Wednesday, June 18, 2014

ಸುಳ್ಳಾಡಿದರು ತಪ್ಪಿಲ್ಲ ಪ್ರೀತಿಲಿ

My new compo hope you all like it

ಸುಳ್ಳಾಡಿದರು ತಪ್ಪಿಲ್ಲ ಪ್ರೀತಿಲಿ
ಸುಳ್ಳೆನ್ನದಿರು ತಪ್ಪಿಯೂ ಪ್ರೀತಿಸಿ
ನಿಜವೇ ನಂಬುವುದು ಸರಿಯೆ ಪ್ರೀತಿ ಬರಿ ವ್ಯಾಮೋಹವೇ ?
ನೀ ನನಗೆ ನಾ ನಿನಗೆ ಉಪಚರಿಸೊ ಅನುಬಂಧವೇ..

BGM violin ( gaa maa magari | gaamaa magari |
magariga paamagaa ) scale ( Cmin hormonic ) keervani mishra

ಅಚ್ಚು ಮೆಚ್ಚಿನ ಇಚ್ಚೆಯೊಂದೇ ಈ ಮನಸಿಗೇ
ಮುಚ್ಚು ಮರೆಯಲೆ ಕಳ್ಳತನದಲೇ ಕಾಡುತಾ ಹೀಗೇ
ಮುದ್ದು ಬೊಂಬೆ ನಿನ್ನ ಮುದ್ದುಬಿಂಬವ ಎರಕ ಹೊಯ್ಯುವಾಸೆ ಕನಸಿಗೆ

ಮಾತಲಿ ತುಸು ತುಂಟತನದಲಿ ಕೋಪತರಿಸುತ
ಮೌನತಾಳಲು ನಿನ್ನ ರಮಿಸುವಾಸೆ ನನ್ನೆ ನಾ ಸಾವರಿಸುತ

ಮತ್ತೇನಿಲ್ಲ ಮರುಮಾತಿಲ್ಲ ನೀ ಒಲ್ಲೇ ಎಂದರೆ
ಮತ್ತೆ ಮತ್ತೆ ಮರುಪ್ರಯತ್ನಗಳೆ ನಿಲ್ಲದು ಆದರೆ
ಇಲ್ಲದಾ ತೊಂದರೆ ಮನಸಿಗೆ ನೀ ಬಂದರೆ ಕಂಡರೆ ಎಲ್ಲೆಲ್ಲು ನಿನ್ನದೇ ಚಹರೆ

ಬೇರೆ ದಾರಿ ಏನಿದೇ ಹೇಳು ನೀಡದೇ ಆಸರೆ
ಬೇರೆ ಮಾತೇಕೆ ಆಗಿದೇ ಹೃದಯ ಪ್ರೀತಿಯ ಕೈಸೆರೆ

- ಅನಿಕೇತನ ಹ್ಯಾಪ್ಪಿ B Y

No comments:

Post a Comment