ್ಷರಮಾಲೆಯ ಪದಗಳಾಗಲು
ಕೆನ್ನೆಯೊಂದಿಗೆ ಸವಿ ಮಾತಾಡಲು
ಮಿಡಿಡುಕಾಡಿವೆ ಹನಿಗಳು ಕಂಬನಿಯಾಗಲು
ಸೋತು ಶರಣಾಗಿವೆ ಭಾವಜೀವಗಳು ಬಹುಪಾಲು
ಸಿಗಬಹುದೆ ತುಸು ಸಮಯ ಕೇಳಲು ಭಾವಗಳ ಈ ಅಹವಾಲು

ಬರೆದರೆ ತೀರದ ಭಾವ ಕಾಡುತಿದೆ ಪದಗಳ ಅಭಾವ
ಏನೆಂದು ಹೆಸರಿಡಲಿ ನಿಮಗೆ ನನಗಿಷ್ಟ ಆಗೋಹಾಗೆ
ಕವಿ ಎನ್ನಲಾ ಕಣ್ಮುಂದೆ ಭಾವನೆಗಳ ಕಡೆದುನಿಲ್ಲಿಸೊ ಶಿಲ್ಪಿ ಎನ್ನಲಾ
ಶಿಲ್ಪಕಲೆಗೂ ಭಾವಸೆಲೆಗೂ ಅಕ್ಷರಮಾಲೆಗೂ ಒಮ್ಮೆಗೆ ಸಂಧಿಸೊ ಹಂಬಲ

ಅರಿಯದ ಭಾವನೆಗಳ ಕಲ್ಪನೆಗೂ ಮೀರಿ ಮನದಿ ಮೂಡಿಸೋ ಯಕ್ಷಿಣಿ 
ಸರಳವಾದ  ಪದಗಳಲಿ ಅಧ್ಭುತ ಕಡೆವ ಕಾವ್ಯಶಿಲ್ಪಿ ಕಾಯ್ಕಿಣಿ

-ಅನಿಕೇತನ 
ಹ್ಯಾಪ್ಪಿ BoY :)