ಈ ತಲೆ ಬರಹ ನೋಡಿದ್ರೆ ನಿಮಗೆ ಅನ್ಸ್ಬಹುದು ಸ್ವಲ್ಪ ವಿಚಿತ್ರ ಅಂತ ಆದ್ರೆ ಇದು ನಮ್ಮ ನಡುವೆ ನಾವು ನಮ್ಮನ್ನ ನಮ್ಮವರನ್ನ ಗುರುತಿಸೋ ರೀತಿ ಕಂಡಾಗ ನನಗೆ ಅನಿಸಿದ್ದು ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?! .
ಕೆಲ ಸಮಯ ಬೇಜಾರಿರ್ಬಹುದು , ತಮಾಷೆ ಅನ್ಸ್ಬಹುದು , ಸಹಜ ಅನ್ನಿಸಿ ಏನು ಅನಿಸ್ದೇನೆ ಇರಬಹುದು ಆ ಎಲ್ಲ ಸಮಯ ಗಳಲ್ಲಿ ನಮ್ಮನ್ನ ನಾವು ನೋಡೋ ರೀತಿ ಮಾತ್ರ ಬೇರೆ.
ನನ್ನಲ್ಲಿ ಈ ಆಶ್ಚರ್ಯ ಚಕಿತ ಪ್ರಶ್ನೆ ಉಂಟಾಗೋಕೆ ಕಾರಣ ತುಂಬಾ ಚಿಕ್ಕದು ,ಸರಳವಾಗಿ ನಮ್ಮ ಹೋಲಿಕೆ ಪದಗಳಲಿ ಸಹಜವಾಗಿ ಸೇರಿ ಹೋಗಿರೋ ಕೆಲವು ಶಬ್ದಗಳು(ಪ್ರಾಣಿಗಳು ಪಕ್ಷಿಗಳು )
ಉದಾಹರಣೆಗೆ : ಗೂಬೆ , ಕತ್ತೆ , ನಾಯಿ, ನರಿ , ಕುರಿ, ಮಂಗ ,ಕಪ್ಪೆ, ಇತ್ಯಾದಿ ಇತ್ಯಾದಿ ......
ವಿಷಯಕ್ಕೆ ಬರೋಣ
ಹಾಸ್ಯಸ್ಪದವೋ ವಿಷಾದವೋ ಗೊತ್ತಿಲ್ಲಾ ..
ಯಾರಾದ್ರೂ ಒಬ್ಬ ಮನುಷ್ಯ ಸುಮ್ನೆ ಕೂತಿದ್ರೆ active ಆಗಿಲ್ಲ ಅಂದ್ರೆ ನಾವು ಅವನ್ನ ಸಾಮಾನ್ಯ ಹೋಲಿಸೋದು ಗೂಬೆ ಗೆ, ನೋಡು ಗೂಬೇಥರ ಕೂತಿದಾನೆಅಂತ .ಇದರಲ್ಲೇನಿದೆ ಸಹಜ ಅನ್ಬೋದು , ಆದ್ರೆ ಮಾನವನ ಒಳಗಿರೋ ಗೂಬೆ ನೋಡೋ ನಾವು,ಗೂಬೆ ಬಗ್ಗೆ ಶಕುನ ನುಡಿಯೋ ನಾವು , ನಮ್ಮೊಡನೆ ಇರೋ ಇಥವರನ್ನ ಒಲ್ಲೇ.. ಅಂದಾಗ ಅನ್ಸೋದು ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಸರಿ ಮತ್ತೊಂದು ವಿಷ್ಯ ಇದಕ್ಕೆ ವ್ಯತಿರಿಕ್ತ, ತುಂಬಾ active ಆಗಿ ಒಂದುಕಡೆ ಸುಮ್ನಿರ್ದೆ ಸದಾ ಬೇರೆಯವರನ್ನ ಸಹ active ಆಗಿಡೋಕೆ ಪ್ರಯತ್ನ ಪಡೋ,
ಪಾಪ ಯಾರ ಗೊಡವೆಗೂ ಹೋಗದೆ ತನಗೆ ತಿಳಿಯದಂತೆ ತನ್ನ ದಾರೀಲಿ ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ರೆ ಆಗಲಾದರೂ
ಸುಮ್ನಿರ್ತಾರ, ಅದಕ್ಕುಹೇಳ್ತಾರೆ ಏನು ಪ್ರಯೋಜನ ಕತ್ತೆ ಥರ ಕೆಲ್ಸಮಾಡ್ತಾನೆ ಮೂರ್ಖ ಏನು ಅರ್ಥ ಆಗಲ್ಲ ಅಂತ, ಹಾಗೆ ಅಂದಾಗ ಅವನು
ಜಾಡ್ಸಿದ್ರೆ ಅದಕ್ಕೂ ನಾವು ಹೇಳೋದು ಕತ್ತೆಥರ ಒದಿತಾನೆ ಅಂತ.
ಹಾಗೆ ಮುಂದೆ ಹೋದ್ರೆ , ತನ್ನಪಾಲಿಗೆ ಬಂದದ್ದೆ ಪಂಚಾಮೃತ ಅಂತ ನೀಯತ್ತಾಗಿ ನಂಬಿಕೆಗೆ ಹೆಸರಾಗಿ ಸದಾ ಜೊತೆ ಇರೋರಿಗೆ, ಸದಾ busy but no job ಅನ್ಕೊಂಡು ತಿರುಗಾಡೋರು ನಮಗೆ ಕಾಣೋ ರೀತಿ ನಾಯಿ ಹಾಗೆ, ಹುಡುಗಿ ಹಿಂದೆ ಅಲೆಯೋ ಹುಡುಗ್ರೆನಾದ್ರು ಕಂಡ್ರೆ
ಮೊದ್ಲು ಹೇಳೋದು ನಾಯಿ ಹಾಗೆ ಹಿಂದೇನೆ ಅಲಿತಾನೆ ಅಂತ ಸ್ವಲ್ಪ ಕಿರುಚಾಡಿದ್ರೆ ನಾಯಿಥರ ಸುಮ್ನೆ ಬೊಗಳ್ಬೇಡ ಅನ್ನೋ ವಾಗ ಅವನಲ್ಲಿ ನಾಯಿನ ಕಾಣೋ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಇನ್ಕೆಲವರು ಬೇರೆಯವರ ಹಾದಿ ಅನುಸರ್ಸಿ ಸರಿ-ತಪ್ಪು ತಿಳಿಯದ ಅಮಾಯಕರು ತಲೆಬಗ್ಗಿಸಿ ನಡೆಯೋದೊಂದೇ ಗುರಿ, ಅತ್ತ ಇತ್ತ ಏನಾದ್ರು ಅದರ ಪರಿವೆಯೇ ಇಲ್ಲ ತಮ್ಮಷ್ಟಕ್ಕೆ ತಾವಿರೋ ಈ ಅಮಾಯಕರನ್ನ ನಾವು ಹೋಲಿಸೊದು ಕುರಿಗೆ, ಎಲ್ಲವನ್ನು ನಂಬೋ ಅಮಾಯಕತೆ ನ ಗುರುತಿಸೋದು ಕುರಿಯಿಂದ.
ಸ್ವಲ್ಪ ಬುದ್ಧಿ ವಂತನಾಗಿ ಜಾಣ್ಮೆ ತೋರಿದರೆ ಅಪಾಯ ತಪ್ಪಿಸಿಕೊಳ್ಳೋ ಉಪಾಯ ಬಲ್ಲವನಿಗೆ ಕಾದಿರಿಸಿದ ಪಟ್ಟ ನರಿಬುದ್ದಿ , ಹೇಳಿದ್ದೆಲ್ಲ ಕೇಳಿದ್ರೆ ಕೋಲೆಬಸವ , ದನಿ ಚಂದ ಇದ್ರೆ ಕೋಗಿಲೆ ವ್ಯತ್ಯಾಸ ಆದ್ರೆ ಕಾಗೆ, ಹಾಡೋದ್ ಬೇಡ ಮಾತಾಡ್ತಾ ನೆ ಇರಣಪ್ಪ ಅಂದ್ರೆ ಕಪ್ಪೆಥರ ವಟ ವಟ ಅನ್ನೋ ಬಿರುದು ,ಒಳ್ಳೆಯವರೊಳಗೆ ಕೆಟ್ಟವರು ಇರೋ ಈ ಪ್ರಪಂಚದಲ್ಲಿ ಹಾವಿಗೆ ಹಾಲೆರೆದಂತೆ ಅನ್ನೋ ಪದ ಎಷ್ಟು ಸಮಂಜಸ?,ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಶಕುನದ ಹಕ್ಕಿಗೂ ಅಪಶಕುನದ ಮಾರ್ಜಾಲಕು
ಹಿಡಿತ ಇಲ್ಲದ ಮನಸ್ಸು ಮರ್ಕಟ ರೀ ..,.
ನೀಯತ್ತಿನ ನಾಯಿ ನರಿಯಾದರು ಸರಿ
ಅಪಾಯ ತಪ್ಪಿಸಿ ಕೊಳ್ಳೋ ದಾರಿ ನೀಅರಿ ,
ಗುರಿ ಇಲ್ಲದ ಕುರಿ, ಮದವೇರಿದ್ರೆ ಕರಿ, ಗತ್ತಿಗೆ ಸರಿ ಕೇಸರಿ,
ಸಾಧುವಾದರೆ ನೀ ಪಶುವೇ ಸರಿ ....
ಇಂತೆಲ್ಲ ಸದಾ ಪ್ರಾಣಿಗಳ ಬಗೆಗೆ ಚಿಂತಿಸಿವ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಸಿಂಹ ಎಂದು ತನ್ನನು ಹುಲಿಯಾಗಿ ಕಂಡಿಲ್ಲ , ಹುಲಿಯೆದು ನರಿಯಾಗ ಬಯಸಿಲ್ಲ , ಆನೆಗೇಕೆ slim ಆಗೋ ಆಸೆ ಇಲ್ಲ , ಪಶು ನಮಗಾಗೆ ನೀಡುವುದೆಲ್ಲ, ಇದೆಲ್ಲ ಅರಿತ ನಾವೇಕೆ ನಮ್ಮಂತಿಲ್ಲ ?!
ಉಳ್ಳವರನ್ನು ದೇವರಂತೆಯು ಇಲ್ಲದವರನ್ನು ಪ್ರಾಣಿಗಳಿಗೂ ಕಡೆಯಾಗಿಯೂ ಕಾಣುವ, ಮನೆಯ ನಾಯಿಯನ್ನೂ ಮುದ್ದಿಸುವ ಪರರನ್ನು ದ್ವೇಷಿಸುವ, ಇಚ್ಚಿಸಿದ್ದನ್ನು ಮೆಚ್ಚಿಸುವ ಇಚ್ಚಯಿರದಿದ್ದರೆ ಕಿಚ್ಚಾಗುವ ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!
ಮನುಷ್ಯ ತನ್ನಲ್ಲಿ ತನ್ನನು ಕಾಣಲಾಗದಷ್ಟು ಅಂಧ ನಾ .. ಅಥವಾ ಅರಿವಿಲ್ಲವಾ..
ಮಾನವ ಜನ್ಮ ದೊಡ್ಡದು ಎಂದು ಹಾಡಿದ ಪುರಂದರ ದಾಸರ ಸಾಲುಗಳು ಮರೆಯುವಷ್ಟು ನಮ್ಮನ್ನು ನಾವು ಮರೆತೆವಾ ..
ಮನುಷ್ಯ ಮನುಷ್ಯನ್ನ ಮನುಷ್ಯನ ಥರ ನೋಡೋದು ಯಾವಾಗ ?!