Wednesday, June 18, 2014

ನೀ ನನ್ನವಳಾ..

ಈ ಹಾಡು ಹುಟ್ಟೋದ್ ಹೇಗೇ ಗೊತ್ತೇ ಆಗಲ್ಲ,ಈ ಹಾಡು ಹುಟ್ಟೋಕೆ ಕಾರಣ ಬೇಕಿಲ್ಲ
ಹಂಗೇ ಒಂದ್ ಹಾಡು ಕಂಪ್ಯುಟ್ರು ಕೀ ಪ್ಯಾಡ್ ಮೇಲೆ ಶುರುಆಗಿದೆ enjjoy folks

ಹಿಡಿಸಿದಷ್ಟು ನೀನು ನಂಗೆ ಬೆರೇನು ಹಿಡಿಸಿಲ್ಲ ಹುಚ್ಚು ಹುಚ್ಛು ಹುಚ್ಚು
ಹಿಡಿದರೂ ಯಾರೇ ನಿನ್ನನೆರಳ ನಂಗಂತು ಹೊಟ್ಟೆಕಿಚ್ಚು ಕಿಚ್ಚು ಕಿಚ್ಚು
ತುಸು ಹೆಚ್ಚು ಹಚ್ಚಿಕೊಳ್ಳೋ ಮುನ್ನ ಮೆಚ್ಚಿಕೊಂಡೇ ಬಹಳಾ
ತುಸು ಹೆಚ್ಚೇ ಹೊಗಳುವಾಸೆ ನೀ ನನ್ನ ಮುತ್ತು ಹವಳಾ
ಹಿಡಿದುಬೆರಳ ನಡೆಯುತಹೇಳೇ ನೀ ನನ್ನವಳಾ..

ಕಾದಂಬರಿ ಕಥೆಯಲ್ಲಿ ಬಂದಂಥ ರಾಜಕುಮಾರಿ
ಕಾಣದಂತಾ ಲೊಕದಲಿ ನಾನಾದೆ ಅಲೆಮಾರಿ
ನೀ ಕಂಡ ಕ್ಷಣದಿಂದ ಬದಲಾಗಿದೆ ಈ ಲೋಕದ ಅಂದ
ನೀ ನೀಡೋ ಆ ನಗುವಿಂದ ಈ ಬಾಳೆ ಬಲುಚೆಂದ

ಹಿಡಿದುಬೆರಳ ನಡೆಯುತಹೇಳೇ ನೀ ನನ್ನವಳಾ..

ನನಒಲವ ಜಾತ್ರೆಯಲಿ ಎಳೆದುತರುವೆ ನಿನ ತೇರ
ಎಲ್ಲ ಕನಸುಗಳಲು ನಿನ್ ಮೆರವಣಿಗೆಯ ಮರುಪ್ರಸಾರ
ನೀಿ ಇಳಿದುಬರಲಿ ಎಂದು ಇಳೆಯೆಲ್ಲ ಸಿಂಗಾರ
ನೀ ಬರುವೆ ಎಂದು ಸಾರಿದೆ ಎದೆ ಢವ ಢವ ಢವ ಢಂಗೂರ

ಹಿಡಿದುಬೆರಳ ನಡೆಯುತಹೇಳೇ ನೀ ನನ್ನವಳಾ..

-ಅನಿಕೇತನ ಹ್ಯಾಪ್ಪಿ B Y

No comments:

Post a Comment