Tuesday, October 11, 2011

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ....!!!

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ....!!!  
ನನ್ನ ಮಹದೇಶ್ವರ ಬೆಟ್ಟ ತೀರ್ಥ ಯಾತ್ರೆಯ ಒಂದು ಅವಲೋಕನ  ಬನ್ನಿ ಹಂಚಿಕೊಳ್ಳೋಣ..

ಕರ್ನಾಟಕದ ಕಾರ್ಗಿಲ್  ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್  ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ  ಮಹದೇಶ್ವರ ನ ದರ್ಶನ  ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚೆಗೆ ಆಯುಧ ಪೂಜೆಯ ದಿನ, 
ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ.....!!! ಅಂತಾ  ಮಹದೇಶ್ವರ ನ ದರ್ಶನ ಪಡೆಯೋಣ ಅಂತ ತೀರ್ಮಾನ  ಮಾಡಿ ಹೊರಟ್ವಿ 
  
ನವರಾತ್ರಿ ವಿಶೇಷ ಹೇಗೋ ಕಷ್ಟ ಪಟ್ಟು ಸ್ಥಳ  ಮಾಡಿ ಬಸ್ಸಲ್ಲಿ ಕೂತ್ವಿ  ಉಘೆ ಉಘೆ ಅನ್ನೋ ಉಧ್ಘೋಶಗಳ ನಡುವೆ ಬಸ್ಸಿನ ಸದ್ದು ಕೇಳಿಸ್ತಲೇ ಇರ್ಲಿಲ್ಲ 
ಮಧ್ಯಾನ್ನ  ಭರ್ಜರಿ ಊಟ ಆಗಿತ್ತು  ಸರಿ ಸ್ವಲ್ಪ ದೂರ ಸಾಗಿದ್ಮೇಲೆ ನಿದ್ದೇನು ಬಂತು . 
ಎಚ್ಚ್ರಾಗೊ  ಹೊತ್ಗೆ   ಬಸ್ಸು ನಿಧನ ವಾಗಿ ಸಾಗ್ತಿತು ಯಾವ ಸದ್ದು  ಇರ್ಲಿಲ್ಲ ಎಲ್ರು ನಿದ್ದ್ರೆಗೆ ಜಾರಿದ್ರು,ಸಂಜೆ 5 ಘಂಟೆ ಆಗಿತ್ತು  ಅಲ್ಲಲ್ಲಿ ಕೆಂಪನೆ ಬಿಸಿಲು ಮಂದ ಬೆಳಕು ನಿದ್ರೆ ಮಂಪರು ಬಂದಿದ್ ಕಣ್ಗೆ ಎಲ್ಲಾ ಮಂಕಾಗಿ ಕಾಣತಿತ್ತು  ನೋಡ್ ನೋಡ್ ತಿದ್ದಂತೆ ಎಲ್ಲೆಲ್ಲು ಹಸ್ರು,  ಬಸ್ಸು ಗಭೀರವಾಗಿ ವನರಾಜನಂತೆ ಚಲಿಸುತ್ತಿರುವಾಗ ಕಣ್ಣರಳಿಸಿ ಕುತ್ತಿಗೆ ಹೊರಳಿಸಿದೆ
ಅಬ್ಬ ಎಂಥ ದೃಶ್ಯ ಮಾತೇ ಇಲ್ಲಾ ...

ಕರ್ನಾಟಕದ ಜಮ್ಮು  ಕಣಿವೆಗಳ ಮಧ್ಯದಲ್ಲಿ ಬಸ್ಸು ಜಮ್ಮಂತ  ಸಾಗಿತ್ತು ಒಂದುಕಡೆ ಆಕಾಶ ಇಷ್ಟ ಆಗಿದೆಯೋ ಅನ್ನೋ ಎತ್ತರದ ಗಿರಿ ಶಿಖರ ಇನ್ನೊಂದ್ಕಡೆ ಪಾತಾಳದ ಅಡ್ರೆಸ್ಸ್ ಕೊಡೊ ಪ್ರಪಾತ ಗಳು, "ವಾಲುತ್ತ ತೇಲುತ್ತ ಏಳುಮಲೆಗೆ ವಾಲಾಡಿ ಬಂದ್ವೋ..." ಅನ್ನೋ ಹಾಡಿನ ಸಾಲು ನೆನಪಾಗದೆ ಇರ್ಲಿಲ್ಲ ಹಾಗಿತು ಅಲ್ಲಿ ಬಸ್ಸುಗಳ  ಸವಾರಿ ಮಲೆಯ ಬೆನ್ನೇರಿ.. ವಾಹ್ ಅಧ್ಬುತ ದೃಶ್ಯ ಓಲಾಡಿ ತೇಲಾಡಿ ಸಾಗ್ತಿದ್ವು 
  

ಸುತ್ತುವರಿದ ಬೆಟ್ಟಗಳು ಗಂಧದ ಸೀಮೆಯ ಸೌಗಂಧ ತಂಪಾದ ಸೂರ್ಯ ಹಸಿರುಟ್ಟ ಬೆಟ್ಟ ಅಲ್ಲಲ್ಲಿ ಮುತ್ತಿ ಮಾಯವಾಗೋ ಮೋಡಗಳು 
ಎಂಥ ಸೊಗಸಾದ ನೋಟ ಅದ್ಭುತ  

ತಿರುವುಗಲ್ಲಿ ಮೈಮೇಲೆ ಎರಗಿದಂತೆ ಬರೋ ವಾಹನಗಳು ಕಿರಿದಾದ ರಸ್ತೆ ಅಲ್ಲಲಿ ಯಮನ ಸಂದರ್ಶನ ವಾದಂತೆ ಭಾಸ ಉಘೆ ಎನ್ನುವ ಭಕ್ತರ  ಕೂಗು.
ಒಂದರ ಹಿಂದೆ ಒಂದು ಬೆಟ್ಟಸಾಲು,ಪಯಣ  ಎಲ್ಲಿ ಶುರು ಆಯಿತು ಅನುವಾ ಜಾಡು ಹಿಡಿಯಲಾರದ ಹಾಗೆ ಒಂದನ್ನೊಂದು ಮರೆ ಮಾಡುವ ಬೆಟ್ಟಸಾಲು
ಎಪ್ಪತ್ತೇಳು ಬೆಟ್ಟಗಳ ಮದ್ಯದಲ್ಲಿ ನೆಲೆಸಿದ ಮಾದಪ್ಪ ನೀನು ತುಂಬ ಗ್ರೇಟ್ ಅಪ್ಪ,
 ಸಾಮಾನ್ಯ ವಾಗಿ ದೇವರು ಗಳು ಬೆಟ್ಟದ  ಮೇಲೆ ನೆಲೆಸಿರ್ತಾರೆ ಆದರೆ ಇಲ್ಲಿಯ ವಿಶೇಷ ಅಂದರೇ ಬೆಟ್ಟ ಸಾಲು ಗಳನ್ನ ಹತಿ ಇಳಿದು ನಂತರ ದೇವಸ್ತಾನ 

ಏಳು ಬೆಟ್ಟಗಳ ಏರುತ ಇಳಿಯುತ ಬದುಕಿನ ತತ್ವ ಸಾರುತ ಸಾಗುತ್ತದೆ ಪಯಣ ಮಹದೇಶ್ವರನ ದರ್ಶನಕ್ಕೆ .....
ಮುಂದುವರೆಯುತ್ತದೆ ... 

photo courtesy GOOGLE ... 

Saturday, April 16, 2011

ಬೆವರು ಸುರ್ಸಿ ದುಡುದ್ರೂ.. ಬೇವರ್ಸಿ ಲೈಫು ಕಣ್ರೀ ನಮ್ಮದು

Hi frnz how about ur vkend plans !!! :)
its jst a thought about our machanicl life
ದಿನಾ ದಣಿದಿರೋ ನಿಮ್ ಮೊಟಾರ್ ನ service ಗೆ ಲಾಯ ದಲ್ಲೇ ಬಿಡ್ತಿರೋ ಇಲ್ಲಾ ಫೂಟ್-ಪಾತ್ ಫಾಸ್ಟ್ ಫುಡ್ ಮೆಯೋಕ ಬಿಡ್ತಿರೋ ನಿಮಿಗ್ ಬಿಟ್ಟದ್ದು
ಈಚೀಚೆಗೆ Vkday ಯಾವ್ದು vkend ಯಾವ್ದು ವ್ಯತ್ಯಸನೆ ತೋರ್ತಿಲ್ಲ ಕಾಸಿಲ್ಲ ಅಂದ್ರೆ ಎಲಾ vk....
ಏನಂತಿರಾ...!!?
ಆದರು ಏನಾಗಲಿ ಮುಂದೆ ಸಾಗುನೀ ಅಂತ ರೈಯ್ಯ ರೈಯ್ಯ, ನಮ್ಗಿಷ್ಟಬಂದಿದ್ ಹಾಡನ ವಿಶಲ್ ಹಾಕ್ಕೊಂಡು ... ಅರರೆ ರೆ ಮರತ್ ಬಿಟ್ಟಿದ್ವಿ ಏನ್ ಫ್ಲಾಶ್ ಬಾಕ್ಕ್ ಬಾಸ್ ಅನ್ಕೊಂಡ್ರ thanks :) ಅದೇ ಮಸ್ತ್ ಮಜಾ ಇತ್ರಿ . ಈವಗಂತೂ ಕಿವಿಗೆ ಸಿಕ್ಕುಸ್ಕೊಂದ್ರೆ ಇಷ್ಟನೋ ಕಷ್ಟನೋ ತೆಗ್ಯೋದೆ ಇಲ್ಲಪ ನಮ್ ಜನ.
ಮೂಕ ವೇದನೆ ಕೇಳೋರ್ ಯಾರೋ ಭಗವಂತನೇ ...
ಓಕೆ ಓಕೆ title ಗೆ ಬರ್ತೀನಿ ಡೋಂಟ್ ವರಿಮಾಡ್ಕೋಬೇಡಿ
ಆ ಕಾಲ ದುಡಿತಿಲ್ಲ ಕಾಸಿಲ್ಲ ಅಂದ್ರು ಅಪ್ಪನ ಪಾಕೆಟ್ ಅಮ್ಮನ ಬೇಳೇ ಡಬ್ಬಿ ನೆ ನಮ್ಮ ಖಜಾನೆ ಮಿತಿಮೀರುದ್ರೆ ದೇವರ ಮೀಸಲಿಟ್ಟ ಕಾಣಿಕೆ ನಮ್ಮ ಸೇಫ್ deposit, ನೆಂಟ್ರು ಬಂದಾಗ ಅವ್ರು ಕೊಟ್ಟಿದ್ನೆಲ್ಲ ಗುಳುಂ ಮಾಡ್ತಿದ್ ನಮ್ಮ ಪುಟಾಣಿ ಗೋಲಕ . ವರ್ಷದ ಕೊನೇಲಿ ಪಾಸಾದರೆ ಸೈಕಲ್ ಕೊಡ್ಸ್ತಿನಿ,ಹೊಸ bat -ball ಕೊಡ್ಸ್ತಿನಿ, ಇಲ್ಲಾ ನ್ದ್ರೆ ಅದೇ ಮುರ್ಧೋಗಿರೋ ಹಳೆ ಬ್ಯಾಟು ನಾವೇ ಬಾಲು ನಮ್ ಅಪ್ಪಂಗೆ ಫುಲ್;ಟೆಸ್ಟ್ ಮ್ಯಾಚು ಅಮ್ಮ comentry,ಗತಕಾಲದ ವೈಭವಗಳು.
ಇವಗ್ ನೋಡಿ ಬೆವರು ಸುರ್ಸಿ ದುಡುದ್ರೂ.. ಬೇವರ್ಸಿ ಲೈಫು ಕಣ್ರೀ ನಮ್ಮದು ಅಪ್ಪ ಅಮ್ಮ ಎಲ್ಲೋ ನಾವೆಲ್ಲೋ ಅಕಸ್ಮಾತ್ ಜೊತೆಗಿದ್ರು ಎಲ್ಲರು ಬಿಜಿ ಬಿಜಿ ಬಿಜಿ ಇನ್ನೆಲ್ಲಿ ಸಂಜೆ ಮನೇಲಿ ಬಿಸಿ ಬಿಸಿ ಬೋಂಡ ಬಜ್ಜಿ ,ಅದ್ಕೆ ಅಂತಾನೆ ಸಂಜೆ ಆಯ್ತಂದ್ರೆ ನಮ್ಮನೆ ಹತ್ರ ಮೂಲೆ ಅಂಗಡಿ ಅಜ್ಜಿ ಬೋಂಡ ಬಜ್ಜಿ ಗೆ dimando dimandu
ಗಂಡ ಹೆಂಡ್ತಿ ಇಬ್ರು ಕೆಲಸ ಮಾಡಿ ಊರ್ದೆವ್ರ್ನೆಲ್ಲ ನೆನಸ್ಕೊಂಡು ಸಿಟಿ ಬಸ್ಸಲ್ಲಿ ಊರೆಲ್ಲ ಸುತ್ಕೊಂಡ್ ಮನೆ ಸೇರುದ್ರೆ ಮನೇಲಿ ನೆನೆಸಿ ಇಟ್ಟಿರೋ ಉದ್ದಿನಬೇಳೆ ಧಿಡೀರ್ ಇಡ್ಲಿಗೆ use ಆಗುತ್ತೆ ,ಇಲ್ದಿದ್ರೆ ವಡೆ ಆಗುತ್ತೆ ಅಷ್ಟೇ :) !!
ಪಾಪ ಪುಟಾಣಿ ಮಕ್ಳು ಅಪ್ಪನ ನೋಡಿದ್ರೆ ಅಮ್ಮನ ನೋಡಿರಲ್ಲ ಅಮ್ಮನ ನೋಡಿದ್ರೆ ಅಪ್ಪನ ನೋಡಿರಲ್ಲ ಅವ್ರ confusion ಗೆ ಕೊನೆನೆ ಇಲ್ವಾ ಪಾಪ..
ಇನ್ನು ಫ್ರೆಂಡ್ಸು, ಮಗ ಕ್ಲೈಂಟ್ ಬರ್ತವ್ರೆ ಈ vkಆಗಲ್ಲ ಮುಂದಿನವಾರ ನೋಡಣ ಅ ನನ್ಮಗ ಮ್ಯನೆಜೆರ್ ಅವ್ನ್ಗೆನ್ ಹೆಂಡ್ತಿಮಕ್ಲು ಅವರೋ ಇಲ್ವೋ ಗೊತ್ತಿಲ್ಲ ಮಗ ನಮ್ಮನು ಸಾಯ್ಸ್ಕೊಂಡ್ ಕುತಿರ್ತನೆ, ಮ್ಯಾನೇಜರ್ ceo ನ ಬೈತಾರೆ.. ಲೈಫು ಇಷ್ಟೇನೆ , ಓಕೆ ಅಕಸ್ಮಾತ್ ರಜಾ ಸಿಕ್ರು ನಿದ್ದೆ ಮಾಡೋರ್ ಯಾರು ನಮ್ ನಿದ್ದೆ ನಾವೇ ಮಾಡಬೇಕು ಕನಡಿಲಿ ಸರಿಯಾಗಿ ಮೋಕ ನೋಡ್ಕೊಂಡ್ ಎಷ್ಟ್ ದಿನ ಅಗೊಯ್ತಲ್ವ ಅನ್ಸುತ್ತೆ ಒಂದೊಂದ್ಸಲ.
ಇಷ್ತೆಲ್ಲದ್ರು ಮಧ್ಯ ಬಿಡುವ ಮಾಡ್ಕೊಂಡು ಕಾಯ್ಕೊಂಡು ಕದ್ದುಮುಚ್ಚಿ ಕೂಡಿಟ್ ದುಡ್ ಎತ್ಕೊಂಡು ATM ನ ಬೈಕೊಂಡು ಬೈಕ್ ಹತ್ಕೊಂದೋ ಬಸ್ ಹಿಡ್ಕೊಂದೋ ಮೀಟ್ ಆಗೋ ಅಷ್ಟ ಹೊತ್ಗೆ ಯಾರ್ ಯಾರ್ಗೆ ಎಷ್ಟ್ ಹೊತ್ಗೆ apayntment ಕೊಟ್ತಿವಿ ಅಂತಾನೆ ಮರ್ತ್ಹೊಗಿರುತ್ತೆ monday ಬಂದ್ ಬಿಟ್ಟಿರುತ್ತೆ.
ಇಷ್ಟೆಲ್ಲಾ ಇದ್ರು ನಿಮ್ನ ಮೀಟ್ ಆಗೋಕೆ ಬರೋ frnds relative ಬಂದಾಗ ನಗ್ನಗ್ತಾ ಮಾತಾಡ್ಸೋ ಸೌಜನ್ಯ ತೋರಿ ಬೇಡ್ದೆರೋ ಚಿಂತೆನ ನೆಸ್ಕೊಂದು ಅವ್ರ ಮೂಡು ಹಾಳ್ ಮಾಡ್ಬೇಡಿ ಈವಾಗ ನಾನ್ ನಿಮಗೆ ಟಾರ್ಚರ್ ಕೊಟ್ಟಂಗೆ
ಓಕೆ ಕೊನೆದಾಗಿ ಜೋಗಿ ಸ್ಟೈಲ್ ಸ್ಟೆಪ್ ಹಾಕಿ joky ಸಾಂಗ್ ಗೆ
ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ
ಸಾಲ ಜಾಸ್ತಿ ಅಗೊಯ್ತಪ್ಪ
ಕೊಟ್ಟೋರ್ Q ನಲ್ ನಿಂತೋರಪ್ಪ
ಕೆಲಸ ಸಿಕ್ಮೆಲ್ ಕೊಡ್ತಿನಪ್ಪ
ಅಲ್ಲಿ ತನಕ ತಡ್ಕೊಲ್ರಪ್ಪ \
ಜೊಕೇ ಜೊಕೇ ಜೊಕೇ ಜೊಕೇ :) :)
:) :) ಬೈ have a nice vknd take care u like it ulike it ulike it ?
ನಾನು ಬರ್ದು ಬಹಳಾ ದಿನಗಳೇ ಆಗಿತ್ತು ಸ್ಪೆಲ್ಲಿಂಗ್ ಮಿಸ್ಟಕೆ ಇದ್ರೆ ಅಡ್ಜೆಸ್ಟ್ ಮಾಡ್ಕೊಳಿ ಮನಸಿನಂತೆ ಮಾಂಗಲ್ಯ , ಅಂದುಕೊಂಡಂತೆ ಆಕಾಶ ,
ಅಂದುಕೊಂಡ ಹಾಗೆಲ್ಲ ಅವಕಾಶ ಸಿಕ್ಕಲ್ಲ ಸಿಕ್ಕಾಗ ಬಿಡಬೇಡಿ ನಿಮ್ಮ ಕೆಲಸದ ಮೇಲೆ ನಬಿಕೆ ಇಡಿ.ನಿಮ್ಮನ್ನ ನಬಿಕೊಂಡವರ ಬಗ್ಗೆ ಗಮನ ಇರಲಿ
-- ಇಂತಿ ನಿಮ್ಮ
ಆತ್ಮೀಯ ಅनिKतನ ಹ್ಯಾಪ್ಪಿ b y